ಪ್ರಚಲಿತ

ಮಿಷನರಿಗಳ ಮೋಸಕ್ಕೆ‌ ಕೊನೆ ಎಂದು? ಯಾವ ಮತಾಂತರ ಕಾಯ್ದೆಯೂ ಫಲ‌ ನೀಡುತ್ತಿಲ್ಲ ಏಕೆ?

ಆಮಿಷಕ್ಕೆ ಬಲಿಯಾಗಿ ಮತಾಂತರ ಆಗಿ ಮೋಸ ಹೋದ ಅಣ್ಣ ತಂಗಿಯರ ಕಹಾನಿ ಇದು. ಕ್ರೈಸ್ತ ಪಾದ್ರಿ‌ಗೆ ಮಕ್ಕಳಾಗಲು ಹೋಗಿ, ಅದೇ ಫಾದರ್‌ನಿಂದ ಮೋಸ ಹೋದವರ ಕತೆ ಇದು. ಮೂರು ಲಕ್ಷದ ಆಸೆಗೆ ಮಾತೃ ಧರ್ಮವನ್ನೇ ತೊರೆದು, ಈಗ ಇಲ್ಲೂ ಸಲ್ಲ, ಅಲ್ಲೂ ಇಲ್ಲ ಎಂಬಂತಾದವರ ಮತಾಂತರ ವ್ಯಥೆ ಇದು.

ಉತ್ತರ ಪ್ರದೇಶದ ಸುರಾನ್‌ಪುರದಲ್ಲಿ ನಡೆದ ಘಟನೆ ಇದು. ಇಲ್ಲಿನ ರಾಯ್‌ಪುರದ ಕೆಲ ಹಿಂದೂಗಳನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದ್ದು, ಈ ಸಂಬಂಧ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ಇಲ್ಲಿನ ಯೋಗೇಶ್ ಹಾಗೂ ಅವನ ಸಹೋದರಿಗೆ ಹಣದ ಆಸೆ ತೋರಿಸಿ ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಸಂತ್ರಸ್ತ ಹೆಣ್ಣು ಮಗಳು ಮಂಜು ಎಂಬವಳ ಜೊತೆಗೆ ಆಗಾಗ್ಗೆ ತೆರಳುತ್ತಿದ್ದು, ಮಂಜು ಎಂಬವಳ ಪತಿ ಯು ಈ ಸಂತ್ರಸ್ತ ಯುವತಿಗೆ ಹಣದ ಆಮಿಷ ತೋರಿಸಿ, ಅವಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಲು ಒತ್ತಡ ಹೇಳಿದ್ದಾನೆ. ಈ ಸಂತ್ರಸ್ತ ಅಣ್ಣ – ತಂಗಿಯನ್ನು ಮತ್ತಿಬ್ಬರ ಸಹಾಯ ಪಡೆದು, ಮಂಜು ಮತ್ತು ಅವಳ ಪತಿ ಮತಾಂತರ ಮಾಡಿದ್ದಾರೆ. ಮತಾಂತರದ ಬಳಿಕ ಅಣ್ಣ ತಂಗಿ ತಮಗೆ ಹಣ ನೀಡಲು ಒತ್ತಾಯಿಸಿದ್ದಾರೆ. ಈ ವೇಳೆ ಮತಾಂಧ ಶಕ್ತಿಗಳು ಹಣ ಕೇಳಿದರೆ ನಿಮ್ಮ ಜೊತೆ ಏಸು ಮುನಿಸುವುದಾಗಿ ಹೇಳೀದ್ದಾರೆ. ಜೊತೆಗೆ ಹಣ ಕೇಳಿದರೆ ನೀವು ಅನಾರೋಗ್ಯಕ್ಕೆ ತುತ್ತಾಗಬಹುದು ಎಂದು ಭಯ ಹುಟ್ಟಿಸಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯ ಬಲವಂತದ ಮತಾಂತರ ಕಾರ್ಯ ಎಸಗುವ ಪಾದ್ರಿಗಳು ಅಥವಾ ಇನ್ಯಾರೇ ತಪ್ಪಿತಸ್ಥರಿದ್ದರೂ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿವೆ. ಹೀಗೆಯೇ ಅನೇಕ ಕುಟುಂಬಗಳನ್ನು ಮತಾಂತರ ಮಾಡುತ್ತಿರುವ ಬಗೆಗೂ ಮಾಹಿತಿ ಇದ್ದು, ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿವೆ.

ಹಿಂದೂಗಳೇ, ಮತಾಂತರ ಎನ್ನವುದು ಈ ದೇಶದ ಸಾಮಾಜಿಕ ವ್ಯವಸ್ಥೆ, ಧಾರ್ಮಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಯಾವುದೇ ಆಮಿಷಕ್ಕೆ ಬಲಿಯಾಗದೆ, ನಮ್ಮ ಧರ್ಮ ರಕ್ಷಣೆಯ ಶ್ರೇಷ್ಠ ಕಾರ್ಯವನ್ನು ಮಾಡೋಣ.

Tags

Related Articles

Close