ಪ್ರಚಲಿತ

ಆರು ಬಾರಿ ಗೆದ್ದ ಕಾಂಗ್ರೆಸ್ ದಿಗ್ಗಜ ಬಿಜೆಪಿಗೆ.! ಛಿದ್ರಗೊಳ್ಳುತ್ತಾ ಕಾಂಗ್ರೆಸ್ ಕೋಟೆ.?!

ಕಾಂಗ್ರೆಸ್ ನ ಅಂತ್ಯಕ್ಕೆ ಕ್ಷಣಗಣನೆ ಆರಂಭ..! ಕಾಂಗ್ರೆಸ್ ಮುಕ್ತ ಭಾರತಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಕಾಂಗ್ರೆಸ್ ಗೆ ಬಲವಾಗಿ ಇರುವ ಕರ್ನಾಟಕದಲ್ಲೂ ಇದೀಗ ಚುನಾವಣೆಗೂ ಮೊದಲೇ ಕಾಂಗ್ರೆಸ್ ಮಕಾಡೆ ಮಲಗುವುದು ಖಚಿತವಾಗಿದೆ. ಯಾಕೆಂದರೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರ ಪರ್ವ ಬಹಳ ಜೋರಾಗಿ ನಡೆಯುತ್ತಿದೆ. ಪಕ್ಷದ ಮುಖಂಡರ ಈ ನಡೆಯಿಂದಾಗಿ ದಂಗಾಗಿರುವ ಕಾಂಗ್ರೆಸ್ ಗೆ ಸೋಲಿನ ಭೀತಿ ಹೆಚ್ಚಾಗಿದೆ.!

ಸಿದ್ದರಾಮಯ್ಯನವರ ಆಡಳಿತಕ್ಕೆ ಅಸಮಧಾನಗೊಂಡ ಪಕ್ಷದ ನಾಯಕರು ಇದೀಗ ಬಿಜೆಪಿ ಸೇರುತ್ತಿದ್ದು, ದೇಶಾದ್ಯಂತ ಸೋಲಿನ ಮೇಲೆ ಸೋಲು ಅನುಭವಿಸಿಕೊಂಡು ಭಾರೀ ಏಟು ತಿಂದಿರುವ ಕಾಂಗ್ರೆಸ್ ಗೆ ಇದೀಗ ಕರ್ನಾಟಕವೂ ತಮ್ಮ ಕೈ ತಪ್ಪುವ ಮುನ್ಸೂಚನೆ ದೊರಕಿದೆ.!

ಕಾಂಗ್ರೆಸ್ ಗೆ ಕೈ ಕೊಟ್ಟ ಗುತ್ತೇದಾರ್..!

ರಾಜ್ಯ ಕಾಂಗ್ರೆಸ್ ನಾಯಕರು ಸಾಲು ಸಾಲಾಗಿ ಬಿಜೆಪಿ ಸೇರುತ್ತಿದ್ದು, ಕಾಂಗ್ರೆಸ್ ಗೆ ಏನೂ ಮಾಡಲಾಗದ ಸ್ಥಿತಿ ಬಂದಿದೆ. ಯಾಕೆಂದರೆ ಸಿದ್ದರಾಮಯ್ಯನವರ ಸರ್ವಾಧಿಕಾರದ ಆಡಳಿತಕ್ಕೆ ಬೇಸತ್ತ ಶಾಸಕ ಮಾಲಿಕಯ್ಯ ಗುತ್ತೇದಾರ್ ಇದೀಗ ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದಾರೆ. ಹೈದರಾಬಾದ್ – ಕರ್ನಾಟಕ ಭಾಗದಲ್ಲಿ ಬಲಿಷ್ಠ ನಾಯಕನಾಗಿರುವ ಗುತ್ತೇದಾರ್ ಕಾಂಗ್ರೆಸ್ ನಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿ , ಕಾಂಗ್ರೆಸ್ ನ್ನು ಈ ಭಾಗದಲ್ಲಿ ಸೋಲಿಸುವವರೇ ಇಲ್ಲ ಎಂಬಂತೆ ವಾತಾವರಣ ಸೃಷ್ಟಿಸಿದ್ದರು. ಅಫ್ಜಲ್ ಗುರು ಕ್ಷೇತ್ರದಿಂದ ಶಾಸಕರಾದ ಗುತ್ತೇದಾರ್ ಸತತ ಆರು ಬಾರಿ ಕಾಂಗ್ರೆಸ್ ನಿಂದ ಗೆದ್ದಿದ್ದರು. ಆದರೂ ಇವರಿಗೆ ರಾಜ್ಯ ಸರಕಾರದಲ್ಲಿ ಯಾವುದೇ ಸಚಿವ ಸ್ಥಾನ ನೀಡದ ಕಾಂಗ್ರೆಸ್ ತುಷ್ಟೀಕರಣದ ನೀತಿ ಅನುಸರಿಸಿತ್ತು. ಅದಕ್ಕಾಗಿಯೇ ಬೇಸತ್ತ ಗುತ್ತೇದಾರ್ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತೊರೆಯಲು ಸಜ್ಜಾಗಿದ್ದಾರೆ.!

ಬಿಜೆಪಿಯಿಂದ ವೇದಿಕೆ ಸಜ್ಜು..!

ಸಿದ್ದರಾಮಯ್ಯನವರ ಜನವಿರೋಧಿ ನೀತಿಗೆ ಸೋಲುವ ಭೀತಿಯಿಂದ ಪಕ್ಷ ಬಿಟ್ಟು ವಲಸೆ ಹೋಗುತ್ತಿರುವ ಶಾಸಕ ಸಚಿವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಚುನಾವಣಾ ಹೊಸ್ತಿಲಲ್ಲೇ ಕಾಂಗ್ರೆಸ್ ಗೆ ಈ ರೀತಿಯ ಹೊಡೆತ ಬೀಳುತ್ತಿದ್ದು , ಸೋಲಿನ ಭೀತಿ ಹೆಚ್ಚಾಗಿದೆ ಎಂದರೆ ತಪ್ಪಾಗದು. ಯಾಕೆಂದರೆ ಕಾಂಗ್ರೆಸ್ ನಿಂದ ಪಕ್ಷ ತೊರೆಯುವ ಮುಖಂಡರಿಗೆ ಬಿಜೆಪಿ ಮಣೆ ಹಾಕುತ್ತಿದ್ದು, ಕರ್ನಾಟಕವನ್ನು ಕಾಂಗ್ರೆಸ್ ನಿಂದ ಮುಕ್ತಗೊಳಿಸಿ ,ಕರ್ನಾಟಕದಲ್ಲೂ ಕೇಸರಿ ಪತಾಕೆ ಹಾರಿಸಲು ಸಜ್ಜಾಗಿದ್ದಾರೆ. ಅದೇ ರೀತಿ ಮಾಲಿಕಯ್ಯ ಗುತ್ತೇದಾರ್ ಅವರ ಸ್ವಾಗತಕ್ಕೂ ಬಿಜೆಪಿ ವೇದಿಕೆ ಸಜ್ಜುಗೊಳಿಸಿದೆ.

ಈ ಮೂಲಕ ಹೈದರಾಬಾದ್ – ಕರ್ನಾಟಕದ ಕಾಂಗ್ರೆಸ್ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ಅಫ್ಜಲ್ ಗುರು ಕ್ಷೇತ್ರದಲ್ಲೂ ಈ ಬಾರಿ ಭಾರತ್ ಮಾತಾ ಕೀ ಜೈ ಘೋಷಣೆ ಮೊಳಗುವುದು ಖಚಿತವಾಗಿದೆ.! ಕಾಂಗ್ರೆಸ್ ನ ಒಂದೊಂದೇ ವಿಕೆಟ್ ಉರುಳುತ್ತಿದ್ದು , ಅಧಿಕಾರದಲ್ಲಿದ್ದರೂ ಕೂಡ ಪಕ್ಷ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಈ ಮೂಲಕ ಕರ್ನಾಟಕವನ್ನೂ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡು ವಿಜಯ ಪತಾಕೆ ಹಾರಿಸುವುದು ಖಚಿತ.!

–ಅರ್ಜುನ್

 

Tags

Related Articles

Close