ಪ್ರಚಲಿತ

ಪಾಕಿಸ್ತಾನದ ವಿರುದ್ದ ಸಿಡಿದೆದ್ದ ಪಿಒಕೆ!! ಪಾಕಿಸ್ತಾನದ ಕ್ರೌರ್ಯವನ್ನು ಪಾಕಿಸ್ತಾನದಲ್ಲಿಯೇ ಬಿಚ್ಚಿಟ್ಟ ವಿಡಿಯೋ ವೈರಲ್!!

ಭಾರತವನ್ನು ಕಂಡರೆ ಸಾಕು ಉರಿದೇಳುತ್ತಿರುವ ಪಾಕಿಸ್ತಾನವೂ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ನಲುಗಿ ಹೋಗಿದ್ದಂತೂ ಅಕ್ಷರಶಃ ನಿಜ!! ಹಾಗಾಗಿ ಜಮ್ಮು ಕಾಶ್ಮೀರದ ವಿಚಾರವಾಗಿ ಪದೇ ಪದೇ ಕಾಲುಗೆರೆದು ಜಗಳಕ್ಕೆ ಬರುತ್ತಿರುವ ಪಾಕಿಸ್ತಾನವು ಕಾಶ್ಮೀರವನ್ನು ತಮ್ಮದೇ ರಾಜ್ಯವನ್ನಾಗಿ ಮಾಡ ಹೊರಟಿರುವ ಬಗ್ಗೆ ತಿಳಿದಿದೆ ಇದೆ. ಕಾಶ್ಮೀರದಲ್ಲಿ ನಾನಾ ರೀತಿಯ ಉಗ್ರ ಚಟುವಟಿಕೆಗಳನ್ನು ಮಾಡುತ್ತಾ ಭಾರತದಿಂದ ಕಾಶ್ಮೀರವನ್ನು ಕಸಿದುಕೊಳ್ಳುವ ಭರದಲ್ಲಿದ್ದರೆ ಇತ್ತ ಸ್ವತಃ ಪಾಕಿಸ್ತಾನ ಆಕ್ರಮಿತ ಕಾಶ್ಮೀರಿ (ಪಿಒಕೆ) ಜನತೆಯೇ ಪಾಕಿಸ್ತಾನದ ಅಸಲಿ ಮುಖವಾಡವನ್ನು ಕಳಚಿಟ್ಟಿದ್ದಾರೆ.

ಹೌದು…. ಪಾಕಿಸ್ತಾನ ಈಗಾಗಲೇ ಉಗ್ರ ಚಟುವಟಿಕೆಗಳಿಂದ ರೋಸಿ ಹೋಗಿದ್ದು, ಜನಸಾಮಾನ್ಯರಿಗೆ ಪಾಕಿಸ್ತಾನ ನರಕವಾಗಿ ಕಾಡುತ್ತಿದೆಯಲ್ಲದೇ ಪಾಕಿಸ್ತಾನದಲ್ಲಿ ಉಳಿಗಾಲವೇ ಇಲ್ಲ ಎಂಬ ಸ್ಥಿತಿಗೆ ಪಾಕಿಸ್ತಾನ ತಲುಪಿದ್ದಂತೂ ಖಂಡಿತಾ!! ಹಾಗಾಗಿ ಇದೀಗ ಮುಜಫರಾಬಾದ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ, ಜನರು ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಬೀದಿಗಿಳಿದಿದ್ದಾರೆ. ಅಷ್ಟೇ ಅಲ್ಲದೇ ಜನರು ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಿರುವ ವಿಚಾರವು ಇದೀಗ ಎಲ್ಲೆಡೆ ಸುದ್ದಿಯಾಗಿದೆ!!

ಮುಜಾಫರಾಬಾದ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ವು ಪಾಕಿಸ್ತಾನದ ವಿರುದ್ಧ ಬೀದಿಗಿಳಿದಿದ್ದಲ್ಲದೇ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುತ್ತಾ, ಪಿಒಕೆ ಸ್ವಾತಂತ್ರ್ಯದ ವಿರುದ್ಧ ಘೋಷಣೆಗಳನ್ನು ಘೋಷಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ!! ಈ ಸಮಯದಲ್ಲಿ ಜನರು ಘೋಷಣೆಗಳ ಮೂಲಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ!! ಅಷ್ಟೇ ಅಲ್ಲದೇ ಪಾಕಿಸ್ತಾನಿ ಸೇನೆ ಮತ್ತು ಪಿಒಕೆ ಜನರ ಕಡೆಗೆ ಸರ್ಕಾರದಈ ವರ್ತನೆಯಿಂದ ಉಂಟಾದ ಮುತ್ತಿಗೆಯನ್ನು ಉಲ್ಲಂಘಿಸುವ ಬಗ್ಗೆ ಸ್ಥಳೀಯ ಜನರು ತುಂಬಾ ಅಸಮಾಧಾನ ಹೊಂದಿದ್ದಾರೆ ಎನ್ನುವ ವಿಚಾರವು ವರದಿಯಾಗಿದೆ.

ಮಾಹಿತಿಯ ಪ್ರಕಾರ, ಗಡಿಭಾಗದಲ್ಲಿರುವ ಪಾಕಿಸ್ತಾನಿ ಸೈನ್ಯವನ್ನು ವಶಪಡಿಸಿಕೊಳ್ಳಲು ಸಾಮಾನ್ಯ ಜನರು ಮುಜಫರಾಬಾದ್ ನಲ್ಲಿ ಬೀದಿಗಿಳಿದಿದ್ದಾರೆ ಎನ್ನುವ ವಿಚಾರ ಈಗಾಗಲೇ ತಿಳಿದು ಬಂದಿದ್ದು, ಸೆಜೂರ್ ಉಲ್ಲಂಘನೆಯ ಸಂಘರ್ಷದಲ್ಲಿ ಸರ್ಕಾರವು ಹಂತ ಹಂತದ ನಡವಳಿಕೆಯಿಂದಾಗಿ ಜನರು ಮರಣ ಹೊಂದಿದ್ದರು. ಈ ಬಗ್ಗೆ ಸಾಮಾನ್ಯ ಜನರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನದ ವಿರುದ್ಧ ಘೋಷಣೆಯನ್ನು ಕೂಗಿದ್ದಾರೆ!!

ಈ ಹಿಂದೆ ಪಾಕಿಸ್ತಾನ ಕಾಶ್ಮೀರವನ್ನು ತನ್ನ ವಶಕ್ಕೆ ಪಡೆಯಲು ಸಂಚು ರೂಪಿಸುತ್ತಿರಬೇಕಾದರೆ, ಇತ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಜನರು ಪಾಕಿಸ್ತಾನದ ವಿರುದ್ಧವೇ ಸಿಡಿದೆದ್ದಿದ್ದಾರೆ. ಈಗಾಗಲೇ ಗಿಲ್ಗಿಟ್ ಬಾಲ್ಟಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ನಡೆಸಿರುವ ಸ್ಥಳೀಯರು, ಪಾಕಿಸ್ತಾನದವರು ನಮ್ಮನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಬೀದಿಗಿಳಿದು ಪ್ರತಿಭಟನೆ ನಡೆಸಿರುವ ಪಾಕ್ ಆಕ್ರಮಿತ ಕಾಶ್ಮೀರದ ಜನತೆ, ಪಾಕ್ ವಿರುದ್ಧ ಘೋಷಣೆ ಕೂಗಿದ್ದು, ಪಾಕ್ ಸರ್ಕಾರ ಹೇರಿರುವ ತೆರಿಗೆ ಪದ್ಧತಿಯನ್ನು ವಿರೋಧಿಸಿದ್ದರು.

ಅಷ್ಟೇ ಅಲ್ಲದೇ, ಅಫ್ಘಾನಿಸ್ತಾನ ಗಡಿ ಪ್ರದೇಶ ಸೇರಿದಂತೆ ಇತರೆ ಕಡೆಗಳಲ್ಲಿ ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂಬ ಮಾಹಿತಿ ಆಗಿದ್ದಾಗೆ ಕೇಳಿಬರುತ್ತಿರುವ ವಿಚಾರ ತಿಳಿದೇ ಇದೆ. ಆದರೆ ಇದೀಗ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ವನ್ನು ಉಗ್ರರ ಕೇಂದ್ರವಾಗಿ ಮಾರ್ಪಾಡು ಮಾಡುತ್ತಿರುವ ವಿಷಯ ದಿನದಿಂದ ದಿನಕ್ಕೆ ಸ್ಪಷ್ಟವಾಗುತ್ತಿದೆ. ಅಷ್ಟೆ ಅಲ್ಲದೇ ಈ ಹಿಂದೆ ಪಿಒಕೆ ಪ್ರದೇಶದ ನಿವಾಸಿಗಳೇ “ಪಾಕಿಸ್ತಾನ ಸೇನೆ ಉಗ್ರರಿಗೆ ಇಲ್ಲಿ ತರಬೇತಿ ನೀಡುತ್ತಿದ್ದು, ಅದರಿಂದ ನಮ್ಮ ಬದುಕು ನರಕವಾಗುತ್ತಿದೆ” ಎಂದು ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು!!

ಅಲ್ಲದೇ, ಭಾರತದ ಎದುರು ನೇರವಾಗಿ ದಾಳಿ ಮಾಡಿದರೆ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿರುವ ಪಾಕಿಸ್ತಾನ, ಭಾರತದ ವಿರುದ್ಧ ಪರೋಕ್ಷ ದಾಳಿ ನಡೆಸಲು ಉಗ್ರರನ್ನು ಬಳಸಿಕೊಳ್ಳುತ್ತಿದೆ. ಪಾಕಿಸ್ತಾನದ ಈ ಕುತಂತ್ರದ ಸಿದ್ಧತೆಗೆ ವೇದಿಕೆಯಾಗುತ್ತಿರೋದು ಮಾತ್ರ ಪಾಕ್ ಆಕ್ರಮಿತ ಕಾಶ್ಮೀರ. ಪಾಕಿಸ್ತಾನ ಸರ್ಕಾರ ಹಾಗೂ ಸೇನೆಯ ಈ ಕ್ರಮದ ವಿರುದ್ಧ ಈಗ ಪಿಒಕೆ ಜನರು ತಿರುಗಿ ಬಿದ್ದಿದ್ದರು. “ಪಾಕ್ ಸರ್ಕಾರ ತನ್ನ ನಿಲುವನ್ನು ಬದಲಿಸಿ, ಪಿಒಕೆ ಪ್ರದೇಶದಿಂದ ಉಗ್ರರ ಕ್ಯಾಂಪ್ ಗಳನ್ನು ನಿರ್ಮೂಲನೆ ಮಾಡದಿದ್ದರೆ, ನಾವೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಪಾಕ್ ಸರ್ಕಾರಕ್ಕೆ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು!!

ಆದರೆ ಇದೀಗ ಮುಜಫರಾಬಾದ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ, ಜನರು ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ಬೀದಿಗಿಳಿದಿದ್ದು, ಪಾಕಿಸ್ತಾನಿ ಸೇನೆ ಮತ್ತು ಪಿಒಕೆ ಜನರ ಕಡೆಗೆ ಸರ್ಕಾರದ ಹೆಜ್ಜೆಯ ವರ್ತನೆಯಿಂದ ಉಂಟಾದ ಮುತ್ತಿಗೆಯನ್ನು ಉಲ್ಲಂಘಿಸುವ ಬಗ್ಗೆ ಸ್ಥಳೀಯ ಜನರು ತುಂಬಾ ಅಸಮಾಧಾನ ಹೊಂದಿದ್ದಾರೆಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಯುನೈಟೆಡ್ ಕಾಶ್ಮೀರ ಪೀಪಲ್ಸ್ ಪಾರ್ಟಿಯ ಮುಖ್ಯಸ್ಥ ಶುಕಾತ್ ಅಲಿ, ಸರ್ಕಾರವು ತಾರತಮ್ಯದ ನಡವಳಿಕೆ ತೋರುತ್ತಿದೆ ಎಂದು ದೂರಿದ್ದಾರೆ.

ಅಷ್ಟೇ ಅಲ್ಲದೇ, ಪಾಕಿಸ್ತಾನದವರು ಸೆಳವದಲ್ಲಿ ಮರಣ ಹೊಂದಿದಾಗ, ಸರ್ಕಾರ ಅವರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ಆದರೆ ಪಿಒಕೆನಲ್ಲಿ
ಬಲಿಯಾದವರ ಕುಟುಂಬಕ್ಕೆ ಮೂರು ಲಕ್ಷ ರೂಪಾಯಿ ನೀಡಿದೆ. ಮುಷ್ಕರದಿಂದಾಗಿ ಸ್ಥಳಾಂತರಗೊಂಡ ಜನರನ್ನು ಪುನರ್ವಸತಿಗೊಳಿಸಲು ಸರ್ಕಾರ ಇದುವರೆಗೂ ಪ್ರಯತ್ನಿಸಲಿಲ್ಲ ಎಂದು ತಿಳಿಸಿದರು. ಕಾಶ್ಮೀರದ ಈ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿರುವುದರಿಂದ ಜನರು ಹಂತ ಹಂತವಾಗಿ ತೊಂದರೆಗೀಡಾಗುತ್ತಿರುವುದಾಗಿ ಆರೋಪಿಸಲಾಗಿದೆ. ಪಾಕಿಸ್ತಾನವು ಈ ಪ್ರದೇಶದಲ್ಲಿ ತಮ್ಮ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಜನರು ಆರೋಪಿಸಿದ್ದು, ಹಠಾತ್ ಕಣ್ಮರೆ ಮತ್ತು ಜನರ ಕ್ರೂರ ಕೊಲೆ ಘಟನೆಗಳು ಈ ದಿನಗಳಲ್ಲಿ ಸಾಮಾನ್ಯವಾಗಿವೆ ಎಂದು ಜನ ಕಳವಳ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ಸೈನ್ಯವು ಭಯೋತ್ಪಾದಕರನ್ನು ಕ್ಯಾಂಪಿಂಗ್ ಮಾಡುವ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಗಡಿ ದಾಟಿದೆ ಎಂದು ಜನರು ಆರೋಪಿಸಿರುವ ಇವರು, ಅಲ್ಲಿ ಅವರಿಗೆ ತರಬೇತಿಯನ್ನು ನೀಡಲಾಗುತ್ತದೆಯಲ್ಲದೇ ಸೈನ್ಯವು ಪಿಒಕೆ ಮೂಲಸೌಕರ್ಯಗಳನ್ನು ಸ್ವಾಧೀನ ಪಡಿಸಿಕೊಂಡಿದೆ. ಹಾಗಾಗಿ ಅದನ್ನು ವಿರೋಧಿಸಿದವರ ವಿರುದ್ಧ ಸೈನ್ಯದ ಗನ್ ಮಾತನಾಡುತ್ತಿರುವುದರ ಬಗ್ಗೆ ಜನರು ಆತಂಕಗೊಂಡಿದ್ದಾರೆ ಎಂದು ಹೇಳಿದ್ದಾರೆ!!

ಭಾರತದ ಎದುರು ನೇರವಾಗಿ ದಾಳಿ ಮಾಡಿದರೆ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತಿರುವ ಪಾಕಿಸ್ತಾನ, ಭಾರತದ ವಿರುದ್ಧ ಪರೋಕ್ಷ ದಾಳಿ ನಡೆಸಲು ಉಗ್ರರನ್ನು ಬಳಸಿಕೊಳ್ಳುತ್ತಿರುವ ವಿಚಾರ ಇದೀಗ ಸ್ಪಷ್ಟವಾಗಿದೆ. ಒಟ್ಟಿನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಜನರು ಉದ್ವಿಗ್ನ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಜತೆಗೆ ದಿನೇ ದಿನೇ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಲೇ ಇರುವುದು ಮಾತ್ರ ನಿಜಕ್ಕೂ ಕೂಡ ಬೇಸರದ ಸಂಗತಿ.

– ಅಲೋಖಾ

Tags

Related Articles

Close