ಪ್ರಚಲಿತ

ದೇಶ ಮತ್ತಷ್ಟು ಬಲಿಷ್ಠವಾಗಲು ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಿ: ಅಮಿತ್ ಶಾ

ಭಾರತ ಇಂದು ವಿಶ್ವದಲ್ಲೇ ಮನ್ನಣೆ ಪಡೆದಿದೆ. ಎಲ್ಲಾ ರಾಷ್ಟ್ರಗಳಿಗೂ ಭಾರತದ ಸ್ನೇಹ ಬೇಕು ಎನಿಸುತ್ತಿದೆ ಎಂದಾದರೆ ಅದರ ಹಿಂದೆ ಪ್ರಧಾನಿ ಮೋದಿ ಅವರ ಶ್ರಮವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ದೇಶವನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಹಲವಾರು ಪ್ರಗತಿಪರ ಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ಮೋದಿ ಅವರ ದೃಷ್ಟಿಕೋನ, ಕಾರ್ಯವೈಖರಿಗೆ ಸಾಟಿ ಯಾರೂ ಇಲ್ಲ ಎನ್ನಬಹುದು.

ದೇಶದ ಅಭಿವೃದ್ಧಿ, ದೇಶಕ್ಕೆ ಮಾರಕವಾದ ಅಂಶಗಳನ್ನು ತೊಡೆದು ಹಾಕಿ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪ್ರಧಾನಿ ಮೋದಿ ಅವರ ಕೊಡುಗೆ ಸಾಕಷ್ಟಿದೆ. ದೇಶಕ್ಕೆ ಮಾರಕ ಎನಿಸಿರುವ ಭಯೋತ್ಪಾದನೆ, ನಕ್ಸಲಿಸಂ ಸೇರಿದಂತೆ ಇನ್ನೂ ಹಲವಾರು ಹಿಂಸಾತ್ಮಕ ವಿಚಾರಗಳಿಗೆ, ದೇಶದ ಅಭಿವೃದ್ಧಿಗೆ ಕುತ್ತಾಗಿರುವ ಹಲವಾರು ವಿಷಯಗಳಿಗೆ ಸಿಂಹಸ್ವಪ್ನರಾಗಿ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಮಾದರಿ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಮಾತನಾಡಿದ್ದು, ಮೂರನೇ ಬಾರಿಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಸರ್ಕಾರ ರಚನೆ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ಹಾಗೆ ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ಭಾರತವನ್ನು ಭಯೋತ್ಪಾದನೆ, ನಕ್ಸಲಿಸಂ ತೊಡೆದು ಹಾಕಲು, ಬಡತನವನ್ನು ಮೆಟ್ಟಿ ನಿಲ್ಲಲು, ಭಾರತವನ್ನು ವಿಶ್ವದ ಮೂರನೇಯ ಅತ್ಯಂತ ದೊಡ್ಡ ಮತ್ತು ಬಲಿಷ್ಟ ಆರ್ಥಿಕತೆಯನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಗತ್ಯ. ಈ ನಿಟ್ಟಿನಲ್ಲಿ ಸಮರ್ಥ ದೇಶ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರಿಗೆ ಮೂರನೇ ಬಾರಿಗೆ ಸರ್ಕಾರ ರಚಿಸಲು ಬಹುಮತ ನೀಡುವಂತೆ ಅವರು ಮತದಾರರಲ್ಲಿ ವಿನಂತಿಸಿಕೊಂಡಿದ್ದಾರೆ.

ಕಳೆದ ಹತ್ತು ವರ್ಷಗಳ ಪ್ರಧಾನಿ ಮೋದಿ ಅವರ ಅಧಿಕಾರಾವಧಿಯಲ್ಲಿ ವೈಟ್‌ ಬ್ಯಾಂಕ್ ರಾಜಕಾರಣ ಮಾಡದೆ ಅತ್ಯಂತ ಕಠಿಣ ನಿಲುವುಗಳನ್ನು ತೆಗೆದುಕೊಂಡು ದೇಶದ ಹಿತ ಕಾಪಾಡಿದ್ದಾರೆ. ಅಂತಹ ಮಹತ್ವದ ನಿರ್ಣಯಗಳಲ್ಲಿ ಆರ್ಟಿಕಲ್370 ರದ್ದತಿ, ಶ್ರೀರಾಮ ಮಂದಿರ ನಿರ್ಮಾಣದಂತಹ ಕ್ರಮಗಳು ಸೇರಿವೆ ಎಂದು ಅವರು ನುಡಿದಿದ್ದಾರೆ.

ಪ್ರಧಾನಿ ಮೋದಿ ಅವರ ಈ ಕೆಲಸಗಳು ಅವರನ್ನು ಜನರಿಗೆ ಹತ್ತಿರವಾಗಿಸಿವೆ. ಇದು ಮೂರನೇ ಬಾರಿಗೆ ಸರ್ಕಾರ ರಚನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿದೆ. ಜನರು ಕಮಲದ ಗುರುತಿಗೆ ಮತ ನೀಡುವ ಮೂಲಕ ಪ್ರಧಾನಿ ಮೋದಿ ಅವರನ್ನು ಬೆಂಬಲಿಸುವ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ಹಾಗೆಯೇ ದೇಶದ ಅಭಿವೃದ್ಧಿಯ ಕೆಲಸಗಳಲ್ಲಿ ಯುವಕರಿಗೆ ಹೆಚ್ಚು ಅವಕಾಶ ನೀಡಿದಲ್ಲಿ ಅವರು ವಿಶ್ವದ ಜೊತೆ ಕೈಜೋಡಿಸಿ, ಭವ್ಯ ರಾಷ್ಟ್ರ ನಿರ್ಮಾಣ ಮಾಡುತ್ತಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.

Tags

Related Articles

Close