ಪ್ರಚಲಿತ

ಶಾಂತಿಪ್ರಿಯ ‌ಸಮುದಾಯದ ಉಗ್ರ ಎನ್ಐಎ ವಶಕ್ಕೆ

ಎಲ್ಲಾ ಮುಸಲ್ಮಾನರೂ ಭಯೋತ್ಪಾದಕರಲ್ಲ. ಆದರೆ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವರೆಲ್ಲರೂ ಭಯೋತ್ಪಾದಕರೇ ಎಂಬುದು ನೂರಕ್ಕೆ ನೂರರಷ್ಟು ಸತ್ಯ.

ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಯುವಕರನ್ನು ಸೇರಿಸಲು ಸಾಮಾಜಿಕ ಜಾಲತಾಣಗಳ ಮೂಲಕ ಯತ್ನಿಸುತ್ತಿದ್ದ ಇಂಜಿನಿಯರಿಂಗ್ ಓರ್ವನನ್ನು ಎನ್ಐಎ ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಿದೆ.

ಬಂಧಿತ ಉಗ್ರನ ಹೆಸರು ಜುಬೈರ್ ನೂರ್ ಮಹಮ್ಮದ್ ಶೇಖ್. ಸೋ ಕಾಲ್ಡ್ ಶಾಂತಿ ಪ್ರಿಯ ಸಮುದಾಯದ ಈತ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು, ತನ್ನನ್ನು ತಾನು ದೇಶ ವಿರೋಧಿ, ಸಮಾಜಘಾತುಕ ಕೃತ್ಯದಲ್ಲಿ ತೊಡಗಿಸಿಕೊಂಡು ಇದೀಗ ತನಿಖಾ ಸಂಸ್ಥೆಯ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಈತ ಸಾಮಾಜಿಕ ಜಾಲತಾಣಗಳನ್ನು ಬಳಸಿ ಯುವಕರನ್ನು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸೇರುವಂತೆ ಬ್ರೈನ್ ವಾಷ್ ಮಾಡುವ ಮೂಲಕ ಯುವಕರನ್ನು ಉಗ್ರಗಾಮಿಗಳನ್ನಾಗಲು ಪ್ರೇರೇಪಿಸುತ್ತಿದ್ದ ಎಂಬುದಾಗಿ ಎನ್ ಐ ಎ ಅಧಿಕಾರಿಗಳು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡು ಈತನನ್ನು ಬಂಧಿಸಿದ್ದಾರೆ.

ಈತ ವರ್ಷಕ್ಕೆ ಸುಮಾರು ಹದಿನೈದು ಲಕ್ಷ ರೂ. ಗಳಿಸುತ್ತಿದ್ದರೂ, ದೇಶ ವಿರೋಧಿ ಕೃತ್ಯದ ಮೂಲಕವೂ ಹಣ ಗಳಿಸುತ್ತಿದ್ದ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಬು ನುಸೈಬಾ ‌ಎಂಬ ಹೆಸರಿನ ಮೂಲಕ ಕಾರ್ಯಾಚರಿಸುತ್ತಿದ್ದ ಈತ, ಆ ಮೂಲಕ ಯುವ ಜನರನ್ನು ಉಗ್ರಗಾಮಿ ಸಂಘಟನೆಗೆ ಸೇರುವ ಹಾಗೆ ಪ್ರೇರೇಪಿಸುತ್ತಿದ್ದ. ಹಾಗೆಯೇ ಇತರ ಧರ್ಮಗಳಿಗಿಂತ ಇಸ್ಲಾಂ ಧರ್ಮ ಯಾಕೆ ಶ್ರೇಷ್ಟ, ಬೇರೆ ಧರ್ಮಗಳೆಲ್ಲಾ ಹೇಗೆ ಕೀಳು ಎಂಬುದಾಗಿಯೂ ತಲೆ ಕೆಡಿಸುವ ಮೂಲಕ ಈತ ಯುವಕರನ್ನು ದಾರಿ ತಪ್ಪಿಸಿ, ಉಗ್ರವಾದದ ಕಡೆಗೆ ವಾಲುವಂತೆ ಮಾಡುತ್ತಿದ್ದ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಎನ್ ಐ ಎ ಯು ಪುಣೆಯಲ್ಲಿರುವ ಆತನ ಮನೆಯ ಮೇಲೆ ದಾಳಿ ನಡೆಸಿದ್ದು, ಆತನಿಂದ ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದ ಹಾಗೆ, ಆತನಿಗೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಜೊತೆಗಿರುವ ನಂಟಿನ ಬಗೆಗಿನ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ, ಮೊಬೈಲ್, ಲ್ಯಾಪ್ಟಾಪ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ಸಹ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. ಈತನ ಜೊತೆಗೆ ಇನ್ನೂ ಮೂವರು ಉಗ್ರರನ್ನು ವಶಕ್ಕೆ ಪಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಲವು ಸಮಯಗಳಿಂದೀಚೆಗೆ ಪುಣೆಯಂತಹ ನಗರದಲ್ಲಿ ಉಗ್ರ ಚಟುವಟಿಕೆ ಹೆಚ್ಚುತ್ತಿದ್ದು, ಇದು ಆಘಾತಕಾರಿ ಮತ್ತು ಅಪಾಯಕಾರಿಯೂ ಹೌದು.

ಹಿಂದೆಲ್ಲಾ ಜಮ್ಮು ಕಾಶ್ಮೀರದಲ್ಲಿ ಉಗ್ರರ ಸಂಖ್ಯೆ ಹೆಚ್ಚಾಗಿತ್ತು. ಆ ಪ್ರದೇಶದ ಯುವ ಜನರೂ ಸಹ ಬಹಳ ಬೇಗನೆ ಭಯೋತ್ಪಾದಕರ ನಂಟಿಗೆ ಬಂದು ಉಗ್ರರಾಗುತ್ತಿದ್ದರು. ಅಲ್ಲಿನ ಹೆಚ್ಚಿನ ಅಲ್ಪಸಂಖ್ಖಾತರ ಮನೆಗಳಲ್ಲಿ ಶಸ್ತ್ರಾಸ್ತ್ರಗಳು ಸಾಗುತ್ತಿದ್ದ ಬಗ್ಗೆ ವರದಿಯಾಗುತ್ತಿತ್ತು. ಆದರೆ ಯಾವಾಗ ದೇಶದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂತೋ, ರಕ್ಷಣಾ ಪಡೆಗಳ ಮೇಲೆ ಕಲ್ಲು ಹೊಡೆಯುವ ಸ್ಥಿತಿಯಲ್ಲಿದ್ದ ಜಮ್ಮು ಕಾಶ್ಮೀರದ ಚಿತ್ರಣವೇ ಬದಲಾಯಿತು. ಅಲ್ಲಿನ ಹಲವಾರು ಅಲ್ಪಸಂಖ್ಯಾತ ಮುಸಲ್ಮಾನರಿಗೆ ಉಗ್ರವಾದಂತಹ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ತಪ್ಪು ಎಂಬುದರ ಅರಿವಾಯ್ತು. ಮೋದಿ ಸರ್ಕಾರ ಸಹ ಅಲ್ಲಿನ ಉಗ್ರರನ್ನು ಸೆದೆ ಬಡಿಯಲು, ಅವರನ್ನು ಸರಿ ದಾರಿಗೆ ತರಲು ಹಲವಾರು ಕೆಲಸಗಳನ್ನು ಮಾಡಿದೆ. ಅದರಲ್ಲಿ ಜಮ್ಮು ಕಾಶ್ಮೀರ‌ವನ್ನು ಭಾರತದಿಂದ ಪ್ರತ್ಯೇಕಿಸಿದ್ದ ಆರ್ಟಿಕಲ್ 370 ರದ್ದತಿಯೂ ಒಂದು. ಇವೆಲ್ಲದರ ಪರಿಣಾಮ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಗ್ರವಾದದತ್ತ ಹೊರಳುತ್ತಿದ್ದವರು, ದೇಶದ ಮೇಲೆ ಗೌರವ, ಪ್ರೇಮ ಹೊಂದುವಂತಾಗಿದೆ. ಹಾಗೆಯೇ, ಹಲವು ಯುವಕರು ದೇಶ ಸೇವೆ ಮಾಡಲು ಸೈನ್ಯಕ್ಕೂ ಸೇರಿದ್ದಾರೆ.

ದೇಶದ ಹೊರಗಿನ ಉಗ್ರರನ್ನು ಹತ್ತಿಕ್ಕುವುದು ಸುಲಭ. ಆದರೆ ದೇಶದೊಳಗಿದ್ದುಕೊಂಡು, ಈ ದೇಶದ ಅನ್ನ ತಿಂದು, ಈ ದೇಶದ ಸಂಪನ್ಮೂಲ ಬಳಸಿ ಈ ದೇಶಕ್ಕೆಯೇ ಅಪಾಯಕಾರಿ ಕ್ರಿಮಿಗಳಾಗಿರುವವರನ್ನು ಹತ್ತಿಕ್ಕುವುದು ಕಷ್ಟ. ಅಲ್ಪಸಂಖ್ಯಾತರು ಅವಿದ್ಯಾವಂತರು, ಅವರ ಬಡತನವೇ ಅವರನ್ನು ತಪ್ಪು ಕೆಲಸಗಳತ್ತ ವಾಲುವ ಹಾಗೆ ಮಾಡುತ್ತದೆ ಎಂದೆಲ್ಲಾ ಬೊಬ್ಬಿಡುವ ಬುದ್ಧಿ ಜೀವಿಗಳು, ಹೀಗೆ ವಿದ್ಯಾವಂತ, ಆರ್ಥಿಕವಾಗಿ ಸಬಲರಾಗಿರುವ ಉಗ್ರರ ಬಂಧನವಾದರೂ ಅವರ ವಿರುದ್ಧ ಸೊಲ್ಲೆತ್ತದಿರುವುದು ವಿಪರ್ಯಾಸವೇ ಸರಿ.

Tags

Related Articles

Close