ಪ್ರಚಲಿತ

ಭಾರತದ ವಿರುದ್ಧ ಮತ್ತೆ ನರಿ ಬುದ್ಧಿ ತೋರಿಸಿದ ಪಾಕ್!! ಐಎನ್‍ಎಯಿಂದ ಬಯಲಾಯಿತು ಸ್ಫೋಟಕ ಸತ್ಯ!!

ಭಾರತ ಶತ್ರು ರಾಷ್ಟ್ರ ಪಾಕಿಸ್ತಾನ ಇದೀಗ ಮತ್ತೊಂದು ಖತರ್ನಾಕ್ ಕೆಲಸ ಮಾಡುವ ಮೂಲಕ ಸೆರೆಬಿದ್ದಿದೆ!! ಭಾರತದ ವಿರುದ್ಧ ಪಾಕಿಸ್ತಾನದ ಸರ್ಕಾರವೇ ನೇರವಾಗಿ ಕುಕೃತ್ಯಗಳಿಗೆ ಪ್ರೇರಣೆ ನೀಡುತ್ತದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಇದೀಗ ಮತ್ತೊಮ್ಮೆ ಭಾರತ ರಾಷ್ಟ್ರೀಯ ತನಿಖಾದಳ ಈ ಭಯಾನಕ ಸತ್ಯವನ್ನು ಹೊರಹಾಕಿದೆ!!

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಜುಬೈರ್ ಹೆಸರು ಸೇರ್ಪಡೆ!!

ಭಾರತದಲ್ಲಿರುವ ಅಮೆರಿಕ, ಇಸ್ರೇಲ್ ದೂತವಾಸ ಕಚೇರಿ, ದಕ್ಷಿಣ ಭಾರತದ ಸೇನೆ ಮತ್ತು ನೌಕಾ ನೆಲೆಗಳ ಮೇಲೆ 26/11ರ ಮಾದರಿಯ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಶ್ರೀಲಂಕಾದ ಪಾಕಿಸ್ತಾನಿ ಹೈಕಮಿಷನ್ ಕಚೇರಿಯ ವೀಸಾ ಅಧಿಕಾರಿ ಜುಬೈರ್ ಸಿದ್ದಿಖಿ ಎಂಬುವವರನ್ನು ವಾಂಟೆಡ್ ಲಿಸ್ಟ್‍ನಲ್ಲಿ ಸೇರಿಸಿದೆ. ಅಲ್ಲದೆ, ಮಾಹಿತಿ ಕೋರಿ ಅಧಿಕಾರಿಯ ಭಾವಚಿತ್ರ ಬಿಡುಗಡೆಗೊಳಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಪ್ರಥಮ ಬಾರಿಗೆ ವಾಂಟೆಡ್ ಪಟ್ಟಿಯಲ್ಲಿ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಯನ್ನು ಸೇರ್ಪಡೆ ಮಾಡಿದೆ. ಕೊಲಂಬೋದ ಪಾಕ್ ಹೈಕಮಿಷನ್‍ನ ವೀಸಾ ಸಲಹೆಗಾರರಾಗಿರುವ ರಾಜತಾಂತ್ರಿಕ ಅಧಿಕಾರಿ ಅಮೀರ್ ಜುಬೈರ್ ಸಿದ್ಧಿಕಿ ಎನ್‍ಐಎ ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆಯಾದವನು 2014 ರಲ್ಲಿ ದಕ್ಷಿಣ ಭಾರತದ ಸೇನೆ ಮತ್ತು ನೌಕಾಪಡೆ ಕಮಾಂಡೋಗಳ ಪಕ್ಕದಲ್ಲಿರುವ ಅಮೆರಿಕ ಮತ್ತು ಇಸ್ರೇಲ್ ದೂತಾವಾಸಗಳ ಮೇಲೆ 26/11 ಮಾದರಿಯ ಭಯೋತ್ಪಾದಕ ದಾಳಿಗೆ ಸಂಚು ಹೂಡಿದ ಇಬ್ಬರು ಪಾಕ್ ಅಧಿಕಾರಿಗಳ ಜತೆಗೆ ಸಿದ್ದಿಕಿ ಹೆಸರನ್ನೂ ಎನ್‍ಐಎ ಪಟ್ಟಿಗೆ ಸೇರಿಸಲಾಗಿದೆ.

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಎಲ್ಲ ಅಧಿಕಾರಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಇಂಟರ್‍ಪೆÇೀಲ್‍ಗೆ ಎನ್‍ಐಎ ಮನವಿ ಮಾಡಿದೆ. ಸಿದ್ದಿಕಿ ವಿರುದ್ಧ ಫೆಬ್ರವರಿಯಲ್ಲಿ ಆರೋಪಪಟ್ಟಿ ಸಿದ್ಧಪಡಿಸಲಾಗಿತ್ತು. ಪಾಕ್ ಗುಪ್ತಚರ ಅಧಿಕಾರಿಗಳನ್ನು `ವಿನೀತ್’ ಮತ್ತು `ಬಾಸ್ ಅಲಿಯಾಸ್ ಶಾ’ ಎಂಬ ಗುಪ್ತನಾಮಗಳಿಂದ ಗುರುತಿಸಲಾಗಿದೆ. ಇತರ ಮೂವರನ್ನು ಅಧಿಕೃತ ಹೆಸರುಗಳಿಂದ ಗುರುತಿಸಿಲ್ಲ.

ಶ್ರೀಲಂಕಾ ಪ್ರಜೆ ಮುಹಮ್ಮದ್ ಸಕೀರ್ ಹುಸೇನ್ ಮತ್ತು ಅರುಣ್ ಸೆಲ್ವರಾಜ್, ಶಿವಬಾಲನ್ ಹಾಗೂ ತಮೀಮ್ ಅನ್ಸಾರಿ ಎಂಬುವರನ್ನು ತನ್ನ ಏಜೆಂಟ್ ಗಳಾಗಿ ಸಿದ್ಧಿಕಿ ನೇಮಿಸಿಕೊಂಡು, 2009 ರಿಂದ 2016ರ ಮಧ್ಯೆ ಈ ಅಧಿಕಾರಿಗಳು ಕೊಲಂಬೋದಲ್ಲಿ ಕರ್ತವ್ಯದಲ್ಲಿದ್ದಾಗ ಚೆನ್ನೈ ಹಾಗೂ ದಕ್ಷಿಣ ಭಾರತದ ಮಹತ್ವದ ಸ್ಥಳಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಏಜೆಂಟ್ ಗಳಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.

ಭಾರತೀಯ ಅಧಿಕಾರಿಗಳ ತನಿಖೆಗೆ ಸಾಥ್ ನೀಡಿದ ಅಮೆರಿಕಾ!!

ಸಿದ್ದಿಕಿ, ರಕ್ಷಣಾ ಸ್ಥಾವರಗಳು, ಪರಮಾಣು ಸ್ಥಾವರಗಳು ಮತ್ತು ಸೇನೆಯ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಸೂಚಿಸಿದ್ದ. ಭಾರತದ ಹಿರಿಯ ಸೇನಾಧಿಕಾರಿಗಳ ಲ್ಯಾಪ್ ಟಾಪ್ ಕದಿಯಲು ಸೂಚಿಸಿದ್ದ ಎಂದು ಎನ್‍ಐಎ ತಿಳಿಸಿದೆ. ಅಮೆರಿಕ ಭಾರತೀಯ ಅಧಿಕಾರಿಗಳ ತನಿಖೆಗೆ ಸಾಥ್ ನೀಡಿದ್ದು, ಮಹತ್ವದ ದಾಖಲೆಗಳನ್ನು ಈ ಅಧಿಕಾರಿಗಳ ಕುರಿತು ನೀಡಿದೆ. ಇದರಿಂದ ಅಧಿಕಾರಿಗಳ ಸಂಚು ಬಯಲಾಗಿದೆ.

2014ರಲ್ಲಿ ಈ ವಿಧ್ವಂಸಕ ಕೃತ್ಯ ನಡೆಸಲು ಅಧಿಕಾರಿ ಸಂಚು ರೂಪಿಸಿದ್ದರು ಎಂದು ಎನ್‍ಐಎ ಹೇಳಿದೆ. ಅಲ್ಲದೆ, ಈ ಅಧಿಕಾರಿಯ ಜತೆಗೆ ಮತ್ತಿಬ್ಬರು ಸಿಬ್ಬಂದಿಯ ಹೆಸರನ್ನೂ ಎನ್‍ಐಎ ತನ್ನ ಪಟ್ಟಿಯಲ್ಲಿ ಸೇರಿಸಿದೆ. ಇವರೊಂದಿಗೆ ಸಂಚು ರೂಪಿಸಲು ಮತ್ತೂಬ್ಬ ಅಧಿಕಾರಿಯೂ ನೆರವಾಗಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಜುಬೈರ್ ಸಿದ್ದಿಖಿ ಮತ್ತು ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರ ವಿರುದ್ಧ ಎನ್‍ಐಎ ಇಂಟರ್‍ಪೆÇೀಲ್‍ಗೆ ರೆಡ್ ಕಾರ್ನರ್ ನೋಟಿಸ್ ನೀಡಿದೆ. ಶ್ರೀಲಂಕಾದಲ್ಲಿ ವೀಸಾ ಅಧಿಕಾರಿಯಾಗಿದ್ದ ಜುಬೈರ್ ಸಿದ್ದಿಖಿ ಇಸ್ಲಾಮಾಬಾದ್‍ಗೆ ಪದೇ ಪದೆ ಭೇಟಿ ನೀಡುತ್ತಿದ್ದರು ಎನ್ನಲಾಗಿದೆ. ಸಿದ್ದಿಖಿ ವಿರುದ್ಧ ಎನ್‍ಐಎ ಫೆಬ್ರವರಿಯಲ್ಲೇ ಎಫ್‍ಐಆರ್ ದಾಖಲಿಸಿದೆ. ಆದರೆ ಮಿಕ್ಕ ಮೂವರ ಕುರಿತು ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಪಾಕಿಸ್ತಾನಿ ರಾಜತಾಂತ್ರಿಕ ಅಧಿಕಾರಿಗಳನ್ನು ಎನ್‍ಐಎ ತನ್ನ ವಾಂಟೆಡ್ ಲಿಸ್ಟ್‍ನಲ್ಲಿ ಪ್ರಕಟಿಸಿ, ಇಂಟರ್ ಪೆÇೀಲ್‍ಗೆ ರೆಡ್ ಕಾರ್ನರ್ ನೋಟಿಸ್ ನೀಡಿರುವುದು ಇದೇ ಮೊದಲು.

source: vijayavani

 

ಪವಿತ್ರ

Tags

Related Articles

Close