ಪ್ರಚಲಿತ

ಪಾಕಿಸ್ಥಾನವನ್ನು ಎಡಗಾಲಲ್ಲಿ ಒದ್ದು ಭಾರತದ ಜೊತೆ ಕೈ ಜೋಡಿಸಿದ ಚೀನಾ!! ಇಸ್ಲಾಂ ರಾಷ್ಟ್ರದಲ್ಲಿನ ಯೋಜನೆಗೆ ಭಾರತದ ಜೊತೆ ಸಾಥ್ ನೀಡಲಿರುವ ಚೀನಾ!!

ಇದನ್ನು ಭಾರೀ ವಿಜಯವೆಂದೇ ಭಾವಿಸಿ ಬೇಕಾದರೆ! ಮೊನ್ನೆ ಮೊನ್ನೆಯವರೆಗೆ, ಚೀನಾ ಪಾಕಿಸ್ಥಾನಕ್ಕೆ ಬೆನ್ನು ತಿಕ್ಕುತ್ತ ಕೂತಿತ್ತಷ್ಟೇ!! ಭಾರತವನ್ನು ಸೋಲಿಸಲು ಅದ್ಯಾವ ಕಸರತ್ತು ಬೇಕೋ ಅದನ್ನಷ್ಟೂ ನಾಡಲು ಸಿದ್ಧವಾಗಿತ್ತುಯ ಚೀನಾ! ಆದರೆ, ಈಗ ಅದೇ ಚೀನಾವೊಂದು “ಭಯೋತ್ಪಾದಕ ರಾಷ್ಟ್ರ” ಎಂದೇ ಕುಖ್ಯಾತವಾದ ಪಾಕಿಸ್ತಾನವನ್ನು ನಿಗ್ರಹಿಸಲು ಭಾರತದೊಂದಿಗೆ ಕೈ ಜೋಡಿಸಲು ಒಪ್ಪಿದೆ!!! ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಪ್ರಧಾನಿ ಮೋದಿ ಅವರ ವುಹಾನ್ ನ ಅನೌಪಚಾರಿಕ ಸಭೆಯೊಂದು ಭಾರತದ ಬೆಳವಣಿಗೆಯನ್ನು ತಡೆಯಲು ಬಯಸುತ್ತಿರುವ ಕೆಕ ಹಿತಶತ್ರುಗಳಿಗೆ ಸಾಕಷ್ಟು ತಲೆ ಕೆಡಿಸಿದೆ ಬಿಡಿ!!

ಹೌದು! ಜಗತ್ತಿನ 40% ರಷ್ಟು ಜನಸಂಖ್ಯೆ ಹೊಂದಿರುವ ಚೀನಾ, ಇವತ್ತು ಭಾರತದ ಜೊತೆಗೂಡಿ ಅಫ್ಘಾನಿಸ್ತಾನದಲ್ಲಿ ಜಂಟಿ ಭಾರತ-ಚೀನಾ ಆರ್ಥಿಕ ಯೋಜನೆಯನ್ನು ಕೈಗೊಳ್ಳಲು ಒಪ್ಪಿದೆ!! ಇದು ಕೇವಲ ಒಪ್ಪಿಗೆ ಮಾತ್ರವಲ್ಲ, ಬದಲಾಗಿ ಪ್ರಧಾನಿ ಮೋದಿಗೆ ಸಿಕ್ಕ ಅತಿದೊಡ್ಡ ರಾಜತಾಂತ್ರಿಕ ವಿಜಯವೆಂದು ಪರಿಗಣಿಸಬಹುದೇನೋ! ಈಗ, ಅಫ್ಘಾನಿಸ್ತಾನದಲ್ಲಿ ಚೀನಾದೊಂದಿಗಿನ ಭಾರತದ ಸಂಬಂಧದಿಂದಾಗಿ ಇಡೀ ಭೂ-ರಾಜಕೀಯ ಸನ್ನಿವೇಶವೇ ಬದಲಾಗಲಿದೆ!! ಈ ಮೂರೂ ರಾಷ್ಟ್ರಗಳನ್ನು ಹೋಲಿಸಿ ನೋಡಿ! ಅಫ್ಘನ್ನೋ ಇಸ್ಲಾಮಿಕ್ ರಾಷ್ಟ್ರ! ಇತ್ತ ಚೀನಾ ಹುಟ್ಟಾ ಶತ್ರುವಾಗಿದ್ದಂತಹ ರಾಷ್ಟ್ರ! ಮತ್ತು ಭಾರತ?!

ಎರಡು ದಿನಗಳ ಕಾಲ ನಡೆದ ಅನೌಪಚಾರಿಕ ಸಭೆಯಲ್ಲಿ ಈ ಎರಡೂ ದೇಶಗಳ ಮುಖ್ಯಸ್ಥರ ಭೇಟಿಯೊಂದಿದೆಯಲ್ಲವಾ?! ವ್ಯಾಪಾರ, ಕಾರ್ಯತಂತ್ರದ ಮಿಲಿಟರಿ ಸಂಬಂಧಗಳು, ಪ್ರವಾಸೋದ್ಯಮ ಮತ್ತು ಇತರ ಪ್ರಾದೇಶಿಕ ಸಮಸ್ಯೆಗಳ ಕುರಿತು ಸತತ 24 ಗಂಟೆಗಳ ಕಾಲ ಆರು ಸಭೆಗಳನ್ನು ಏರ್ಪಡಿಸಿ ಚರ್ಚಿಸಿದೆ!! ಅಷ್ಟೇ! ಅತ್ತ ಪಾಕಿಸ್ಥಾನಕ್ಕೆ ನಡುಕ ಉಂಟಾದರೆ, ಇತ್ತ ಭಾರತದಲ್ಲಿ?!, ಹಿತಶತ್ರುಗಳೆಲ್ಲ ಊಳಿಡಲು ಶುರು ಮಾಡಿದ್ದಾರೆ!!

ಪಾಕಿಸ್ತಾನವೆಂಬ ಭಯೋತ್ಪಾದಕ ದೇಶಕ್ಕೆ ಇದೊಂದು ಪ್ರಮುಖ ಹಿನ್ನಡೆ! ಯಾಕೆ ಗೊತ್ತಾ?!

ಪಾಕಿಸ್ತಾನ ಯಾವಾಗಲೂ ಅಫ್ಘಾನಿಸ್ತಾನದಲ್ಲಿ ಭಾರತದ ಅಸ್ತಿತ್ವವನ್ನು ವಿರೋಧಿಸುತ್ತಲೇ ಬಂದಿದೆ!!. ಪಾಕಿಸ್ತಾನ ತನ್ನ ಮಣ್ಣಿನಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದ ಅಫ್ಘಾನಿಸ್ತಾ,ನದ ಹೇಳಿಕೆಯೊಂದನ್ನು ಭಾರತ ಬೆಂಬಲಿಸಿದ್ದು ಪಾಕಿಸ್ಥಾನಕ್ಕೆ ಬರ್ನಾಲ್ ಭಾಗ್ಯವನ್ನು ಒದಗಿಸಿ ಕೊಟ್ಟಿತ್ತು! ಆದರೆ, ವರ್ಷಗಳ ನಂತರ ಭಾರತವು ಅಫ್ಘಾನಿಸ್ತಾನದ ಮೇಲೆ ಇದ್ದ ಪಾಕಿಸ್ತಾನದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತ ಬಂದಿದ್ದೂ ಸಹ ಪಾಕಿಸ್ಥಾನಕ್ಕೆ ಸಹಿಸಲಾಗದ ಬೆಳವಣಿಗೆಯಾಗಿತ್ತು! ಅದಲ್ಲದೇ, ಈ ಹಿಂದೆ ಅಫ್ಘನ್ನಿನಲ್ಲೂ ಭಯೋತ್ಪಾದಕ ಚಟುವಟಿಕೆ ಆರಂಭಿಸಿದ್ದ ಪಾಕಿಸ್ಥಾನಕ್ಕೆ ಅಫ್ಘನ್ ನಲ್ಲಿರುವ ಶ್ರೀಮಂತಿಕೆಯ ಬಗ್ಗೆ ಕಣ್ಣಿದ್ದೇ ಇದೆ ಎಂದು ಸ್ವತಃ ಅಫ್ಘನ್ನರೇ ಹೇಳುತ್ತಿದ್ದರಷ್ಟೇ! ಆದರೆ ಇವತ್ತು (28 ನೇ ಏಪ್ರಿಲ್), ಭಾರತವು ಅಫ್ಘಾನಿಸ್ತಾನಕ್ಕೆ 15,000 ಸೈನಿಕರನ್ನು ಕಳುಹಿಸುತ್ತದೆಯೆಂದು ನಂಬಲಾಗಿದೆ!

ಪಾಕಿಸ್ತಾನದೊಂದಿಗೆ ಆರ್ಥಿಕ ವ್ಯವಹಾರಕ್ಕೆ ಚೀನಾವು ಒಪ್ಪಿದ್ದು ಗೊತ್ತೇ ಇದೆ!, ಯಾವಾಗ, ಚೀನಾ ಮತ್ತು ಪಾಕಿಸ್ಥಾನದ ಮುಖ್ಯಸ್ಥರು ನಾವಿಬ್ಬರೂ ಕುಚಿಕು ಪಿಚಿಕು ಎಂದು ಕೈ ಕುಲುಕಿದ ನಂತರ, ಭಾರತದೊಂದಿಗೆ ಚೀನಾ ಸಂಪೂರ್ಣವಾಗಿ ಸಂಬಂಧ ಕಡಿದುಕೊಳ್ಳುವುದಲ್ಲದೇ, ಚೀನಾದ ಜೊತೆಗೂಡಿ ಪಾಕಿಸ್ಥಾನ ಯುದ್ಧಕ್ಕಿಳಿದರೂ ಇಳಿಯಬಹುದು ಎನ್ನುವಷ್ಟು ಪರಿಸ್ಥಿತಿ ಬಿಗಡಾಯಿಸಿತ್ತು! ಆದರೆ, ಎಲ್ಲರಿಗೂ ಆಶ್ಚರ್ಯವಾಗುವಂತೆ ಮಾಡಿರುವುದು ಭಾರತದ ಇವತ್ತಿನ ಆತ್ಮವಿಶ್ವಾಸ ಮತ್ತು ಚೀನಾದ ನಡೆ! ಅವತ್ತು ಪಾಕಿಸ್ಥಾನಕ್ಕೆ ಬೆಂಬಲಿಸಿದ್ದ ಇದೇ ಚೀನಾ ಇವತ್ತು ಪಾಕಿಸ್ಥಾನವನ್ನು ಏನೂ ಇಲ್ಲ ಎಂಬಂತೆ ಕಡೆಗಣಿಸಿದೆ! ಇದೇ ನೋಡಿ ಭಾರತದ ತಾಕತ್ತು!

“PM Modi and President Xi also recognised the common threat posed by terrorism and both reiterated their strong condemnation of a resolute opposition to terrorism in all its forms and manifestations. Both committed to cooperate further in counter-terrorism” – Vijay Gokhale, Foreign Secretary

“ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಅವರು ಭಯೋತ್ಪಾದನೆಯಿಂದ ಉದ್ಭವಿಸಿದ ಸಾಮಾನ್ಯ ಬೆದರಿಕೆಯನ್ನು ಗುರುತಿಸಿದ್ದಾರೆ ಮತ್ತು ಎರಡೂ ದೇಶದ ಅಧ್ಯಕ್ಷರು ವೈಯುಕ್ತಿಕವಾಗಿಯೂ, ಭಯೋತ್ಪಾದನೆಗೆ ದೃಢವಾದ ವಿರೋಧವನ್ನು ವ್ಯಕ್ತಪಡಿಸಿದ್ದಲ್ಲದೇ ಭ್ರಷ್ಟಾಚಾರದ ನಿರ್ಮೂಲನೆಯನ್ನು ಮಾಡೇ ಮಾಡುತ್ತೇವೆಂದು ಶಪಥ ಮಾಡಿದ್ದಾರೆ! ಭಯೋತ್ಪಾದನೆಯನ್ನು ನಿರ್ನಾಮ ಗೊಳಿಸುವ ವಿಚಾರದಲ್ಲಿ ಮತ್ತಷ್ಟು ಸಹಕಾರ ನೀಡಲು ಎರಡೂ ದೇಶಗಳು ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರು ಭಯೋತ್ಪಾದನೆಯನ್ನು ನಿಗ್ರಹಿಸುವ ಬಗ್ಗೆ ಚರ್ಚಿಸಿದ್ದಾರೆ ಮತ್ತು ಬೇಕಾದ ಕಾರ್ಯತಂತ್ರಗಳನ್ನೂ ಪ್ರಾಥಮಿಕವಾಗಿ ಚರ್ಚಿಸಲಾಗಿದೆ ಎಂದು ನಂಬಲಾಗಿದೆ!

ಚೀನಾದ ಅಧ್ಯಕ್ಷ ಜಿಂಪಿಂಗ್ ನೀಡಿದ ಹೇಳಿಕೆ ಯೊಂದಿದೆಯಲ್ಲವಾ?! ಭವಿಷ್ಯದಲ್ಲಿ ಮುಂದೆ ಅಭಿವೃದ್ಧಿ ಹೊಂದಿ ಸಾಗಲು ಅವಶ್ಯವಾಗಿ, ಚೀನಾ ಭಾರತದೊಂದಿಗೆ ಹೋಗಬೇಕು ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆ ಹರಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ ಎಂಬುದನ್ನೇ ಬಿಂಬಿಸಿದೆ!!

“China and India are both important engines for global growth and we are central pillars for promoting a multi-polar and globalised world. A good China-India relationship is an important and positive factor for maintaining peace and stability in the world”.

“ಚೀನಾ ಮತ್ತು ಭಾರತ ಎರಡೂ ಜಾಗತಿಕ ಬೆಳವಣಿಗೆಗೆ ಪ್ರಮುಖ ಯಂತ್ರಗಳಾಗಿದೆ ಮತ್ತು ಬಹು-ಧ್ರುವ ಮತ್ತು ಜಾಗತಿಕ ಜಗತ್ತನ್ನು ಉತ್ತೇಜಿಸಲು ಕೇಂದ್ರ ಸ್ತಂಭಗಳಾಗಿವೆ” ಎಂದು ಕ್ಸಿ ಹೇಳಿದ್ದಾರೆ! ಭಾರತದೊಂದಿಗೆ ಸಂಬಂಧವನ್ನು ಸುಧಾರಿಸುವ ಪ್ರಾಮುಖ್ಯತೆಯ ಬಗ್ಗೆ ಒತ್ತಡ ಹೇರಿದ ಕ್ಸಿ ” ಚೀನಾ ಮತ್ತು ಭಾರತದ ಉತ್ತಮ ಸಂಬಂಧವು ವಿಶ್ವದ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಪ್ರಮುಖ ಮತ್ತು ಸಕಾರಾತ್ಮಕ ಅಂಶವಾಗಿದೆ” ಎಂದಾಗ ಇತ್ತ ಪಾಕಿಸ್ಥಾನ, ರಾಹುಲ್ ಗಾಂಧಿ ಮತ್ತು ಕಾಂಗಿಗಳು ಅದುರಿ ಹೋಗಿದ್ದಾರೆ!

ಇಷ್ಟಕ್ಕೂ ರಾಹುಲ್ ಗಾಂಧಿ ಬೆಚ್ಚಿದ್ದಕ್ಕೂ ಕಾರಣವಿದೆ! ನೆನ್ನೆಯಷ್ಟೇ, ರಾಹುಲ್ ಗಾಂಧಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೋದಿ ಯವರು ಏನನ್ನೂ ಸಾಧಿಸಲಾರರು ಎಂಬ ಹಾಗೆ ವ್ಯಂಗ್ಯವಾಡಿದ್ದರಷ್ಟೇ!, ಆದರೆ ಇವತ್ತು?! ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲೂ ನಾಚಿಕೆ ಪಡುವ ಹಾಗೆ ಮೋದಿ ಮಾಡಿದ್ದಾರೆ ಎಂಬುದು ಸತ್ಯವೇ!

ಪ್ರಧಾನಿ ಮೋದಿ ಅವರ ಮಾಸ್ಟರ್ ಸ್ಟ್ರೋಕ್ ಬಗ್ಗೆ ಪಾಕಿಸ್ತಾನ ಹೇಳಿದ್ದೇನು ಗೊತ್ತಾ?!

ಚೀನಾ ಮತ್ತು ಭಾರತದ ಈ ಐತಿಹಾಸಿಕ ಭೇಟಿಯೊಂದು ಪಾಕಿಸ್ತಾನದ ಎಲ್ಲಾ ಹವಾಮಾನ ವರದಿಯನ್ನೂ ತಲೆಕೆಳಗಾಗಿಸಿದೆ ಬಿಡಿ! ಆದರೂ, ಚೀನಾ ಮತ್ತು ಪಾಕಿಸ್ಥಾನ ಅತ್ಯದ್ಭುತ ಸ್ನೇಹಿತರಾಗಿಯೇ ಇದ್ದೇವೆ ಎಂದು ಪಾಕಿಸ್ತಾನದ ನಡುಗುತ್ತಲೇ ಅಭಿಪ್ರಾಯ ವ್ಯಕ್ತಪಡಿಸಿದೆ.

“Bilateral relations remain a priority in the foreign policy of both countries. We resolutely support each other’s core and major interests, strengthen collaboration on international and regional affairs to build China-Pakistan community of common destiny”.

“ದ್ವಿಪಕ್ಷೀಯ ಸಂಬಂಧಗಳು ಎರಡೂ ದೇಶಗಳ ವಿದೇಶಾಂಗ ನೀತಿಯಲ್ಲಿ ಆದ್ಯತೆಯಾಗಿವೆ. ನಾವು ಪರಸ್ಪರ ಆದ್ಯತೆಗಳನ್ನು ಮತ್ತು ಪ್ರಮುಖ ಹಿತಾಸಕ್ತಿಗಳನ್ನು ದೃಢವಾಗಿ ಬೆಂಬಲಿಸುತ್ತದೆ!ಅಂತರ ರಾಷ್ಟ್ರೀಯ ಮತ್ತು ಪ್ರಾದೇಶಿಕ ವ್ಯವಹಾರಗಳ ಸಹಯೋಗವನ್ನು ಬಲಪಡಿಸಲು ಚೀನಾ ಮತ್ತು ಪಾಕಿಸ್ಥಾನ ಆಯಾ ರಾಷ್ಟ್ರಗಳ ನಿರ್ಧಾರಗಳನ್ನು ಸ್ವಾಗತಿಸುತ್ತದೆ!! ಭಯೋತ್ಪಾದಕರನ್ನು ತಯಾರಿಸುವ ವಿಶ್ವವಿದ್ಯಾಲಯವೂ (ಪಾಕಿಸ್ಥಾನ) “ಪಾಕಿಸ್ತಾನವು ಅಫ್ಘಾನಿಸ್ತಾನದಲ್ಲಿ ಶಾಂತಿಯನ್ನು ಪ್ರಾದೇಶಿಕ ಸ್ಥಿರತೆಯ ಪರವಾಗಿ ನಿರ್ವಹಿಸುತ್ತಿದೆ” ಎಂದು ಹೇಳಿದೆ!! ಅಷ್ಟೇ! ಅತ್ತ ಅಫ್ಘನ್ನು ಪಕ ಪಕ ನಕ್ಕಿದೆ!

ಹೋದ ಮರ್ಯಾದೆಯನ್ನು ಮತ್ತೆ ಪಡೆಯಬೇಕೆಂಬ ಕನಸು ಹೊತ್ತ ಪಾಕಿಸ್ಥಾನವೊಂದು ತಾನೇನೋ ದೊಡ್ಡ ರಾಜತಾಂತ್ರಿಕ ನಿಪುಣ ಎಂದು ತೋರಿಸಿಕೊಳ್ಳುವ ಭರಾಟೆಯಲ್ಲಿ ಒಂದು ಅದ್ಭುತ ಹೇಳಿಕೆ ನೀಡಿದೆ!!

“ಅಫ್ಘಾನಿಸ್ತಾನದ ಪರಿಹಾರವು ಅಫಘಾನ್ ನೇತೃತ್ವದ, ಅಫ್ಘಾನ್ ಸ್ವಾಮ್ಯದ ಮೊದಲ ಹೆಜ್ಜೆಯಾಗಿದೆ!! ಪಾಕಿಸ್ತಾನ ದೀರ್ಘಕಾಲದಿಂದ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ ಮತ್ತು ಅಭಿವೃದ್ಧಿಯ ಕಾರ್ಯವನ್ನು ಮಾಡುತ್ತಿದೆ “.!!

ಮತ್ತೆ ಅಫ್ಘನ್ ಮತ್ತು ಭಾರತದಿಂದ ಜೋರಾದ ನಗು ಕೇಳಿಸಿದೆ!!


ಪೃಥು ಅಗ್ನಿಹೋತ್ರಿ

Tags

Related Articles

Close