ಪ್ರಚಲಿತ

ನರೇಂದ್ರ ಮೋದಿಯಿಂದ ಅಂಬೇಡ್ಕರ್ ಜಯಂತಿಯಂದು ಯಾರೂ ಕಂಡೂ ಕೇಳರಿಯದ ದೇಶದ ಕೋಟ್ಯಾಂತರ ಬಡವರ ಕಣ್ಣೀರೊರೆಸುವ ಮಹಾನ್ ಕೊಡುಗೆ!!!

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 125ನೇ ಜನ್ಮದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗ್ರಾಮ ಸ್ವಯಂ ಆಡಳಿತ ಅಭಿಯಾನ ‘ಗ್ರಾಮ ಉದಯ್ ಸೇ ಭಾರತ್ ಉದಯ್’ ಗ್ರಾಮೋದಯದಿಂದ ಭಾರತದ ಉದಯ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಆದರೆ ಇದೀಗ ಇನ್ನೆರಡು ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಅಂಗವಾಗಿ ನಾಡಿನ ಜನತೆಗೆ ಬಹು ದೊಡ್ಡ ಕೊಡುಗೆಯನ್ನು ನೀಡಲಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ಪ್ರಕಟಿಸಿರುವ ನರೇಂದ್ರ ಮೋದಿಯವರು ಇದೀಗ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಾರೆ!! ಈ ಯೋಜನೆಯು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಯಂದು ಜಾರಿಗೆ ಬರಲಿದ್ದು ಈ ಯೋಜನೆಯು ದೇಶದ ಅರ್ಧದಷ್ಟು ಜನರನ್ನು ಒಳಗೊಳ್ಳುವ ಉಚಿತ ಯೋಜನೆಯಾಗಲಿದೆಯಲ್ಲದೇ ಭಾರತೀಯರಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ.

ವಾರ್ಷಿಕವಾಗಿ 100 ಮಿಲಿಯನ್ ಕುಟುಂಬಗಳ ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆಯನ್ನು ನೀಡಲಿರುವ ಯೋಜನೆ ಇದಾಗಲಿದ್ದು, “ಆಯುಷ್ಮಾನ್ ಭಾರತ್ ಯೋಜನೆ”ಯ ಅಡಿಯಲ್ಲಿ ಬರಲಿದೆ!! ಅದುವೇ…. “ಮೋದಿ ಕೇರ್” ಯೋಜನೆ!! ದೇಶದ ಸರಿಸುಮಾರು ಅರ್ಧದಷ್ಟು ಜನರನ್ನು ಒಳಗೊಂಡಿರುವ ಯೋಜನೆ ಇದಾಗಲಿದ್ದು, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಎಂಬ ಬಿರುದನ್ನು ಪಡೆದುಕೊಳ್ಳಲಿದೆ.

ಈ ಮೋದಿ ಕೇರ್ ಯೋಜನೆಗೆ ಕಳೆದ 2017-18 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಎರಡು ಸಾವಿರ ಕೋಟಿ ರೂಪಾಯಿ ಅನುದಾನ ಘೋಷಿಸಿತ್ತು!!ಅಷ್ಟೇ ಅಲ್ಲದೇ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಕನಿಷ್ಠ ಹನ್ನೊಂದು ಸಾವಿರ ಕೋಟಿಯಷ್ಟು ಹಣವನ್ನು ವ್ಯಯಿಸಬೇಕಾಗಿದೆ. ಹಾಗಾಗಿ ಈ ಯೋಜನೆಯನ್ನು ಛತ್ತೀಸ್ಗಢದಿಂದ ಪ್ರಾರಂಭಿಸಲಾಗಿದ್ದು, ಏಪ್ರಿಲ್ 14 ರಂದು ಅಂದರೆ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ. ಹಾಗಾಗಿ, ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯು ವಾರ್ಷಿಕವಾಗಿ 100 ಮಿಲಿಯನ್ ಕುಟುಂಬಗಳಿಗೆ ಚಿಕಿತ್ಸೆಗಾಗಿ 5 ಲಕ್ಷ ರೂಪಾಯಿ ವರೆಗೆ ಆರೋಗ್ಯ ವಿಮೆಯನ್ನು ನೀಡಲಿದ್ದು, ಈ ಯೋಜನೆಯನ್ನು ಮೋದಿ ಕೇರ್ ಎಂದು ಹೆಸರಿಸಲಾಗಿದೆ.

ಈ ಸೌಲಭ್ಯವನ್ನು ಯಾವೆಲ್ಲ ಕುಟುಂಬಗಳು ಪಡೆಯಲಿದ್ದಾರೆ ಗೊತ್ತೇ??

ಛತ್ತೀಸ್ ಗಢದ ನಕ್ಸಲ್-ಪೀಡಿತ ಬಿಜಾಪುರ ಜಿಲ್ಲೆಯ ಜಂಗ್ಲಾದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಈ ಯೋಜನೆಯ ಪ್ರಯೋಜನವನ್ನು ತೆಗೆದುಕೊಳ್ಳುವ ಕುಟುಂಬದ ಎಲ್ಲಾ ಸದಸ್ಯರುಗಳು ಈ ಯೋಜನೆಯ ಲಾಭವನ್ನು ಪಡೆಯ ಬಹುದಾಗಿದೆ!! ಅಷ್ಟೇ ಅಲ್ಲದೇ ಈ ಯೋಜನೆಯ ಪ್ರಯೋಜನಕ್ಕಾಗಿ ಪ್ರತಿಯೊಬ್ಬರಿಗೂ ಸರಿಯಾಗಿ ಕೌನ್ಸಿಲ್ ರಚಿಸಲಾಗುವುದಲ್ಲದೇ ಇದು ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆಯಲಿದೆ ಎನ್ನುವುದು ಸಂತಸದ ವಿಚಾರವಾಗಿದೆ!!

ದೇಶದ ಅರ್ಧದಷ್ಟು ಜನತೆಗೆ ಆರೋಗ್ಯ ವಿಮೆ ಕಲ್ಪಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಹು ನಿರೀಕ್ಷಿತ ಯೋಜನೆ ಮೋದಿ ಕೇರ್ ಅಥವಾ ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಗೆ ಪ್ರತಿ ವರ್ಷ 11 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಅಧಿಕಾರಿಗಳು ರಾಯಟರ್ಸ್ ಸುದ್ದಿ ಸಂಸ್ಥೆಗೆ ಈ ಹಿಂದೆ ತಿಳಿಸಿದ್ದರು!! ಮೋದಿ ಕೇರ್ ಎಂದೇ ಜನಪ್ರಿಯವಾಗುತ್ತಿರುವ ಈ ಯೋಜನೆ ಅಡಿಯಲ್ಲಿ 10 ಕೋಟಿ ಬಡ ಕುಟುಂಬಗಳಿಗೆ ಪ್ರತಿ ವರ್ಷ ತಲಾ 5 ಲಕ್ಷ ರುಪಾಯಿವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡುವುದಾಗಿ ನಿನ್ನೆಯಷ್ಟೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಿದ 2018-19ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಈ ಯೋಜನೆಗೆ ಕೇಂದ್ರ ಸರ್ಕಾರ 2018-19ನೇ ಸಾಲಿಗೆ 2 ಸಾವಿರ ಕೋಟಿ ರುಪಾಯಿ ಅನುದಾನ ಒದಗಿಸಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿ ಜೇಟ್ಲಿ ಹೇಳಿದ್ದಾರೆ. ಆದರೆ ಈ ಹೊಸ ಯೋಜನೆಗೆ ಪ್ರತಿ ವರ್ಷ ರಾಜ್ಯ ಮತ್ತು ಕೇಂದ್ರ ಸರ್ಕಾರ ಕನಿಷ್ಠ 11 ಸಾವಿರ ಕೋಟಿ ರುಪಾಯಿ ವೆಚ್ಚ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಈಗಾಗಲೇ ವಿವರಿಸಿದ್ದಾರೆ.

ಇನ್ನು ಈ ಯೋಜನೆಯ ಸದುಪಯೋಗವನ್ನು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು ಪಡೆದುಕೊಳ್ಳಲಿದ್ದಾರೆ!! ಅಷ್ಟೇ ಅಲ್ಲದೇ ಗುಡಿಸಲು ಮನೆ ಹೊಂದಿದ್ದರೆ, 16 ರಿಂದ 59 ವರ್ಷ ವಯಸ್ಸಿನ ಯಾವುದೇ ವಯಸ್ಕ ಸದಸ್ಯರಲ್ಲದ ಕುಟುಂಬ ಮಹಡಿ ಮನೆ ಹೊಂದಿದ್ದರೆ(ಇವುಗಳಲ್ಲಿ 16 ರಿಂದ 59 ವರ್ಷ ವಯಸ್ಸಿನ ಗಂಡು ಮಕ್ಕಳಿಲ್ಲದ), ಅಂಗವಿಕಲ ಸದಸ್ಯರು ಮತ್ತು ಇಳಿವಯಸ್ಸಿನಲ್ಲಿ ತಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲದವರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಹೊರತಾಗಿ ಯಾರ ಬಳಿ ಭೂಮಿ ಮತ್ತು ಆದಾಯ ಇಲ್ಲದ ಕುಟುಂಬಗಳಿಗೆ, ಅಷ್ಟೇ ಅಲ್ಲದೆ ಯಾವುದೇ ಛಾವಣಿಯಿಲ್ಲದ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನಗಳು ಲಭಿಸಲಿದೆ.

ಕಳೆದ ವರ್ಷವೇ ಈ ಆರೋಗ್ಯ ಯೋಜನೆಯನ್ನು ಘೋಷಿಸಲಾಗಿದ್ದು, ಪ್ರತಿ ಬಡ ಕುಟುಂಬಕ್ಕೆ 1 ಲಕ್ಷದವರೆಗೂ ವಿಮೆ ನಿಗದಿ ಮಾಡಲಾಗಿತ್ತು. ಆದರೆ ಈ ಬಜೆಟ್ ನಲ್ಲಿ ಅದರ ಮೊತ್ತವನ್ನು 5 ಲಕ್ಷಕ್ಕೇರಿಸಲಾಗಿದೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 30 ಸಾವಿರ ರೂಪಾಯಿಗಳವರೆಗೆ ಹೆಚ್ಚುವರಿ ಮೊತ್ತ ನೀಡಲು ಯೋಜಿಸಿದೆ. ಅರುಣ್ ಜೇಟ್ಲಿ ಅವರು ಭಾರತದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಬರುವ ಮೋದಿ ಕೇರ್ “ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ಯೋಜನೆ” ಎಂದು ಈಗಾಗಲೇ ಘೋಷಿಸಿದ್ದಾರೆ!!

ನಗರದಲ್ಲಿ ವಾಸಿಸುವ ಜನರಿಗೆ ಯಾವೆಲ್ಲ ಸೌಕರ್ಯಗಳಿವೆ ಗೊತ್ತೇ??

ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರಿಗೆ ಸರ್ಕಾರದ ಯೋಜನೆಯಿಂದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗಿದ್ದು, ಬಡವರ ಆಯ್ಕೆಗಾಗಿ ಹಲವು ವರ್ಗಗಳನ್ನು ರಚಿಸಲಾಗಿದೆ. ಒಟ್ಟು 11 ವಿಭಾಗಗಳನ್ನು ನಗರ ಬಡವರಿಗೆ ವಿತರಿಸಲಾಗಿದ್ದು, ಇದರ ಅಡಿಯಲ್ಲಿ ಅವರು ಯೋಜನೆಯ ಲಾಭವನ್ನು ಪಡೆಯಬಹುದು. ನಗರದಲ್ಲಿ ವಾಸಿಸುವ ಜನರಿಗೆ ನಿಯಮಗಳೇ ವಿಭಿನ್ನವಾಗಿದ್ದು, ಇದರ ಅಡಿಯಲ್ಲಿ, ವರ್ಷಕ್ಕೆ 5 ಲಕ್ಷ ರೂಪಾಯಿ ಕುಟುಂಬದ ಕವರ್ ಲಭ್ಯವಿರುತ್ತದೆಯಲ್ಲದೇ ಇದು ಎಲ್ಲಾ ಗಂಭೀರ ಕಾಯಿಲೆಗಳ ಚಿಕಿತ್ಸೆಯನ್ನು ಒಳಗೊಳ್ಳುತ್ತದೆ. ಇದಲ್ಲದೇ ಕುಟುಂಬದ ಯಾವುದೇ ವ್ಯಕ್ತಿ (ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ಹಿರಿಯರು) ಚಿಕಿತ್ಸೆಯನ್ನು ಪಡೆದುಕೊಳ್ಳ ಬಹುದಾಗಿದ್ದು, ಇದಕ್ಕಾಗಿ ಕುಟುಂಬದ ಗಾತ್ರ ಮತ್ತು ವಯಸ್ಸಿನ ಮೇಲೆ ಮಿತಿಯಿರುವುದಿಲ್ಲ!!

ಅಷ್ಟೆ ಅಲ್ಲದೇ ಈ ಯೋಜನೆಯಲ್ಲಿ ಆಸ್ಪತ್ರೆ ವೆಚ್ಚವನ್ನೂ ಸೇರಿಸಲಾಗಿದ್ದು, ಸಾರಿಗೆ ಭತ್ಯೆಯನ್ನೂ ಪ್ರತಿ ಬಾರಿ ಆಸ್ಪತ್ರೆಗೆ ಸೂಚಿಸಬೇಕಾಗುತ್ತದೆ!! ಇನ್ನು, ಈ ಯೋಜನೆಯಡಿಯಲ್ಲಿ ದೇಶದಲ್ಲಿನ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಹಣವಿಲ್ಲದೆ ಚಿಕಿತ್ಸೆಯನ್ನು ಪಡೆಯಬಹುದಾಗಿದೆ!! ಅಷ್ಟೇ ಅಲ್ಲದೇ ಎಲ್ಲಾ ರಾಜ್ಯಗಳಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಈ ಯೋಜನೆಯಲ್ಲಿ ತೊಡಗಿವೆ ಎಂದು ಪರಿಗಣಿಸಲಾಗಿದೆ. ಒಟ್ಟಿನಲ್ಲಿ ನರೇಂದ್ರ ಮೋದಿಯವರ ಈ ಮಹಾತ್ವಾಕಾಂಕ್ಷಿಯ ಯೋಜನೆಯಿಂದಾಗಿ ದೇಶದಲ್ಲಿರುವ ಅರ್ಧದಷ್ಟು ಜನರು ಈ ಯೋಜನೆಯ ಸದುಪಯೋಗ ಪಡೆಯಲಿರುವುದಂತೂ ಖಂಡಿತಾ!!

ಮೂಲ:https://medibulletin.com/2018/04/11/on-ambedkar-jayanti-pm-modi-to-kick-off-ayushman-bharat-with-first-wellness-centre-in-bijapur/

– ಅಲೋಖಾ

Tags

Related Articles

Close