ಪ್ರಚಲಿತ

ಕಲಾಂ, ಮೋದಿ ಸಾಲಿಗೆ ಮತ್ತೊಬ್ಬ ಭಾರತೀಯ ಎಂಟ್ರಿ..! ಇಸ್ರೋಗೆ ಸೆಲೆಕ್ಟ್ ಆದ ಆ ವಿಜ್ಞಾನಿ ಯಾರು ಗೊತ್ತಾ.?!

ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಇದ್ದರೆ ಮನುಷ್ಯ ಯಾವುದೇ ಅಡೆತಡೆಗಳನ್ನು ಲೆಕ್ಕಿಸುವುದಿಲ್ಲ.ಬದುಕನ್ನು ಸಾರ್ಥಕಗೊಳಿಸಬೇಕಾದರೆ ನಾಲ್ಕು ಜನ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರಬೇಕು.
ಸಾಯುದಕ್ಕಾಗಿಯೇ ಬದುಕುವುದಕ್ಕಿಂತ, ಸಾಧನೆಗಾಗಿ ಬದುಕುವುದು ಉತ್ತಮ.!  ಬಾನಿನಲ್ಲಿ ನಕ್ಷತ್ರ ಹೊಳೆಯಬೇಕಾದರೂ ಸುತ್ತಲೂ ಕತ್ತಲೆ ಇರಬೇಕು.ಕತ್ತಲಿನಿಂದಲೇ ನಕ್ಷತ್ರ ಹೊಳೆಯುವಂತೇ ಮನುಷ್ಯನ ಜೀವನದಲ್ಲಿ ಏನಾದರೊಂದು ಸಾಧಿಸಬೇಕಾದರೆ ಕಷ್ಟ ಏನೆಂಬುದನ್ನು ತಿಳಿದಿರಬೇಕು.

ಜೀವನದಲ್ಲಿ ಸಾಧಕನಿಗೆ ಬಡತನ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಮುಂಬೈ ನಗರದ ಪ್ರಥಮೇಶ್ ಹಿರ್ವೆ ಎಂಬ ಯುವಕ ಸಾಕ್ಷಿಯಾಗಿದ್ದಾರೆ.! ಸ್ಲಂ ನಲ್ಲಿ ಬೆಳೆದ ಪ್ರಥಮೇಶ್ ಹಿರ್ವೆ ಕಡುಬಡವನಾಗಿದ್ದರು ಇದೀಗ ಇಸ್ರೋದಲ್ಲಿ ವಿಜ್ಞಾನಿಯಾಗಿ ನೇಮಕಗೊಂಡಿದ್ದಾರೆ. ಮುಂಬೈನ ಸ್ಲಂ ಪ್ರದೇಶವಾದ ಪೋವೈ ಫಿಲ್ಟರ್ ಪಾಡದಿಂದ ಬಂದಿರುವ ಪ್ರಥಮೇಶ್ ಮುಂಬೈನಿಂದ ಇಸ್ರ್ರೋಗೆ ನೇಮಕವಾದ ಪ್ರಥಮ ವ್ಯಕ್ತಿಯಾಗಿದ್ದಾರೆ..! ಇಸ್ರೋಗೆ ಅರ್ಜಿ ಸಲ್ಲಿಸಿದ 16,000 ಜನರ ಮಧ್ಯೆ ಆಯ್ಕೆಯಾಗುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ ಮತ್ತು ಸಾಧನೆಗೆ ಬಡತನ ಅಡ್ಡಿ ಬರುವುದಿಲ್ಲ ಎಂಬೂದನ್ನು ಸಾಬೀತುಪಡಿಸಿದ್ದಾರೆ.ಇಸ್ರೋಗೆ ನೇಮಕಗೊಂಡ ಪ್ರಥಮೇಶ್ ಹಿರ್ವೆ ಇಲೆಕ್ಟ್ರಿಕಲ್ ವೃತ್ತಿಯಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಮುಂಬೈನ ಪೋವೈ ಫಿಲ್ಟರ್ ಪಾಡಾ ಸ್ಲಂ ನಲ್ಲಿ ಬಾಲ್ಯದಲ್ಲಿ ಸಣ್ಣ ಜೋಪಡಿಯೊಂದರಲ್ಲಿ ಜೀವನ ನಡೆಸಿದ್ದ ಪ್ರಥಮೇಶ್ ಹಿರ್ವೆ ತನ್ನ ಬಡತನವನ್ನು ಕಡೆಗಣಿಸಿ ಕೇವಲ ಓದಿನತ್ತ ಗಮನಹರಿಸಿದ ಪರಿಣಾಮವಾಗಿ ಇದೀಗ ಇಸ್ರೋ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ.

ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕೂಡ ಬಾಲ್ಯದಲ್ಲಿ ಬಡತನದಿಂದಲೇ ಬೆಳೆದವರು.ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿ ಸಮಾಜ ಸೇವನೆಯನ್ನು ಮೈಗಾ ಉಡಿಸಿಕೊಂಡು ಬೆಳೆದ ಫಲದಿಂದಲೇ ಇಂದು ದೇಶಕ್ಕೆ ಪ್ರಧಾನಿಯಾಗಿ ವಿಶ್ವನಾಯಕನಾಗಿ ಮೆರೆಯುತ್ತಿದ್ದಾರೆ.ನರೇಂದ್ರ ಮೋದಿಯಂತಹ ನಾಯಕನಿಗೆ ಇಂದು ಇಡೀ ವಿಶ್ವವೇ ಗೌರವ ಕೊಡುತ್ತಿದೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದ ಮೋದಿ ಸಮಾಜಸೇವೆಯ ಚಟುವಟಿಕೆಗಳಲ್ಲಿ ತೊಡಗಿ ಅದನ್ನೇ ಬೆಳೆಸುತ್ತಾ ಬಂದಿದ್ದಾರೆ.

ಅಬ್ದುಲ್ ಕಲಾಂ ರಂತಹ ನಾಯಕರು ಬಾಲ್ಯದಲ್ಲಿ ಬಡವರಾಗಿಯೇ ಕಷ್ಟ ಅನುಭವಿಸಿಕೊಂಡೇ ಬೆಳೆದವರು.ಸಾಧಿಸುವ ಛಲ ಹೊಂದಿದ್ದರಿಂದ ಇಡೀ ವಿಶ್ವವೇ ಗೌರವಿಸುವಂತಹ ಕೆಲಸಗಳನ್ನು ಮಾಡಿ ತನ್ನ ಸಾಮಾರ್ಥ್ಯವನ್ನು ಜಗತ್ತಿಗೆ ಪರಿಚಯಿಸಿದರು. ವಿಜ್ಞಾನಿಯಾಗಿ ಇದ್ದುಕೊಂಡೇ ಭಾರತದ ರಾಷ್ಟ್ರಪತಿಯೂ ಆದ ಕಲಾಂ ಸಮರ್ಥವಾಗಿ ಕಾರ್ಯನಿರ್ವಹಿಸಿ ಭಾರತವನ್ನು ವಿಶ್ವಕ್ಕೆ ತನ್ನ ಕೆಲವೊಂದು ಕಾರ್ಯಗಳ ಮೂಲಕ ಎತ್ತಿ ಹಿಡಿದರು.
ಬಡತನವೆಂಬುದು ಕೇವಲ ಮಾತಿಗಷ್ಷೇ ಸೀಮಿತ ,ಅದನ್ನು ಅನುಭವಿಸಿದ ಕೂಡಲೇ ಜೀವನದಲ್ಲಿ ಏನಾದರೊಂದು ಸಾಧಿಸುವ ಛಲ ಹುಟ್ಟಿಕೊಳ್ಳುತ್ತದೆ ಎಂಬೂದಕ್ಕೆ ಒಂದು ಉದಾಹರಣೆಗೆ…!

ಇದೇ ರೀತಿ ಬಡತನದ ನಿಶೆಯಲ್ಲಿ ಮಿಂದೆದ್ದು ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿದ ಜಯವೇಲ್ ಎಂಬ ಯುವಕ ಕೂಡಾ ಕಡುಬಡತನದಲ್ಲೇ ಬೆಳೆದವರು.ಚೆನ್ನೈನಲ್ಲಿ ರಸ್ತೆಬದಿಯಲ್ಲಿ ಜೀವನ ಸಾಗಿಸುತ್ತಿದ್ದ ಜಯವೇಲ್ ಇದೀಗ ಇಂಗ್ಲೆಂಡ್ ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.!
ಬದುಕಿನಲ್ಲಿ ಎದುರಾದಂತಹ ಯುದ್ದವನ್ನು ಒಂದೊಂದಾಗಿಯೇ ಎದುರಿಸಿದ ಜಯವೇಲ್ ಕುಟುಂಬ ಚೆನ್ನೈ ನಲ್ಲಿ ರಸ್ತೆ ಬದಿಯಲ್ಲಿಯೇ ಜೀವನ ಸಾಗಿಸುತ್ತಿದ್ದರು.ಆದರೂ ಛಲ ಬಿಡದ ಜಯವೇಲ್ ತನ್ನ ಗುರಿಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಇಸ್ರೋಗೆ ಆಯ್ಕೆಯಾದ ಪ್ರಥಮೇಶ್ ಹಿರ್ವೆ ೧೦ನೇ ತರಗತಿಯವರೆಗೆ ಮರಾಠಿಯಲ್ಲೇ ವಿದ್ಯಾಭ್ಯಾಸ ಮಾಡಿದರೂ ಕೂಡ ಮುಂದಿನ ವಿದ್ಯಾಭ್ಯಾಸ ಮಾಡಲು ಕಷ್ಟಕರವಾಗಿತ್ತು.ಆದರೆ ಫೀನಿಕ್ಸ್ ನಂತೆ ಎದ್ದು ಬಂದಿರುವ ಹಿರ್ವೆ ಇಂಗ್ಲಿಷ್ ಭಾಷೆಯೊಂದಿಗೆ ಉತ್ತಮ ಫಲಿತಾಂಶವನ್ನು ತೆಗೆದಿದ್ದರು.ಅದನ್ನೇ ಮುಂದುವರಿಸಿಕೊಂಡು ಬಂದ ಹಿರ್ವೆ ಕಷ್ಟದಲ್ಲೇ ವಿದ್ಯಾಭ್ಯಾಸ ಮಾಡಿದರು.

ಬಡತನದ ಕಾರಣದಿಂದಾಗಿ ಹಿರ್ವೆ ವಿದ್ಯಾಭ್ಯಾಸಕ್ಕೆ ಮನೆಯಲ್ಲಿಯೂ ಒಪ್ಪಿರಲಿಲ್ಲ.ಮನೆಯವರು ಪ್ರಥಮೇಶ್ ಹಿರ್ವೆ ಗೆ ಕಲಾ ವಿಭಾಗಕ್ಕೆ ಸೇರಿಸಬೇಕು ಎಂದು ಸೂಚಿಸಿದ್ದಾಗ ,ಮನೆಯವರ ವಿರೋಧದ ನಡುವೆಯೂ ಹಿರ್ವೆ ಇಂಜಿನಿಯರ್ ಆಗಲೇಬೇಕು ಎಂದು ನಿರ್ಧರಿಸಿ ,ವಿಜ್ಞಾನ ವಿಭಾಗ ಸೇರಿಕೊಂಡರು.ಇದೀಗ ಇಸ್ರೋಗೆ ಅರ್ಜಿ ಸಲ್ಲಿಸಿದ್ದ 1600 ಜನರಲ್ಲಿ ಆಯ್ಕೆಯಾದ 9 ಜನರಲ್ಲಿ ಪ್ರಥಮೇಶ್ ಹಿರ್ವೆ ಕೂಡಾ ಒಬ್ಬರು ಎಂಬುದು ವಿಶೇಷ..!!

ಕಷ್ಟವೆಂಬೂದು ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ.ಆದರೆ ಅವೆಲ್ಲವನ್ನೂ ಮೆಟ್ಟಿನಿಂತರೆ ಮಾತ್ರ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯ…! ಸುಖ ದುಃಖ ಎರಡನ್ನೂ ಅನುಭವಿಸಿದರೆ ಮಾತ್ರ ಜೀವನ ಸಾರ್ಥಕವೆನಿಸಿಕೊಳ್ಳುತ್ತದೆ.!

–ಅರ್ಜುನ್

 

Tags

Related Articles

Close