ಪ್ರಚಲಿತ

ವಿರೋಧ ಪಕ್ಷಗಳು ಸೋಲಿನಿಂದ ಪಾಠ ಕಲಿಯಬೇಕಿದೆ: ಪ್ರಧಾನಿ ಮೋದಿ

ಭಾರತ ದೇಶದ ಜನರು ಋಣಾತ್ಮಕ ವಿಷಯಗಳು, ನಕಾರಾತ್ಮಕತೆಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

ಸಂಸತ್‌ನ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ನಕಾರಾತ್ಮಕತೆಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶಗಳೇ ಸಾಕ್ಷಿ ಎಂದು ಹೇಳಿದ್ದಾರೆ.

ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಇನ್ನಾದರೂ ಸಕಾರಾತ್ಮಕ ಚರ್ಚೆಗೆ ಮಣಿಯಬೇಕು. ನಡೆದ ಚುನಾವಣೆಗಳಲ್ಲಿನ ಸೋಲಿನಿಂದ ವಿಪಕ್ಷಗಳು ಪಾಠ ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.

ಹಾಗೆಯೇ, ಚುನಾವಣಾ ಫಲಿತಾಂಶಗಳಿಗೆ ಸಂಬಂಧಿಸಿದ ಹಾಗೆ ಮಾತನಾಡುವುದಾದರೆ, ವಿರೋಧ ಪಕ್ಷಗಳಿಗೆ ಸಕಾರಾತ್ಮಕವಾಗಿ ಬದಲಾಗಲು ಇದೊಂದು ಸುವರ್ಣಾವಕಾಶವಾಗಿದೆ. ಸೋಲಿನಿಂದಾದ ಬೇಸರ, ಹತಾಶೆಯನ್ನು ವ್ಯಕ್ತಪಡಿಸುವ ಬದಲಾಗಿ, ಈ ಹಿನ್ನಡೆಯಿಂದ ಪಾಠ ಕಲಿತರೆ ಉತ್ತಮ. ಮುಂದಿನ ದಿನಗಳಲ್ಲಿ ಸಕಾರಾತ್ಮಕವಾಗಿ ಮುಂದುವರಿದರೆ ದೇಶದೆಡೆಗಿನ ‌ನಿಮ್ಮ ದೃಷ್ಟಿಕೋನ ಬದಲಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ವಿರೋಧ ಪಕ್ಷಗಳು ಕೇವಲ ನಕಾರಾತ್ಮಕ ಚಿಂತನೆಯನ್ನು ಮಾತ್ರ ಮಾಡುತ್ತಿವೆ. ಇದನ್ನು ಬಿಟ್ಟು ಇನ್ನಾದರೂ ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಂಡಲ್ಲಿ ನಿಮಗೂ ಹೊಸ ಬಾಗಿಲುಗಳನ್ನು ತೆರೆಯಲು ಸಾಧ್ಯವಾದೀತು. ಆದ್ದರಿಂದ ಧನಾತ್ಮಕ ಚಿಂತನೆಯ ಜೊತೆಗೆ ನೀವು ಮುಂದುವರಿಯಿರಿ ಎನ್ನುವ ಸಲಹೆ ಅವರಿಗೆ ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದ ಪ್ರಧಾನಿ ಮೋದಿ, ಎಲ್ಲರ ಭವಿಷ್ಯವೂ ಉಜ್ವಲವಾಗಿದೆ. ನಿಮ್ಮ ಹತಾಶೆಯನ್ನು ಸಂಸತ್ತಿನಲ್ಲಿ ಹೊರ ಹಾಕಬೇಡಿ ಎಂದು ಹೇಳಿದ್ದಾರೆ. ನಿಮ್ಮ ಹತಾಶೆಗಳನ್ನು ವ್ಯಕ್ತಪಡಿಸಲು ಸಂಸತ್ತು ವೇದಿಕೆ ಅಲ್ಲ ಎಂದು ಹೇಳಿದ್ದಾರೆ.

ನನ್ನ ದೀರ್ಘ ಕಾಲದ ರಾಜಕೀಯ ಅನುಭವದಲ್ಲಿ ವಿರೋಧ ಪಕ್ಷಗಳಿಗೆ ಕಿವಿಮಾತು ಹೇಳಿತ್ತಿದ್ದೇನೆ. ಇನ್ನಾದರೂ ಬದಲಾಗಿ. ನಿಮ್ಮ ಕಾರ್ಯ ವೈಖರಿ ಬದಲಾಯಿಸಿ. ವಿರೋಧಿಸುವ ಸಲುವಾಗಿ ವಿರೋಧ ಮಾಡುವುದು ಉತ್ತಮ ಲಕ್ಷಣ ಅಲ್ಲ. ದೇಶದ ಅಭ್ಯುದಯ ಅಭಿವೃದ್ಧಿಯ ಆಶಯಕ್ಕಾದರೂ ಧನಾತ್ಮಕ ವಿಷಯಗಳಿಗೆ ಬೆಂಬಲಿಸಿ ಎಂದು ಅವರು ವಿರೋಧಿಗಳಿಗೆ ‌ಸೂಚಿಸಿದ್ದಾರೆ.

Tags

Related Articles

Close