ಪ್ರಚಲಿತ

ಮಸೀದಿಯಲ್ಲೂ ದೀಪದ ಬೆಳಕು: ರಾಮನನ್ನು ಸ್ವಾಗತಿಸಲು ಸಜ್ಜಾದ ಮಸೀದಿಗಳು!

ಬಿಜೆಪಿ ದೇಶವನ್ನು, ಧರ್ಮ ಧರ್ಮಗಳನ್ನು ಒಗ್ಗೂಡಿಸಿ ಜಾತ್ಯಾತೀತ ರಾಷ್ಟ್ರ ಭಾರತ ಎಂಬ ಹೆಸರನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಗಾಗ್ಗೆ ಹಲವಾರು ಕಾರ್ಯಗಳನ್ನು ಮಾಡುತ್ತಿರುತ್ತದೆ. ಈ ದೇಶ ಒಗ್ಗಟ್ಟಾಗಿದ್ದರೆ ಮಾತ್ರ ವಿಶ್ವದಲ್ಲಿ ಸದೃಢ ರಾಷ್ಟ್ರ ಎಂಬ ಹೆಸರಿಗೆ ಭಾರತ ಪಾತ್ರವಾಗಬಲ್ಲದು. ನಮ್ಮಲ್ಲೇ ಆಂತರಿಕ, ಧಾರ್ಮಿಕ ಕಚ್ಚಾಟಗಳು ಹೆಚ್ಚಿದಷ್ಟು ಭಾರತ ವಿರೋಧಿ ವಿದೇಶಗಳಿಗೂ ನಾವು ಆಹಾರವಾಗುತ್ತೇವೆ. ಈ ನಿಟ್ಟಿನಲ್ಲಿ ದೇಶವನ್ನು ಎಲ್ಲರೂ ಒಂದೇ ಎನ್ನುವ ಭಾವದಿಂದ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ಭವ್ಯ ಶ್ರೀರಾಮ ಮಂದಿರಕ್ಕೆ ಸಂಬಂಧಿಸಿದ ಹಾಗೆಯೂ ಬಿಜೆಪಿ ಇಂತಹ ಒಂದು ಧರ್ಮಾತೀತ ನಿಲುವನ್ನು ಪ್ರಕಟಿಸಿದೆ.

ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ದಿನದಂದು ದೇವಾಲಯಗಳು, ಪ್ರತಿ ಹಿಂದು ವಿನ ಮನೆಯಲ್ಲಿಯೂ ದೀಪಗಳನ್ನು ಹಚ್ಚಿ ದೀಪಾವಳಿ ಆಚರಿಸುವಂತೆ ಈಗಾಗಲೇ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ. ಇದು ಎಲ್ಲರೂ ಬಲ್ಲ ವಿಚಾರ. ಇದರ ಬೆನ್ನಲ್ಲೇ ಬಿಜೆಪಿ ಮತ್ತೊಂದು ಮಹತ್ವದ ಮತ್ತು ಒಗ್ಗಟ್ಟಿನ ಹೇಳಿಕೆಯೊಂದನ್ನು ಪ್ರಕಟಿಸಿದೆ.

ದೇಶದಲ್ಲಿ ಸಾಮರಸ್ಯ ಭಾವನೆಯನ್ನು ಹರಡುವ ದಿಶೆಯಲ್ಲಿ ದೇಶದ 1200 ದರ್ಗಾ, ಮಸೀದಿಗಳಲ್ಲಿಯೂ ಶ್ರೀರಾಮ ಮಂದಿರ ಲೋಕಾರ್ಪಣೆಯ ದಿನದಂದು ದೀಪ ಬೆಳಗಲು ಮುಂದಾಗಿದೆ. ಏಕತೆಯ ಸಂದೇಶವನ್ನು ಸಾರುವ ದೃಷ್ಟಿಯಿಂದ ಬಿಜೆಪಿ ಈ ಕಾರ್ಯಕ್ರಮಕ್ಕೆ ಮಂದಾಗಿದೆ.

ಇನ್ನು ರಾಮ ಮಂದಿರ ಉದ್ಘಾಟನೆಯ ದಿನದಂದು ಎಪ್ಪತೈದು ಕೆಜಿ ವಿಶೇಷ ರಾಮ ಹಲ್ವಾ ತಯಾರಿಸಿ ಅಯೋಧ್ಯೆಯಲ್ಲಿ ಭಕ್ತರಿಗೆ ನೀಡಲಾಗುವುದು ಎಂದೂ ಮೂಲಗಳು ಮಾಹಿತಿ ನೀಡಿವೆ.

Tags

Related Articles

Close