ಪ್ರಚಲಿತ

ವಿಶ್ವೇಶ್ವರಯ್ಯರ ಹೆಸರನ್ನು ಹೇಳಲು ಹತ್ತು ನಿಮಿಷ ತಡಕಾಡುವ, ಮಕ್ಕಳ ಪ್ರಶ್ನೆಗೆ ಉತ್ತರಿಸಲಾಗದ ರಾಹುಲ್ ಗೆ ಮೋದಿ ಜೊತೆ 15ನ ನಿಮಿಷ ಸಂವಾದ ನಡೆಸಲು ಸಾಧ್ಯವೇ??

ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುವ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ, ನರೇಂದ್ರ ಮೋದಿಯ ವಿರುದ್ಧ ಟೀಕಾಪ್ರಹಾರಗಳನ್ನು ನಡೆಸುವುದೇ ಇವರ ಸಾಧನೆಯೋ ಏನೋ ಗೊತ್ತಿಲ್ಲ. ಯಾಕೆಂದರೆ ಈಗಾಗಲೇ ಸಾಕಷ್ಟು ಬಾರಿ ಛೀಮಾರಿಗಳನ್ನು ಗಳಿಸಿಕೊಂಡ ರಮ್ಯಾ “ಬಿಜೆಪಿಗೆ ಸುಳ್ಳು ಸುದ್ದಿ ಹರಡಲು ಸಾಮಾಜಿಕ ಜಾಲತಾಣಗಳ ಅಗತ್ಯವಿಲ್ಲ. ಆಧಾರವಿಲ್ಲದ ಸುಳ್ಳು ಸುದ್ದಿಗಳನ್ನು ಹರಡಲು ಅವರಿಗೆ ಪ್ರಧಾನಿ ಮೋದಿಯೇ ಸಾಕು” ಎಂದು ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು!!

ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂದಿ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಧೈರ್ಯವಿಲ್ಲ ಅಂತ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಲೇವಡಿ ಮಾಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೊಳಗಾಗಿದ್ದರು. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಹೊತ್ತಿರುವ ಮೂಲಕ ಫೇಕ್ ರಮ್ಯಾ ಎನ್ನುವ ಹೆಸರಿಗೂ ಭಾಜನರಾಗಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್ ಮೀಡಿಯಾ ಮುಖ್ಯಸ್ಥೆಯಾಗಿರುವ ರಮ್ಯಾ ಈ ಹಿಂದೆ ತಮಿಳುನಾಡು ಪರ ಟ್ವೀಟ್ ಮಾಡಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದರು. ಹೌದು… ಪ್ರಧಾನಿ ನರೇಂದ್ರ ಮೋದಿಯರ ಭೇಟಿ ವಿರೋಧಿಸಿ ತಮಿಳುನಾಡಿನಲ್ಲಿ ನಡೆದ “ಗೋ ಬ್ಯಾಕ್ ಮೋದಿ” ಹೋರಾಟ ಬೆಂಬಲಿಸಿ, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ “ಗೋ ಬ್ಯಾಕ್ ಮೋದಿ” ಎಂಬ ಹ್ಯಾಷ್ ಟ್ಯಾಗ್ ಸೃಷ್ಟಿಸಿ “ಗಟ್ಟಿ ಮತ್ತು ಸ್ಪಷ್ಟ ಧ್ವನಿಯಲ್ಲಿ ವಿರೋಧಿಸಿ” ಎಂಬ ಅರ್ಥದಲ್ಲಿ ಟ್ವೀಟ್ ಮಾಡುವ ಮೂಲಕ, ಕನ್ನಡಿಗರ ವಿರೋಧಿ ನಿಲುವು ತಳೆದ ಆರೋಪಕ್ಕೆ ನಟಿ ರಮ್ಯಾ ಅವರು ಗುರಿಯಾಗಿದ್ದರು!!

ಆದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚೆಯಲ್ಲಿ ಪಾಲ್ಗೊಳ್ಳಲು ಧೈರ್ಯವಿಲ್ಲ ಎಂದು ದೇಶದ ಪ್ರಧಾನಿ ಬಗ್ಗೆ ಟ್ವೀಟ್ ಮಾಡುವ ಮೂಲಕ ರಮ್ಯಾ ಮತ್ತೆ ಮೋದಿ ಕಾಲೆಳೆದಿದ್ದಾರೆ. ವಿಪರ್ಯಾಸವೆಂದರೆ ವಿಶ್ವೇಶ್ವರಯ್ಯನವರ ಹೆಸರನ್ನೇ ಹೇಳಲು ಹತ್ತು ನಿಮಿಷ ತಡಕಾಡುವ ರಾಹುಲ್ ಗಾಂಧಿಯವರಿಗೆ ಮೋದಿ ಜೊತೆ 15 ನಿಮಿಷ ಸಂವಾದ ನಡೆಸಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡುವುದಂತೂ ಸಹಜ!! ಈಗಾಗಲೇ ಬಸವಣ್ಣನವರ ವಚನವನ್ನು ಹೇಳಲು ಹೋಗಿ ನಗೆಪಾಟಲೀಗೆ ಗುರಿಯಾಗಿದ್ದ ರಾಹುಲ್ ಗಾಂಧಿ, ಶಾಲಾ ಮಕ್ಕಳು ಕೇಳುವ ಸಣ್ಣಪುಟ್ಟ ಪ್ರಶ್ನೆಗೆ ಉತ್ತರಿಸಲಾಗದೆ ಸುದ್ದಿಯಾಗಿದ್ದ ಇವರು, ಇನ್ನು ನರೇಂದ್ರ ಮೋದಿ ಜೊತೆ ಚರ್ಚೆಯಲ್ಲಿ ಪಾಲ್ಗೊಂಡು ಮೋದಿಯನ್ನು ಮೀರಿಸುವುದುಂಟೇ??

ಅಷ್ಟಕ್ಕೂ ರಮ್ಯಾ, ಮೋದಿ ವಿರುದ್ಧ ಮಾಡಿರುವ ಟ್ವೀಟ್ ಆದರೂ ಏನೂ ಗೊತ್ತೇ??

ಚುನಾವಣೆ ಹತ್ತಿರ ಬರುತ್ತಿದ್ದಂತೆ ನರೇಂದ್ರ ಮೋದಿಯವರ ಹವಾ ವಿಶ್ವದೆಲ್ಲೆಡೆ ಪಸರಿಸಿದ್ದು, ಇದು ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಗಾಗಿ ಈ ಕಾಂಗ್ರೆಸ್ಸಿಗರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾ, ನಕಲಿ ಖಾತೆಗಳನ್ನು ತೆರೆಯುವ ಮೂಲಕ ಸುದ್ದಿಯಾಗುತ್ತಲೇ ಇರುವ ವಿಚಾರ ತಿಳಿದೇ ಇದೆ!! ಅಷ್ಟೇ ಅಲ್ಲದೇ, ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ಮಾಜಿ ಸಂಸದೆ ರಮ್ಯಾ, ತಾನೇ ಮಹಾನ್ ಬುದ್ದಿವಂತೆ ಎಂದು ಬಿಂಬಿಸಲು ಹೋಗಿ ತಾನೇ ಫಜೀತಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದು, ಪ್ರಧಾನಿ ಮೋದಿ ವಿರುದ್ಧದ ಟ್ವೀಟ್ ಗಳ ಮೂಲಕ ತನ್ನ ನಾಲಗೆಯನ್ನು ಮತ್ತೊಮ್ಮೆ ಹರಿಯಬಿಟ್ಟಿದ್ದಾರೆ.

ಹೌದು… ಕಾಂಗ್ರೆಸ್ ಟ್ವಿಟ್ಟರ್ ಖಾತೆಯಲ್ಲಿ ಸಂಸತ್ತಿನಲ್ಲಿ “ಪ್ರಧಾನಿ ಮೋದಿ ಅವರಿಗೆ ರಾಹುಲ್ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳಲು ಧೈರ್ಯವಿದೆಯಾ” ಅನ್ನೋ ಪ್ರಶ್ನೋತ್ತರವನ್ನು ಪೆÇೀಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಮ್ಯಾ, “ಪ್ರಧಾನಿ ಮೋದಿ ಅವರು ಹೇಳುವಂತೆ 56 ಇಂಚು ಎದೆ ಇಲ್ಲದೇ ಹೋದರೂ ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ” ಅಂತ ಟ್ವೀಟ್ ಮಾಡಿದ್ದಾರೆ!!

ರಮ್ಯಾ ಟ್ವೀಟ್ ಮಾಡುತ್ತಿದ್ದಂತೆಯೇ ಟ್ವೀಟರ್ ನಲ್ಲಿ ಹಲವಾರು ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು, ಸಾಕಷ್ಟು ಮಂದಿ ಛೀಮಾರಿ ಹಾಕಿದ್ದಾರೆ!! ಅಷ್ಟೇ ಅಲ್ಲದೇ, ರಾಹುಲ್ ಗಾಂಧಿಯವರಿಗೆ ಚೀಟಿ ಇಲ್ಲದೇ 15 ನಿಮಿಷ ನಿರರ್ಗಳವಾಗಿ ಮಾತನಾಡುವ ಧೈರ್ಯವಿದೆಯೇ? ಅವರಿಗೆ ನೀವು ಬರೆದ ಅಕ್ಷರಗಳನ್ನೇ ಓದಲು ಆಗುತ್ತಿಲ್ಲ ಅಂತ ಕಾಲೆಳೆದಿದ್ದಾರೆ!!

ಈಗಾಗಲೇ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಷ್ಟೂ ದಿನಬರೀ ಜಗಳ ಮತ್ತು ಕಿತಾಪತಿಗಳಿಗೆ ಫೇಮಸ್ ಆಗಿದ್ದ ರಮ್ಯಾ ತಮ್ಮ ಚಾಳಿಯನ್ನು ರಾಜಕೀಯದಲ್ಲೂ ಮುಂದುವರೆಸಿದ್ದಾರೆ!! ಹಾಗಾಗಿ ಪದೇ ಪದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಣಕುವಂತೆ ಅವಹೇಳನಕಾರಿ ಟ್ವೀಟ್ ಮಾಡುವುದನ್ನೇ ತನ್ನ ಕುಲ ಕಸುಬಾಗಿಸಿಕೊಂಡಿರುವ ರಮ್ಯಾ, ರಾಹುಲ್ ಗಾಂಧಿಯವರನ್ನು ಸಮರ್ಥಿಸಲು ಹೋಗಿ ತಾನೇ ವಿವಾದಗೂಡಾಗುತ್ತಿದ್ದಾರೆ!! ಹಾಗಾಗಿ “ಸಂಸತ್ತಿನಲ್ಲಿ 15 ನಿಮಿಷ ರಾಹುಲ್ ಗಾಂಧಿಯವರನ್ನು ಎದುರಿಸುವ ಸವಾಲು ಸ್ವೀಕರಿಸುವರೆಂದು ನಂಬಿದ್ದೇನೆ” ಎಂದಿರುವ ರಮ್ಯಾ, ಮೊದಲಿಗೆ ರಾಹುಲ್ ಗಾಂಧಿಯವರಿಗೆ ಪೂರ್ವಸಿದ್ಧತೆ ಇಲ್ಲದೇ ಮಾತಾನಾಡುವ ಧೈರ್ಯವನ್ನು ಕಲಿಸಿಕೊಡಬೇಕಾಗಿರುವುದು ಅತೀ ಮುಖ್ಯ ಎಂದೆನಿಸುತ್ತದೆ!!

ಮೂಲ: http://publictv.in/ramya-who-once-again-ridiculed-prime-minister-modi/

– ಅಲೋಖಾ

Tags

Related Articles

Close