ಪ್ರಚಲಿತ

RTI ಬಹಿರಂಗ : ಸಿದ್ದರಾಮಯ್ಯ ಟೀ, ಕಾಫಿ, ಬಿಸ್ಕತ್ತಿಗೆ ಅರ್ಧ ಕೋಟಿ ಖರ್ಚು ಮಾಡಿದರೆ ಮೋದಿ ತನ್ನ ಊಟಕ್ಕೆ ಖರ್ಚು ಮಾಡಿದ್ದು ಎಷ್ಟು ಗೊತ್ತೇ ?!

ದೇಶ, ರಾಜ್ಯ, ಜಿಲ್ಲೆ, ತಾಲೂಕು, ಹಳ್ಳಿಗಳಂತೆ ಆಯಾ ಜಾಗದಲ್ಲೂ ಜನರ ಕಷ್ಟ, ಕುಂದು ಕೊರತೆ ನಿವಾರಿಸೋಕಂತ ಸ್ಥಳೀಯ ಜನಪ್ರತಿನಿಧಿಗಳು, ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಇರುತ್ತಾರೆ.

ಜನಪ್ರತಿನಿಧಿಗಳಾಗಿ ಜನರ ಶ್ರೇಯೋಭಿವೃದ್ಧಿಗಾಗಿ ನಾವು ದುಡಿಯುತ್ತೇವೆ ಅಂತ ಶಪಥ ಮಾಡಿ ಅಧಿಕಾರ ಸ್ವೀಕರಿಸಿದ್ದ ಅವರುಗಳಿಗೆ ಸರ್ಕಾರದ ವತಿಯಿಂದ ಕೆಲ ಸೌಲಭ್ಯಗಳು ದೊರಕುತ್ತಿರುತ್ತವೆ.

ನಮ್ಮ ದೇಶದಲ್ಲಿ ಜನಪ್ರತಿನಿಧಿಗಳಿಗೆ ಸೌಲಭ್ಯ ನೀಡೋದು ತಪ್ಪಲ್ಲ ಯಾಕಂದ್ರೆ ನಮನ್ನಾಳುವವರು ನಮಗೋಸ್ಕರ ತಮ್ಮ ಜೀವನವನ ಮುಡಿಪಾಗಿ ಇಟ್ಟಿರುತ್ತಾರೆ, ಆದರೆ ಸರ್ಕಾರದಿಂದ ಪಡೆದುಕೊಳ್ಳುವ ಸೌಲಭ್ಯಗಳು ಇತಿಮಿತಿಯಲ್ಲಿ ಬಳಸಿದರೆ ಯಾರೂ ಸರ್ಕಾರಕ್ಕಾಗಲಿ ಜನಪ್ರತಿನಿಧಿಗಳಿಗಾಗಲಿ ಪ್ರಶ್ನಿಸೋಕೆ ಹೋಗಲ್ಲ. ಆದರೆ ಅಧಿಕಾರವಿದೆ ಅನ್ನೋ ಅಹಂ, ದರ್ಪದಿಂದ ಅತಿಯಾಗಿ ಜನರ ತೆರಿಗೆ ದುಡ್ಡನ್ನ ತಿಂದು ತೇಗಿದರೆ ಜನ ಸುಮ್ಮನೆ ಕೂರಲು ಮೂರ್ಖರೇನೂ ಅಲ್ಲ ಅನ್ನೋ ವಿಷಯದ ಬಗ್ಗೆಯೇ ನಾನೀವತ್ತು ಹೇಳೋಕೆ ಹೊರಟಿರೋದು

ಹೌದು! ನಮ್ಮ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಟೀ ಮತ್ತು ಬಿಸ್ಕತ್ ತಿನ್ನಲು ಮಾಡಿರುವ ಖರ್ಚು ಕೇಳಿದರೆ ಬೆಚ್ಚಿ ಬೀಳ್ತಿರಾ. ನಿಮಗೆ ಗೊತ್ತೇ ಸಿದ್ದರಾಮಯ್ಯರನ್ನ ಕಂಡರೆ ಮೋದಿ ಭಯ ಬಿಳ್ತಾರಂತೆ, ಇಂತಹ ಬಾಲಿಶತನದ, ಅಂಹಕಾರದ ಮಾತನ್ನ ನಾನ್ ಹೇಳ್ತಿಲ್ಲ ಅದನ್ನ ಸ್ವತಃ ನಮ್ಮ ಸಿದ್ದರಾಮಯ್ಯನವರೇ ಹೇಳಿರೋದು.

ಅಷ್ಟಕ್ಕೂ ಮೋದಿ ಸಿದ್ದರಾಮಯ್ಯನನ್ನ ಕಂಡರೆ ಯಾಕೆ ಅವಕ್ಕಾಗ್ತಾರೆ ಅಂತ ನಿಮಗ್ ಗೊತ್ತಾ?? ಇಲ್ಲಿದೆ ಅದರ ಹಿಂದಿನ ರಹಸ್ಯ.

ನೀವು ಈ ಸುದ್ದಿ ಕೇಳಿ ಶಾಕ್ ಆಗಬಹುದು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಚಹಾ, ಬಿಸ್ಕಟ್ಗಳು ಮತ್ತು ಕುಡಿಯುವ ನೀರಿಗಾಗಿ ಸಿದ್ದರಾಮಯ್ಯನವರು ಬರೋಬ್ಬರಿ 60 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.

ಅದರಲ್ಲೇನಿದೆ ಪಾಪ ಸಿಎಮ್ ಅಲ್ವಾ ಮನೆಗ್ ತಮ್ಮ ಕಷ್ಟ ಹೆಳ್ಕೊಂಡ್ ಬರೋರಿಗೆ ಟೀ, ಬಿಸ್ಕತ್ ತಿನ್ಸಿದಾರೆ ಅಂತ ನೀವು ಅಂದುಕೊಳ್ಳಬಹುದು.
ಅದಕ್ಕೆ 4 ವರ್ಷದಲ್ಲಿ 60 ಲಕ್ಷ ಕಡಿಮೆನೇ ಆಯ್ತು ಅಂತಾನೂ ಅನ್ನೋಬಹುದು. ಆದರೆ, ಇಲ್ಲಿ ಮುಖ್ಯ ವಿಷ್ಯ ಏನಪ್ಪ ಅಂದರೆ ಮುಖ್ಯಮಂತ್ರಿ ಮನೆಗೆ ಭೇಟಿ ಮಾಡಲು ಬರೋರಿಗೆ ನೀಡಲಾಗುವ ಚಹಾ-ಬಿಸ್ಕತ್ತು ವೆಚ್ಚ ಈ 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸೇರಿಸಲಾಗಿಲ್ಲ.

ಹಾಗಾದರೆ ಅದ್ಹೇಗೆ ಅಷ್ಟೊಂದು ದುಡ್ಡು ಖರ್ಚಾಯಿತು ಅಂತ ವಿಚಾರ ಮಾಡುತ್ತಿದ್ದೀರ?

ಜನರಿಗಾಗಲ್ಲ ಆದರೆ ಶಾಸಕರಿಗೋ ಅಥವ ಮಂತ್ರಿಗಳು ಮನೆಗ್ ಬಂದಾಗ್ ಟೀ ಬಿಸ್ಕತ್ ತಿನ್ಸಿರಬಹುದೇನೋಅನ್ಕೋತೀದೀರಲ್ವಾ?

ಉಹುಂ ಅಲ್ಲ, ನಿಮ್ಮ ಈ ಊಹೆನೂ ತಪ್ಪು, ಆ 60 ಲಕ್ಷ ರೂಪಾಯಿಗಳನ್ನ ಚಹಾ ಬಿಸ್ಕತ್ತಿಗಂತ ಸ್ವತಃ ನಮ್ಮ ಸಿದ್ದರಾಮಯ್ಯ ಸಾಹೇಬರ ಕುಟುಂಬ ಮಾಡಿರುವ ಖರ್ಚು. ಇದನ್ನ ನಾನು ಹೇಳ್ತಿರೋದಲ್ಲ, ಇದು RTI ನಿಂದ ಹೊರಬಂದ ಮಾಹಿತಿ.

RTI ವರದಿಯ ಪ್ರಕಾರ “ಕಳೆದ ನಾಲ್ಕು ವರ್ಷಗಳಲ್ಲಿ ಸಿಎಂ ಮತ್ತು ಅವರ ಕುಟುಂಬದ ಸದಸ್ಯರ ಚಹಾ-ಬಿಸ್ಕತ್ತಿಗಾಗಿ ಖರ್ಚಾಗಿರುವ ವೆಚ್ಚ 60 ಲಕ್ಷ ರೂ.”

ಇದನ್ನ ಕೇಳಿ ನಿಮ್ಮ ಪಿತ್ತ ನೆತ್ತಿಗೇರುತ್ತಿರಬಹುದು, ಹೌದು ಕಳೆದ 4 ವರ್ಷದಲ್ಲಿ ರಾಜ್ಯದಲ್ಲಿ ಬರಗಾಲದ ಬಗ್ಗೆಯಾಗಲಿ ರಾಜ್ಯದಲ್ಲಾದ 3000 ರೈತರ ಆತ್ಮಹತ್ಯೆಗಳನ್ನ ನೋಡದೆ ನಮ್ಮ ಸಿದ್ದರಾಮಯ್ಯನವರ ಕುಟುಂಬ 60 ಲಕ್ಷ ರೂಪಾಯಿ ಅದೂ ನಾವು ಕಟ್ಟೋ ತೆರಿಗೆ ಹಣದಲ್ಲಿ ವ್ಯಯ ಮಾಡಲಾಗಿದೆ ಅಂತಂದ್ರೆ ಯಾರಿಗೆ ತಾನೇ ಸಿಟ್ಟು ಬರೋಲ್ಲ ಹೇಳಿ.

ಬಹುಶಃ ಸಿದ್ದರಾಮಯ್ಯನವರ ಬಿಸ್ಕತ್ ಪ್ರಕರಣ ಕೇಳಿಯೇ ಬಹುಶಃ ಪ್ರಧಾನಿ ಮೋದಿಯವರಿಗೆ ಸಿದ್ದರಾಮಯ್ಯನವರನ್ನ ಕಂಡರೆ ಸಾಕು “ಅಯ್ಯೋ ಇವನೇನ್ ಹೊಟ್ಟೆಗೆ ಅನ್ನ ತಿನ್ನೋ ಮನುಷ್ಯನಾ ಅಥವ ಬರೀ ಬಿಸ್ಕತ್ ತಿನ್ಕೊಂಡ್ ಬದುಕುತ್ತಿರೋ ಮನುಷ್ಯನಾ?” ಅಂತ ಅವಾಕ್ಕಾಗ್ತಾರೇನೋ!!!

ಅಲ್ಲಿ ರೈತರು ಒಂದು ಹೊತ್ತಿನ ಊಟಕ್ಕೆ ಕಷ್ಟಪಡುತಿದ್ದರೆ ನಮ್ಮ ಮುಖ್ಯಮಂತ್ರಿಗಳ ಕುಟುಂಬ ಸರ್ಕಾರದ ದುಡ್ಡಿನಲ್ಲಿ ಹೇಗೆಲ್ಲಾ ಮಜಾ ಮಾಡ್ತಿದಾರೆ ನೋಡಿ. ಅವರಿಗೆ ರೈತರ ಶಾಪ ತಟ್ಟದೇ ಇರುತ್ತೆ? ಈಗಾಗಲೇ ತಟ್ಟಿದೆ ಅದು ನಿಮಗೂ ಗೊತ್ತು.

ನಮ್ಮ ಸಿದ್ದರಾಮಯ್ಯ ಇಷ್ಟೆಲ್ಲ ಘನಂಧಾರಿ ಕೆಲಸ ಮಾಡಿ ತಮ್ಮನ್ನ ಮೋದಿ ಅವರಿಗೆ ಹೋಲಿಸಿಕೊಳ್ಳೋದನ್ನ ನೋಡದ್ರೆ ನಗು ಬರುತ್ತೆ.

ಹಾಗಾದರೆ ಜನಪ್ರತಿನಿಧಿ, ಪ್ರಧಾನ ಸೇವಕ ಅಂತ ಕರೆದುಕೊಳ್ಳೋ ಪ್ರಧಾನಿ ಮೋದಿಯೂ ಕೂಡ ಸಿದ್ದರಾಮಯ್ಯನವರ ರೀತಿಯಲ್ಲೇ ಸರ್ಕಾರದ ದುಡ್ಡಲ್ಲಿ ಮಜಾ ಉಡಾಯಿಸ್ತಾರಾ?

ದೆಹಲಿಯಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ 7 RCR ಅಡುಗೆಮೆನೆಯ ಖರ್ಚಿನ ಬಗ್ಗೆ ಪ್ರಧಾನಿಮಂತ್ರಿ ಕಚೇರಿ(PMO) RTI ನಲ್ಲಿ ಪ್ರಧಾನಿ ಊಟದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರವನ್ನ ಕೊಟ್ಟಿದೆ.

PMO ಗೆ ಹಲವಾರು RTI ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದವು ಹಾಗು ಅವುಗಳ ಪ್ರತಿಕ್ರಿಯೆಗೆ ಸಾರ್ವಜನಿಕವಾಗಿ PMO ಉತ್ತರ ನೀಡಿತ್ತು

PMO ನಿಂದ RTI ಗೆ ಬಂದ ಉತ್ತರ ಹೀಗಿತ್ತು “ಪ್ರಧಾನ ಮಂತ್ರಿಯ ಅಡುಗೆ ವೆಚ್ಚಗಳು ಪ್ರಧಾನ ಮಂತ್ರಿಗಳು ತಮ್ಮ ಖಾಸಗಿ ಖರ್ಚಿನಿಂದ ಭರಿಸುತ್ತಾರೆ ಹೊರತು ಸರಕಾರದ ಹಣದಿಂದ ಅಲ್ಲ” PMO ತಿಳಿಸಿತ್ತು.

ಅರ್ಜಿದಾರರು “ಮಸಾಲೆ ಮತ್ತು ತರಕಾರಿಗಳ ಬಿಲ್ ಗಳ ನಕಲುಗಳನ್ನು ಮತ್ತು ಬಳಸಿದ ಗ್ಯಾಸ್ ಸಿಲಿಂಡರ್ ಗಳ ಬಗ್ಗೆಯೂ ಮಾಹಿತಿ ಕೋರಿದ್ದರು.

ಗುಜರಾತಿ ಊಟವನ್ನು ಇಷ್ಟಪಡುವ ಮೋದಿ ಅವರಿಗಾಗಿ ಬಾಜ್ರಾ ರೊಟ್ಟಿ ಮತ್ತು ಕಿಚಡುಯನ್ನ ಮಾಡಲಾಗುತ್ತೆ ಎಂದು ಅವರ ಕುಕ್ ಬದ್ರಿ ಮೀನಾ ಕೂಡ ಹೇಳಿದ್ದರು.

ಪ್ರಧಾನಿ ಮೋದಿಯ ಊಟದ ಖರ್ಚನ್ನ ಸರ್ಕಾರದಿಂದ ತೆಗೆದುಕೊಳ್ಳದ ಮೋದಿ ತನ್ನ ಸಂಬಳದಿಂದ ಅದನ್ನ ವ್ಯಯಿಸುತ್ತಾರೆ ಆದರೆ ಇತ್ತ ನಮ್ಮ ಸಿದ್ದರಾಮಯ್ಯ ಬರೀ ಚಹಾ ಬಿಸ್ಕತ್ತಿಗೇ 60 ಲಕ್ಷ ಅದೂ ಸರ್ಕಾರಿ ದುಡ್ಡಲ್ಲಿ ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣದಲ್ಲಿ ಮಜಾ ಉಡಾಯಿಸ್ತಾರೆ.

ಬರೀ ಚಹಾ ಬಿಸ್ಕತ್ತಷ್ಟೇ ಅಲ್ಲ ದಿಂಬು ಹಾಸಿಗೆಗಳ ಖರ್ಚೂ ಲಕ್ಷ ಲಕ್ಷ ಇದೆ ಅನ್ನೋದನ್ನ RTI ಮೂಲಕ ಬಹಿರಂಗಗೊಂಡಿತ್ತು.

ಇಂತಹ ಸಿದ್ದರಾಮಯ್ಯ ತನಗೆ ತಾನು ಮೋದಿಗೆ ಹೋಲಿಸಿಕೊಂಡು ನಾನು ಮೋದಿಗಿಂತ ದೊಡ್ಡೋನು ಅಂದ್ಹಾಗೆ ಬೀಗ್ತಾರಲ್ಲ, ಇದನ್ನ ದರ್ಪ, ದುರಹಂಕಾರ, ಅಧಿಕಾರದ ಅಮಲು ಅನ್ನದೆ ಮತ್ತೇನನ್ಬೇಕು?

ಪ್ರಧಾನಿ ಮೋದಿ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಸರ್ಕಾರದ ಹಣ ಮನ ಬಂದಂತೆ ಸಿದ್ದರಾಮಯ್ಯನವರ ಹಾಗೆ ಪೋಲು ಮಾಡುತ್ತಿಲ್ಲ.

ಇದರಿಂದ ಒಂದಂತೂ ಸ್ಪಷ್ಟವಾಗುತ್ತೆ, ನಮ್ಮ ಪ್ರಧಾನಿ ಅವರ ಪಾದದ ಧೂಳಿನ ಸಮ ಆಗಲ್ಲ ಈ ನಿದ್ದೆರಾಮಯ್ಯ ಅಲ್ಲಾಲ್ಲ ಸಿದ್ದರಾಮಯ್ಯನವರೂಂತ!!!

– ಪ್ರಜ್ವಲ್ ಪ್ರಭು

Tags

Related Articles

Close