ಪ್ರಚಲಿತ

ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ ಕನ್ನಡದ ಡೈಲಾಗ್ ಕಿಂಗ್! ಕಾಂಗ್ರೆಸ್‍ಗೆ ಗುಡ್ಡದ ಭೂತವಾಗಿ ಕಾಡಲಿದ್ದಾರೆ ಸಾಯಿಕುಮಾರ್!

ಅಂತೂ ಇಂತೂ ಭಾರತೀಯ ಜನತಾ ಪಕ್ಷದ 3ನೇ ಪಟ್ಟಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಭಾರತೀಯ ಜನತಾ ಪಕ್ಷದ 3ನೇ ಪಟ್ಟಿ ಇಂದು ಬಿಡುಗಡೆಯಾಗಿದ್ದು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಕರಾವಳಿ ಅಹಿತ ಅನೇಕ ಕಡೆಗಳಲ್ಲಿ ಹೊಸಮುಖಗಳಿಗೆ ಭಾರತೀಯ ಜನತಾ ಪಕ್ಷ ಮಣೆ ಹಾಕಿದೆ.

ಡೈಲಾಗ್ ಕಿಂಗ್‍ಗೆ ಮತ್ತೆ ಬಿಜೆಪಿ ಟಿಕೆಟ್..!

ತೆರೆ ಮೇಲೆ ಹುಲಿಯಂತೆ ಘರ್ಜಿಸಿ, ನಿಜ ಜೀವನದಲ್ಲೂ ಸರಳತೆಯನ್ನು ಅಳವಡಿಸಿಕೊಂಡಿರುವ ವ್ಯಕ್ತಿ ಕನ್ನಡ ಸಿನಿ ರಂಗದ ಹೆಸರಾಂತ ನಟ, ಡೈಲಾಗ್ ಕಿಂಗ್ ಸಾಯಿ ಕುಮಾರ್. ಹೌದು… ಈ ಬಾರಿಯೂ ನಟ ಸಾಯಿ ಕುಮಾರ್ ಅವರಿಗೆ ಭಾರತೀಯ ಜನತಾ ಪಕ್ಷದಲ್ಲಿ ಟಿಕೆಟ್ ನೀಡಲಾಗಿದೆ. ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಿಂದ ನಟ ಸಾಯಿ ಕುಮಾರ್ ಅವರಿಗೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ನೀಡಿ ಕಣಕ್ಕಿಳಿಸಲಾಗಿದೆ. ಕಳೆದ ಬಾರಿಯೂ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ನಟ ಸಾಯಿ ಕುಮಾರ್ ಎದುರಾಳಿಯಿಂದ ಕೇವಲ 1500 ಮತಗಳ ಅಂತರದಿಂದ ಸೋಲುಂಡಿದ್ದರು. ಈ ಬಾರಿ ಮತ್ತೆ ಕಣಕ್ಕಿಳಿದಿದ್ದು ಗೆಲ್ಲುವ ವಿಶ್ವಾಸವನ್ನು ಹೊಂದಿದ್ದಾರೆ.

ವಾಜಪೇಯಿ ಅವರೇ ಸ್ಪೂರ್ತಿ..!

ನಟ ಸಾಯಿ ಕುಮಾರ್‍ಗೆ ಆರಂಭದಲ್ಲಿ ರಾಜಕೀಯ ರಂಗ ಅಷ್ಟೊಂದು ಇಷ್ಟವಿರಲಿಲ್ಲ. ಆದರೆ ದೇಶ ಕಂಡ ಅತ್ಯಂತ ಶ್ರೇಷ್ಟ ಪ್ರಧಾನ ಮಂತ್ರಿ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ದಕ್ಷ ಆಡಳಿತ ಹಾಗೂ ಅವರ ರಾಜಕೀಯ ಮುತ್ಸದ್ದಿತನಕ್ಕೆ ಮನಸೋತ ನಟ ಸಾಯಿ ಕುಮಾರ್ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದರು. 2004ರಲ್ಲಿ ಸಾಯಿಕುಮಾರ್ ಅವರು ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡಿದ್ದು ನಂತರ ಭಾರತೀಯ ಜನತಾ ಪಕ್ಷದಲ್ಲೇ ರಾಜಕೀಯವಾಗಿ ಬೆಳೆದು ರಾಜಕೀಯ ನಾಯಕರಾಗಿ ಬೆಳೆದಿದ್ದರು.

ಅಂತೆಯೇ ಮಾಜಿ ಸಂಸದರೂ ಹಾಗೂ ಪ್ರಸ್ತುತ ಉಪರಾಷ್ಟ್ರಪತಿಯಾಗಿರುವ ವೆಂಕಯ್ಯ ನಾಯ್ಡುರವರು ಕೂಡಾ ಸಾಯಿಕುಮಾರ್ ಅವರ ಅಚ್ಚು ಮೆಚ್ಚಿನ ರಾಜಕೀಯ ನಾಯಕರಾಗಿದ್ದರು. ವೆಂಕಯ್ಯ ನಾಯ್ಡು ಅವರ ವಾಕ್ಚಾತುರ್ಯಕ್ಕೆ ಸಾಯಿಕುಮಾರ್ ಫಿದಾ ಆಗಿದ್ದರು. ತೆಲುಗು ಭಾಷೆಯನ್ನೂ ಚೆನ್ನಾಗಿ ಬಲ್ಲವರಾಗಿದ್ದ ನಟ ಸಾಯಿಕುಮಾರ್ ಅವರು ವೆಂಕಯ್ಯ ನಾಯ್ಡು ಅವರ ಭಾಷಣವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಹೀಗಾಗಿಯೇ ಅವರನ್ನು ಸಾಯಿಕುಮಾರ್ ಮೆಚ್ಚಿಕೊಂಡಿದ್ದರು.

ಕಳೆದ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇವಲ 1500 ಮತಗಳ ಅಂತರದಲ್ಲಿ ಸೋಲುಕಂಡಿದ್ದರು. ಆದರೆ ಇದು ಅತ್ಯಂತ ಕನಿಷ್ಟ ಅಂತರವಾಗಿದ್ದು ಈ ಬಾರಿ ಖಂಡಿತವಾಗಿಯೂ ಗೆದ್ದೇ ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಅಂತೆಯೇ ಭಾರತೀಯ ಜನತಾ ಪಕ್ಷವೂ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿ ಅವಕಾಶವನ್ನು ಕಲ್ಪಿಸಿದೆ.

ಟಿಕೆಟ್ ಘೋಷಣೆಯಲ್ಲಿ ರೆಡ್ಡಿ ಪವರ್..!

ಹೌದು. ಮಾಜಿ ಸಚಿವ ಗಣಿ ಧನಿ ಜನಾರ್ಧನ ರೆಡ್ಡಿಯವರ ಕೆಲ ಕಾನೂನು ತೊಡಕುಗಳಿಂದ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಲಾಗಿದೆ. ಆದರೆ ಜನಾರ್ಧನ ರೆಡ್ಡಿಯವರು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ಡಿಮಾಂಡ್ ಮಾಡಿದ್ದ ಎಲ್ಲಾ ಅಭ್ಯರ್ಥಿಗಳಿಗೂ ಭಾರತೀಯ ಜನತಾ ಪಕ್ಷ ಟಿಕೆಟ್ ನೀಡಿ ಈ ಬಾರಿಯೂ ಅವಕಾಶ ನೀಡಿದೆ. ಅಂತೆಯೇ ನಟ ಹಾಗೂ ಭಾರತೀಯ ಜನತಾ ಪಕ್ಷದ ಮುಖಂಡ ಸಾಯಿಕುಮಾರ್ ಅವರಿಗೆ ಟಿಕೆಟ್ ನೀಡಿ ಅವಕಾಶ ನೀಡಿದೆ. ಇದರ ಹಿಂದೆ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರ ಕೈಚಳಕ ಸಖತ್ ವರ್ಕೌಟ್ ಆಗಿದೆ ಎಂದೇ ಹೇಳಲಾಗುತ್ತಿದೆ.

ಒಟ್ಟಾರೆ ಈ ಬಾರಿಯೂ ರಂಗೀತರಂಗ ಸಿನಿಮಾದಲ್ಲಿ ಗುಡ್ಡೆದ ಭೂತ ಪಾತ್ರದ ಖ್ಯಾತಿಯ ನಟ ಸಾಯಿಕುಮಾರ್ ಚುನಾವಣಾ ಅಖಾಡಕ್ಕೆ ಧುಮುಕಿ ಕಾಂಗ್ರೆಸ್‍ಗೆ ಗುಡ್ಡೆದ ಭೂತವಾಗಿ ಕಾಡಲಿದ್ದಾರೆ. ಕಳೆದ ಬಾರಿ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಸೋಲುಂಡಿದ್ದ ಸಾಯಿ ಕುಮಾರ್ ಈ ಬಾರಿ ಗೆಲುವಿನ ನಗೆ ಬೀರಲಿರುವುದಂತು ಸುಳ್ಳಲ್ಲ.

-ಸುನಿಲ್ ಪಣಪಿಲ

Tags

Related Articles

Close