ಪ್ರಚಲಿತ

ಸಾರ್ವಜನಿಕವಾಗಿಯೇ ಉಗಿಸಿಕೊಂಡ ಸಿಎಂ..! ಪ್ರಚಾರದ ವೇಳೆ ಮುಖಭಂಗ ಅನುಭವಿಸಿದ ಸಿದ್ದರಾಮಯ್ಯ.!

ಕಾಂಗ್ರೆಸ್ ಗೆ ಈ ರೀತಿಯ ಅವಮಾನವೇನೂ ಹೊಸದಲ್ಲ. ಏಕೆಂದರೆ ಹೋದಲ್ಲೆಲ್ಲಾ ತನ್ನ ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಂಡು ಬರುವ ಕಾಂಗ್ರೆಸ್ ನಾಯಕರ ಸಾಲಿಗೆ ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸೇರಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭವಾಗಿದೆ. ರಾಜ್ಯದ ಎರಡು ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಿರುವ ಸಿದ್ದರಾಮಯ್ಯನವರಿಗೆ ಎರಡೂ ಕಡೆಗಳಲ್ಲೂ ಸೋಲಿನ ಮುನ್ಸೂಚನೆ ಈಗಾಗಲೇ ದೊರಕಿದೆ. ಅದೇ ಕಾರಣಕ್ಕಾಗಿ ಸ್ವತಃ ಸಿದ್ದರಾಮಯ್ಯನವರೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇಂದು ಪ್ರಚಾರಕ್ಕಾಗಿ ಆಗಮಿಸಿದ ಸಿಎಂ ಸಾಹೇಬ್ರಿಗೆ ಭಾರೀ ಮುಜುಗರ ಅನುಭವಿಸುಂತಾಯಿತು.!

ಸಾರ್ವಜನಿಕವಾಗಿ ಹೋಗಲ್ಲೋ ಎಂದ ಜೆಡಿಎಸ್ ಮುಖಂಡ..!

ಕಾಂಗ್ರೆಸ್ ನ ಪ್ರಚಾರ ವಾಹನದಲ್ಲಿ ಎತ್ತರಕ್ಕೆ ಏರಿ ನಿಂತಿದ್ದ ಸಿದ್ದರಾಮಯ್ಯನವರು ಉದ್ದನೆ ಮೈಕ್ ಕೈಯಲ್ಲಿ ಹಿಡಿದು ಭಾರೀ ಭಾಷಣ ಬಿಗಿಯುತ್ತಿದ್ದರು. ಸೇರಿದ್ದ ಬೆರಳೆಣಿಕೆಯಷ್ಟು ಜನ ಕೇಕೇ ಹಾಕುತ್ತಿದ್ದರು. ಆದರೆ ಈ ಜನರ ಮಧ್ಯೆಯೇ ಬಂದ ಜೆಡಿಎಸ್ ಮುಖಂಡ ಮರಿಸ್ವಾಮಿ ಸಿದ್ದರಾಮಯ್ಯನವರ ಛಳ ಬಿಡಿಸಿದರು.

Image result for siddaramaiah

ಮರಿಸ್ವಾಮಿಯನ್ನು ನೋಡುತ್ತಿದ್ದಂತೆ ಪ್ರಚಾರ ವಾಹನದ ಮೇಲಿದ್ದ ಸಿದ್ದರಾಮಯ್ಯನವರು , “ಏನಯ್ಯಾ ಮರಿಸ್ವಾಮಿ , ನೀನು ನನ್ನ ಜೊತೆಗೆ ಇದ್ದವ, ಕಾಂಗ್ರೆಸ್ ಗೆ ವೋಟು ಹಾಕಯ್ಯಾ” ಎಂದು ತಮಾಷೆಯಾಗಿ ಹೇಳಿದರು. ಆದರೆ ಇದರಿಂದ ಆಕ್ರೋಷಗೊಂಡ ಮರಿಸ್ವಾಮಿ, ” ನಾನು ಜೆಡಿಎಸ್ ನಲ್ಲೇ ಇದ್ದವನು, ಜೆಡಿಎಸ್ ನಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ವೋಟ್ ಹಾಕಲ್ಲ” ಎಂದು ಬಹಿರಂಗವಾಗಿಯೇ ಹೇಳಿದ ಮರಿಸ್ವಾಮಿ ಸಿದ್ದರಾಮಯ್ಯನವರಿಗೆ ಲೇವಡಿ ಮಾಡಿದರು.

ಇದರಿಂದ ಮುಜುಗರಕ್ಕೀಡಾದ ಸಿದ್ದರಾಮಯ್ಯನವರು, ” ಆಯ್ತಯ್ಯಾ ನೀನು ಜೆಡಿಎಸ್ ನಲ್ಲೇ ಇರು , ಆದರೆ ವೋಟ್ ಮಾತ್ರ ನಮ್ಮ ಕಾಂಗ್ರೆಸ್ ಗೆ ಹಾಕು” ಎಂದು ಹೇಳಿದಾಗಲೂ “ನಾನು ಜೆಡಿಎಸ್ ಗೇ ವೋಟ್ ಹಾಕೋದು , ಕಾಂಗ್ರೆಸ್ ಈ ಬಾರಿ ಸೋಲುವುದು ಖಚಿತ” ಎಂದು ಸಿದ್ದರಾಮಯ್ಯನವರ ಎದುರೇ ಸವಾಲು ಹಾಕಿದರು.

ನಿನ್ನ ಜೊತೆ ಮಾತಾಡಿದ್ದೇ ತಪ್ಪಾಯ್ತು ಎಂದ ಸಿಎಂ..!

ಕೋಲು ಕೊಟ್ಟು ಏಟು ತಿನ್ನುವುದು ಎಂದರೆ ಇದೇ ಅಲ್ಲವೇ. ಸುಮ್ಮನಿದ್ದ ಮರಿಸ್ವಾಮಿ ಯನ್ನು ಕರೆದು ಮಾತಾಡಿಸಿದ ತಪ್ಪಿಗೆ ತಲೆ ಚಚ್ಚಿಕೊಂಡ ಸಿದ್ದರಾಮಯ್ಯನವರು ಸಾರ್ವಜನಿಕವಾಗಿಯೇ ತಲೆ ತಗ್ಗಿಸುವಂತಾಯಿತು. ಯಾಕೆಂದರೆ ಸಿಎಂ ಚಾಮುಂಡೇಶ್ವರಿಯಲ್ಲಿ ಪ್ರಚಾರಕ್ಕೆ ಆಗಮಿಸಿದ ಸಿದ್ದರಾಮಯ್ಯನವರನ್ನು ಜಾಗ ಖಾಲಿ ಮಾಡುವಂತೆ ಮರಿಸ್ವಾಮಿ ಅವಾಜ್ ಹಾಕಿದ್ದಾರೆ. ‘ನೀವು ಬಂದಿರೋದು ನನ್ನ ಊರಿಗೆ, ನೀನೇ ಹೋಗಲ್ಲೋ!’ ಎಂದು ಸೇರಿದಗದ ಜನರ ಎದುರೇ ಸಿಎಂ ನ್ನು ಝಾಡಿಸಿದರು.!

ರಾಜ್ಯದ ಮುಖ್ಯಮಂತ್ರಿಯಾಗಿ ತಾನು ಸ್ಪರ್ಧಿಸುವ ಕ್ಷೇತ್ರದಲ್ಲಿ ಪ್ರಚಾರ ಮಾಡಲು ತೆರಳಿದಾಗಲೂ ಇಂತಹ ಮುಜುಗರ ಎದುರಾಗುತ್ತಿರುವುದರಿಂದ ಭಾರೀ ಮುಖಭಂಗವಾಗಿದೆ. ಈ ಹಿಂದೆ ಕಾಂಗ್ರೆಸ್ ಮುಖಂಡ ಆಂಜನೇಯ ತನ್ನ ಕ್ಷೇತ್ರಕ್ಕೆ ಮತ ಯಾಚನೆಗೆ ತೆರಳಿದಾಗ ಅಲ್ಲಿ ಗ್ರಾಮಸ್ಥರು ಪ್ರಧಾನಿ ಮೋದಿಗೆ ಜೈಕಾರ ಹಾಕಿದ ಘಟನೆ ನಡೆದಿತ್ತು. ಅಂತೆಯೇ ಕಾಂಗ್ರೆಸ್ ನಾಯಕರು ಹೋದಲ್ಲೆಲ್ಲಾ ಭಾರೀ ಅವಮಾನ ಎದುರಿಸುತ್ತಿದ್ದು ಪ್ರಚಾರ ಮಾಡದಂತಾಗಿದೆ..!

–ಅರ್ಜುನ್

Tags

Related Articles

Close