ಪ್ರಚಲಿತ

ಅಯೋಧ್ಯಾ ಶ್ರೀ ರಾಮಮಂದಿರ: ಏನೇನು ವಿಶೇಷತೆ ಇರಲಿದೆ ಗೊತ್ತೇ?

ಭಾರತದ ಬಹು ಕೋಟಿ ಜನರ ಆರಾಧ್ಯ ದೈವ ಪ್ರಭು ಶ್ರೀರಾಮ. ತನ್ನದೇ ಜನ್ಮಭೂಮಿ ಇದ್ದರೂ ಅನ್ಯ ಧರ್ಮೀಯರ ಕಟ್ಟಡದ ಕೆಳಗೆ ಕೊರಗುತ್ತಾ ಕೂತಿದ್ದ ಶ್ರೀರಾಮನನ್ನು, ಹೊರತಂದು, ಆತನ ಜನ್ಮಭೂಮಿ ಆತನಿಗೆಯೇ ದೊರೆಯುವ ಹಾಗೆ ಮಾಡಿ, ಆತನನ್ನು ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡುವಲ್ಲಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಯಶಸ್ವಿಯಾಗಿದೆ.

ಹಲವಾರು ವಿಶೇಷತೆಗಳನ್ನು ಈ ರಾಮ ಮಂದಿರ ಹೊಂದಿದ್ದು, ಇದೇ ತಿಂಗಳ 22 ರಂದು ಲೋಕಕ್ಕೆ ಅರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ, ಅತೀ ಕಠಿಣ ಅಥವಾ ಈ ಕಾರ್ಯ ನಡೆಯುವುದು ಅಸಾಧ್ಯ ಎಂದುಕೊಂಡಿದ್ದ ಕೆಲಸವೊಂದು ಸುಗಮವಾಗಿ ಮತ್ತು ನಿರ್ವಿಘ್ನವಾಗಿ ನಡೆದು, ಇನ್ನೇನು ಕೆಲವೇ ದಿನಗಳಲ್ಲಿ ತನ್ನದೇ ಜನ್ಮ ಸ್ಥಾನದ ಭವ್ಯ ಮಂದಿರದಲ್ಲಿ ಪ್ರಭು ಶ್ರೀರಾಮ ವಿರಾಜಮಾನನಾಗಿ ಭಕ್ತ ಜನರನ್ನು ಹರಸಲಿದ್ದಾನೆ. ಈ ಸಂಭ್ರಮಕ್ಕಾಗಿ ದೇಶಕ್ಕೆ ದೇಶವೇ ಚಾತಕ ಪಕ್ಷಿಯ ಹಾಗೆ ಕಾಯುತ್ತಿದೆ.

ಈ ಮಂದಿರ ಹಲವಾರು ವಿಶೇಷತೆಗಳಿಂದ ಕೂಡಿದೆ. ಶ್ರೀರಾಮ ಮಂದಿರದ ಸಂಕೀರ್ಣವು ಒಳಚರಂಡಿ ಸಂಸ್ಕರಣಾ ಘಟಕ, ನೀರು ಸಂಸ್ಕರಣಾ ಘಟಕ, ಅಗ್ನಿಯಿಂದ ಸಂರಕ್ಷಣೆ ಪಡೆಯಲು ಅಥವಾ ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ವ್ಯವಸ್ಥೆ, ಸ್ವತಂತ್ರ ವಿದ್ಯುತ್ ಕೇಂದ್ರ ಮೊದಲಾದವುಗಳನ್ನು ಒಳಗೊಂಡಿದೆ.

ಹಾಗೆಯೇ ಈ ರಾಷ್ಟ್ರ ಮಂದಿರದಲ್ಲಿ ಭಕ್ತರ ಅನುಕೂಲಕ್ಕೆಂದು ಇಪ್ಪತ್ತೈದು ಸಾವಿರ ಜನರ ಸಾಮರ್ಥ್ಯದ ಪಿ ಎಫ್ ಸಿ (ಪಿಲ್ಗ್ರಿಮ್ಸ್ ಫೆಸಿಲಿಟಿ ಸೆಂಟರ್) ಅನ್ನು ನಿರ್ಮಾಣ ಮಾಡಲಾಗುತ್ತಿದೆ‌. ಇದು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಲಾಕರ್ ‌ವ್ಯವಸ್ಥೆಗಳನ್ನು ಸಹ ಒಳಗೊಂಡಿರಲಿದೆ. ಜೊತೆಗೆ ಈ ಸಂಕೀರ್ಣದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಸ್ನಾನ ಗೃಹ, ವಾಶ್ ರೂಮ್, ವಾಶ್ ಬೇಸಿನ್, ತೆರೆದ ಟ್ಯಾಪ್ ಇತ್ಯಾದಿಗಳ ಜೊತೆಗೆ ಇನ್ನೂ ಹಲವಾರು ಶುಚಿತ್ವಕ್ಕೆ ಸಂಬಂಧಿಸಿದಂತೆಯೂ ವ್ಯವಸ್ಥೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಬಹಳ ವಿಶೇಷವಾಗಿ ಈ ಮಂದಿರವನ್ನು ಸಂಪೂರ್ಣವಾಗಿ ಭಾರತೀಯ ಸಂಪ್ರದಾಯದ ಹಾಗೆ ನಿರ್ಮಾಣ ಮಾಡಲಾಗುತ್ತಿದೆ. ಇದರ ನಿರ್ಮಾಣಕ್ಕೆ ಭಾರತದ ಸ್ಥಳೀಯ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ. ನೆಲ – ಜಲ ಸಂರಕ್ಷಣೆ ಮಾಡುವ ಸಲುವಾಗಿ 70% ಗಳಷ್ಟು ಪ್ರದೇಶದಲ್ಲಿ ಗಿಡಗಳನ್ನು ನೆಡುವ ಮೂಲಕ ಮಾದರಿಯಾಗಿದೆ.

Tags

Related Articles

Close