ಪ್ರಚಲಿತ

ಹಿಂದೂಗಳೇ ವೋಟ್ ಹಾಕುವ ಮುನ್ನ ಇದನ್ನೊಮ್ಮೆ ಓದಿ.! ಅಪ್ಪ ಅಮ್ಮ ಇಟ್ಟಿರುವ ಹೆಸರಿನಲ್ಲೇ ಬದುಕಬೇಕಾದರೆ ಬದಲಾಗಿ!!

ಸಿದ್ದರಾಮಯ್ಯನವರು ಅಧಿಕಾರಕ್ಕೆ ಏರುತ್ತಲೇ ಮೊದಲು ದೃಷ್ಟಿ ಇಟ್ಟಿದ್ದೇ ಹಿಂದೂಗಳ ಮೇಲೆ. ಹಿಂದೂಗಳನ್ನು ನಾಶ ಮಾಡಲೆಂದೇ ಅಧಿಕಾರ ಹಿಡಿದವರು ಕಾಂಗ್ರೆಸಿಗರು ಎಂದರೆ ತಪ್ಪಾಗದು. ಯಾಕೆಂದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗುತ್ತಲೇ ಬಹಿರಂಗವಾಗಿಯೇ ಹೇಳಿಬಿಟ್ಟರು ಹಿಂದೂ ಸಂಘಟನೆಗಳ ವಿರುದ್ಧ ನಾವೆಲ್ಲ ಒಟ್ಟಾಗಿ ಹೋರಾಡಬೇಕು ಎಂದು. ಒಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ಒಂದು ವರ್ಗದ ಜನರನ್ನು ಓಲೈಕೆ ಮಾಡುವ ಸಲುವಾಗಿ ಇನ್ನೊಂದು ಧರ್ಮವನ್ನು ವಿರೋಧಿಸುತ್ತಾರೆ ಎಂದರೆ, ಕರ್ನಾಟಕದಲ್ಲಿ ಹಿಂದೂಗಳು ಶಾಂತಿಯಿಂದ ಇರಲು ಹೇಗೆ  ಸಾಧ್ಯ..?

ತಾನೂ ಒಬ್ಬ ಹಿಂದೂವಾಗಿ ತನ್ನ ಧರ್ಮವನ್ನೇ ಹೀಯಾಳಿಸಿಕೊಂಡು ಕೇವಲ ವೋಟ್ ಬ್ಯಾಂಕ್‌ಗಾಗಿ ಅಲ್ಪಸಂಖ್ಯಾತರನ್ನು ಓಲೈಸಿಕೊಂಡು ಒಂದೊಂದೇ ಹಿಂದೂ ವಿರೋಧಿ ಯೋಜನೆಗಳನ್ನು ಕೈಗೆತ್ತಿಕೊಂಡರು. ಹಿಂದೂ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಚಿಂತನೆ ನಡೆಸಿದ ಸಿದ್ದರಾಮಯ್ಯನವರು ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಯೋಚನೆಯನ್ನು ಕೈಬಿಟ್ಟರು. ಆದರೆ ತೆರೆಮರೆಯಲ್ಲಿ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಲೇ ಬಂದಿದ್ದಾರೆ.

ದೇವಾಲಯಗಳನ್ನೇ ನುಂಗಲು ಹೋದ ಸಿದ್ದರಾಮಯ್ಯನಿಂದ ಇನ್ನೇನು ಬಾಕಿ..?!

ಹಿಂದೂ ಧರ್ಮದ ವಿರುದ್ದ ಗುಡುಗುತ್ತಲೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಿಂದೂ ಸಂಘಟನೆಗಳನ್ನು ಏನೂ ಮಾಡಲಾಗದೆ ತೆಪ್ಪಗಾಗಿದ್ದರು. ಅಧಿಕಾರ ಇದೆ ಎಂಬ ಕಾರಣಕ್ಕೆ ಏನೂ ಮಾಡಬಹುದು ಎಂಬ ದುರಾಲೋಚನೆ ಇಟ್ಟುಕೊಂಡಿದ್ದ ಸಿದ್ದರಾಮಯ್ಯನವರ ಕಣ್ಣಿಗೆ ಬಿದ್ದಿದ್ದು ಹಿಂದೂ ದೇವಾಲಯಗಳು. ಸರಕಾರದ ಖಜಾನೆ ತುಂಬಿಸಿಕೊಳ್ಳಲು ಸರಿಯಾದ ದಾರಿ ಎಂದರೆ ಅದು ದೇವಾಲಯಗಳನ್ನು ಸರಕಾರದ ಸುಪರ್ದಿಗೆ ತರುವುದು. ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳಿವೆ. ಪ್ರತಿನಿತ್ಯ ಲಕ್ಷಾಂತರ ಭಕ್ತರು ದೇವಾಲಯಗಳಿಗೆ ಹೋಗಿ ಪೂಜೆ , ಹರಕೆ ಸಲ್ಲಿಸುತ್ತಾರೆ. ಭಕ್ತಿಯಿಂದ ಬೇಡಿಕೊಳ್ಳುವ ಭಕ್ತರ ಮೇಲೆಯೇ ಸವಾರಿ ಮಾಡಲು ಹೊರಟ ಸಿದ್ದರಾಮಯ್ಯನವರು ದೇವಾಲಯಗಳಿಗೆ ಬರುವ ಹರಕೆ ಹಣವನ್ನು ಸರಕಾರದ ಖಜಾನೆ ತುಂಬಿಸಿಕೊಳ್ಳಲು ನಿರ್ಧರಿಸಿದರು.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಪರ್ದಿಗೆ ಬರುವ ಎಲ್ಲಾ ದೇವಾಲಯಗಳ ಹಣವೂ ಸರಕಾರದ ಪಾಲಾಗುತ್ತದೆ ಮತ್ತು ಸರಕಾರದ ಬೊಕ್ಕಸ ಸೇರುತ್ತಿದ್ದಂತೆ ಹಿಂದೂಗಳ ಹರಕೆಯ ಹಣ ಅನ್ಯ ಧರ್ಮದ ಜನರ ಉದ್ಧಾರಕ್ಕೆ ಬಳಸಲಾಗುತ್ತದೆ. ಕೇವಲ ಅಲ್ಪಸಂಖ್ಯಾತರ ವೋಟ್ ಪಡೆಯುವುದಕ್ಕಾಗಿ ಓಲೈಕೆ ಮಾಡಲಾಗುತ್ತಿದೆಯೇ ವಿನಃ ಮತ್ಯಾವುದೇ ಚಿಂತನೆ ಇಲ್ಲ.!

ತೆರೆಮರೆಯಲ್ಲಿ ನಡೆಸಿದ ಉಪಾಯಗಳು ಬಹಿರಂಗ..!

ಸಿದ್ದರಾಮಯ್ಯನವರು ಕಳೆದ ಬಾರಿ ರಾಜ್ಯದ ಎಲ್ಲಾ ಹಿಂದೂ ದೇವಾಲಯಗಳನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಆದರೆ ರಾಜ್ಯದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪರಿಸ್ಥಿತಿ ಅರಿತ ಸಿದ್ದರಾಮಯ್ಯನವರು ತಮ್ಮ ಯೋಚನೆಯಿಂದ ಹಿಂದೆ ಸರಿದಿದ್ದರು. ಆದರೂ ಕೆಲ ದೇವಾಲಯಗಳನ್ನು ಸರಕಾರದ ಅಧೀನಕ್ಕೆ ಪಡೆಯಲು ಪ್ರಯತ್ನಿಸಿದೆ. ಮಠ, ಮಂದಿರಗಳನ್ನು ಧಾರ್ಮಿಕ ದತ್ತಿ ಇಲಾಖೆಯ ತೆಗೆದುಕೊಂಡು ಇಡೀ ದೇವಸ್ಥಾನವನ್ನು ಲೂಟಿ ಹೊಡೆಯಲು ಪ್ರಯತ್ನಿಸಿರುವ ದಾಖಲೆ ಕೂಡಾ ಇದೀಗ ಲಭ್ಯವಾಗಿದೆ..!

ಕಳೆದ ವರ್ಷ ಸಿದ್ದರಾಮಯ್ಯನವರು ಸಚಿವ ಸಂಪುಟದಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಸುಮಾರು ೧೨ ಮಠ , ಮಂದಿರಗಳನ್ನು ಸರಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದರು.

ಸಿದ್ದರಾಮಯ್ಯನವರು ಹಿಂದೂ ವಿರೋಧಿ ಎಂಬುದು ಇಡೀ ರಾಜ್ಯಕ್ಕೆ ತಿಳಿದಿರುವ ವಿಚಾರ. ಆದರೆ ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ನಿಂಬೆಹಣ್ಣು ಕೈಯಲ್ಲಿ ಹಿಡಿದುಕೊಂಡು ಹಣೆಗೆ ಉದ್ದದ ನಾಮ ಹಾಕಿಕೊಂಡು ಹೋಗುತ್ತಿದ್ದಾರೆ. ಹಿಂದೂ ಸಂಪ್ರದಾಯವನ್ನು ಹೀಯಾಳಿಸಿಕೊಂಡು , ಹಿಂದೂ ವಿರೋಧಿಗಳಿಗೆ ಬೆಂಬಲ ಸೂಚಿಸಿಕೊಂಡು ಬಂದಿರುವ ಸಿದ್ದರಾಮಯ್ಯನವರು ಇನ್ನೊಂದು ಬಾರಿ ಆಯ್ಕೆಯಾದರೆ ದೇವಾಲಯಗಳನ್ನು ಸಂಪೂರ್ಣವಾಗಿ ನಾಶ ಮಾಡುವುದು ಖಂಡಿತ..!

–ಅರ್ಜುನ್

 

Tags

Related Articles

Close