ಪ್ರಚಲಿತ

ಮುಸ್ಲಿಂ ಓಟ್‌ಗಾಗಿ ಹಿಂದೂ ಧರ್ಮದ ಹಬ್ಬಗಳಿಗೆ ಕತ್ತರಿ ಹಾಕಿತೇ ಸರ್ಕಾರ?

ಭಾರತ ಹಿಂದೂ ರಾಷ್ಟ್ರ ಎಂಬ ಹೆಸರನ್ನು ಹೊಂದಿದ್ದರೂ, ಇಲ್ಲಿನ ಕೆಲ ನಾಲಾಯಕ್ಕು ನಾಯಕರು ಹಿಂದೂಗಳ ಮೇಲೆ ಸವಾರಿ ಮಾಡುತ್ತಾರೆ. ಹಿಂದೂಗಳ ತತ್ವ, ಸಿದ್ದಾಂತಗಳ ಮೇಲೆ ದಾಳಿ ಮಾಡುವುದು, ನಂಬಿಕೆಗಳನ್ನು ಘಾಸಿ ‌ಮಾಡುವುದು, ಧಾರ್ಮಿಕತೆಗೆ ಅಪಚಾರ ಎಸಗುವುದು ಇತ್ಯಾದಿಗಳನ್ನು ಮಾಡುವ ಮೂಲಕ ಹಿಂದೂ ಧರ್ಮಕ್ಕೆ ಅಪಾಚಾರ ಎಸಗುತ್ತಾರೆ.

ಈಗ ಬಿಹಾರದಲ್ಲಿಯೂ ನಿತೀಶ್ ಕುಮಾರ್ ಸರ್ಕಾರ ಹಿಂದೂಗಳ‌ ವಿರುದ್ಧದ ತಮ್ಮ ಧೋರಣೆಯನ್ನು ಜಗಜ್ಜಾಹೀರು ಮಾಡಿದ್ದಾರೆ. 

ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದಲ್ಲಿ ರಜೆಗಳನ್ನು ಕಡಿತ ಮಾಡಿ, ಮುಸ್ಲಿಂ ಹಬ್ಬಗಳಿಗೆ ಈಗಾಗಲೇ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ರಜೆಗಳನ್ನು ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ನಿತೀಶ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಈ ಸಂಬಂಧ ನಿತೀಶ್ ಸರ್ಕಾರದ ವಿರುದ್ಧ ಕೆಂಡ ಕಾರಿದ್ದು, ನಿತೀಶ್ ಅವರನ್ನು ಓಲೈಕೆ ರಾಜಕಾರಣದ ಮಾಸ್ಟರ್ ಎಂಬುದಾಗಿ ಹೇಳಿದ್ದಾರೆ. ಈಗ ಮತ್ತೆ ಜೆಡಿಯು- ಆರ್‌ಜೆ‌ಡಿ ಸರ್ಕಾರಗಳ ಹಿಂದೂ ವಿರೋಧಿ ನೀತಿ ಬಯಲಾಗಿರುವುದಾಗಿ ಕಿಡಿ ಕಾರಿದ್ದಾರೆ. ಮತ ಬ್ಯಾಂಕ್‌ಗಾಗಿ ಬಿಹಾರ ಸನಾತನ ಹಿಂದೂ ಧರ್ಮವನ್ನು ದ್ವೇಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಚಿಕ್ಕಪ್ಪ – ಸೋದರಳಿಯ ಸರ್ಕಾರದ ಹಿಂದೂ ವಿರೋಧಿ ನಿಲುವು ಮತ್ತೆ ಬೆಳಕಿಗೆ ಬಂದಿದೆ. ಒಂದು ಕಡೆಯಲ್ಲಿ ಮುಸ್ಲಿಂ ಹಬ್ಬಗಳಿಗೆ ರಜಾ ದಿನಗಳನ್ನು ವಿಸ್ತರಣೆ ಮಾಡಿರುವ ನಿತೀಶ್ ಸರ್ಕಾರ ಹಿಂದೂ ಹಬ್ಬ ಗಳಿಗೆ ನಿಗದಿ ಮಾಡಲಾಗಿರುವ ರಜೆಗಳಿಗೆ ಕತ್ತರಿ‌ ಪ್ರಯೋಗ ಮಾಡುತ್ತಿದೆ‌. ಔಟ್‌ ಬ್ಯಾಂಕ್‌ ಗಾಗಿ ಸನಾತನ ಹಿಂದೂ ಧರ್ಮದ ವಿರುದ್ಧ ನಂಜು ಕಾರುವ ಬಿಹಾರ ಸರ್ಕಾರಕ್ಕೆ ನಾಚಿಗೆಯಾಗಬೇಕು ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ. 

ಭಾರತೀಯ ಜನತಾ ಪಕ್ಷದ ಸಂಸದ ಸುಶೀಲ್ ಮೋದಿ ಅವರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ತನ್ನ ಹಿಂದೂ ವಿರೋಧಿ ಮುಖವನ್ನು ತೋರಿಸಿದೆ. ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಮಾಡಿದೆ. ಮುಸ್ಲಿಂ ಹಬ್ಬ ಗಳಿಗೆ ರಜೆಯ ಪ್ರಮಾಣ ಹೆಚ್ಚಿಸಿ, ಹಿಂದೂ ಹಬ್ಬಗಳ ರಜೆಯ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ಸಿಟ್ಟು ಹೊರ ಹಾಕಿದ್ದಾರೆ.

Tags

Related Articles

Close