ಪ್ರಚಲಿತ

ಕರ್ನಾಟಕವನ್ನೇ ಬೆಚ್ಚಿಬೀಳಿಸಿತು ಕಾಂಗ್ರೆಸ್‌ನ ಈ ಕುತಂತ್ರ ದಂಧೆ.! ಚುನಾವಣೆ ಗೆಲ್ಲಲು ಕಾಂಗ್ರೆಸ್ ಹಿಡಿದ ವಾಮಾಮಾರ್ಗ ಏನು ಗೊತ್ತಾ..?

ರಾಜ್ಯದಲ್ಲಿ ಅಧಿಕಾರಲ್ಲಿದ್ದು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರೆ ಈ ರೀತಿ ಮೋಸ ಮಾಡುವ ಅವಶ್ಯಕತೆ ಇರಲಿಲ್ಲ. ಆದರೆ ಸಿದ್ದರಾಮಯ್ಯ ಸರಕಾರ ಮಾಡಿದ್ದೇ ಬೇರೆ, ಎಲ್ಲಿ ಲೂಟಿ ಮಾಡಲು ಅವಕಾಶ ಸಿಗುತ್ತದೆ ಎಂದು ಕಾಯುತ್ತಿದ್ದ ಈ ಕಾಂಗ್ರೆಸಿಗರು ಕಳೆದ ಐದು ವರ್ಷಗಳಲ್ಲಿ ಏನೆಲ್ಲಾ ಮಾಡಬಹುದೋ ಅವೆಲ್ಲವನ್ನೂ ಮಾಡಿ ಮುಗಿಸಿದ್ದಾಯಿತು. ಇದೀಗ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ನ ಬಹುದೊಡ್ಡ ಮೋಸವೊಂದು ಬಯಲಾಗಿದೆ. ಚುನಾವಣೆ ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್, ನಕಲಿ ವೋಟರ್ ಐಡಿ ತಯಾರಿಸಿ ಚುನಾವಣೆ ಗೆಲ್ಲುವ ಉಪಾಯ ಹೂಡಿದ್ದು, ಇದೀಗ ರಾಜ್ಯದ ಜನತೆಯ ಮುಂದೆ ಬೆತ್ತಲಾಗುವಂತಾಗಿದೆ.!

ರಾಜ್ಯವನ್ನೇ ಬೆಚ್ಚಿಬೀಳಿಸಿದ ನಕಲಿ ವೋಟರ್ ಐಡಿ..!

ಇಡೀ ರಾಜ್ಯವೇ ಚುನಾವಣೆ ಎದುರು ನೋಡುತ್ತಿದ್ದರೆ ಈ ಕಾಂಗ್ರೆಸಿಗರು ಮಾತ್ರ ನಕಲಿ ವೋಟರ್ ಐಡಿ ತಯಾರಿಸಿ , ತಮ್ಮತ್ತ ಬೀಳುವ ಮತವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ‌.ಆರ್.ಲೋಬೋ ಅವರು ತಮ್ಮ ಕ್ಷೇತ್ರದಲ್ಲಿ ನಡೆಸಿದ ಅಕ್ರಮ ವೋಟರ್ ಐಡಿ ಜಾಲವನ್ನು ಬಿಜೆಪಿ ಕಾರ್ಯಕರ್ತರು ಪತ್ತೆಹಚ್ಚಿ ಕಾಂಗ್ರೆಸ್ ನ ಮೋಸವನ್ನು ಇಡೀ ರಾಜ್ಯದ ಮುಂದೆ ಬಿಚ್ಚಿಟ್ಟಿದ್ದರು. ಇದು ಕೇವಲ ರಾಜ್ಯ ಮಾತ್ರವಲ್ಲದೆ ರಾಷ್ಟ್ರೀಯ ಮಾಧ್ಯಮಗಳಲ್ಲೂ ಪ್ರತಿಧ್ವನಿಸಿ, ಕಾಂಗ್ರೆಸ್ ಶಾಸಕ ಜೆ‌.ಆರ್.ಲೋಬೋ ಅವರ ನಕಲಿ ಮುಖವಾಡ ಬಯಲಾಗಿತ್ತು. ‌

ಇದೀಗ ಇಂತದ್ದೇ ಪ್ರಕರಣ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜಾಲಹಳ್ಳಿಯಲ್ಲಿ ಇರುವ ಫ್ಲಾಟ್ ಒಂದರಲ್ಲಿ ಸುಮಾರು ಹತ್ತು ಸಾವಿರ ನಕಲಿ ವೋಟರ್ ಐಡಿಗಳು ಪತ್ತೆಯಾಗಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ತಮ್ಮದೇ ಸರಕಾರ ಇದೆ ಎಂಬ ಕಾರಣಕ್ಕೆ ಏನೂ ಮಾಡಲು ತಯಾರಿರುವ ಕಾಂಗ್ರೆಸಿಗರು ಚುನಾವಣೆಯಲ್ಲಿ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಈ ರೀತಿಯ ಮೋಸದ ದಾರಿ ಹಿಡಿದಿದೆ..!

ಬಿಜೆಪಿಯಿಂದ ಕಾಂಗ್ರೆಸ್ ಮೇಲೆ ನೇರ ಆರೋಪ..!

ನಕಲಿ ವೋಟರ್ ಐಡಿ ಹಂಚಿಕೆ ವಿಚಾರದಲ್ಲಿ ಈಗಾಗಲೇ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ ಸಿಕ್ಕಿಬಿದ್ದಿದ್ದು, ಬೆಂಗಳೂರಿನಲ್ಲೂ ಇದೇ ಮಾದರಿಯ ಪ್ರಕರಣ ಬೆಳಕಿಗೆ ಬಂದಿದೆ. ಆದ್ದರಿಂದ ಈ ಪ್ರಕರಣದಲ್ಲೂ ಕಾಂಗ್ರೆಸ್ ಕೈವಾಡ ಇದೆ ಎಂದು ಆರೋಪಿಸಿರುವ ಬಿಜೆಪಿ, ಪತ್ತೆಯಾದ ನಕಲಿ ವೋಟರ್ ಐಡಿ ಇದ್ದ ಜಾಗದ ಪರಿಶೀಲನೆ ನಡೆಸುವಂತೆ ಆಗ್ರಹಿಸಿದ್ದಾರೆ. ಫ್ಲಾಟ್ ಮಾಲಕಿ ಮಂಜುಳಾ ನಂಜಾಮುರಿ ಅವರು ಕಾಂಗ್ರೆಸ್ ಕಾರ್ಯಕರ್ತೆ ಎಂದು ಈಗಾಗಲೇ ಬಿಜೆಪಿ ಹೇಳಿಕೊಂಡಿದೆ. ಆದ್ದರಿಂದ ಈ ಪ್ರಕರಣದಲ್ಲಿ ಕಾಂಗ್ರೆಸ್ ನ ಕೈವಾಡವಿರುವುದು ಗೋಚರಿಸುತ್ತದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಚುನಾವಣಾ ಆಯೋಗ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಡರಾತ್ರಿಯೇ ತುರ್ತು ಸುದ್ದಿಗೋಷ್ಟಿ ಕರೆದಿದ್ದು, ೨೪ ಗಂಟೆಗಳ ಒಳಗಾಗಿ ತನಿಖೆ ನಡೆಸಿ ಸತ್ಯಾಂಶ ಬೆಳಕಿಗೆ ತರುವುದಾಗಿ ಹೇಳಿದ್ದಾರೆ..!

ಅದೇನೇ ಆದರೂ, ಚುನಾವಣೆಯಲ್ಲಿ ಗೆಲ್ಲಬೇಕೆಂಬ ಆಸೆಗೆ ಈ ರೀತಿ ನಕಲಿ ಮತದಾರರನ್ನು ಸೃಷ್ಟಿಸಿ , ರಾಜ್ಯವನ್ನೇ ವಿನಾಶದತ್ತ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಗೆ ಚುನಾವಣೆಯಲ್ಲಿ ತಕ್ಕ ಉತ್ತರ ದೊರಕಲಿದೆ..!

–ಅರ್ಜುನ್

 

Tags

Related Articles

Close