ಪ್ರಚಲಿತ

ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದು ಎಂದು ಹೇಳಿರುವ ಮುಸ್ಲಿಂ ಮಹಿಳೆಯಾದರೂ ಯಾರು ಗೊತ್ತೇ?!

ಭಾರತದಲ್ಲಿರುವ ಅದೆಷ್ಟೋ ಪಾಕಿಸ್ತಾನಿ ಪ್ರೇಮಿಗಳು ಭಾರತವನ್ನು ಹಿಂದೂ ಮುಕ್ತ ಭಾರತವನ್ನು ನಿರ್ಮಾಣ ಮಾಡಲು ಪಣತೊಟ್ಟಿದ್ದಲ್ಲದೇ, ಹಿಂದೂ ಯುವತಿಯರನ್ನು ಲವ್ ಜಿಹಾದ್ ಎನ್ನುವ ಕೂಪಕ್ಕೆ ನೂಕಿ ಮತಾಂಧರಗೊಳಿಸುತ್ತಿರುವ ದುರುಳರು, ಭಾರರತದಲ್ಲಿದ್ದುಕೊಂಡೆ ಪಾಕಿಸ್ತಾನಕ್ಕೆ ಜೈಕಾರ ಹಾಕುತ್ತಿರುವುದನ್ನು ನಾವು ಕಂಡಿದ್ದೇವೆ!! ಆದರೆ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರು ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದು ಎನ್ನುವ ಮೂಲಕ ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಹೌದು.. ಈಗಾಗಲೇ ಮುಸ್ಲಿಂ ಮಹಿಳೆಯರ ಬಹುದಿನಗಳ ಬೇಡಿಕೆಯಾಗಿದ್ದ ತ್ರಿವಳಿ ತಲಾಖ್ ಪದ್ದತಿಯನ್ನು ನಿಷೇಧಿಸಿ, ಮುಸ್ಲಿಂ ಮಹಿಳೆಯರ ಮೊಗದಲ್ಲಿ ಸಂತಸ ಇಮ್ಮಡಿಯಾಗುವಂತೆ ಮಾಡಿತ್ತು. ಅಷ್ಟೇ ಅಲ್ಲದೇ, ತ್ರಿವಳಿ ತಲಾಖ್ ವಿರುದ್ದ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದ ಇಶ್ರತ್ ಜಹಾನ್, ಮೋದಿ ಸರ್ಕಾರವು ತ್ರಿವಳಿ ತಲಾಖ್ ಅಕ್ರಮ ಎಂದು ಘೋಷಿಸಿದ ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರಿಕೊಂಡಿದ್ದರು.

ಆದರೆ ಭಾರತದಲ್ಲಿರುವ ಜಾತ್ಯತೀತ ಮನೋಭಾವನೆ ತೊಲಗಿ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿ ಎಂದು ಕೆಲವು ಇಸ್ಲಾಂ ಮೂಲಭೂತವಾದಿಗಳು ಬಯಸುತ್ತಿರುವ ಬೆನ್ನಲ್ಲೇ ಮುಸ್ಲಿಂ ಮಹಿಳೆಯೊಬ್ಬರು ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರೆ ಅದು ನಿಜಕ್ಕೂ ಕೂಡ ಹೆಮ್ಮೆಯ ವಿಚಾರವಾಗಿದೆ!!

ಆದರೆ ಭಾರತದಲ್ಲಿರುವ ಕೆಲ ಹಿಂದೂಗಳೇ ಭಾರತದಲ್ಲಿ ಹಿಂದೂ ಧರ್ಮ ನಿರ್ನಾಮವಾಗಬೇಕೆಂದು ಪಣತೊಟ್ಟಿರುವಾಗ ಭಾರತದ ಮುಸ್ಲಿಂ ಮಹಿಳೆಯೋರ್ವಳು ತನ್ನ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ!! ಹಾಗಾದರೆ ಇಸ್ಲಾಂ ಧರ್ಮಕ್ಕೆ ಸೆಡ್ಡುಹೊಡೆದ ಮಹಿಳೆಯಾದರೂ ಯಾರು ಗೊತ್ತೇ? ಆಕೆ ಬೇರಾರು ಅಲ್ಲ ದೇಶದಲ್ಲೇ ಮೊದಲ ಬಾರಿಗೆ ನಮಾಜ್ ಮಾಡುವ ಉಸ್ತುವಾರಿ ವಹಿಸಿಕೊಂಡ, ಕುರಾನ್ ಸುನ್ನತ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಕೆ. ಜಮಿದಾ!! “ಭಾರತ ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯಬೇಕು. ಹಾಗಾಗಬೇಕಾದರೆ ಭಾರತದ ಎಲ್ಲ ಜಾತಿಯ ಹಿಂದೂಗಳು ಒಂದಾಗಬೇಕು” ಎಂದು ಹೇಳಿದ್ದಾರೆ.

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , “ಹಿಂದೂಗಳ ಹೊರತಾಗಿ ಭಾರತ ಎಂದಿಗೂ ಜಾತ್ಯತೀತ ರಾಷ್ಟ್ರವಾಗಲು ಸಾಧ್ಯವೇ ಇಲ್ಲ. ಹಾಗಾಗಿ ಹಿಂದೂಗಳೆಲ್ಲರೂ ಒಗ್ಗಟ್ಟಾಗಿ ಇರಬೇಕು” ಎಂದು ಹೇಳಿದ್ದಾರೆ. ಆದರೆ ಭಾರತದಲ್ಲಿರುವ ಕೆಲ ಬುದ್ದಿಜೀವಿಗಳು ಹಿಂದೂ ಧರ್ಮವನ್ನೇ ಧಿಕ್ಕರಿಸಿ ಅನ್ಯ ಧರ್ಮದೊಂದಿಗೆ ಶಾಮೀಲಾಗುತ್ತಿದ್ದಾರಲ್ಲದೇ, ಭಾರತದ ಶತ್ರು ರಾಷ್ಟ್ರ ಎಂದೆನಿಸಿಕೊಂಡ, ಉಗ್ರರ ತಾಣವಾದ ಪಾಕಿಸ್ತಾನಕ್ಕೆ ಜೈಕಾರವನ್ನು ಹಾಕುತ್ತಿರುವ ಕೆಲ ಹಿಂದುಗಳೇ ತಮ್ಮ ಧರ್ಮವನ್ನೇ ಧಿಕ್ಕರಿಸಿ ಉಗ್ರರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಮತ್ತೊಂದಿಲ್ಲ!!

ಈಗಾಗಲೇ, “ಮದರಸಾ ಶಿಕ್ಷಣಗಳನ್ನೇ ತಿರುಚಿ ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಹಾಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ವಿರೋಧಿಸುವ ಮುಸ್ಲಿಮರು ಪಾಕಿಸ್ತಾನ ಇಲ್ಲವೇ ಬಾಂಗ್ಲಾದೇಶಕ್ಕೆ ಹೋಗಬೇಕು” ಎಂದು ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಹೇಳಿರುವ ಬೆನ್ನಲ್ಲೇ ಇಸ್ಲಾಮ್ ನಲ್ಲಿ ಮಸೀದಿ ಸ್ಥಳಾಂತರಕ್ಕೆ ಅವಕಾಶವಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಹೇಳಿಕೆ ನೀಡಿದ್ದರು.

ಕೆಲವು ಮದರಸಾಗಳು ಬೋಧನೆ ಮಾಡುವುದಕ್ಕಿಂತ ಹೆಚ್ಚು ಉಗ್ರರನ್ನು ಹುಟ್ಟು ಹಾಕುತ್ತಿದೆಯಲ್ಲದೇ ಇದುವರೆಗೆ ಮದರಸಾಗಳಿಂದ ಓದಿ ಬಂದಿರುವವರಲ್ಲಿ ಎಷ್ಟು ಜನ ಎಂಜನಿಯರ್ ಗಳಿದ್ದಾರೆ, ಡಾಕ್ಟರ್ ಗಳಾಗಿದ್ದಾರೆ, ಐಎಎಸ್ ಅಧಿಕಾರಿಗಳಾಗಿದ್ದಾರೆ ಇದಕ್ಕೆ ಉತ್ತರ ಸೊನ್ನೆ ಎಂದು ವಾಸೀಮ್ ರಿಜ್ವಿ ತಿಳಿಸಿದ್ದರು. ಅಷ್ಟೇ ಅಲ್ಲದೇ, ಕೆಲವು ಮದರಸಾಗಳು ಜಿಹಾದ್ ಪಾಠವನ್ನು ಹೇಳಿಕೊಡುವ ಮೂಲಕ ಉಗ್ರರನ್ನು ಹುಟ್ಟು ಹಾಕುತ್ತಿದೆ. ಇದು ನಿಜಕ್ಕೂ ಆತಂಕಕಾರಿಯಾಗಿದೆ ಎಂದು ಮದರಸಾ ಶಿಕ್ಷಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ವಿದ್ಯಾರ್ಥಿಗಳನ್ನು ಭಯೋತ್ಪಾದನಾ ಕಡೆಗೆ ಸೆಳೆಯುತ್ತಿರುವ ಮದರಸಾಗಳನ್ನು ಮುಚ್ಚಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಈ ಹಿಂದೆ ವಸೀಂ ರಿಜ್ವಿ ಆಗ್ರಹಿಸಿದ್ದಾರೆ.

ಆದರೆ ಕೆ. ಜಮೀದಾ ಅವರು ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದು ಎಂದು ಹೇಳಿದ್ದಾರೆ ಎಂದರೆ, ಭಾರತ ಇಸ್ಲಾಮಿಕ್ ರಾಷ್ಟ್ರವಾದರೆ ಭಾರತ ಪಾಕಿಸ್ತಾನಕ್ಕಿಂತಲೂ ನರಕವಾಗಬಹುದು ಎನ್ನುವುದೇ ಇದರ ಒಳಾರ್ಥ ಇದ್ದರೂ ಇರಬಹುದು!! ಯಾಕೆಂದರೆ, ಭಾರತದಲ್ಲಿ ಜಾತ್ಯಾತೀತ ಮನೋಭಾವನೆ ತೊಲಗಿ ಭಾರತ ಇಸ್ಲಾಮಿಕ್ ರಾಷ್ಟ್ರವಾಗಲಿ ಎಂದು ಕೆಲವು ಇಸ್ಲಾಂ ಮೂಲಭೂತವಾದಿಗಳು ಬಯಸುತ್ತಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರದ ವಿಚಾರವಾಗಿಯೂ ತಡೆಯೊಡ್ಡುತ್ತಿರುವ ವಿಚಾರವೂ ತಿಳಿದೇ ಇದೆ.

ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತಾನಾಡಿದ ಕೆ. ಜಮೀದಾ, “ನಾನು ಸಮಾಜ ಸುಧಾರಣೆ ಮಾಡುವ ದಿಸೆಯಲ್ಲಿ ಕುರಾನ್ ಸುನ್ನತ್ ಸೇರಿ ಹಲವು ಕ್ರಮಗಳನ್ನು ಕೈಗೊಂಡಾಗ ಕೆಲವರು ನನ್ನನ್ನೇ ಗುರಿಯಾಗಿಸಿದರು. ಬೆದರಿಕೆಯೂ ಹಾಕಿದ್ದರು. ಇದೇ ದಾರಿಯಲ್ಲಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಹಾಗೂ ಸುನ್ನತ್ ಸಂಸ್ಥಾಪಕ ಚೆಕನ್ನೂರ್ ಮೌಲ್ವಿ ಅವರಿಗೂ ಹೀಗೆಯೇ ಆಗಿತ್ತು” ಎಂದು ಸ್ಮರಿಸಿದ್ದಾರೆ.

ಅಷ್ಟೇ ಅಲ್ಲದೇ, ತಮ್ಮ ಮಾತನ್ನು ಮುಂದುವರೆಸಿದ ಅವರು, “ಯಾರೇ ಬೆದರಿಕೆ ಹಾಕಿದರೂ ಕೂಡ ಈ ಸಮಾಜ ಸುಧಾಕರು ಯಾವ ಬೆದರಿಕೆಗೂ ಹೆದರದೆ ಸಮಾಜ ಸುಧಾರಣೆ ಮಾಡಿದರಲ್ಲದೆ, ಅದಕ್ಕಾಗಿ ತಮ್ಮ ಪ್ರಾಣವನ್ನೇ ತೆತ್ತರು ಎಂದು ಕೆ.ಜಮಿದಾ ತಿಳಿಸಿದ್ದಾರೆ. ಹಾಗಾಗಿ ಕಳೆದ ಜನವರಿ 26ರಂದು ಜಮಿದಾ ಅವರು ನಮಾಜ್ ಉಸ್ತುವಾರಿ ವಹಿಸಿಕೊಂಡಾಗ ಮುಸ್ಲಿಂ ಮುಖಂಡರಿಂದ ವಿರೋಧ ವ್ಯಕ್ತವಾಗಿತ್ತು, ಆದರೂ ಅವರು ಹಿಂಜರಿದಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

ಭಾರತದ ಕೇಲವೇ ಕೆಲವು ವರ್ಷಗಳಲ್ಲಿ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಬೊಬ್ಬಿರುವ ಮೂಲಭೂತವಾದಿ ಮುಸ್ಲಿಂಗಳಿಗೆ ಸೆಡ್ಡು ಹೊಡೆದಿರುವ ಮುಸ್ಲಿಂ ಮಹಿಳೆ ಕೆ. ಜಮೀದಾ ಅವರು ಹೇಳುವ ಪ್ರಕಾರ, ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದು, ಹಿಂದೂಗಳೆಲ್ಲರೂ ಒಂದಾಗಬೇಕು ಎಂದು ಹೇಳಿರುವ ಇವರ ಮಾತನ್ನು ಕೆಲ ಧರ್ಮ ವಿರೋಧಿಗಳು ಆಲಿಸಿಕೊಂಡಾಗಾದರೂ ಬುದ್ದಿ ಬರಬಹುದೋ ಏನೋ??

– ಅಲೋಖಾ

Tags

Related Articles

Close