ಪ್ರಚಲಿತ

ಮಹಿಳಾ ಸಬಲೀಕರಣಕ್ಕೆ ಪ್ರಧಾನಿ ಮೋದಿ ಸರ್ಕಾರದಿಂದ ಮತ್ತೊಂದು ಯೋಜನೆ

ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ದೇಶದ ಸರ್ವಾಂಗೀಣ ಅಭಿವೃದ್ಧಿಯ ಕನಸುಗಳ ಜೊತೆಗೆ ದೇಶವನ್ನು ಮುನ್ನಡೆಸುತ್ತಿರುವ ವ್ಯಕ್ತಿ – ಶಕ್ತಿ. ಅವರು ಈ ದೇಶವನ್ನು ತಮ್ಮ ಆಡಳಿತದ ಕೇವಲ ಒಂಬತ್ತು ವರ್ಷಗಳಲ್ಲಿಯೇ ಸಾಕಷ್ಟು ಧನಾತ್ಮಕ, ಸಕಾರಾತ್ಮಕ ಬದಲಾವಣೆಗಳತ್ತ ತೆಗೆದುಕೊಂಡು ಹೋಗಿದ್ದಾರೆ ಎಂದರೆ ತಪ್ಪಾಗಲಾರದೇನೋ.

ಪ್ರಧಾನಿ ಮೋದಿ ಅವರು ನಿನ್ನೆಯಷ್ಟೇ ಪ್ರಧಾನ ಮಂತ್ರಿ ಮಹಿಳಾ ಕಿಸಾನ್ ಡ್ರೋನ್ ಕೇಂದ್ರ ಮತ್ತು ಭಾರತದಲ್ಲಿ ಜನೌಷಧ ಕೇಂದ್ರಗಳ ಸಂಖ್ಯೆಯನ್ನು ಹತ್ತು ಸಾವಿರದಿಂದ ಇಪ್ಪತೈದು ಸಾವಿರ ಗಳಿಗೆ ಹೆಚ್ಚಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ‌. ಆ ಮೂಲಕ ದೇಶದ ಜನರ ಆರೋಗ್ಯ ಮತ್ತು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಅವರು ವಿಕಾಸ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳ ಜೊತೆಗೆ ವಿಡಿಯೋ‌ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.

ಭಾರತೀಯರಿಗೆ ಉತ್ತಮ ಗುಣಮಟ್ಟದ ಔಷಧಗಳನ್ನು ಒದಗಿಸುವುದು ದೊಡ್ಡ ಸೇವೆಯೇ ಸರಿ. ಪಿ ಎಂ ಜನೌಷಧಿ ಮಳಿಗೆಗಳು ಆರಂಭವಾಗುವುದರಿಂದ ಹನ್ನೆರಡು ಹದಿಮೂರು ಸಾವಿರ ರೂ. ಗಳನ್ನು ಕೊಟ್ಟು ಖರೀದಿ ಮಾಡಬೇಕಾಗಿದ್ದ ಔಷಧವನ್ನು ಕೇವಲ ಎರಡರಿಂದ ಮೂರು ಸಾವಿರ ರೂ. ಗಳಿಗೆ ದೊರೆಯುವಂತೆ ಮಾಡಲಾಗಿದೆ, ಸುಮಾರು ಹತ್ತು ಸಾವಿರ ರೂಪಗಳನ್ನು ಉಳಿಸಲು ಸಾಧ್ಯವಾಗುತ್ತಿದೆ. ಬಡ ಜನರ ಆರೋಗ್ಯ ಸಮಸ್ಯೆಗಳಿಗೆ ಔಷಧಗಳನ್ನು ನ್ಯಾಯಯುತ ಬೆಲೆಗೆ ಜನೌಷಧ ಕೇಂದ್ರಗಳು ಒದಗಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಡ್ರೋನ್‌ಗೆ ಸಂಬಂಧಿಸದ ಹಾಗೆ ಅವರು ಮಾತನಾಡಿದ್ದು, ಡ್ರೋನ್ ತರಬೇತಿ ನೀಡಲು ಪ್ರಾರಂಭ ಮಾಡಿದಾಗ ಹಲವಾರು ಜನರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಆದರೆ ರಾಮನ್ ಅಮ್ಮನವರಂತಹ ಮಹಿಳೆಯರು ಕೃಷಿ ಕ್ಳೇತ್ರದಲ್ಲಿ ಸಕಾರಾತ್ಮಕ ಅಭಿವೃದ್ಧಿ ಹೊಂದುತ್ತಿದ್ದಾರೆ.ಇದು ಮಹಿಳಾ ಸಬಲೀಕರಣದ ಸಂಕೇತವಾಗಿದೆ. ಸಂಪೂರ್ಣ ಭಾರತ ದೇಶಕ್ಕೆ ಇಂತಹ ಮಹಿಳೆಯರು ಸ್ಪೂರ್ತಿಗಳಾಗಿರುವುದಾಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ ದಲ್ಲಿ ಮಹಿಳೆಯರ ಭಾಗವಹಿಸುವಿಕೆ ಬಹಳ ಮುಖ್ಯವಾದದ್ದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ

ಹಾಗೆಯೇ ಈ ಸಂಕಲ್ಪ ಯಾತ್ರೆಯ ಉದ್ದೇಶದ ಬಗೆಗೂ ಮಾಹಿತಿ ನೀಡಿರುವ ಅವರು, ಸರ್ಕಾರಿ ಯೋಜನೆಗಳನ್ನು ಪಡೆಯುತ್ತಿರುವ ಫಲಾನುಭವುಗಳ ಅನುಭವಗಳನ್ನು ತಿಳಿದುಕೊಳ್ಳಲು ಈ ಯಾತ್ರೆ ಸಹಕಾರಿಯಾಗಲಿದೆ. ಐದು ವರ್ಷಗಳಲ್ಲಿ ಈ‌ ಯೋಜನೆಗಳಿಂದ ಅವರು ಪಡೆದುಕೊಂಡ ಪ್ರಯೋಜನದ ಬಗ್ಗೆ ಮಾಹಿತಿ ಪಡೆಯುವುದು ಇದರ ಉದ್ದೇಶ. ಜೊತೆಗೆ ಪ್ರತಿ ಹಳ್ಳಿ ಹಳ್ಳಿಗೂ ‌ಕೇಂದ್ರ‌ಸರ್ಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿಯೂ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.

Tags

Related Articles

Close