ಪ್ರಚಲಿತ

ಅಖಿಲಾ ಹೇಗೆ ಲವ್ ಜಿಹಾದ್ ಜಾಲಕ್ಕೆ ಬಲಿಯಾಗಿದ್ದು ಎಂಬುದನ್ನು ಬಹಿರಂಗಪಡಿಸಿದ ಐಸಿಸ್ ಉಗ್ರರು! NIA ಬೆಚ್ಚಿ ಬಿದ್ದಿದ್ಯಾಕೆ ಗೊತ್ತೇ?!

ಇಷ್ಟು ದಿನವೂ ಕೂಡ, ಅಖಿಲಾ ಜಿಹಾದ್ ಪ್ರಕರಣ ಜೀವಂತವಾಗಿಯೇ ಮುಂದುವರೆದಿದೆ! ಒಂದು ಕಡೆ ಹೆತ್ತ ಕರುಳಿನ ಸಂಕಟವಾದರೆ, ಇನ್ನೊಂದು ಕಡೆ ಮಗಳ ಹಠ! ‘ಮುಸಲ್ಮಾನನೊಂದಿಗೇ ಇರುತ್ತೇನೆ’ ಎಂದವಳನ್ನು ಹೊರತರಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ, ಉಹೂಂ! ಇನ್ನೂ ಅಖಿಲಾಳ ಪ್ರಕರಣ ಇತ್ಯರ್ಥವಾಗಿಲ್ಲ!

ಇದಕ್ಕೊಂದು ಈಗ ಹೊಸ ತಿರುವು! ಸ್ವತಃ ಐಸಿಸ್ ನವರೇ ಬಾಯಿಬಿಟ್ಡಿದ್ದಾರೆ! ಹೇಗೆ ಅಖಿಲಾಳನ್ನು ಹದಿಯಾ ಮಾಡಲಾಯಿತು?! ಹೇಗೆ, ಆಕೆಯ ಪತಿ ಶಫೀನ್ ಜಹಾನ್ ಐಸಿಸ್ ನಲ್ಲಿ ಭಾಗಿಯಾಗಿದ್ದನೆಂದು!

ಅಖಿಲಾಳನ್ನು ಹದಿಯಾಳನ್ನಾಗಿಸಿ ನಂತರ ಸಿರಿಯ ದಲ್ಲಿ ಐಸಿಸ್ ಗೆ ಮಾರಬೇಕೆಂದಿದ್ದ ಶಫೀನ್ ನ ಯೋಜನೆಯನ್ನು ಮೊದಲು ಹೊರಗೆಡವಿದ್ದು ಅಖಿಲಾಳ ತಂದೆ! ಮಗಳನ್ನು ಅಪಹರಿಸಲಾಗಿದೆ ಎಂದೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಅಖಿಲಾ ತಂದೆ ಮಗಳನ್ನು ವಾಪಾಸು ಕರೆಸಿಕೊಳ್ಳಲು ಮಾಡದ ಪ್ರಯತ್ನವೇ ಇರಲಿಲ್ಕ! ಇಡೀ ದೇಶವೇ ಒಮ್ಮೆ ಬೆಚ್ಚಿ ಬಿದ್ದಿತ್ತು!

ಇದರ ಜೊತೆ ಜೊತೆಗೇ, ಮದುವೆಯನ್ನು ಕಾನೂನು ಬದ್ಧಗೊಳಿಸುವಂತೆ ಶಪೀನ್ ಸರ್ವೋಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಸಹ, ನ್ಯಾಯಾಲಯ ತಿರಸ್ಕರಿಸಿತ್ತು! ಅದಲ್ಲದೇ, ಎನ್ ಐ ಎ ಲವ್ ಜಿಹಾದ್ ಬಗ್ಗೆ ಮತ್ತು, ಹೇಗೆ ಯುವತಿಯರನ್ನು ಐಸಿಸ್ ಗೆ ಮಾರಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಲ್ಕದೇ, ಪಿಎಫ್ ಐ ಮತ್ತು ಎಸ್ ಡಿ ಪಿಐ ಸಂಘಟನೆಗಳು ಐಸಿಸ್ ಸಂಘಟನೆಗಳಿಗೆ ಸಹಕರಿಸುತ್ತಿರುವ ಬಗ್ಗೆಯೂ ವರದಿ ನೀಡಿತ್ತು. ಅಖಿಲಾಳ ಪ್ರಕರಣ ಲವ್ ಜಿಹಾದ್ ಎಂದು ಧೃಢೀಕರಿಸಿದ್ದ ಎನ್ ಐ ಎ ಯ ಆಧಾರದ ಮೇಲೆ ಸುಪ್ರೀಂ ಅಖಿಲಾಳನ್ನು ಹೆತ್ತವರಿಗೊಪ್ಪಿಸಿತ್ತು ಸಹ!

ಇತ್ತೀಚೆಗೆ ನಡೆಸಿದ ತನಿಖೆಯಲ್ಲಿ ಅಖಿಲಾಳ ಪತಿ ಐಸಿಸ್ ಜೊತೆಗೆ ನಿಕಟ ಸಂಪರ್ಕದಲ್ಲಿದ್ದನೆಂಬುದು ಬಹಿರಂಗವಾಗಿದೆ! ಇದನ್ನು ಇನ್ಯಾರೀ ಹೇಳಿರುವುದಲ್ಲ, ಬದಲಿಗೆ ಸ್ವತಃ ಐಸಿಸ್ ಏಜೆಂಟರೇ ಒಪ್ಪಿಕೊಂಡಿರುವುದು! ಮನ್ಸೀದ್ ಮತ್ತು ಸಫ್ವಾನ್ ಎಂಬಿಬ್ಬರೇ ಒಪ್ಪಿಕೊಂಡಿದ್ದಾರಷ್ಟೇ! ಇವರಿಬ್ಬರ ಪ್ರಕಾರ, ಅಖಿಲಾಳನ್ನು ಬ್ರೈನ್ ವಾಷ್ ಮಾಡಿರುವವಳು ಎನ್ನಲಾಗಿರುವ ಸೈನಾಬಾ ಸಹ ಶಫೀನ್ ಅಖಿಲಾಳ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಐಸಿಸ್ ಅವರ ಜೊತೆ ಸಂಪರ್ಕದಲ್ಲಿದ್ದ ಎನ್ನುವುದನ್ನು ಒಪ್ಪಿಕೊಂಡಿದ್ದಾಗಿದೆ!

ಅದರಲ್ಲಿಯೂ, ಕೇರಳ ಹೈ ಕೋರ್ಟಿನಲ್ಲಿ waytonikah.com ನಲ್ಲಿ ಇಬ್ಬರೂ ಒಬ್ಬರೊಬ್ಬರ ಪ್ರೊಫೈಲ್ ನೋಡಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದ ಹದಿಯಾ ಮತ್ತು ಶಫೀನ್ ರು ಹೇಳಿದಂತೆ, ಅವರಿಬ್ಬರೂ ಪ್ರೊಫೈಲ್ ನೋಡಿದ ತಾರೀಕಿನಲ್ಲಿ ಅವರಿಬ್ಬರ ಪ್ರೊಫೈಲ್ ಗಳು ಇರಲೇ ಇಲ್ಲ!

ಇದನ್ನೇ ಹಿಡಿದ ಎನ್ ಐ ಎ ಪ್ರಕರಣ ನಡೆಸುತ್ತ ಹೋದಂತೆ, ಈ ಪ್ರಕರಣದಲ್ಲಿ ಐಸಿಸ್ ನ ಕೈಯ್ಯಿರುವುದು ಧೃಡಪಟ್ಟಿದೆ! ಅದಲ್ಲದೇ, ದೇಶಾದ್ಯಂತವೂ ಸಹ ಈ ತರಹದ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತಪಡಿಸಿದ್ದು, ಜೊತೆಗೆ ಕೆಲವು ರಾಜಕೀಯ ಪಕ್ಷಗಳು ಬೆಂಬಲ ನೀಡುತ್ತಿರುವುದೂ ಸಹ ಧೃಢಪಟ್ಟಿದೆ!

– ಪೃಥು ಅಗ್ನಿಹೋತ್ರಿ

Tags

Related Articles

Close