ಪ್ರಚಲಿತ

ಅಪ್ಪನನ್ನು ದತ್ತು ತೆಗೆದುಕೊಂಡವರು ಮಕ್ಕಳು ಹುಟ್ಟಿಸುವ ಬಗ್ಗೆ ಲೇವಡಿ ಮಾಡುವುದು ಎಷ್ಟು ಸರಿ?

ಪಾಪ ಅವರಿಗೆ ಅಪ್ಪನೇ ಇರಲಿಲ್ಲ.. ಯಾರನ್ನು ಅಪ್ಪ ಎಂದು ಕರೆಯಬೇಕೆಂದೂ ಗೊತ್ತಿರಲಿಲ್ಲ. ಇದೇ ಚಿಂತೆಯಲ್ಲಿ ಇರಬೇಕಾದರೆ ಎಲ್ಲಿಂದಲೋ ಒಬ್ಬ ಅಪ್ಪ ಬಂದ.. ಮಕ್ಕಳಿಗೆ ಖುಷಿಯೋ ಖುಷಿ. ಕೊನೆಗೂ ಒಬ್ಬ ಅಪ್ಪ ಸಿಕ್ಕಿದ ಎಂದು ಅವನನ್ನೇ ಮಕ್ಕಳೆಲ್ಲಾ ಅಪ್ಪ ಅಪ್ಪ ಎಂದು ಕರೆಯಲಾರಂಭಿಸಿದರು.

ಆ ಅಪ್ಪ ಬೇರ್ಯಾರೂ ಅಲ್ಲ… ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ…!!

ಹಾಗಾದರೆ ಅಪ್ಪ ಇಲ್ಲದೆ ಪರಿತಪಿಸುತ್ತಿದ್ದ ಮಕ್ಕಳ್ಯಾರು ಗೊತ್ತೇ… ಅವರೇ ಕರ್ನಾಟಕದ ಕಾಂಗ್ರೆಸಿಗರು…!!

ಈ ಮಾತನ್ನು ನಾನು ಸುಮ್ನೆ ಹೇಳಿದ್ದಲ್ಲ.. ಇದಕ್ಕೆ ಬಲವಾದ ಕಾರಣವೂ ಇದೆ.. ಯಾಕೆಂದರೆ ಕಾಂಗ್ರೆಸ್‍ನ ಮುಖಂಡ ವಿನಯ ಕುಲಕರ್ಣಿ ಏನೆಂದು ಹೇಳಿದ್ದಾರೆ
ಗೊತ್ತೇ? ಈ ಬಿಜೆಪಿಯವರಿಗೆ ಮಕ್ಕಳನ್ನು ಹಡೆಯಲು ಶಕ್ತಿಯಿಲ್ಲ. ಅದಕ್ಕಾಗಿಯೇ ಯಾರ್ಯಾರನ್ನೋ ದತ್ತು ತೆಗೆದುಕೊಳ್ಳುತ್ತಿದ್ದಾರೆ. ಪ್ರಮೋದ್ ಮಧ್ವರಾಜ್, ಡಿ.ಕೆ. ಶಿವಕುಮಾರ್ ಮುಂತಾದವರು ಬಿಜೆಪಿ ಬರುತ್ತಿದ್ದಾರೆ ಎಂದು ಸುಳ್ಳು ಸುದ್ದಿ, ಅವರೆಲ್ಲಾ ಪಕ್ಷಬಿಟ್ಟು ಹೋಗೋಲ್ಲ. ಮಕ್ಕಳನ್ನು ಹಡೆಯುವ ಶಕ್ತಿ ಇಲ್ಲದವರೇ ಹೀಗೆ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ.

ಇವರ ಆರೋಪವನ್ನು ನೋಡಿದಾಗ ಬಿಜೆಪಿಯವರು ಮಕ್ಕಳನ್ನು ದತ್ತು ಪಡೆದರೆ ಕಾಂಗ್ರೆಸಿಸ್ವತಃ ಅಪ್ಪನನ್ನೇ ದತ್ತು ತೆಗೆದುಕೊಂಡು ಬಿಟ್ಟರು.. ಯಾಕೆ ಗೊತ್ತೇ
ಜೆಡಿಎಸ್‍ನಲ್ಲಿದ್ದ ಸಿದ್ದರಾಮಯ್ಯನನ್ನು ಕಾಂಗ್ರೆಸಿಗೆ ಕರೆಸಿಕೊಂಡು ಅವರನ್ನೇ ಮುಖ್ಯಮಂತ್ರಿಯನ್ನಾಗಿಸಿದ ಕಾರಣ ಅವರನ್ನೇ ಅಪ್ಪ ಎಂದು ಕರೆಯುವ ದೌರ್ಭಾಗ್ಯ
ಬಂದು ಬಿಡ್ತು. ಯಾಕೆ ಕಾಂಗ್ರೆಸಿನಲ್ಲಿ ಬೇರೆ ಜನವೇ ಇರ್ಲಿಲ್ಲವೇ? ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ ಇವರನ್ನೇ
ಮುಖ್ಯಮಂತ್ರಿ ಮಾಡ್ಬಹುದಿತ್ತಲ್ವಾ? ಬಿಜೆಪಿಯವರು ಮಕ್ಕಳನ್ನು ದತ್ತುಪಡೆದುಕೊಳ್ಳುತ್ತಾರೆ ಎಂದು ಬೊಗಳುವ ವಿನಯ ಕುಲಕರ್ಣಿಗೆ ತಾನು ಅಪ್ಪನನ್ನೇ
ದತ್ತುತೆಗೆದುಕೊಂಡಿದ್ದೇವೆ ಎಂದು ಯಾಕೆ ಗೊತ್ತಾಗಲಿಲ್ಲ…?

ಕರ್ನಾಟಕದಲ್ಲಿ ಒಂದು ಜಿಲ್ಲೆಯ ಉಸ್ತುವಾರಿ ಸಚಿವನಾಗಿರುವ ವಿನಯ ಕುಲಕರ್ಣಿಗೆ ಅದೇನಾಗಿದೆಯೋ ಗೊತ್ತಿಲ್ಲ. ಈಗೀಗ ಬಾಯಿಗೆ ಬಂದಂತೆ ಮಾತಾಡುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ಹೋರಾಟ ನಡೆಸುತ್ತಾ ತಾನೊಬ್ಬ ರಾಜ್ಯದ ಸಚಿವನೆಂಬುವುದನ್ನೂ ಮರೆತಿದ್ದರು. ಇದೀಗ ಬಿಜೆಪಿಯವರಿಗೆ ಮಕ್ಕಳನ್ನು ಹೆಡೆಯಲು ಶಕ್ತಿಯಿಲ್ಲ ಎಂದು ಹೇಳುತ್ತಾ ತನ್ನ ಮೇಲೆ ತಾನೇ ಹೊಡೆಸಿಕೊಂಡಿದ್ದಾರೆ. ಆಕಾಶ ನೋಡಿ ಉಗುಳಿದರೆ ಅದು ಬೀಳುವುದು ತನಗೆಯೇ ಎಂದು ಅವರಿಗೆ ಗೊತ್ತಿಲ್ಲ.

ಇದೇ ಕುಲಕರ್ಣಿ ಒಮ್ಮೆ ಯಡಿಯೂರಪ್ಪ ಕೆಜೆಪಿಯಿಂದ ಬಂದವರು ಎಂದು ಹೇಳಿದ್ದರು. ಹಾಗಾದರೆ ಸಿದ್ದರಾಮಯ್ಯ ಎಲ್ಲಿಂದ ಬಂದವರು ಸ್ವಾಮಿ? ಮಕ್ಕಳನ್ನು ಹೆರುವ ಶಕ್ತಿಯಿಲ್ಲ ಎನ್ನುವ ವಿನಯ ಕುಲಕರ್ಣಿಗೆ ತಾನು ಸಲಾಂ ಹೊಡೆಯುವ ಸಿದ್ದರಾಮಯ್ಯ ಜೆಡಿಎಸ್ ಪಕ್ಷದವರೆಂದು ಗೊತ್ತಿದೆಯೋ? ಜೆಡಿಎಸ್ ವರಿಷ್ಠ ದೇವೇಗೌಡ್ರ ಜೊತೆ ಕಿರಿಕ್ ಮಾಡಿಕೊಂಡಿದ್ದ ಸಿದ್ದವನ್ನು ಹೇಗಾದ್ರೂ ಮಾಡಿ ಓಡಿಸಬೇಕೆಂದು ಗೌಡ್ರು ಕಾದು ಕುಳಿತಿದ್ದರು. ಕೊನೆಗೆ ಸಿದ್ದುವೇ ಜೆಡಿಎಸ್‍ಗೆ ನಮಸ್ಕಾರ ಹೊಡೆದು ನಿರುದ್ಯೋಗಿಯಂತೆ ಕುಳಿತಿದ್ದರು. ಬಿಜೆಪಿಗೆ ಹೋಗ್ಬೇಕೋ, ಕಾಂಗ್ರೆಸ್‍ಗೆ ಹೋಗ್ಬೇಕೋ ಎಂಬ ಪೀಕಲಾಟಕ್ಕೆ ಸಿಲುಕಿದ್ದ ಸಿದ್ದು ಕೊನೆಗೆ ಕಾಂಗ್ರೆಸ್‍ನಲ್ಲಿದ್ದ ಎಚ್. ವಿಶ್ವನಾಥ್ ಅವರ ಸಲಹೆಯಂತೆ ಕಾಂಗ್ರೆಸ್‍ಗೆ ವಕ್ಕರಿಸಿಬಿಟ್ಟರು. ಸಿದ್ದು ಯಾವಾಗ ಕಾಂಗ್ರೆಸ್‍ಗೆ ಬಂದ್ರೋ ಆವಾಗ್ಲೇ ಮೂಲಕಾಂಗ್ರೆಸಿಗರಿಗೆ ಸಿದ್ದುವನ್ನು ಆಹ್ವಾನಿಸಿದ್ದು ದೆವ್ವವನ್ನು ಆಹ್ವಾನಿಸಂದಾಯ್ತು. ಅಹಿಂದ ಧಮ್ಕಿ ಹಾಕಿ ಅಭ್ಯಾಸವಿದ್ದ ಸಿದ್ದುವನ್ನು ಸಂಬಾಳಿಸೋದು ಕಾಂಗ್ರೆಸಿಗರಿಗೆ ಬಾಯಿಗೆ ಹಾಕಿದ ಬಿಸಿತುಪ್ಪದಂತೆ ನುಂಗುವುದೋ ಉಗುಳುವುದೋ ಎಂಬ ಸಂದಿಗ್ಧ ಸ್ಥಿತಿಯಲ್ಲಿದ್ದರು. ಇಂದು ಇದೇ ಸಿದ್ದು ಕಾಂಗ್ರೆಸ್‍ನಲ್ಲಿ ಎಷ್ಟೊಂದು ಹೆಮ್ಮರವಾಗಿ ಬೆಳೆದಿದ್ದಾರೆಂದರೆ ಅಲ್ಲಿದ್ದ ಮೂಲ ಕಾಂಗ್ರೆಸಿಗರನ್ನೇ ಅವರು ಮೂಲೆಗುಂಪು ಮಾಡಿದ್ದಾರೆ. ಚುನಾವಣೆ ಬಂದಾಗ ಎಷ್ಟು ಮಂದಿ ಬೇರೆ ಪಕ್ಷಕ್ಕೆ ವಲಸೆ ಬರ್ತಾರೆ ಎಂದು ನೋಡ್ತಾ ಇರಿ.

ಕಾಂಗ್ರೆಸ್‍ಗೆ ವಕ್ಕರಿಸುತ್ತಿದ್ದಂತೆ ಸಿದ್ದು ಮಾಡಿದ ಮೊದಲ ಕೆಲಸ ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಪರಮೇಶ್ವರ ಮುಂತಾದವರನ್ನು ಸೈಡಿಗೆ ಹಾಕಿ ತಾನೇ
ಕಾಂಗ್ರೆಸ್‍ನ ವರಿಷ್ಠನಂತೆ ಬಿಂಬಿಸಿರುವುದು… ಕೊನೆಗೆ ಸೋನಿಯಾಳನ್ನು ಆಗಾಗ ಭೇಟಿಯಾಗಿ ದುಂಬಾಲು ಬಿದ್ದ ಕಾರಣ ಕೊನೆಗೆ ಸಿದ್ದುವೇ ಕರ್ನಾಟಕದ
ಮುಖ್ಯಮಂತ್ರಿಯೂ ಆದರು. ಸಿದ್ದುವನ್ನು ಆಹ್ವಾನಿಸಿದ್ದ ವಿಶ್ವನಾಥ್‍ಗೆ ಇವರನ್ನು ಯಾಕಾಗಿ ಆಹ್ವಾನಿಸಿದೆನೋ ಅನ್ನುವಂತಾಗಿತ್ತು. ಕೊನೆಗೆ ಸಿದ್ದುನಿಂದಾಗಿಯೇ ಅವರು ಪಕ್ಷವನ್ನೇ ತೊರೆಯಬೇಕಾಯಿತು. ಈ ಸಿದ್ದುವನ್ನು ಕಂಡ್ರೆ ಪರಮೇಶ್ವರನಿಗಂತೂ ಆಗುವುದೇ ಇಲ್ಲ. ಕಾಂಗ್ರೆಸ್‍ನಲ್ಲಿ ಭಿನ್ನಮತ ಯಾವಾಗ ಸ್ಫೋಟಗೊಳ್ಳಲಿದೆ ಎಂದು ಹೇಳಲಾಗುವುದಿಲ್ಲ. ಎಲ್ಲರೂ ಈಗ ಬಾಯಿಮುಚ್ಚಿಕೊಂಡು ಕೂತಿದ್ದಾರೆ. ಮುಂದೆಯೂ ತಾನೇ ಮುಖ್ಯಮಂತ್ರಿ ಎಂದು ಮೂಲಕಾಂಗ್ರೆಸಿಗರಿಗೆ ಶಾಖ್ ನೀಡಿರುವ ಸಿದ್ದು ಉಳಿದ ಮುಖಂಡರನ್ನು ಪೀಕಲಾಟಕ್ಕೆ ತಂದು ನಿಲ್ಲಿಸಿದ್ದಾರೆ. ಇಂದು ಪರಿಸ್ಥಿತಿ ಹೇಗಿದೆ ಎಂದರೆ ಮೂಲಕಾಂಗ್ರೆಸಿಗರೆಲ್ಲಾ ಪಕ್ಷಕ್ಕೆ ವಲಸೆ ಬಂದ ಸಿದ್ದುನ ಕಾಲು ಹಿಡಿಯುವ ಗತಿಗೆ ಬಂದು ತಲುಪಿದ್ದಾರೆ.

ಇಂದಿಗೂ ಎಷ್ಟೋ ಮಂದಿ ಕಾಂಗ್ರೆಸಿಗರಿಗೆ ಸಿದ್ದುವನ್ನು ಕಂಡರಾಗುವುದಿಲ್ಲ. ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡುವ ಎಲ್ಲಾ ಪ್ರಯತ್ನದಲ್ಲಿದ್ದಾರೆ . ಮುಂದಿನ ವರ್ಷ ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್ ಗೆಲ್ಲೋಲ್ಲ ಅಂತ ಕುಲಕರ್ಣಿಗೂ ಗೊತ್ತಿದೆ.. ಖರ್ಗೆಗೂ ಗೊತ್ತಿದೆ. ಇನ್ನೊಬ್ಬರಿಗೆ ಮಕ್ಕಳನ್ನು ಹೆಡೆಯುವ ಶಕ್ತಿಯಿಲ್ಲ ಎಂದು ನೀಚಮಟ್ಟದ ಹೇಳಿಕೆ ನೀಡುವ ಕುಲಕರ್ಣಿ ತಮ್ಮ ಪಕ್ಷದ ಮುಖ್ಯಮಂತ್ರಿಯ ಹಿನ್ನೆಲೆಯನ್ನು ತಿಳಿಯಬೇಕಿತ್ತು. ಅದಕ್ಕಿಂತ ಮುಖ್ಯವಾಗಿ ಇಟಲಿಯಮ್ಮನ ಕೈಕೆಳಗೆ ಗುಲಾಮರಂತೆ ಇದ್ದುಕೊಂಡಿರಲು ನಾಚಿಗೆಯಾಗುವುದಿಲ್ಲವೇ?

ಲಿಂಗಾಯತ ಪ್ರತ್ಯೇಕ ಧರ್ಮವಾಗಬೇಕೆಂದು ಎಂದು ಜನರನ್ನು ಒಡೆದು ಆಳುವ ನೀತಿ ಅನುಸರಿಕೊಂಡಿರುವ ವಿನಯ್ ಕುಲಕರ್ಣಿಯಂತಹಾ ನಾಯಕರಿಂದ ಏನು ನಿರೀಕ್ಷಿಸಲು ಸಾಧ್ಯವಿದೆ? ಪಕ್ಷದಿಂದ ಹೊರಹೋಗುವುದಾಗಿ ಹೇಳಿರುವ ಕಾಂಗ್ರೆಸ್ ಮುಖಂಡರ ಪರಿಸ್ಥಿತಿ ಹೇಗಿದೆ ಎಂದು ಕುಲಕರ್ಣಿಗೆ ಗೊತ್ತಿದೆಯಾ? ಕಾಂಗ್ರೆಸ್‍ನ ಗುಲಾಮಗಿರಿ, ಸಿದ್ದುನ ದರ್ಪದಿಂದ ಅನೇಕ ಮಂದಿ ಪಕ್ಷ ಬಿಡಲಿದ್ದಾರೆ. ಅದೇ ರೀತಿ ಡಿಕೆಶಿ, ಪ್ರಮೋದ್ ಮುಂತಾದವರು ಪಕ್ಷ ಬಿಡ್ತಾರೆ ಎಂಬ ಗಾಸಿಪ್ ಹಬ್ಬಿದೆ. ಸುಮ್‍ಸುಮ್ನೆ ಈ ಗಾಸಿಪ್ ಹಬ್ಬಲು ಸಾಧ್ಯವೇ? ಕುಲಕರ್ಣಿಗೆ ನಿಜವಾಗಿಯೂ ತಾಖತ್ ಇದ್ದರೆ ಕಾಂಗ್ರೆಸ್‍ನಿಂದ ಪಕ್ಷಾಂತರವಾಗುವವರನ್ನು ತಡೆಯಲಿ. ಆದರೆ ಅದು ಬಿಟ್ಟು ಬಿಜೆಪಿಗರಿಗೆ ಮಕ್ಕಳನ್ನು ಹಡೆಯುವ ಶಕ್ತಿಯಿಲ್ಲ ಎನ್ನುವಂತಹಾ ಹೇಳಿಕೆ ಯಾಕೆ ನೀಡಬೇಕು?

ವಿನಯ ಕುಲಕರ್ಣಿ ಈ ಹಿಂದೆಯೂ ಸಾಕಷ್ಟು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಇದಕ್ಕಿಂತ ನೀಚ ಮಟ್ಟದ ಹೇಳಿಕೆನ್ನು ಯಾರೂ ನಿರೀಕ್ಷಿಸಿರಲಿಲ್ಲ. ಇದು ಅವರ ಸಂಸ್ಕøತಿಯನ್ನು ತಿಳಿಸುತ್ತದೆ.

-ಚೇಕಿತಾನ

Tags

Related Articles

Close