ಪ್ರಚಲಿತ

ಅಮಿತ್ ಶಾ ಆಗಮಿಸುತ್ತಾರೆ ಎಂದ ಸುದ್ಧಿ ತಿಳಿದ ತಕ್ಷಣ ಬಿಜೆಪಿ, ಕಾಂಗ್ರೆಸ್ ಪಕ್ಷದ ನಾಯಕರಿಗೆ ನಡುಕವುಂಟಾಗಿದ್ದು ಯಾಕೆ ಗೊತ್ತಾ..?

ಅಮಿತ್ ಶಾ!!. ಈ ಹೆಸರನ್ನು ಕಂಡರೆ ಕಾಂಗ್ರೆಸ್ ನಾಯಕರಿಗೆ ಅದೇನೋ ಭಯ ಆರಂಭವಾಗುತ್ತದೆ. ಅವರೊಬ್ಬ ರಾಜಕೀಯ ಚಾಣಾಕ್ಯ ಎಂಬ ಬಿರುದು ಪಡೆದಿರುವ ವ್ಯಕ್ತಿ. ತನ್ನ ಚಾಣಾಕ್ಷತೆಯಿಂದಲೇ ಎಲ್ಲಾ ಚುನಾವಣೆಗಳನ್ನು ಗೆದ್ದು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಬುದ್ದಿವಂತ ನಾಯಕ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ ಅವರನ್ನು ಕಂಡರೆ ಕಾಂಗ್ರೆಸ್ ಸಹಿತ ಎಲ್ಲಾ ವಿರೋಧಿಗಳು ಗಡಗಡ ನಡುಗುತ್ತಾರೆ. ಅವರ ಸ್ಟಾಟರ್ಜಿಗಳನ್ನು ಕಂಡು ಬೆಚ್ಚಿ ಬೀಳುತ್ತಾರೆ. ಆದರೆ ಈವಾಗ ಕಾಂಗ್ರೆಸ್ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರೂ ಹೆದರುತ್ತಿದ್ದಾರೆ.

ರಾಜ್ಯಕ್ಕೆ ಬರುತ್ತಿದ್ದಾರೆ ಅಮಿತ್ ಶಾ…

ಗುಜರಾತ್ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ್ದೇ ತಡ, ತನ್ನ ಮುಂದಿನ ಚುನಾವಣೆಯ ದೃಷ್ಟಿ ನೆಟ್ಟಿದ್ದು ಕರ್ನಾಟಕದ ಮೇಲೆ. ಈ ಬಾರಿಯ ಕರ್ನಾಟಕದ
ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಮಾಲ್ ಮಾಡಲಿದ್ದಾರೆ ಎಂಬ ಸತ್ಯ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲದೇನಲ್ಲ. ಹೀಗಾಗಿಯೇ ಅಮಿತ್ ಶಾ ಎಂದರೆ ಕಾಂಗ್ರೆಸ್ ನಾಯಕರು ಗಡಗ ನಡುಗೋದು.

ನಾಳೆ ಭಾರತೀಯ ಜನತಾ ಪಕ್ಷದ ಚಾಣಾಕ್ಯ ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯದಲ್ಲಿ ಅಮಿತ್ ಶಾ ನಾಳೆ ಸಭೆಗಳ ಮೇಲೆ ಸಭೆ ನಡೆಸಲಿದ್ದಾರೆ. ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ಚುನಾವಣಾ ಸಮಿತಿಯೊಂದಿಗೆ ಸಭೆ ನಡೆಸಿ ಮುಂದಿನ ವಿಧಾನ ಸಭಾ ಚುನಾವಣೆಯ ಬಗ್ಗೆ ರೂಪುರೇಷೆಗಳನ್ನು ನಡೆಸಲಿದ್ದಾರೆ. ಈಗಾಗಲೇ ಅಮಿತ್ ಶಾ ಹಲವಾರು ಬಾರಿ ರಾಜ್ಯಕ್ಕೆ ಆಗಮಿಸಿ ಭಾರತೀಯ ಜನತಾ ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಎಲ್ಲಿ ಹೇಗೆ ಕೆಲಸ ಮಾಡಬೇಕು ಹಾಗೂ ಹೇಗೆ ಮುಂದಿನ ಚುನಾವಣೆಯನ್ನು ಎದುರಿಸಬೇಕು ಎಂಬ ಐಡಿಯಾವನ್ನು ಈಗಾಗಲೇ ಆರಂಭಿಸಿದ್ದಾರೆ.

ಮಾತ್ರವಲ್ಲದೆ ನಾಳೆ ಅಮಿತ್ ಶಾ ರಾಜ್ಯದ ಸಂಸದರೊಂದಿಗೂ ಸಭೆ ನಡೆಸಲಿದ್ದಾರೆ. ರಾಜ್ಯದ ಸಂಸದರೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಕೇಂದ್ರ ಸರಕಾರದ ಸಾಧನೆಯನ್ನು ಹೇಗೆ ಪ್ರಚುರಪಡಿಸುವುದು, ಈವರೆಗೆ ಯಾವ ರೀತಿ ಅದನ್ನು ಪ್ರಚಾರ ಮಾಡಿದ್ದೀರಿ ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮಾತ್ರವಲ್ಲದೆ ಈವರೆಗೆ ತಮ್ಮ ಕ್ಷೇತ್ರಗಳಲ್ಲಿ ಯಾವ ರೀತಿಯ ಕೆಲಸ ಕಾರ್ಯಗಳನ್ನು ಮಾಡಿದ್ದೀರಿ ಎಂಬ ಬಗ್ಗೆ ಮಾಹಿತಿ ನಪಡೆಯಲಿದ್ದಾರೆ. ಹಾಗೂ ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಯಾವ ರೀತಿ ಸ್ಟಾಟರ್ಜಿಗಳನ್ನು ಬಳಸಿಕೊಳ್ಳಬೇಕೆಂಬ ಮಾರ್ಗದರ್ಶನವನ್ನು ನೀಡಲಿದ್ದಾರೆ.

ಕಂಠಪಾಠ ಮಾಡಿಕೊಂಡಿದ್ದಾರೆ ಬಿಜೆಪಿ ನಾಯಕರು..!!!

ಇನ್ನು ರಾಜ್ಯಕ್ಕೆ ಅಮಿತ್ ಶಾ ಎಂಟ್ರಿ ಕೊಡುತ್ತಾರೆ ಎಂಬ ಮಾಹಿತಿ ತಿಳಿದೊಡನೆ ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕರು ತಾವು ಮಾಡಿರುವ ಸಾಧನೆಗಳನ್ನು ಕಂಠಪಾಠ ಮಾಡಿಕೊಂಡಿದ್ದಾರೆ. ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಗೈಯಲಿದ್ದಾರೆ. ಇದಕ್ಕಾಗಿಯೇ ನಾಯಕರು ತಮ್ಮ ಸಾಧನೆಗಳನ್ನು ಕಂಠಪಾಠ ಮಾಡಿಕೊಂಡು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಒಪ್ಪಿಸಲು ಸಿದ್ದರಾಗಿದ್ದಾರೆ.

ಟಾಸ್ಕ್ ಕೊಟ್ಟಿದ್ದರಂತೆ ಅಮಿತ್ ಶಾ…

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸುವ ಬಗ್ಗೆ ರಾಜ್ಯ ಭಾರತೀಯ ಜನತಾ ಪಕ್ಷದ ನಾಯಕ ವಾಮನಾಚಾರ್ಯ
ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು “ರಾಷ್ಟ್ರೀಯ ಅಧ್ಯಕ್ಷರು ಕಳೆದ ಬಾರಿ ಬಂದವರು ಕೆಲವು ಟಾಸ್ಕ್‍ಗಳನ್ನು ನೀಡಿ ಹೋಗಿದ್ದರು. ಆ ಟಾಸ್ಕ್‍ಗಳ ಬಗ್ಗೆ ನಾಳೆ ವರದಿ ಪಡೆಯಲಿದ್ದಾರೆ. ನಂತರ ಸಂಜೆ ಭಾರತೀಯ ಜನತಾ ಪಕ್ಷದ ರಾಜ್ಯ ಕೋರ್ ಕಮಿಟಿಯ ಸಭೆ ಇರುತ್ತದೆ. ಈ ಸಭೆಯನ್ನು ಮುಗಿಸಿ ದೆಹಲಿಗೆ ವಾಪಾಸ್ ಆಗಲಿದ್ದಾರೆ” ಎಂದು ರಾಜ್ಯ ಭಾರತೀಯ ಜನತಾ ಪಕ್ಷದ ವಕ್ತಾರ ವಾಮನಾಚಾರ್ಯ ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಬರಲಿರುವ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿನ ನಗರದ ಹೊರವಲಯದಲ್ಲಿರುವ ರೆಸಾರ್ಟ್‍ನಲ್ಲಿ ಸಭೆ ನಡೆಸಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಜ್ಯ ನಾಯಕರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಮೋರ್ಚಾಗಳ ಮುಖಂಡರು ಅಪೇಕ್ಷಿತರಾಗಿರುತ್ತಾರೆ. ಈ ವೇಳೆ ವಿವಿಧ ನಾಯಕರಿಗೆ ನೀಡಿದ್ದ ಜವಬ್ದಾರಿಗಳನ್ನು ಯಾವ ರೀತಿ ಆ ನಾಯಕರು ನಿರ್ವಹಿಸಿದ್ದಾರೆ ಎಂಬ ವರದಿಯನ್ನು ಅಮಿತ್ ಶಾ ಪಡೆಯಲಿದ್ದಾರೆ. ಮಾತ್ರವಲ್ಲದೆ ತಾನು ಕಳೆದ ಬಾರಿ ನೀಡಿರುವ ಜವಬ್ಧಾರಿಗಳನ್ನು ಯಾರು ನೆಟ್ಟಗೆ ಮಾಡಿಲ್ಲವೋ ಅವರಿಗೆ ತನ್ನ ಮಾತಿನ ಬಿಸಿಯನ್ನು ಮುಟ್ಟಿಸಲಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ಶುರುವಾಗಿದೆ ನಡುಕ..!!!

ಅಮಿತ್ ಶಾ ರಾಜ್ಯಕ್ಕೆ ಬರುತ್ತಾರೆಂದರೆ ಸಾಕು ಕಾಂಗ್ರೆಸ್ ನಾಯಕರಿಗೆ ನಡುಕ ಆರಂಭವಾಗುತ್ತದೆ. ಯಾರೂ ಪ್ರಶ್ನಿಸದಿದ್ದರೂ “ಅಮಿತ್ ಶಾ ಬಂದರೆ ನಮಗೇನೂ ಭಯವಿಲ್ಲ” ಎಂಬ ಹೇಳಿಕೆಯನ್ನು ನೀಡುತ್ತಾರೆ. ಪರೋಕ್ಷವಾಗಿ ಅಮಿತ್ ಶಾರನ್ನು ಕಂಡರೆ ಭಯ ಬೀಳುವ ರಾಜ್ಯ ಕಾಂಗ್ರೆಸ್ ನಾಯಕರು ಅವರು ಬರುತ್ತಾರೆಂದರೆ ನಮಗೇನೂ ಭಯವಿಲ್ಲ ಎಂಬ ಹೇಳಿಕೆಗಳನ್ನು ಕೊಡುತ್ತಾ ಬಂದಿದ್ದಾರೆ.

ಅಮಿತ್ ಶಾ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ನಂತರ ನಡೆಸಿದ ಎಲ್ಲಾ ಚುನಾವಣೆಗಳಲ್ಲೂ ಭಾರತೀಯ ಜನತಾ ಪಕ್ಷ ಭರ್ಜರಿ ಜಯವನ್ನು ದಾಖಲಿಸಿದೆ. ದೇಶ ಕಂಡು ಕೇಳರಿಯದಂತಹ ಇತಿಹಾಸವನ್ನು ನಿರ್ಮಾಣ ಮಾಡಿದೆ. ದೇಶದೆಲ್ಲೆಡೆ ಕೇಸರಿ ಅಲೆಗಳು ಬಾನೆತ್ತರಕ್ಕೆ ಜಿಗಿಯುತ್ತಿದೆ. ಅಮಿತ್ ಶಾ ನೇತೃತ್ವದ ಸುಮಾರು 19ಕ್ಕೂ ಅಧಿಕ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಅಮಿತ್ ಶಾ ಅಬ್ಬರಕ್ಕೆ ದೇಶ ಕಮಲವನ್ನು ಅಪ್ಪಿಕೊಂಡಿದೆ. ಮೋದಿ ಮೋಡಿ ಭಾರತದಲ್ಲಿ ಸಖತ್ತಾಗಿಯೇ ವರ್ಕೌಟ್ ಆಗುತ್ತಿದೆ. ಹೀಗಾಗಿಯೇ ಅಮಿತ್ ಶಾ ಕರ್ನಾಟಕಕ್ಕೆ ದೃಷ್ಟಿ ನೆಟ್ಟಿರುವುದು ಇಲ್ಲಿ ಕಾಂಗ್ರೆಸ್ ನಾಯಕರೂ ಭಯ ಪಡುವಂತಾಗಿದೆ.

ಒಟ್ಟಾರೆ ನಾಳೆಯ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಕರ್ನಾಟಕದ ಕಾಂಗ್ರೆಸ್ ಮಾತ್ರವಲ್ಲದೆ ಭಾರತೀಯ ಜನತಾ ಪಕ್ಷದ ನಾಯಕರಲ್ಲೂ ಭಯದ ವಾತಾವರಣ ಸೃಷ್ಟಿಯಾಗಿದೆ. ಆದರೆ ರಾಜ್ಯದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಅಮಿತ್ ಶಾ ಆಗಮನ ಮತ್ತಷ್ಟು ಶಕ್ತಿ ತುಂಬಿರೋದರಲ್ಲಿ ಅನುಮಾನವೇ ಇಲ್ಲ.

-ಸುನಿಲ್ ಪಣಪಿಲ

Tags

Related Articles

Close