ಪ್ರಚಲಿತ

ಅಮ್ಮಾ, ನೀವೂ ನಿಮ್ಮ ಮಗನನ್ನು ಕಳೆದುಕೊಂಡಿದ್ದೀರಲ್ವಾ? ನಮ್ಮ ಮಕ್ಕಳತ್ತನೂ ಸ್ವಲ್ಪ ನೋಡಿ… ಮುಖ್ಯಮಂತ್ರಿಯ ಪತ್ನಿಗೆ ಬಹಿರಂಗ ಪತ್ರ…

ಅಮ್ಮಾ ನಮಸ್ತೇ,

ಆರಂಭದಲ್ಲಿ ನೀವೇ ಧನ್ಯರು ಅಂದುಕೊಂಡಿದ್ದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷವೊಂದು ಅಧಿಕಾರಕ್ಕೆ ಬಂದು ಅದರಲ್ಲಿ ನಿಮ್ಮ ಪತಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪದವಿಗೇರಿ ಕುಳಿತುಬಿಟ್ಟಿದ್ದರು. ನಾವಂದುಕೊಂಡಿದ್ದೆವು ನೀವೇ ಪುಣ್ಯವಂತರು ಎಂದು. ಅಲ್ವಾ ಮತ್ತೆ. 7 ಕೋಟಿ ಕನ್ನಡಿಗರನ್ನು ಆಳುವ ದೊರೆ ನಿಮ್ಮ ಪತಿ ಎನ್ನುವ ಹೆಮ್ಮೆ ನಿಮಗಿರಲ್ವಾ. ಆದರೆ ಈ ಭಾವನೆ ಹೆಚ್ಚು ಸಮಯ ಉಳಿಯಲು ನಿಮ್ಮ ಪತಿ ಬಿಡಲೇ ಇಲ್ಲ.

ಅಮ್ಮಾ… ನಾವೂ ನಿಮ್ಮಂತೆ ಹಿಂದೂ ಧರ್ಮದಲ್ಲೇ ಜನಿಸಿದವರು. ಅದಕ್ಕಿಂತಲೂ ಹೆಚ್ಚಾಗಿ ನಾವೆಲ್ಲರೂ ಮನುಷ್ಯ ಜನ್ಮದಲ್ಲಿ ಜನಿಸಿದವರು. ನಮಗೆಲ್ಲರಿಗೂ ಒಂದು ಕುಟುಂಬ ಅನ್ನೋದು ಇದ್ದೇ ಇರುತ್ತದೆ. ನಾವೆಲ್ಲರೂ ನಮ್ಮ ಮಕ್ಕಳನ್ನು ಚೆನ್ನಾಗಿಯೇ ಇರಬೇಕೆಂದು ನೋಡಿಕೊಳ್ಳುತ್ತೇವೆ. ಹಾ… ಒಬ್ಬ ರಾಜ್ಯದ ದೊರೆಯಾದವನಿಗೆ ರಾಜ್ಯದ ಎಲ್ಲಾ ಪ್ರಜೆಗಳೂ ತನ್ನ ಮಕ್ಕಳಂತೆ ಅನ್ನವುದೂ ಅಷ್ಟೇ ಸತ್ಯ. ಮಾತ್ರವಲ್ಲದೆ ಅವರ ಹಿತ ಕಾಯುವುದೂ ಅವರ ಕರ್ತವ್ಯವಾಗಿದೆ. ಆದರೆ ನಿಮ್ಮ ಪತಿ ಸಿದ್ದರಾಮಯ್ಯನವರು ರಾಜ್ಯದ ಓರ್ವ ಜವಬ್ಧಾರಿಯುತ ಮುಖ್ಯಮಂತ್ರಿಯಾಗಿ ಏನು ಮಾಡುತ್ತಿದ್ದಾರೆ?

“ಪುತ್ರಶೋಕಂ ಚಿರoತನಂ” ಎನ್ನುವ ಮಾತೂ ತುಂಬಾನೇ ಅರ್ಥಪೂರ್ಣವಾಗಿದೆ. ಈ ಪದದ ಅರ್ಥ ನಿಮಗೂ ಗೊತ್ತಿರಬಹುದು ಎಂದು ಭಾವಿಸುತ್ತೇನೆ. ಯಾಕೆಂದರೆ ವರ್ಷದ ಹಿಂದೆ ನೀವೂ ನಿಮ್ಮ ಓರ್ವ ಮಗನನ್ನು ಕಳೆದುಕೊಂಡಿದ್ದೀರಿ. ವಿದೇಶದಲ್ಲಿ ನಿಮ್ಮ ಮಗನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆ ದೇವರು ನಿಮ್ಮಿಂದ ನಿಮ್ಮ ಮಗನನ್ನು ಕಿತ್ತುಕೊಂಡುಬಿಟ್ಟಿದ್ದ. ಅದರಲ್ಲಿ ನೀವು ಯಾವ ರೀತಿಯ ಸಂಕಷ್ಟವನ್ನು ಅನುಭವಿಸಿದ್ದೀರಿ ಎಂಬ ನೋವು ನಮಗೂ ತಿಳಿದಿದೆ. ನೀವು ಮಾತ್ರವಲ್ಲ. ನಿಮ್ಮ ಪತಿ ಸಿದ್ದರಾಮಯ್ಯನವರೂ ಯಾವ ರೀತಿಯ ನೋವನ್ನು ಅನುಭವಿಸಿದ್ದಾರೆ ಎನ್ನುವ ಅರ್ಥ ನಮಗೂ ಇದೆ. ಅದು ಎಂದಿಗೂ ಮುಗಿಯಲಾರದ, ಮರೆಯಲಾಗದ ನೋವು.

ಆದರೆ ಮುಖ್ಯಮಂತ್ರಿಗಳು ಈಗ ಮಾಡುತ್ತಿರುವುದಾದರೂ ಏನು? ರಾಜ್ಯದಲ್ಲಿ ಅದೆಷ್ಟೋ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತಾ ಇದೆ. ಅದೆಷ್ಟೋ ತಾಯಂದಿರು ತಮ್ಮ ಕುಟುಂಬಕ್ಕೆ ಆಧಾರವಾಗಿದ್ದ ಮಕ್ಕಳನ್ನೇ ಕಳೆದುಕೊಂಡಿದ್ದಾರೆ. ನಿಮಗಾದರೂ ಇನ್ನೊಬ್ಬ ಮಗನಿದ್ದಾನೆ. ಮಾತ್ರವಲ್ಲದೆ ಸಿದ್ದರಾಮಯ್ಯ ಮಾಡಿಟ್ಟ ಕೋಟಿಗಟ್ಟಲೆ ಆಸ್ತಿಗಳು ಇರಬಹುದು. ಆದರೆ ಆ ಪಾಪದ ಕುಟುಂಬಗಳು ಏನು ಮಾಡೋದು? ಮಂಗಳೂರಿನ ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಎನ್ನುವ ಹಿಂದೂ ಸಂಘಟನೆಯ ಕಾರ್ಯಕರ್ತನನ್ನು ಬೆಳ್ಳಂಬೆಳಗ್ಗೆಯೇ ಹತ್ಯೆಗೈಯಲಾಗಿತ್ತು. ಆದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏನಂದ್ರು? ಸತ್ತವನು ಗೂಂಡಾ ಅಂತ ಹೇಳಿದರು. ಮಾತ್ರವಲ್ಲದೆ ಮೃತನಾದ ಆ ಪಾಪದ ಕುಟುಂಬಕ್ಕೆ ನಯಾ ಪೈಸೆಯ ಪರಿಹಾರವನ್ನೂ ನೀಡಲಿಲ್ಲ. ಅದೇ ಪರಿಸ್ಥಿತಿಯಲ್ಲಿ ನಿಮ್ಮ ಮಗನಿರುತ್ತಿದ್ದರೆ?

ನಂತರ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ರುದ್ರೇಶ್, ಮೈಸೂರಿನಲ್ಲಿ ಕುಟ್ಟಪ್ಪ, ರಾಜು, ಶರತ್ ಮಡಿವಾಳ, ಪ್ರವೀಣ್ ಪೂಜಾರಿ ಸಹಿತ ಮೊನ್ನೆ ಸುರತ್ಕಲ್‍ನಲ್ಲಿ ನಡೆದ ದೀಪಕ್ ರಾವ್ ಹತ್ಯೆಯವರೆಗೂ 24 ಕೊಲೆಗಳನ್ನು ಈ ರಾಜ್ಯದ ಮುಸ್ಲಿಂ ಉಗ್ರರು ಮಾಡಿದ್ದರು. ಆದರೆ ನಿಮ್ಮ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ರೀತಿ ಕ್ರಮಗಳನ್ನು ಕೈಗೊಂಡಿದ್ದಾರೆ? ಯಾವುದೋ ಒಂದು ಕಡೆಯಲ್ಲಿ ಇಂತಹ ಪ್ರಕರಣಗಳು ನಡೆಯಿತು ಎಂದು ಬಾಯಿ ಮುಚ್ಚಿ ಕುಳಿತು ಮುಸಲ್ಮಾನರ ಓಟುಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರಲ್ಲಾ ಇದಕ್ಕೆ ನೀವೂ ಒರ್ವ ಮಗನ ತಾಯಿಯಾಗಿ ಏನು ಹೇಳುತ್ತೀರಿ?

ಅಧಿಕಾರಕ್ಕೆ ಬಂದಕೂಡಲೇ ಮುಸಲ್ಮಾನರ ಮೇಲಿದ್ದ ಎಲ್ಲಾ ಪ್ರಕರಣಗಳನ್ನು ವಾಪಾಸ್ ತೆಗೆದುಕೊಂಡು ಬಿಟ್ಟಿದ್ದರು. ಪಾಪಿಗಳು ರಾಜಾ ರೋಷವಾಗಿ ತಿರುಗಾಡಲು ಆರಂಭಿಸಿದರು. ಕೊಲೆಗಳಂತಹ ಪಾಪದ ಕೆಲಸಗಳನ್ನು ಮಾಡಲು ಶುರು ಮಾಡಿದರು. ಈ ಎಲ್ಲಾ ಭಯೋತ್ಪಾದನಾ ಚಟುವಟಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲ ಇದೆ ಎಂಬ ಒಂದೇ ಒಂದು ನಂಬಿಕೆ ಅವರ ಅಹಂಕಾರವರನ್ನು ಮತ್ತಷ್ಟು ಕುಕೃತ್ಯಗಳನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದವು. ಎಷ್ಟೇ ಪ್ರತಿಭಟನೆಗಳೂ ನಡೆದರೂ ಮುಖ್ಯಮಂತ್ರಿಗಳು ಮಾತ್ರ ಮುಸಲ್ಮಾನರ ಓಲೈಕೆ ಮಾತ್ರ ಬಿಡಲೇ ಇಲ್ಲ. ಒಂದರ ಮೇಲೆ ಒಂದರಂತೆ ಕೊಲೆಗಳು ನಡೆಯುತ್ತಲೇ ಹೋದವು. ರಾಜ್ಯ ಅಕ್ಷರಷಃ ಉಗ್ರರ ತವರೂರು ಆಗಿ ಹೋಗಿತ್ತು. ಈ ಎಲ್ಲಾ ಚಟುವಟಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಕಾರಣರದರು.

ಇದನ್ನೆಲ್ಲಾ ತಡೆದು ರಾಮ ರಾಜ್ಯ ನಿರ್ಮಾಣ ಮಾಡಬೇಕಾಗಿದ್ದ ಅದೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸಲ್ಮಾನರಿಗೆ ಬೆಂಬಲ ನೀಡಿ ರಾಜ್ಯದಲ್ಲಿ ಮತ್ತಷ್ಟು ತಾಯಂದಿರು ಕಣ್ಣೀರಿಡುವಂತೆ ಮಾಡಿದರು. ಯಾವೊಬ್ಬ ಹಂತಕನಿಗೂ ಕಠಿಣ ಶಿಕ್ಷೆಯನ್ನು ನೀಡದೆ ಅವರನ್ನು ಆರಾಮಾಗಿ ಹೊರಗೆ ಓಡಾಡಲು ಅವಕಾಶ ಮಾಡಿಕೊಟ್ಟು ಅವರನ್ನು ಮತ್ತಷ್ಟು ಕೊಲೆಗಳು ಮಾಡುವಂತೆ ಪ್ರೋತ್ಸಾಹಿಸಿದರು. ಪರಿಣಾಮ ಒಂದೊಂದೇ ಹಿಂದೂ ಕಾರ್ಯಕರ್ತರ ತಲೆಗಳು ಉರುಳಲು ತೊಡಗಿತು.

ಅಮ್ಮಾ.., ನೀವೂ ಓರ್ವ ದೈವ ಭಕ್ತರು ಅಂತ ಅಂದು ಕೊಂಡಿದ್ದೇನೆ. ನಿಮ್ಮ ಹೆಸರಿನಲ್ಲೇ ದೇವತೆಯರು ಇದ್ದಾರೆ. ಆದರೆ ನಿಮ್ಮ ಪತಿ ಸಿದ್ದರಾಮಯ್ಯನವರು ದೇವಸ್ಥಾನಗಳನ್ನು ಯಾವ ರೀತಿ ನೋಡಿಕೊಂಡಿದ್ದಾರೆ ಎಂಬ ಮಾಹಿತಿ ನಿಮಗೆ ಇರಲೇ ಬೇಕಲ್ಲವೇ. ದೇವಸ್ಥಾನದಿಂದ ಬಂದ ಹಣಗಳನ್ನು ಪಾಪದ ಕೃತ್ಯಗಳಿಗೆ ನೀಡಿ ದೇವಸ್ಥಾನಗಳನ್ನು ಅನಾಥವಾಗಿ ಮಾಡಿದ ಕೀರ್ತಿ ಈ ರಾಜ್ಯದಲ್ಲಿ ಇದ್ದರೆ ಅದು ನಿಮ್ಮ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ.

ಪಿಎಫ್‍ಐ, ಕೆಎಫ್‍ಡಿ ಎಂಬ ಮುಸಲ್ಮಾನ ಸಂಘಟನೆಗಳು ಈ ರಾಜ್ಯದಲ್ಲಿ ಹಿಂದೂಗಳ ಹತ್ಯೆಗಳನ್ನು ನಡೆಸುತ್ತಿದ್ದಾರೆ. ಅವುಗಳನ್ನೆಲ್ಲಾ ನಿಷೇಧಿಸಿ ನಮ್ಮನ್ನು ಬದುಕಲು ಬಿಡಿ ಎಂದು ಲಕ್ಷಾಂತರ ಹಿಂದೂಗಳು ಬೀದಿಗೆ ಬಂದು ಬೇಡಿಕೊಂಡರು. ಆದರೆ ಮುಖ್ಯಮಂತ್ರಿಗಳು ಮಾತ್ರ ತಮ್ಮ ಹಠವನ್ನು ಬಿಡಲೇ ಇಲ್ಲ. ನಾವ್ಯಾಕೆ ನಿಷೇಧ ಮಾಡಬೇಕು ಎಂಬ ಹೇಳಿಕೆಯಿಂದ ಉದ್ಧಟತನ ಮೆರೆದಿದ್ದರು. ಬದಲಾಗಿ ಈ ರಾಜ್ಯದಲ್ಲಿ ದೇಶಭಕ್ತಿಯ ಕೆಲಸಗಳನ್ನು ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಇತರೆ ಹಿಂದೂ ಸಂಘಟನೆಗಳನ್ನು ನಿಷೇಧ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂಬ ಹೇಳಿಕೆಯನ್ನು ನೀಡಿದ್ದರು.

ಅಮ್ಮಾ… ನಿಮ್ಮನ್ನು ನೋಯಿಸುವ ಉದ್ದೇಶದಿಂದ ಖಂಡಿತಾ ಈ ಪತ್ರವನ್ನು ನಿಮಗೆ ನಾನು ಬರೆಯುತ್ತಿಲ್ಲ. ಹಲವಾರು ತಾಯಂದಿರ ನೋವುಗಳು ಈ ಪತ್ರದಲ್ಲಿ ಅಡಕವಾಗಿದೆ. ಅದೆಷ್ಟೋ ತಾಯಂದಿರ ಕಣ್ಣೀರಿನ ಶಾಪ ನಿಮ್ಮ ಕುಟುಂಬವನ್ನೂ ಸುಡಬಹುದು ಎಂಬ ಎಚ್ಚರಿಕೆಯನ್ನೂ ಈ ಪತ್ರದ ಮೂಲಕ ನೀಡುತ್ತಿದ್ದೇನೆ.

ಅದೋ ನೋಡಿ. ಚುನಾವಣೆ ಹತ್ತಿರ ಬಂತು. ಸಿದ್ದರಾಮಯ್ಯ ಮತ್ತೆ ಟೊಂಕ ಕಟ್ಟಿ ಚುನಾವಣೆಯನ್ನು ಎದುರಿಸಲು ನಿಂತಿದ್ದಾರೆ. ಮಕ್ಕಳನ್ನು ಕಳೆದುಕೊಂಡ
ತಾಯಂದಿರು ಅವರನ್ನು ಈ ಬಾರಿ ಖಂಡಿತ ನಿಮ್ಮ ಪಕ್ಕದಲ್ಲೇ ಕೂರುವಂತೆ ಮಾಡುತ್ತಾರೆ. ದಯವಿಟ್ಟು ಇನ್ನಾದರೂ ಉಗ್ರರನ್ನು ಕಠಿಣವಾಗಿ ಶಿಕ್ಷಿಸಿಮಕ್ಕಳನ್ನು ಕಳೆದುಕೊಂಡವರಿಗೆ ನ್ಯಾಯ ದೊರಕಿಸಲು ಹೇಳಿ…

ಧನ್ಯವಾದ!

Tags

Related Articles

Close