ಪ್ರಚಲಿತ

ಅವರಂತಹ ಅಧಿಕಾರಿ ಇದ್ದರೆ ದೇಶಕ್ಕೆ ಹೆಮ್ಮೆ!! ಕರ್ನಾಟಕದ ಮಹಿಳೆಯನ್ನು ಹಾಡಿ ಹೊಗಳಿದ ಮೋದಿ!! ಯಾರೀ ಪುಣ್ಯಾತಿಗಿತ್ತಿ?!

ಪ್ರಧಾನಿ ನರೇಂದ್ರ ಮೋದಿ ಎಂದರೆ ಸಾಕು ಇಡೀ ದೇಶ ವಿದೇಶವೇ ಅವರನ್ನು ಹಾಡಿ ಕೊಂಡಾಡುತ್ತದೆ.. ಅಂತಹವರ ಬಾಯಿಯಲ್ಲಿ ಕರ್ನಾಟಕದ ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಹಾಡಿ ಕೊಂಡಾಡಿದ ಪರಿ ಕೇಳಿದರೆ ನಿಜವಾಗಿಯೂ ಇವರ ಬಗ್ಗೆ ಇಡೀ ಭಾರತವೇ ಹೆಮ್ಮ ಪಡುವಂತಹ ವಿಷಯ..!!

ರಾಜ್ಯದಲ್ಲಿ ಕೆಲ ಭ್ರಷ್ಟ ಅಧಿಕಾರಿಗಳಿಂದ ತುಂಬಿ ತುಳುಕುತ್ತಿರ ಬೇಕಾದರೆ ಇಂತಹವರ ಮಧ್ಯೆ ಇಂತಹ ಮಧ್ಯೆ ಇಂತಹ ನಿಷ್ಠಾವಂತ ಅಧಿಕಾರಿಗಳು ಇದ್ದಾರಾ ಎಂದು ಆಶ್ಚರ್ಯವಾಗುತ್ತದೆ. ಕೆಲ ಅಧಿಕಾರಿ ತಮ್ಮ ಕರ್ತವ್ಯನ್ನೂ ಮೀರಿ ತನ್ನ ಕೆಲಸವನ್ನು ನಿರ್ವಹಿಸುತ್ತಾರೆ.. ಪ್ರಧಾನಿ ನರೇಂದ್ರ ಮೋದಿ ಅವರು ಗಣ್ಯರ ಸಭೆಯೊಂದರಲ್ಲಿ ಕರ್ನಾಟಕದ ಐಎಎಸ್ ಮಹಿಳಾ ಅಧಿಕಾರಿಯೊಬ್ಬರನ್ನು ಹಾಡಿ ಹೊಗಳಿದ್ದು, ಇವರು ಎಲ್ಲಾ ಅಧಿಕಾರಿಗಳಿಗೂ ಮಾದರಿ ಎಂದು ಹೇಳಿದ್ದಾರೆ. ಹಾಗಾದರೆ ಪ್ರಧಾನಿ ಮೋದಿ ಅವರು ಮೆಚ್ಚಿದ ಆ ಕನ್ನಡತಿ ಯಾರು ಗೊತ್ತಾ? ಕರ್ನಾಟಕದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ!

ಪ್ರಧಾನಿ ಮೋದಿವರೆಗೂ ತಲುಪಿದ ರತ್ನಪ್ರಭಾ ಟ್ವೀಟ್!

ಸುಮಾರು 25 ವರ್ಷಗಳ ಹಿಂದೆ ರತ್ನಪ್ರಭಾ ಅವರು ರಾಯಚೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ ದಾರಿಯಲ್ಲಿ ಒಬ್ಬ ಹುಡುಗ ಕುರಿ ಮೇಯಿಸುತ್ತಿದ್ದನಂತೆ. ಅದನ್ನು ಕಂಡು ರತ್ನಪ್ರಭಾ ಅವರು ಕಾರನ್ನು ನಿಲ್ಲಿಸಿ, ಸಮೀಪದಲ್ಲೇ ಇದ್ದ ಶಾಲೆಯ ಶಿಕ್ಷಕರನ್ನು ಕರೆದು ಈ ಹುಡುಗನನ್ನು ಶಾಲೆಗೆ ಸೇರಿಸಿಕೊಳ್ಳಿ ಎಂದು ಹೇಳಿದ್ದರಂತೆ!!


ಇದ್ದಕ್ಕಿದ್ದಂತೆ ಇತ್ತೀಚೆಗೆ ಒಂದು ದಿನ ನರಸಪ್ಪ(27ವರ್ಷ) ಎಂಬ ಪೆÇಲೀಸ್ ಕಾನ್ಸ್‍ಟೇಬಲ್ ವಿಧಾನಸೌಧದಲ್ಲಿರುವ ರತ್ನ ಪ್ರಭ ಅವರ ಕಚೇರಿಗೆ ಬಂದು ಸೆಲ್ಯೂಟ್ ಹೊಡೆದು, ಅಮ್ಮ ನೀವು ಅಂದು ಕುರಿಗಾಹಿಯಾಗಿದ್ದ ನನ್ನ ಶಾಲೆಗೆ ಸೇರಿಸಿದ್ದರಿಂದಲೇ ಇಂದು ನಾನು ಕಾನ್ಸ್ ಟೇಬಲ್ ಆಗಿದ್ದೇನೆ ಎಂದು ಕಥೆ ಹೇಳಿದ್ದನಂತೆ.. ಅವರಿಗೆ ನಿಜಕ್ಕೂ ನಂಬಲಿಕ್ಕೆ ಆಗಿಲ್ಲವಂತೆ.. ಸಣ್ಣ ಉಪಕಾರವೂ ಹೇಗೆ ಉತ್ತಮ ಪರಿಣಾಮ ಬೀರುತ್ತೆ ಎಂಬುದಕ್ಕೆ ಇದು ಸಾಕ್ಷಿ ಎಂದು ಟ್ವೀಟ್ ಮಾಡಿದ್ದರು.

ಇದೇ ವಿಷಯವನ್ನು ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಟ್ವೀಟ್ ಮಾಡಿದ್ದರು, ಈ ಟ್ವೀಟ್ ಪ್ರಧಾನಿ ನರೇಂದ್ರ ಮೋದಿವರೆಗೂ ತಲುಪಿತ್ತು!

ಈ ವಿಷಯ ತಿಳಿಯುತ್ತಿದ್ದಂತೆಯೇ ಟ್ಟೀಟ್ ಮಾಡುತ್ತಾರೆ.. ಈ ಟ್ವೀಟ್‍ನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿಯವರು ಈ ನಿಷ್ಟಾವಂತ ಅಧಿಕಾರಿ ರತ್ನ ಪ್ರಭು ಅವರನ್ನು ಹಾಡಿ ಕೊಂಡಾಡುತ್ತಾರೆ.. ಇಂತಹ ನಿಷ್ಟಾವಂತ ಅಧಿಕಾರಿಗಳು ಇರುವರೆಗೆ ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬಹುದು.. ಎಂದು ಈಕೆಯ ಬಗ್ಗೆ ಶ್ಲಾಘನೆಯನೆ ಮಾತನ್ನು ಆಡುತ್ತಾರೆ.

ಶಾಲೆಗೆ ಹೋಗ ಬೇಕಾಗಿದ್ದ ಕೆಲ ಮಕ್ಕಳು ಬಾಲ ಕಾರ್ಮಿಕ ಪದ್ಧತಿಗೆ ಒಳಗಾಗಿರುವ ಉದಾಹರಣೆಗಳು ಅದೆಷ್ಟೋ!! 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉದ್ಯೋಗಕ್ಕೆ ಸೇರುವಂತಿಲ್ಲ. ಬಾಲ ದುಡಿಮೆಯ ಹೀನ ರೂಪಗಳಿಗೆ ಸಂಬಂಧಿಸಿದೆ 182ನೇ ನಿರ್ಣಯ. ಜೀತ, ಸಶಸ್ತ್ರ ಸಂಘರ್ಷ, ವೇಶ್ಯಾವಾಟಿಕೆ, ಪೆÇೀರ್ನೊಗ್ರಫಿ, ಮಾದಕವಸ್ತು ಅಕ್ರಮ ಸಾಗಣೆಗಳಲ್ಲಿ ಮಕ್ಕಳ ಬಳಕೆ ಸೇರಿದಂತೆ ಯಾವುದೇ ಅಪಾಯಕಾರಿ ಕೆಲಸಗಳಲ್ಲಿ ಬಾಲ ದುಡಿಮೆ ನಿಷೇಧಕ್ಕೆ ಈ 182ನೇ ನಿರ್ಣಯ ಕರೆ ನೀಡುತ್ತದೆ.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಕ್ಕೆ ಈಗಾಗಲೇ ಭಾರತ ಹಲವು ಬಗೆಯ ಕ್ರಮಗಳನ್ನು ಕೈಗೊಂಡಿದೆ. ಕಳೆದ ವರ್ಷವಷ್ಟೇ? ರಾಷ್ಟ್ರದಲ್ಲಿ ಬಾಲ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986ಕ್ಕೆ ತರಲಾದ ತಿದ್ದುಪಡಿ ಪ್ರಕಾರ, 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗದಲ್ಲಿ ತೊಡಗುವುದಕ್ಕೆ ನಿಷೇಧವಿದೆ. ಜೊತೆಗೆ 14ರಿಂದ 18 ವರ್ಷದ ಹದಿಹರೆಯದವರನ್ನು ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದಕ್ಕೂ ನಿಷೇಧವಿದೆ. ಆದರೆ ಕುಟುಂಬದ ಕೆಲಸಕಾರ್ಯಗಳು ಹಾಗೂ ಮನರಂಜನಾ ಉದ್ಯಮಗಳಲ್ಲಿ ಶಾಲಾ ಅವಧಿ ನಂತರ ಮಕ್ಕಳು ತೊಡಗಿಕೊಳ್ಳಲು ಈ ಕಾನೂನಿನಲ್ಲಿ ಅವಕಾಶ ಕಲ್ಪಿಸಿದ್ದು ಟೀಕೆಗಳಿಗೆ ಗುರಿಯಾಗಿತ್ತು.

ಈಗ, ಐಎಲ್‍ಓ ನಿರ್ಣಯಗಳಿಗೆ ಅನುಮೋದನೆ ನೀಡಿದ ರಾಷ್ಟ್ರಗಳು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆ ನಿರ್ಣಯಗಳಿಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿಯ ಬಗ್ಗೆ ವರದಿ ನೀಡಬೇಕಾಗುತ್ತದೆ. ಹೀಗಾಗಿ ಬಾಲ ಕಾರ್ಮಿಕ ಪದ್ಧತಿಯ ಪೂರ್ಣ ನಿಷೇಧದತ್ತ ಸಾಗುವತ್ತ ಇದು ಸಕಾರಾತ್ಮಕ ಹೆಜ್ಜೆಯಾಗಿರುವುದರಿಂದ ಪ್ರತೀ ಜಿಲ್ಲೆ, ಊರುಗಳಲ್ಲಿಯೂ ಇಂತಹ ದಕ್ಷ ಅಧಿಕಾರಿ ಒಬ್ಬರು ಇದ್ದರೆ ಸಾಕು ನಿಜವಾಗಿಯೂ ಅಭಿವೃದ್ಧಿಯ ಪತದತ್ತ ಸಾಗುತ್ತದೆ ಎಂಬುವುದಕ್ಕೆ ಬೇರೆ ಮಾತಿಲ್ಲ…

ಭಾರತದಲ್ಲಿ ಪ್ರತಿ 11 ಮಕ್ಕಳ ಪೈಕಿ ಒಂದು ಮಗು ಬಾಲಕಾರ್ಮಿಕನಾಗಿರುತ್ತದೆ. ಅಷ್ಟೇ ಅಲ್ಲ, 2001ರಿಂದ 2011ರವರೆಗಿನ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಬಾಲ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂಬುದನ್ನೂ ಅಂಕಿಅಂಶಗಳು ನಾವು ಗಮನಿಸಬಹುದು… ಗ್ರಾಮೀಣ ಪ್ರದೇಶದಿಂದ ನಗರಕ್ಕೆ ವಲಸೆ ಬರುತ್ತಿರುವ ಕಾರ್ಮಿಕರ ಮಕ್ಕಳು ದುಡಿಮೆಗೆ ತೊಡಗಿಕೊಳ್ಳುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ಕೈಗೊಂಡರೂ ಬಾಲ ದುಡಿಮೆ ರಾಷ್ಟ್ರದಲ್ಲಿ ಮುಂದುವರಿಯುತ್ತಲೇ ಇರುವುದು ವಿಷಾದನೀಯ.

ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕವನ್ನು ಬಾಲ ಕಾರ್ಮಿಕ ಮುಕ್ತ ರಾಜ್ಯವಾಗಿಸಲಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಾಲ ಕಾರ್ಮಿಕ ಪದ್ಧತಿಯ ಸಮಸ್ಯೆಯೇ ಸಂಕೀರ್ಣ. ಆದರೆ ಇದರ ನಿರ್ಮೂಲನೆಗೆ ಪ್ರಬಲ ಇಚ್ಛಾಶಕ್ತಿ ಹಾಗೂ ಬದ್ಧತೆ ಅಗತ್ಯ. ಹಲವು ನೆಲೆಗಳಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಕಠಿಣ ಕಾನೂನು ಕ್ರಮಗಳನ್ನು ಜರುಗಿಸುವುದಲ್ಲದೆ ಸಾಮಾಜಿಕ ನೆಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವುದೂ ಸಾಧ್ಯವಾಗಬೇಕು. ಬಡತನ, ಅನಕ್ಷರತೆಯಲ್ಲದೆ ಅಭಿವೃದ್ಧಿಶೀಲ ಸಮಾಜದಲ್ಲಿ ಸಾಮಾನ್ಯವಾಗುತ್ತಿರುವ ವಲಸೆ, ಸ್ಥಳಾಂತರಗಳಿಂದ ಸೃಷ್ಟಿಯಾಗುವ ಅಸಹಾಯಕತೆ ಕಾರಣಕ್ಕೆ ಹೆಚ್ಚುತ್ತಿರುವ ಆಧುನಿಕ ಜೀತ, ಮಕ್ಕಳ ಅಕ್ರಮ ಸಾಗಣೆಗಳನ್ನು ನಿರ್ಬಂಧಿಸಲು ಕಠಿಣ ಕ್ರಮಗಳು ಅನಿವಾರ್ಯ. 2030ರೊಳಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ನಾವು ತಲುಪಬೇಕಿದೆ. ಇದಕ್ಕೆ ಬಾಲ ಕಾರ್ಮಿಕ ಪದ್ಧತಿ ನಿಷೇಧವೂ ಮುಖ್ಯವಾದದ್ದು ಎಂಬುದನ್ನು ಮರೆಯದಿರೋಣ.

ಆಂಧ್ರಪ್ರದೇಶ ಮೂಲದ ಕೆ ರತ್ನಪ್ರಭಾ ಅವರು 1990ರಿಂದ 1992ರ ವರೆಗೆ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಮಾಡಿದ ಉತ್ತಮ ಕೆಲಸಗಳನ್ನು ಅಲ್ಲಿನ ಜನ ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ.

ಅಂದು ಅಷ್ಟು ದೊಡ್ಡ ಕಾರ್ಯವನ್ನು  ರತ್ನಪ್ರಭಾರವರು ಮುಂದೆ ನಿಂತು ಶಾಲೆಗೆ ಸೇರಿಸುವ ಸಾಹಸವನ್ನು ಮಾಡದಿದ್ದರೆ ಇಂದು ಆ ಕಾನ್ಸ್‍ಸ್ಟೇಬಲ್ ಯಾವುದೇ ಶಿಕ್ಷಣವನ್ನು ಪಡೆಯದೆ ಕುರಿಮೇಯುಸುತ್ತನೇ ಇರಬೇಕಾಗಿತ್ತು.. ರತ್ನಪ್ರಭಾರವರು ಎಲ್ಲರಿಗೂ ಮಾದರಿಯಾಗ ಬೇಕು.. ಪ್ರತೀಯೊಬ್ಬ ಅಧಿಕಾರಿಯೂ ಇದಕ್ಕಾಗಿ ಇದಕ್ಕಾಗಿ ಶ್ರಮಿಸಬೇಕು..

-ಪವಿತ್ರ

Tags

Related Articles

Close