ಪ್ರಚಲಿತ

ಆಂಗ್ಲ ಮಾಧ್ಯಮದ ಪತ್ರಕರ್ತನೊಬ್ಬನಿಗೆ ಅವಕಾಶವಿಲ್ಲ ಎಂಬ ಜಿಗ್ನೇಶ್ ಮೇವಾನಿ ಹೇಳಿಕೆಗೆ ರಾಷ್ಟ್ರದ ಪತ್ರಕರ್ತರು ಒಗ್ಗಟ್ಟು ಪ್ರದರ್ಶಿಸಿದ್ದು ಹೇಗೆ ಗೊತ್ತಾ?!

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮಾತನಾಡುವವರು ಬೇಕಾದಷ್ಟು ಜನರಿದ್ದಾರೆ…! ಭಾರತದಲ್ಲೇ ಇದ್ದು ಭಾರತವನ್ನು ತೆಗಳಿ ಪಾಪಿ‌ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವವರು ಭಾರತದಲ್ಲಿ ಅನೇಕರಿದ್ದಾರೆ. ಅವರ ಸಾಲಿನಲ್ಲೇ ಬರುವವನು ದಲಿತ ಚಳುವಳಿಯ ನಾಯಕ,ಗುಜರಾತ್ ಶಾಸಕನಾಗಿ ಆಯ್ಕೆಯಾದ ಜಿಗ್ನೇಶ್ ಮೇವಾನಿ…!

ಜಿಗ್ನೇಶ್ ಮೇವಾನಿ ಗುಜರಾತ್ ದಲಿತ ಮುಖಂಡ ಹಾಗು ಶಾಸಕನಾದ ಈತ ಸದಾ ಮೋದಿ ನೇತ್ರತ್ವದ ಕೇಂದ್ರ ಸರಕಾರವನ್ನು ವಿರೋಧಿಸಿ ಮಾತನಾಡುವ ಮೂಲಕವೇ ತನ್ನ ಹೆಸರನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾನೆ.

ಕಾಶ್ಮೀರ ಯಾವತ್ತಿಗೂ ಭಾರತದ ಭಾಗವಲ್ಲ, ಅದು ಸ್ವಾತಂತ್ರ್ಯ ನಾಡು ಎಂದವಳು ಅರುಂಧತಿ ರಾಯ್…!
ಇದೇ ಅರುಂಧತಿ ರಾಯ್ ಳಿಂದ ಚುನಾವಣೆಗೆ ಸಹಾಯಧನ ಪಡೆದ ಜಿಗ್ನೇಶ್ ಮೇವಾನಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬೂದರಲ್ಲಿ ಸಂಶಯವೇ ಇಲ್ಲ…!

ದೇಶವನ್ನೇ ಒಡೆಯುವ ಪ್ರಯತ್ನ ನಡೆಸಿದ ಅರುಂಧತಿ ರಾಯ್ ಳ ಸಹಾಯ ಪಡೆದು ,ಅದೆಷ್ಟೋ ಜನರ ಸಾವಿಗೆ ಕಾರಣವಾದ ಉಗ್ರರ ಬೆಂಬಲಕ್ಕೆ ನಿಲ್ಲುವ ಉಮರ್ ಖಲೀದ್ ಜತೆ ಒಂದೇ ವೇದಿಕೆ ಹಂಚಿಕೊಂಡ ಜಿಗ್ನೇಶ್ ಮೇವಾನಿ ಒಂದಿಲ್ಲೊಂದು ಹೇಳಿಕೆಯ ಮೂಲಕ ಸುದ್ದಿಯಾಗುತ್ತಿದ್ದಾನೆ…

ಜಿಗ್ನೇಶ್ ಮೇವಾನಿ ತನ್ನ ರಾಜಕೀಯ ಬೆಳವಣಿಗೆಗೆ ಮುಗ್ದ ದಲಿತರ ಪರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದನು.
ಕ್ರಮೇಣ ದೇಶವಿರೋಧಿಗಳ ಜೊತೆ ಕೈ ಜೋಡಿಸಿಕೊಂಡು ತಾನು ಬಂದಿದ್ದ ಹಾದಿಯನ್ನೇ ಮರೆತಿದ್ದ.

ದಲಿತಪರ ಹೋರಾಟಕ್ಕೆ ಒಂದು ಹೊಸ ಮುಖ ದೊರೆಯಿತು ಎಂಬ ಖುಷಿ ಅದೆಷ್ಟೋ ದಲಿತರಿಗೆ ಆಗಿತ್ತು.
ಚುನಾವಣೆಯ ಮೊದಲು ದಲಿತರ ಓಲೈಕೆಗಾಗಿ ಅಂಬೇಡ್ಕರ್ ನ್ನು ಹೊಗಳಿ ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದ ಜಿಗ್ನೇಶ್ ಮೇವಾನಿ ಚುನಾವಣೆಯಲ್ಲಿ ಗೆದ್ದ ನಂತರ ಶಾಸಕನಾಗಿ ಆಯ್ಕೆ ಆದ ಮೇಲೆ ಅದೇ ಅಂಬೇಡ್ಕರ್ ರವರ ಆದರ್ಶಗಳನ್ನು ಮರೆತು ತನ್ನ ಮೇಲೆ ಭರವಸೆ ಇಟ್ಟಿದ್ದ ಕೆಲ ದಲಿತರಿಗೆ ನಿರಾಸೆ ಮೂಡಿಸಿದ್ದ…

ಆದರೆ ಈ ಜಿಗ್ನೇಶ್ ಮೇವಾನಿ ಯಾವಾಗ ‘ಅಂಬೇಡ್ಕರ್ ನ್ನು ತಿರಸ್ಕರಿಸಿದ ಮತ್ತು ಅವರು ತಯಾರಿಸಿದ ಸಂವಿಧಾನದ ಮೂಲ‌ ಆಶಯಗಳನ್ನು ಬದಲಿಸಿದ ಕಾಂಗ್ರೆಸ್ ನ‌ ಬೆಂಬಲಕ್ಕೆ ನಿಂತನೋ ಆಗಲೇ ಈತನ‌ ಮೇಲಿದ್ದ ಭರವಸೆ ಕಳೆದುಕೊಂಡಿತ್ತು…!

ಎಲ್ಲೇ ಏನೇ ನಡೆದರೂ ಅದಕ್ಕೆ ಮೋದಿಯೇ ಕಾರಣ ಎಂಬಂತೆ ಬಿಂಬಿಸಿ ಮಾತನಾಡುವ ಜಿಗ್ನೇಶ್ ಮೇವಾನಿಗೆ ಆದ ಅವಮಾನಗಳು ಒಂದಲ್ಲ ಎರಡಲ್ಲ. ಹೋದಲ್ಲೆಲ್ಲಾ ತನ್ನ ಮಾನ‌ ಮರ್ಯಾದೆ ಕಳೆದುಕೊಳ್ಳುತ್ತಾ ಬರುತ್ತಿದ್ದಾನೆ…!

ದಲಿತರ ಹೆಸರನ್ನು ಇಟ್ಟುಕೊಂಡು ತಾನೊಬ್ಬ ದಲಿತ ಮುಖಂಡ ಎಂದು ರಾಜಕೀಯದ ಲಾಭಕ್ಕೋಸ್ಕರ ದಲಿತರ ಪರ ಹೋರಾಟವನ್ನು ಮಾಡಿ ಸದಾ ಮೋದಿ ಸರ್ಕಾರವನ್ನು ಪ್ರಶ್ನಿಸುತ್ತಿರುವ ಜಿಗ್ನೇಶ್ ಮೇವಾನಿ ತಾನು ಹೋದಲ್ಲೆಲ್ಲಾ ತನಗಿರುವ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಳ್ಳುತ್ತಾ ಇದ್ದಾನೆ…!

ಇದೀಗ ಚೆನ್ನೈನಲ್ಲಿ ಜಿಗ್ನೇಶ್ ಮೇವಾನಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಅಲ್ಲಿನ ಪತ್ರಕರ್ತರು ಬಹಿಷ್ಕರಿಸಿದ್ದಾರೆ.
ಈ ಮೂಲಕ ಮತ್ತೊಮ್ಮೆ ಜಿಗ್ನೇಶ್ ಮೇವಾನಿ ಮುಜುಗರಕ್ಕೀಡಾಗಿದ್ದಾನೆ.ಇಂದು ವಿದ್ಯಾರ್ಥಿಗಳು ಹಾಗು ಶಿಕ್ಷಣ ತಜ್ಞರೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಬಳಿಕ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡಲು ಮೇವಾನಿ ಒಪ್ಪಿಕೊಂಡಿದ್ದನು.

ಆದರೆ ಪತ್ರಿಕಾಗೋಷ್ಠಿಯಲ್ಲಿ “ರಿಪಬ್ಲಿಕ್ ಟಿವಿ” ಎಂಬ ಆಂಗ್ಲ ಸುದ್ದಿ ವಾಹಿನಿಯ ಲೋಗೋ ಮತ್ತು ಮೈಕ್ ಹಿಡಿದ ಪ್ರತಿನಿಧಿಯನ್ನು ಹೊರಹೋಗುವಂತೆ ಸೂಚಿಸಿದ್ದಾನೆ. “ರಿಪಬ್ಲಿಕ್ ಟಿವಿ” ಸುದ್ದಿ ವಾಹಿನಿಯ ಪ್ರತಿನಿಧಿಯ ಉಪಸ್ಥಿತಿಯಲ್ಲಿ ತಾನು ಮಾತನಾಡುವುದಿಲ್ಲ ,ಇದು ನನ್ನ ನೀತಿ ಎಂದು ಹೇಳುವ ಮೂಲಕ “ರಿಪಬ್ಲಿಕ್ ಟಿವಿ” ಸುದ್ದಿವಾಹಿನಿಯ ಪ್ರತಿನಿಧಿಯನ್ನು ಹೊರ ನಡೆಯುವಂತೆ ಹೇಳಿದ್ದಾನೆ.

ಆದರೆ ಜಿಗ್ನೇಶ್ ಮೇವಾನಿ ಯ ಈ ನಡೆಯನ್ನು ಒಗ್ಗಟ್ಟಾಗಿ ವಿರೋಧಿಸಿದ ಚೆನ್ನೈ ಪತ್ರಕರ್ತರು ಪತ್ರಿಕಾಗೋಷ್ಠಿಯನ್ನೇ ಬಹಿಷ್ಕರಿಸಿದರು. “ಇದು ನಿಮ್ಮ ವೈಯಕ್ತಿಕ ವಿಚಾರ,ಪತ್ರಕರ್ತರಿಗೆ ನೀವು ಈ ರೀತಿ ಆಗ್ರಹಿಸುವಂತಿಲ್ಲಾ,ಮಾತನಾಡದೇ ಇರುವುದು ನಿಮಗೆ ಬಿಟ್ಟ ವಿಚಾರ” ಎಂದು ಎಲ್ಲಾ ಪತ್ರಕರ್ತರು ಬಹಿರಂಗವಾಗಿ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸಿದ್ದಾರೆ…!

ಪತ್ರಕರ್ತರು ಒಗ್ಗಟ್ಟಾಗಿ ಬಹಿರಂಗವಾಗಿ ಪತ್ರಿಕಾಗೋಷ್ಠಿಯನ್ನು ಬಹಿಷ್ಕರಿಸುವ ಮೂಲಕ ಜಿಗ್ನೇಶ್ ಮೇವಾನಿ ಯ ವರ್ತನೆಗೆ ತಕ್ಕ ಪಾಠ ಕಲಿಸಿದ್ದಾರೆ…!
– ಅರ್ಜುನ್

Tags

Related Articles

Close