ಪ್ರಚಲಿತ

ಆಂಧ್ರ ಪ್ರದೇಶ್ ಸರಕಾರದ ಕಟ್ಟಾಜ್ಞೆ! ಇನ್ನು ಆಂಧ್ರದ ದೇವಸ್ಥಾನಗಳಲ್ಲಿ ಹೊಸವರ್ಷದ ಆಚರಣೆ ಇಲ್ಲ!

ಜನವರಿ 1, 2018 ರಂದು ಯಾವುದೇ ಕಾರಣಕ್ಕೂ ದೇವಸ್ಥಾನಗಳಲ್ಲಿ ಹೊಸ ವರ್ಷದ ಆಚರಣೆ ಇಲ್ಲ!

ಆಂಧ್ರ ಪ್ರದೇಶದ ದತ್ತಿ ಇಲಾಖೆ, ಜನವರಿ 1, 2018 ರಂದು ಯಾವುದೇ ಕಾರಣಕ್ಕೂ ದೇವಸ್ಥಾನಗಳಲ್ಲಿ ಹೊಸ ವರ್ಷದ ಆಚರಣೆಯನ್ನು ನಡೆಸಕೂಡದೆಂಬ ಸುತ್ತೋಲೆಯನ್ನು ಹೊರಡಿಸಿದೆ. RC NO 29/HDPT/2017 ರ ಪ್ರಕಾರ, ಜನವರಿ 1 ರಂದು ಹೊಸ ವರ್ಷ ಆಚರಿಸುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದ್ದು, ಹಿಂದೂ ದೇವಾಲಯಗಳಲ್ಲಿ ಹೊಸ ವರ್ಷದ ಆಚರಣೆಯನ್ನು ರದ್ದುಗೊಳಿಸಬೇಕೆಂದು ಆಯಾ ದೇವಸ್ಥಾನಗಳಿಗೆ ಸುತ್ತೋಲೆಯನ್ನು ನೀಡಿದೆ.

ಪ್ರಾರಂಭವಾಯಿತು ಸನಾತನ ಧರ್ಮದ ಪ್ರಖರ ಕಳೆ!

ಹೌದು! ಆಂಧ್ರ ಪ್ರದೇಶ ಸರಕಾರ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದು, ದೇವಸ್ಥಾನಗಳಲ್ಲಿ ಜನವರಿ ಒಂದರಂದು ಹೊಸ ವರ್ಷವನ್ನಾಚರಿಸುವ ಸಲುವಾಗಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿತ್ತಲ್ಲದೇ, ಭಕ್ತಾದಿಗಳೂ ಸಹ ಆ ದಿನ ವಿಶೇಷ ಪೂಜೆ ಮಾಡಿಸುತ್ತಿದ್ದರು. ಹಿಂದೂ ಸನಾತನ ಧರ್ಮದ ಪ್ರಕಾರ ಜನವರಿ ಒಂದು, ಅಂದರೆ ಕ್ರೈಸ್ತ ಕ್ಯಾಲೆಂಡರಿನ ಪ್ರಕಾರ ಹೊಸ ವರುಷ ಆಚರಿಸುವುದು ನಿಷಿದ್ಧ ಮತ್ತು, ಚೈತ್ರ ಮಾಸದಲ್ಲಿ ಯುಗಾದಿಯಂದು ಹೊಸ ವರ್ಷ ಅಚರಿಸುವುದು ಹಿಂದೂವಿನ ಸಂಸ್ಕೃತಿಯಾಗಿರುವುದರಿಂದ, ಯಾವುದೇ ಕಾರಣಕ್ಕೂ, ಹೊಸ ವರ್ಷ ಎಂದು ಜನವರಿ ಒಂದರಂದು ವಿಶೇಷ ಪೂಜೆ, ಹವನ ಮಾಡುವ ಹಾಗಿಲ್ಲ ಎಂದು ಸರಕಾರ ಎಚ್ಚರಿಸಿದೆ.

ಈಗಾಗಲೇ, ಸುತ್ತೋಲೆಯ ಪ್ರತಿ ಡೆಪ್ಯುಟಿ ಕಮಿಷನರ್, ಕಮಿಷನರ್, ಅಸಿಸ್ಟೆಂಟ್ ಕಮಿಷನರ್ ಮತ್ತು ದತ್ತಿ ಇಲಾಖೆಯ ಪ್ರತಿ ಅಧಿಕಾರಿಗೂ ಕಳುಹಿಸಿಕೊಟ್ಟಿದ್ದು, ಕಡ್ಡಾಯವಾಗಿ ಸೂಚನೆಯನ್ನು ಪಾಲಿಸುವಂತೆ ಹೇಳಲಾಗಿದೆ! ಅದಲ್ಲದೇ, ವಿಶೇಷ ಹೂವಿನಲಂಕಾರ, ಭಕ್ತರಿಗೆ ವಿಶೇಷ ಪೂಜೆ, ಹವನ ಗಳನ್ನು ಕೇವಲ ಹೊಸವರ್ಷ ಎಂಬ ಕಾರಣಕ್ಕೆ ಆಚರಿಸಬಾರದೆಂದು ಹೇಳಿದೆ.

“ಆಂಧ್ರ ಸರಕಾರದ ನಿರ್ಧಾರವೊಂದು ಉಳಿದ ರಾಜ್ಯಗಳಿಗೂ ಮಾದರಿಯಾಗಿದೆ. ಅದೇ ರೀತಿ, ಉಳಿದ ರಾಜ್ಯಗಳೂ ಆಂಧ್ರದ ನಿರ್ಧಾರದಂತೆ ಅನುಸರಿಸಬೇಕು. ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಎತ್ತಿ ಹಿಡಿಯುವುದು ಪ್ರತಿ ರಾಜ್ಯ ಸರಕಾರದ ಕರ್ತವ್ಯವಾಗಿದೆ” ಎಂದು ಆಂಧ್ರದ ಹಿಂದೂ ಸಂಘಟನೆ ಅಭಿಪ್ರಾಯಪಟ್ಟಿದೆ.

“ಈ ಹಿಂದೆ, ದೇವಸ್ಥಾನಗಳಲ್ಲಿ ಜನವರಿ ಒಂದರಂದೇ ಹೊಸ ವರ್ಷವನ್ನು ಆಚರಣೆ ಮಾಡಲಾಗುತ್ತಿತ್ತು. ಹಿಂದೂ ಭಕ್ತಾದಿಗಳೂ ಸಹ, ಜನವರಿ ಒಂದರಂದು ವಿಶೇಷ ಪೂಜೆ ಹವನ ಮಾಡಿಸುತ್ತಿದ್ದರಲ್ಲದೇ, ಯುಗಾದಿಯ ದಿನದ ಮಹತ್ವವನ್ನೇ ತಿಳಿಯದಂತಾಗಿತ್ತು. ಅದಕ್ಕೆ ತಕ್ಕನಾಗಿ ದೇವಸ್ಥಾನಗಳೂ ಸಹ ಅವತ್ತೇ ವಿಶೇಷ ಅಲಂಕಾರ ಮಾಡುತ್ತಿದ್ದವು.” ಎಂದು ಹೇಳಿದೆ.

“ಹಿಂದೂ ಧರ್ಮದ ಪ್ರಕಾರ, ಯಾವುದೇ ಕಾರಣಕ್ಕೂ ಜನವರಿ ಒಂದರಂದು ಹೊಸ ವರ್ಷ ಆಚರಿಸುವ ಪದ್ಧತಿ ಇಲ್ಲ. ಅದಲ್ಲದೇ, ಸನಾತನ ಧರ್ಮಕ್ಕೆ
ವಿರುದ್ಧವಾಗಿದೆ. ಹಿಂದೂ ದೇವಾಲಯಗಳೇ ಸಂಸ್ಕೃತಿ ಮರೆತರೆ, ಇನ್ನು ಹಿಂದೂಗಳಲ್ಲಿ ಸಂಸ್ಕೃತಿ ಹೇಗುಳಿದೀತು?!” ಎಂದು ದತ್ತಿ ಇಲಾಖೆ ತರಾಟೆಗೆ ತೆಗೆದುಕೊಂಡಿದೆ.

ಇತ್ತ ಪಕ್ಕದಲ್ಲಿರುವ ಕರ್ನಾಟಕ ಸರಕಾರ, ತರಾವರಿ ಭಾಗ್ಯಗಳ ಮೂಲಕ ಅಲ್ಪಸಂಖ್ಯಾತರ ಓಲೈಕೆಯಲ್ಲಿಯೇ ದಿನ ಕಳೆಯುತ್ತಿದೆಯಲ್ಲದೇ, ಹಿಂದೂಗಳ ಕಗ್ಗೊಲೆಗೆ ಬೆಣ್ಣೆ ಹಚ್ಚಿ ತೇಪೆ ಹಾಕುವ ಕೆಲಸವನ್ನೂ ಮಾಡುತ್ತಿದೆ. ಪಕ್ಕದಲ್ಲಿರುವ ಆಂಧ್ರ ಸರಕಾರದ ಪ್ರಭಾವವನ್ನು ಪಡೆಯದೆ, ಕೆಳಗೆ ತಾಕಿರುವ ಕೇರಳದ ಕುಮ್ಮಿಗಳ ನಿಷ್ಟೆಗೆ ಬಾಲವನ್ನಾಡಿಸುತ್ತಿರುವ ರಾಜ್ಯ ಸರಕಾರ ಆಂಧ್ರದಿಂದ ಪಾಠ ಕಲಿಯುವುದೋ ಎಂದು ನೋಡಬೇಕಾಗಿದೆ.

ಆಂಧ್ರ ಪ್ರದೇಶ್ ಸರಕಾರದ ನಿರ್ಧಾರಕ್ಕೆ ಬಹಳಷ್ಟು ಜನ ಮೆಚ್ಚಿದ್ದಲ್ಲದೇ, ಹಿಂದೂ ಧರ್ಮದ ಸಂಸ್ಕೃತಿಯನ್ನು ಮತ್ತೆ ಎತ್ತಿ ಹಿಡಿದ ಆಂಧ್ರ ರಾಜ್ಯ ಸರಕಾರಕ್ಕೆ ಆಂಧ್ರದ ಹಿಂದೂಗಳು ಉಘೇ ಎಂದಿದ್ದಾರೆ!

– ಪೃಥು ಅಗ್ನಿಹೋತ್ರಿ

Tags

Related Articles

Close