ಪ್ರಚಲಿತ

ಆರು ಮಕ್ಕಳನ್ನು ಅತ್ಯಾಚಾರ ಮಾಡಿ ತನ್ನ ಮುಂದೆ ಒಬ್ಬರನ್ನೊಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಮಾಡಿದ ಮೌಲ್ವಿ! ಇದೇ ರೀತಿ ಯಾವುದಾದರೂ ಹಿಂದೂ ಬಾಬಾ ಮಾಡಿದ್ದರೆ ವಾರಗಟ್ಟಲೇ ಮಾಧ್ಯಮದ ಹಸಿವಿಗೆ ಆಹಾರವಾಗುತ್ತಿದ್ದರು!!

ಭಾರತೀಯ ಸಂಸ್ಕøತಿಯ ಪ್ರಕಾರ ಗುರುವನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತೇವೆ. ಹಾಗಾಗಿ ” ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ” ಅಂತಾ ಗುರುವನ್ನು ಭಕ್ತಿಯಿಂದ ಪೂಜಿಸುತ್ತೇವೆ. ಗುರುವಾದವನು ಮಕ್ಕಳಿಗೆ ದಾರಿ ದೀಪವಾಗುತ್ತಾರೆ ಎಂದು ಮಕ್ಕಳನ್ನು ಗುರುವಿನ ಬಳಿ ಶಿಕ್ಷಣಕ್ಕಾಗಿ ಕಳುಹಿಸಲಾಗುತ್ತದೆ. ಆದರೆ ಮದರಸಾದಂತಹ ಶಿಕ್ಷಣ ಕ್ಷೇತ್ರದಲ್ಲಿ ಆ ಭೂಪ ಮಕ್ಕಳಿಗೆ ಕಲಿಸಿದ ಪಾಠ ಆದ್ರೂ ಏನು? ಈತನ ಬರ್ಬರ ಕೃತ್ಯವನ್ನು ತಿಳಿದರೆ ನೀವು ದಂಗಾಗುವುದಂತು ಖಂಡಿತ!!

ಶ್ರೀನಗರದಿಂದ ಸುಮಾರು 60 ಕಿ.ಮೀ ದೂರದಲ್ಲಿ ಅಸಂಖ್ಯಾತ ಅಪ್ರಾಪ್ತ ಬಾಲಕರನ್ನು ಲೈಂಗಿಕ ಕ್ರಿಯೆಗೆ ಬಳಸಲಾಗಿದೆ. ಇದು ಸಪೋರ್ ಪಟ್ಟಣ್ಣಕ್ಕೆ ಸಮೀಪವಿರುವ ಮಾಂಡ್ಜಿ ಎಂಬ ಪ್ರದೇಶದಲ್ಲಿ ಮಕ್ಕಳಿಗೆ ವಿದ್ಯೆ ಹೇಳಿ ಕೊಡುವ ಬದಲು ಅವರನ್ನು ಅತ್ಯಾಚಾರ ಮಾಡುವಲ್ಲಿ ತೊಡಗುತ್ತಿದ್ದ ಎಂದರೆ ನಂಬುವರುಂಟೇ! ನಂಬಲೇ ಬೇಕಾದ ಸತ್ಯ ಇದು..

ವಿದ್ಯೆ ಕಲಿಯಬೇಕು ಅಂತಾ ಉತ್ಸಾಹದಿಂದ ಹೋಗುತ್ತಿದ್ದ ಮಕ್ಕಳು ನಿಧಾನವಾಗಿ ಮಂಕಾಗುತ್ತಾ ಹೋದರು… ಮನೆಯವರು ಅವರನ್ನು ಆಳವಾಗಿ ಪ್ರಶ್ನಿಸಿದ ನಂತರ ಸತ್ಯ ಎಳೆ ಎಳೆಯಾಗಿ ಮೌಲ್ವಿ ಮಾಡಿದ ಘನಾಂದಾರಿ ಕೆಲಸವನ್ನು ಬಾಯಿಬಿಟ್ಟರು.!! ಶಿಕ್ಷಣ ಪಡೆಯಲು ಹೋದ ಅಪ್ರಾಪ್ತ ಬಾಲಕರನ್ನು ಲೈಂಗಿಕ ಅತ್ಯಾಚಾರ ಎಸಗುತ್ತಿದ್ದ ಮಾಹಿತಿ ಮಕ್ಕಳ ಹೆತ್ತವರಿಗೆ ಮಕ್ಕಳಿಂದಲೇ ತಿಳಿಯಿತು.!!

ವಿಷಯ ತಿಳಿದ ಮಕ್ಕಳ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ. ಕಾಶ್ಮೀರದ ಪೊಲೀಸರು ಮೌಲ್ವಿಯಾದ ಐಜಾಜ್ ಶೇಖ್‍ನನ್ನು ವಿಚಾರಣೆಗೆ ಒಳಪಡಿಸಿ ರಾಜ್ಯದ ಪೀನಲ್ ಕೋಡ್ ವಿಭಾಗದ 377 ರ ಅಡಿಯಲ್ಲಿ ಈತನ್ನು ಆರೋಪಿ ಎಂದು ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

ಆ ಬಂಧಿತ ಆರೋಪಿ ಐಜಾಜ್ ಶೇಖ್ ವಿವಾಹಿತನಾಗಿದ್ದು ,ಇಬ್ಬರು ಗಂಡುಮಕ್ಕಳು ಸೇರಿದಂತೆ ಒಂದು ಹೆಣ್ಣು ಮಗಳಿದ್ದಾಳೆ. ಅವನ ಹಿರಿಯ ಸಹೋದರ ಒಬ್ಬ
ಧಾರ್ಮಿಕ ವ್ಯಕ್ತಿಯಾಗಿದ್ದು, ಪ್ರತೀ ಭಾನುವಾರ ಅನುಯಾಯಿಗಳು ಅವನ ಆಶೀರ್ವಾದವನ್ನು ಪಡೆಯುತ್ತಾರಂತೆ!! ಅದಲ್ಲದೆ ಐಜಾಜ್ ಶೇಖ್‍ನನ್ನು ವಿಚಾರಣೆಗೆ ಒಳಪಡಿಸಿದ ನಂತರ “ನಾನೊಬ್ಬ ಮುಗ್ಥ ನಾನೇನು ಮಾಡಿಲ್ಲ, ನೀವು ಬೇಕಾದರೆ ಗ್ರಾಮದಲ್ಲಿ ಯಾರನ್ನು ಬೇಕಾದರೂ ಕೇಳಬಹುದು” ಎಂದು ಬೊಗಳೆ ಬಿಟ್ಟಿದ್ದಾನೆ. ಆದರೆ ಈತನ ಬಗ್ಗೆ ಸ್ವತಃ ಅಪ್ರಾಪ್ತ ಬಾಲಕರೇ ಈತನ ಲೈಂಗಿಕ ವಿಚಾರದ ಬಗ್ಗೆ ಹೇಳಿರಬೇಕಾದರೆ ಈತನ ಮಾತುಗಳನ್ನು ಯಾರು ನಂಬುತ್ತಾರೆ??

ಮದರಾಸಕ್ಕೆ ಕಳುಹಿಸಲಾದ 14 ವರ್ಷದ ಕೆಳಗಿನ ಅಪ್ರಾಪ್ತ ಬಾಲಕರಿಗೆ ಶಿಕ್ಷಣ ಕೊಡುವ ಬದಲು ಅತ್ಯಾಚಾರ ಮಾಡಿದ್ದನ್ನು ಸ್ವತಃ ಇದನ್ನು ಮದರಾಸಕ್ಕೆ ಹೋಗುತ್ತಿದ್ದ ಮಕ್ಕಳ ಮನೆಯವರೇ ಕೇಸು ದಾಖಲಿಸಿದ್ದಾರೆ. ಆದರೆ ನಾವು ಇಲ್ಲಿ ಹೇಳಬೇಕಾದ ವಿಷಯವೆಂದರೆ ಇಷ್ಟೆಲ್ಲಾ ಪ್ರಕರಣ ದಾಖಲಾದರೂ ಇದರ ಬಗ್ಗೆ ಮಾಧ್ಯಮಗಳು ಏಕೆ ಸುದ್ಧಿ ಹಬ್ಬಿಸುತ್ತಿಲ್ಲ?? ಮೌಲ್ವಿ ಎಂದರೆ ಎಲ್ಲವನ್ನೂ ಉಪದೇಶಿಸುವವರು ಆದರೆ ಉಪದೇಶ ಮಾಡುವ ವಿದ್ಯೆ ಕಲಿಯಲು ಬಂದ ವಿದ್ಯಾರ್ಥಿಗಳ ಮೇಲೇನೆ ಲೈಂಗಿಕ ಅತ್ಯಾಚಾರ ಎಸಗಿದ್ದಾನೆ ಎಂದರೆ ನಂಬಲು ಸಾಧ್ಯವೇ?

ಈ ಬಗ್ಗೆ ಹಲವೆಡೆ ಸುದ್ಧಿ ಹಬ್ಬಿದ್ದರೂ, ಅನೇಕ ಜನ ಟ್ವೀಟ್ ಮಾಡಿದ್ದರೂ ಮಾಧ್ಯಮಗಳು ಮಾತ್ರ ಯಾವುದೇ ಸುದ್ಧಿ ಹಬ್ಬಿಸದಿರುವುದು ವಿಷಾದನೀಯ!! ಮಾಧ್ಯಮಗಳು ಇಂತಹವರಿಗೆ ಪರೋಕ್ಷವಾಗಿ ಕುಮ್ಮಕ್ಕು ಕೊಡುತ್ತಿದೆಯೇ? ಕೇವಲ ಐಜಾಜ್ ಪ್ರಕರಣವಲ್ಲದೆ ಇಂತಹ ಅನೇಕ ಪ್ರಕರಣಗಳು ದೇಶದ ನಾನಾ ಕಡೆಗಳಲ್ಲಿ ನಡೆಯುತ್ತಾ ಇದೆ. ಆದರೆ ಈ ಬಗ್ಗೆ ಯಾವುದೇ ಮಾಧ್ಯಮಗಳು ಕೂಡಾ ಆಸಕ್ತಿಯನ್ನು ತೋರಿಸುತ್ತಿಲ್ಲ ಅನ್ನೋದೇ ಆಶ್ಚರ್ಯಕರ!!

ಅದೇ ಹಿಂದೂ ಸ್ವಾಮೀಜಿಗಳೇನಾದರೂ ಇಂತಹ ಪ್ರಕರಣಗಳಲ್ಲಿ ಸಿಲುಕಿದ್ದರೆ ಈಗಾಗಲೇ ಅದೆಷ್ಟೋ ಮಾಧ್ಯಮಗಳು 2-3 ತಿಂಗಳುಗಳ ಕಾಲ ಇದನ್ನು
ಟಿಆರ್‍ಪಿಗೋಸ್ಕರ ಸುದ್ಧಿ ಮಾಡುತ್ತಿತ್ತು…. ಇಂತಹ ಮೌಲ್ವಿ ಪಾಪಿಗಳಿಗೆ ಯಾಕೆ ಇನ್ನೂ ಕೂಡಾ ಮಾಧ್ಯಮಗಳು ಸುದ್ದಿಯನ್ನು ಪ್ರಸಾರ ಮಾಡಿ ಇಂತಹವರಿಗೆ ಶಿಕ್ಷೆಯನ್ನು ವಿಧಿಸುವಂತೆ ಮಾಡುತ್ತಿಲ್ಲ?? ಇಲ್ಲಿ ನಾವು ಯಾವುದೇ ಧರ್ಮವನ್ನು ಹೊಗಳುವ ಅಥವಾ ತೆಗಳುವ ಎಂಬುವ ಪ್ರಶ್ನೆ ಅಲ್ಲ. ಪ್ರಚಲಿತ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬೂವುದರ ಬಗ್ಗೆ ಹೇಳುತ್ತಿದ್ದೇವೆ ಅಷ್ಟೆ… ಇನ್ನಾದರೂ ಅಪ್ರಾಪ್ತ ಮಕ್ಕಳಿಗೆ ನ್ಯಾಯ ಕೊಡುವಲ್ಲಿ ಮಾಧ್ಯಮಗಳು ಕೂಡಾ ಶ್ರಮಿಸಬೇಕಾಗುತ್ತದೆ. ಇಂತಹವರಿಗೆ ಯಾವತ್ತೂ ಕುಮ್ಮಕ್ಕು ಕೊಡಬಾರದು..

-ಶೃಜನ್ಯಾ

Tags

Related Articles

Close