ಪ್ರಚಲಿತ

ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಪ್ರಧಾನಮಂತ್ರಿಯ ಜನಧನ ಯೋಜನೆ!

ಪ್ರಧಾನಿ ಮೋದಿಯವರ ಜನಪ್ರಿಯ ಯೋಜನೆಯಾದ ಪ್ರಧಾನ ಮಂತ್ರಿ ಜನ-ಧನ ಯೋಜನೆ (ಪಿ.ಎಮ್.ಜೆ.ಡಿ.ವೈ)ಯು, ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ನಿರ್ವಹಿಸಿದೆ!! ದೇಶದ ಬಡ ಮತ್ತು ಅತಿ ಬಡ ವರ್ಗದವರಿಗೆ ಜನಧನ ಯೋಜನೆ
ಮುಖಾಂತರ ಬ್ಯಾಂಕ್ ಖಾತೆ ಹೊಂದಲು ಅವಕಾಶವನ್ನು ಕಲ್ಪಿಸಿದ್ದು, ಸ್ವಾವಲಂಬನಾ ಹೆಸರಿನಲ್ಲಿ ನಿವೃತ್ತಿಯಾದವರಿಗೆ ಸೌಲಭ್ಯ ಮತ್ತು ವಿಮೆ ಸೌಲಭ್ಯ ಕಲ್ಪಿಸಿ
ಕೊಡಲಾಗಿರುವ ಜನಪ್ರಿಯ ಯೋಜನೆ ಇದಾಗಿದೆ!!

2014ರ ಆಗಸ್ಟ್ 28ರಂದು ಆರಂಭವಾದ ಈ ಯೋಜನೆಯ ಧ್ಯೇಯವಾಕ್ಯ “ಮೇರಾ ಖಾತಾ-ಭಾಗ್ಯ ವಿಧಾತಾ” ಎಂಬುದಾಗಿದೆ. ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಜನಧನ ಯೋಜನೆಯ ಪ್ರಮುಖ ಧ್ಯೇಯವಾಗಿದೆ. ಹಾಗಾಗಿ ಈ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ, ವಿಮೆ ಮತ್ತು ಡೆಬಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸುವ ಮುಖ್ಯ ಗುರಿಯನ್ನು ಹೊಂದಿದೆ.

ಏನಿದು ಪ್ರಧಾನಮಂತ್ರಿ ಜನಧನ ಯೋಜನೆ??

ನರೇದ್ರ ಮೋದಿ ಕಲ್ಪನೆಯ ಡಿಜಿಟಲ್ ಭಾರತ ಕನಸಿಗೆ ಪೂರಕವಾಗಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಸ್ಥೆಯ ಅಡಿಪಾಯ ಹಾಕಲಿರುವ ಪ್ರಧಾನಿ ನರೇಂದ್ರ
ಮೋದಿಯವರ ಜನಪ್ರಿಯ ಯೋಜನೆಗಳಲ್ಲೊಂದು!! ದೇಶದ ಪ್ರತಿಯೊಬ್ಬರಿಗೂ ಎಲ್ಲ ಬಗೆಯ ಬ್ಯಾಂಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದೇ ಯೋಜನೆಯ ಮುಖ್ಯ ಮತ್ತು ಮೊದಲ ಗುರಿಯಾಗಿದ್ದು, ಬ್ಯಾಂಕ್ ಖಾತೆಯಿಂದ ಹಿಡಿದು, ವಿಮೆ ಮತ್ತು ಕ್ರೆಡಿಟ್ ಕಾರ್ಡ್ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ!! ಅಷ್ಟೇ ಅಲ್ಲದೇ, ಬ್ಯಾಂಕಿಂಗ್ ಕ್ಷೇತ್ರದ ಯಾವುದೇ ಜಂಜಾಟಗಳಿಲ್ಲದೇ 1 ಲಕ್ಷ ರೂ. ವರೆಗಿನ ವಿಮೆ ಎಲ್ಲರಿಗೂ ಲಭ್ಯವಾಗುತ್ತದಲ್ಲದೇ, ರುಪೆ ಕಾರ್ಡ್ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿಯಾಗಲಿದೆ. ಈ ಯೋಜನೆಯು ಬಡ ವರ್ಗದ ಜನರಿಗೆ ಸರ್ಕಾರದ ವಿವಿಧ ಹಣಕಾಸು ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ನಗರ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದಲ್ಲದೇ ಎಲ್ಲರಿಗೂ ಡೊಮೆಸ್ಟಿಕ್ ಡೆಬಿಟ್ ಕಾರ್ಡ್ (ರುಪೆ ಕಾರ್ಡ್) ನೀಡಲಾಗುವುದು!!

ಯಾವುದೇ ಕನಿಷ್ಠ ಮೊತ್ತವಿಲ್ಲದೇ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಬಹುದಾಗಿದ್ದು, ಖಾತೆ ತೆರೆಯಲು ಯಾವುದೇ ಶುಲ್ಕವೂ ಇರುವುದಿಲ್ಲ. ಇದರೊಂದಿಗೆ,
ಪ್ರತಿಯೊಬ್ಬರೂ ಕೂಡ ಉಳಿತಾಯದ ಮಾರ್ಗೋಪಾಯ ಕಂಡುಕೊಳ್ಳಬಹುದು. ಬಡವರು ಲೇವಾದೇವಿಗಾರರಿಂದ ಸಾಲ ಪಡೆದು ಹೆಚ್ಚು ಬಡ್ಡಿ ನೀಡಿ ಬಡತನದಲ್ಲೇ ಬಳಲುವುದರಿಂದ, ಅಧಿಕ ಬಡ್ಡಿ ಸಾಲದ ಕೂಪದಿಂದ ಸುಲಭದಲ್ಲಿ ಬಿಡುಗಡೆ ಪಡೆಯಬಹುದು. ಮನೆಯಲ್ಲಿಯೇ ಅಸುರಕ್ಷಿತವಾಗಿ ಹಣ ಇಟ್ಟುಕೊಳ್ಳುವುದರ ಬದಲಾಗಿ ಸುರಕ್ಷಿತವಾಗಿ ಬ್ಯಾಂಕ್‍ನಲ್ಲಿ ಇಡಬಹುದಲ್ಲದೇ, ಇಟ್ಟ ಹಣಕ್ಕೆ ಬಡ್ಡಿಯನ್ನೂ ಪಡೆಯಬಹುದಾಗಿದೆ!!

ಜನಧನ ಯೋಜನೆಯ ಧ್ಯೇಯ ಮತ್ತು ಉದ್ದೇಶ:

1. ಮೂಲಭೂತವಾಗಿ ಅಪಘಾತ ವಿಮೆ, ಡೆಬಿಟ್ ಕಾರ್ಡ್, ಅಪಘಾತ ವಿಮೆ ಹೀಗೆ ಎಲ್ಲ ಬಗೆಯ ಬ್ಯಾಂಕಿಂಗ್ ಕ್ಷೇತ್ರದ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ.
2. ಆಧಾರ್ ಕಾರ್ಡ್ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಓವರ್ ಡ್ರಾಪ್ಟ್ ಸೌಲಭ್ಯ ಕಲ್ಪಿಸಲಾಗುವುದು.
3. ರುಪೇ ಕಾರ್ಡ್(ಡೊಮೆಸ್ಟಿಕ್ ಡೆಬಿಟ್ ಕಾರ್ಡ್) ಸೇವೆಯನ್ನು ನಗರ ಮತ್ತು ಗ್ರಾಮೀಣ ಜನತೆಗೆ ಒದಗಿಸುವುದು.
4. ಆರು ತಿಂಗಳ ನಂತರ ರುಪೇ ಡೆಬಿಟ್ ಕಾರ್ಡ್ ರೂ. 1 ಲಕ್ಷ ವರೆಗಿನ ಅಪಘಾತ ವಿಮೆ ಒಳಗೊಂಡಿರುತ್ತದೆ.
5. ಖಾತೆದಾರ ವ್ಯಕ್ತಿ 6 ತಿಂಗಳ ನಂತರ ರೂ. 5000 ಓವರ್ ಡ್ರಾಪ್ಟ್‍ಗೆ ಭಾಜನನಾಗುತ್ತಾನೆ.
6. ಬ್ಯಾಂಕ್ ಖಾತೆ ಹೊಂದಿರದ 7.5 ಕೋಟಿ ಜನರಿಗೆ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವುದು.
7. ನ್ಯಾಷನಲ್ ಪೇಮೆಂಟ್ಸ್ ಕಾಪೆರ್Çರೇಷನ್ ಆಫ್ ಇಂಡಿಯ ಹೊಸ ತಂತ್ರಜ್ಞಾನ ಪರಿಚಯಿಸಿದ್ದು, ಸ್ಮಾರ್ಟ್ ಫೆÇೀನ್ ಇಲ್ಲದವರು ಸಾಮಾನ್ಯ ಫೆÇೀನ್ ಬಳಸಿ ಫಂಡ್ಸ್ ವರ್ಗಾವಣೆ ಮತ್ತು ಬ್ಯಾಲೆನ್ಸ್ ಚೆಕ್ ಮಾಡಬಹುದು.
8. ಜನಧನ ಯೋಜನೆ ಮುಖಾಂತರ ಬಡವರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ಒದಗಿಸುವುದು.

10 ವರ್ಷ ಮೇಲ್ಪಟ್ಟ ವಯಸ್ಸಿನವರು ಜನಧನ ಯೋಜನೆ ಖಾತೆ ತೆರೆಯಬಹುದಾಗಿದ್ದು, ಅನಕ್ಷರಸ್ಥರಿಗೆ ರೂಪೇ ಡೆಬಿಟ್ ಕಾರ್ಡ್ ವ್ಯವಹಾರ ಕಠಿಣವಾಗಿರುವುದರಿಂದ ಅದನ್ನು ನೀಡುವಾಗ ಅದರ ಸುರಕ್ಷತೆ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರು ಮಾರ್ಗದರ್ಶನ ನೀಡುತ್ತಾರೆ. ಜನಧನ ಯೋಜನೆಯಲ್ಲಿ ಜಂಟಿ ಖಾತೆ ಸಹ ತೆರೆಯಬಹುದಾಗಿದ್ದು, ಯಾವುದೇ ಶಾಖೆಯಲ್ಲಾದರೂ ಖಾತೆ ತೆರೆಯಬಹುದು. ಅಷ್ಟೇ ಅಲ್ಲದೇ, ಬ್ಯಾಂಕ್‍ನ ಒಂದು ಶಾಖೆಯಿಂದ ಬೇರೊಂದು ಶಾಖೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದಲ್ಲದೇ, ದೇಶದ ಯಾವ ಬ್ಯಾಂಕ್ ಶಾಖೆಯ ಖಾತೆಗಾದರೂ ಕೂಡ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.

ಈಗಾಗಲೇ ಯಾವುದೇ ಬ್ಯಾಂಕಿನಲ್ಲಿ ಖಾತೆ ಇರುವವರು ಹೊಸದಾಗಿ ಜನಧನ ಖಾತೆ ತೆರೆಯುವ ಅವಶ್ಯಕತೆ ಇರುವುದಿಲ್ಲ. ಅಷ್ಟೇ ಅಲ್ಲದೇ, ಇರುವ ಖಾತೆಗೆ ರೂಪೇ ಕಾರ್ಡ್, ವಿಮಾ ಸೌಲಭ್ಯ ವಿಸ್ತರಿಸಲಾಗುತ್ತದೆ. ಅವರ ಬ್ಯಾಂಕ್ ವ್ಯವಹಾರ ತೃಪ್ತಿಕರವಾಗಿದ್ದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇನ್ನು ಜನಧನ ಖಾತೆಗೆ ಚೆಕ್ ಸೌಲಭ್ಯ ಪಡೆಯಬಹುದಾಗಿದ್ದರೂ ಕೂಡ ಖಾತೆಯಲ್ಲಿ ಕನಿಷ್ಠ ಮೊತ್ತ ಇರುವಂತೆ ನೋಡಿಕೊಳ್ಳಬೇಕು!! ಈ ಉಳಿತಾಯ ಖಾತೆಯಲ್ಲಿ ಇಡುವ ಹಣಕ್ಕೆ ವಾರ್ಷಿಕ ಶೇಕಡಾ 4ರ ಬಡ್ಡಿ ನೀಡಲಾಗುತ್ತದೆಯಲ್ಲದೇ, ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಶೇಕಡಾ 12ರಷ್ಟು ಬಡ್ಡಿ ವಿಧಿಸಲಾಗುತ್ತದೆ!!

Image result for jandhan yojna and modi

ಜನಧನ್ ಖಾತೆ ತೆರೆಯುವುದು ಹೇಗೆ??

* ಜನಧನ ಖಾತೆ ತೆರೆಯಲು ಆಧಾರ್ ಕಾರ್ಡ್ ಇದ್ದರೆ ಸಾಕು. ಬೇರಾವ ದಾಖಲೆಗಳ ಅವಶ್ಯಕತೆ ಇಲ್ಲ.
* ಹಾಗಾಗಿ ವಿಳಾಸ ಬದಲಾಗಿದ್ದಲ್ಲಿ ಸ್ವದೃಢೀಕರಣ ಸಾಕಾಗುತ್ತದೆ!!
* ಆಧಾರ್ ಕಾರ್ಡ್ ಇಲ್ಲದಿದ್ದರೆ, ಮತದಾರರ ಗುರುತಿನ ಚೀಟಿ, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಪಾಸ್‍ಪೆÇೀರ್ಟ್ ಆಗಬಹುದು.
* ಇದಾವುದೇ ಇಲ್ಲದಿದ್ದರೆ ಸರ್ಕಾರ/ಸರ್ಕಾರಿ ಸಂಸ್ಥೆ ವಿತರಿಸಿದ ಗುರುತಿನ ಚೀಟಿ/ ಪೆÇೀಟೋ ಸಹಿತ ಪತ್ರಕ್ಕಾದರೆ ಗೆಜೆಟೆಡ್ ಅಧಿಕಾರಿ ದೃಢೀಕರಣ ಇರಬೇಕು.

ಸಾರ್ವಜನಿಕ ವಲಯದ ಬ್ಯಾಂಕ್ !

ಒಟ್ಟು ಫಲಾನುಭವಿಗಳು: 23.02 ಕೋಟಿ ಗ್ರಾಮೀಣ / ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 12.57 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 10.45 ಕೋಟಿ
ಒಟ್ಟು ರುಪೇ ಕಾರ್ಡ್: 17.84 ಕೋಟಿ ಫಲಾನುಭವಿಗಳ ಖಾತೆಗಳಲ್ಲಿನ
ಒಟ್ಟು ಬ್ಯಾಲೆನ್ಸ್: 50519.75 ಕೋಟಿ

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ :

ಒಟ್ಟು ಫಲಾನುಭವಿಗಳು: 4.68 ಕೋಟಿ ಗ್ರಾಮೀಣ / ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 3.98 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 0.71 ಕೋಟಿ ಒಟ್ಟು ರುಪೇ ಕಾರ್ಡ್: 3.54 ಕೋಟಿ
ಫಲಾನುಭವಿಗಳ ಖಾತೆಗಳಲ್ಲಿನ ಒಟ್ಟು ಬ್ಯಾಲೆನ್ಸ್: 11780.21 ಕೋಟಿ

ಖಾಸಗಿ ಬ್ಯಾಂಕ್ :

ಒಟ್ಟು ಫಲಾನುಭವಿಗಳು: 0.93 ಕೋಟಿ
ಗ್ರಾಮೀಣ / ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 0.56 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 0.38 ಕೋಟಿ
ಒಟ್ಟು ರುಪೇ ಕಾರ್ಡ್: 0.86 ಕೋಟಿ ಫಲಾನುಭವಿಗಳ ಖಾತೆಗಳಲ್ಲಿನ
ಒಟ್ಟು ಬ್ಯಾಲೆನ್ಸ್: 2064.95 ಕೋಟಿ

ಒಟ್ಟು ಅಂಕಿ-ಅಂಶ:

ಒಟ್ಟು ಫಲಾನುಭವಿಗಳು: 28.63 ಕೋಟಿ
ಒಟ್ಟು ಗ್ರಾಮೀಣ/ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 17.10 ಕೋಟಿ
ನಗರ/ಮೆಟ್ರೊ ಬ್ಯಾಂಕ್ ಶಾಖೆಗಳಲ್ಲಿ ಫಲಾನುಭವಿಗಳು: 11.53 ಕೋಟಿ
ಒಟ್ಟು ರುಪೇ ಕಾರ್ಡ್: 22.24 ಕೋಟಿ ಫಲಾನುಭವಿಗಳ ಖಾತೆಗಳಲ್ಲಿನ
ಒಟ್ಟು ಬ್ಯಾಲೆನ್ಸ್: 64364.91 ಕೋಟಿ

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮತ್ತು ಬಡ ಜನರನ್ನು ಮುಖ್ಯ ವಾಹಿನಿಗೆ ಕರೆತರುವಲ್ಲಿ ಈ ಯೋಜನೆ ಸಹಾಯಕಾರಿಯಾಗಲಿದ್ದು, ದೇಶದ ಬಡ ಮತ್ತು ಅತಿ ಬಡ
ವರ್ಗದವರಿಗೆ ಜನಧನ ಯೋಜನೆಯ ಮುಖಾಂತರ ಬ್ಯಾಂಕ್ ಖಾತೆ ಹೊಂದಲು ಅವಕಾಶವಿದೆ. ದೇಶದ ಕೋಟ್ಯಂತರ ಕುಟುಂಬಗಳು ಮೊಬೈಲ್ ಹೊಂದಿವೆಯಾದರೂ ಕೂಡ ಬ್ಯಾಂಕ್ ಖಾತೆ ಹೊಂದಿಲ್ಲ. ಹಾಗಾಗಿ ದೇಶದ ಆರ್ಥಿಕ ಅಭಿವೃದ್ಧಿಗಾಗಿ ಇಂತಹ ಪರಿಸ್ಥಿತಿಯ ಬದಲಾವಣೆ ಮಾಡ ಹೊರಟಿರುವ ಮೋದಿಯ ಯೋಜನೆಯನ್ನು ಗೌರವಿಸುವುದು ನಮ್ಮ ಕರ್ತವ್ಯ!!

-ಅಲೋಖಾ

Tags

Related Articles

Close