ಪ್ರಚಲಿತ

ಆರ್ ಎಸ್ ಎಸ್ ಮುಖಂಡ ಆ ದೇವಸ್ಥಾನಕ್ಕೆ ಕಾಲಿಟ್ಟಿದ್ದೇ ತಪ್ಪಾಯಿತಂತೆ!! ಕಾಂಗ್ರೆಸ್ ನಾಯಕನಿಗೆ ಅವಮಾನ ಮಾಡಿದ ಕಾಂಗ್ರೆಸ್ ನಾಯಕ.!!

ಸಿದ್ದರಾಮಯ್ಯನವರು ಅಧಿಕಾರಕ್ಕೆ ಏರುತ್ತಲೇ ಇಡೀ ಕರ್ನಾಟಕದ ಚಿತ್ರಣವೇ ಬದಲಾಗಿತ್ತು.
ಶಾಂತಿಗೆ ಹೆಸರಾಗಿದ್ದ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಹಿಂದೂ ವಿರೋಧಿ ನೀತಿಯಿಂದಲೇ ಆಡಳಿತ ನಡೆಸುತ್ತಾ ಬಂದಿದ್ದಾರೆ…!!

ಸಿದ್ದರಾಮಯ್ಯನವರನ್ನು ಹೊಗಳಿ ಹಿಂದೂ ಧರ್ಮವನ್ನು ಹೀಯಾಳಿಸುವವರಿಗೆ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಡುತ್ತಿದೆ. ರಾಜ್ಯ ಸರಕಾರದ ವೈಫಲ್ಯವನ್ನು ಮುಚ್ಚಿಹಾಕಿ ಮೋದಿಸರಕಾರವನ್ನು ಪ್ರಶ್ನಿಸುವ ಕೆಲ ಬುದ್ದಿ ಜೀವಿಗಳು ಸಿದ್ದರಾಮಯ್ಯನವರ ಸಂಪುಟದಲ್ಲಿ ಇದ್ದಾರೆ…!

ಇದೇ ರೀತಿ ಪಟ್ಟ ಗಿಟ್ಟಿಸಿಕೊಂಡವರ ಸಾಲಿನಲ್ಲಿ ಬರುವವರು ದಿನೇಶ್ ಅಮೀನ್ ಮಟ್ಟು. ಹಿಂದೂ ಧರ್ಮದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡುತ್ತಾ ಹಿಂದೂ ಧರ್ಮದಲ್ಲಿ ದೇವರೇ ಇಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ದಿನೇಶ್ ಅಮೀನ್ ಮಟ್ಟು ಇಂತಹ ಹೇಳಿಕೆಗಳಿಂದಲೇ ರಾಜ್ಯ ಸರಕಾರದಲ್ಲಿ ಸ್ಥಾನ ಗಿಟ್ಡಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರನಾಗಿ ನೇಮಕಗೊಂಡ ದಿನೇಶ್ ಅಮೀನ್ ಮಟ್ಟು ಪದೇ ಪದೇ ನಾಸ್ತಿಕವಾದದ ಹೇಳಿಕೆ ನೀಡುತ್ತಲೇ ಬಂದಿದ್ದಾರೆ…!!

ಇದೀಗ ಮತ್ತೆ ಕರಾವಳಿಯಲ್ಲಿ ಜಾತಿವಾದದ ಹೆಸರಿನಲ್ಲಿ ಗಲಾಟೆ ಸ್ರಷ್ಟಿಸುವ ಹುನ್ನಾರವನ್ನು ಮಾಡುತ್ತಿದ್ದಾರೆ…ಕರಾವಳಿ ಹಿಂದೂಗಳ ಭದ್ರಕೋಟೆ ಎಂಬೂದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿ ಜಾತಿಯ ಆಧಾರವಾಗಿ ಜನರನ್ನು ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ ಕಾಂಗ್ರೆಸಿಗರು…!!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಲಿಷ್ಟ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಕರಾವಳಿಯಲ್ಲಿ ಹಿಂದೂಗಳ ಹ್ರದಯ ಸಾಮ್ರಾಟ ಎಂಬೂದರಲ್ಲಿ ಸಂಶಯವಿಲ್ಲ…!! ಇದೇ ಕಲ್ಲಡ್ಕ ಭಟ್ ರ ವಿರುದ್ಧ ಪಿತೂರಿ ನಡೆಸುತ್ತಲೇ ಇರುವ ರಾಜ್ಯ ಸರ್ಕಾರ ಪದೇ ಪದೇ ಕರಾವಳಿಯಲ್ಲಿ ಕೋಮುಗಲಭೆ ನಡೆಯುವಂತೆ ಮಾಡುತ್ತಿದೆ…

ನಮ್ಮದು ಜಾತಿ ರಾಜಕೀಯ ಅಲ್ಲ ಎಂದು ಬೊಗಳೆ ಬಿಡುತ್ತಿರುವ ರಾಜ್ಯ ಸರಕಾರದ ಕರಾಳ ಮುಖ ಮತ್ತೆ ಬಯಲಾಗಿದೆ. ಕಾಂಗ್ರೆಸ್ ನ‌ ಹಿರಿಯ ರಾಜಕಾರಣಿ ಮತ್ತು ಕಾಂಗ್ರೆಸ್ ನ‌ ವಿತ್ತ ಸಚಿವರಾಗಿದ್ದ ಪ್ರಭಾವಿ ನಾಯಕ ಜನಾರ್ದನ ಪೂಜಾರಿಯವರು ತನ್ನ ನೇರ ನುಡಿಗಳಿಂದಲೇ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಇರುವುದಂತೂ ಸತ್ಯ…!!
ಎಲ್ಲಾ ಜಾತಿ ಎಲ್ಲಾ ಧರ್ಮ ಒಂದೇ ಎಂದು ಜಗತ್ತಿಗೆ ಸಾರಿದ್ದ ಬ್ರಹ್ಮಶ್ರೀ ನಾರಾಯಣಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣಾಥೇಶ್ವರ ದೇವಾಲಯವನ್ನು ನಾರಾಯಣಗುರುಗಳ ಮರಣನಂತರ ಮಂಗಳೂರಿನಲ್ಲಿ ಜನಾರ್ದನ ಪೂಜಾರಿಯವರ ನೇತ್ರತ್ವದಲ್ಲಿ ಮತ್ತೆ ಈ ದೇವಾಲಯ ಪುನರುಜ್ಜೀವನ ಪಡೆದಿತ್ತು.
ಅದೇ ರೀತಿ ಇಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಗುಡಿ ನಿರ್ಮಿಸುವ ಮೂಲಕ ಸರ್ವಧರ್ಮೀಯರಿಗೂ ಇಲ್ಲಿ ಅವಕಾಶ ಇದೆ ಎಂದು ಸಾರಿದವರು ಜನಾರ್ದನ ಪೂಜಾರಿಯವರು. ಪ್ರತೀ ವರ್ಷ ನಡೆಯುವ ಮಂಗಳೂರು ದಸರಾ ಉತ್ಸವ ಬಹಳ ವಿಜ್ರಂಭಣೆಯಿಂದ ನಡೆಯುತ್ತದೆ ಮತ್ತು ಇಲ್ಲಿಗೆ ಎಲ್ಲಾ ಜಾತಿಯ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಕಳೆದ ಬಾರಿ ಆರ್ ಎಸ್ ಎಸ್ ನ ನಾಯಕ‌ ಕಲ್ಲಡ್ಕ ಪ್ರಭಾಕರ್ ಭಟ್ ಆಗಮಿಸಿ ಜನಾರ್ದನ ಪೂಜಾರಿಯ ಜೊತೆ ವೇದಿಕೆ‌ ಹಂಚಿಕೊಂಡಿದ್ದರು. ಇದೀಗ ಅದೇ ವಿಚಾರವಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ…!!

ನಾರಾಯಣ ಗುರುಗಳು ಸೌಹಾರ್ದತೆಯನ್ನು ಬಯಸಿದವರು.ಆದರೆ ಪ್ರಭಾಕರ್ ಭಟ್ ಹಿಂದುತ್ವವಾದಿ.ಇಂತವರು ನಾರಾಯಣ ಗುರುಗಳ ಗುಡಿಯಿರುವ ದೇವಾಲಯಕ್ಕೆ ಕಾಲಿಟ್ಟಿರುವುದರಿಂದ ದೇವಾಲಯ ಅಶುದ್ದವಾಗಿದೆ ಎಂದು ವಿವಾದಾತ್ಮಕವಾಗಿ ಹೇಳಿದ್ದಾರೆ.

ಜನಾರ್ದನ ಪೂಜಾರಿಯವರು ಕರ್ನಾಟಕ ರಾಜ್ಯ ಕಾಂಗ್ರೆಸ್ ನ‌ ಎಲ್ಲಾ ನಡೆಗಳನ್ನು ವಿರೋಧಿಸುತ್ತಲೇ ಬಂದಿದ್ದರು.
ಸಿದ್ದರಾಮಯ್ಯನವರ ಆಡಳಿತದ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಲೇ ಇರುವುದರಿಂದ ಪಕ್ಷವು ಜನಾರ್ದನ ಪೂಜಾರಿಯವರನ್ನು ತನ್ನಿಂದ ದೂರ ಇಟ್ಟಿತ್ತು…!!

ದಿನೇಶ್ ಅಮೀನ್ ಮಟ್ಟುರವರ ಈ ಹೇಳಿಕೆಯಿಂದ ಮತ್ತೆ ಕಾಂಗ್ರೆಸ್ ಜಾತಿಯ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ.
ಸಿದ್ದರಾಮಯ್ಯನವರು ಮಾಂಸ ತಿಂದು ಧರ್ಮಸ್ಥಳ ಕ್ಷೇತ್ರದ ಒಳ‌ ಪ್ರವೇಶಿಸಿದಾಗ ಅಸ್ಪ್ರಶ್ಯತೆಯ ಮಾತನಾಡದ ಇಂತಹ ಕಾಂಗ್ರೆಸ್ ನ‌ ನಾಯಕರು ಇದೀಗ ಕಟ್ಟರ್ ಹಿಂದುತ್ವವಾದಿ ಬ್ರಾಹ್ಮಣ ವರ್ಗದ ಪ್ರಭಾಕರ್ ಭಟ್ ರು ಕುದ್ರೋಳಿ ಭೇಟಿಯನ್ನು ವಿರೋಧಿಸಿದ್ದಾರೆ ಎಂದರೆ ಈ ಕಾಂಗ್ರೆಸ್ ನ ಮನಸ್ಥಿತಿ ಯಾವ ರೀತಿಯಲ್ಲಿ ಇದೆ ಎಂಬುದು ತಿಳಿಯುತ್ತದೆ…!!!

ಕರಾವಳಿಯಲ್ಲಿ ಧರ್ಮದ ವಿಚಾರವಾಗಿ ಕೋಮುಗಲಭೆ ಸ್ರಷ್ಟಿಸಿದ ಕಾಂಗ್ರೆಸ್ ಇದೀಗ ಮತ್ತೆ ಜಾತಿಯ ಆಧಾರವಾಗಿ ಜನರನ್ನು ಉದ್ರೇಕಿಸುವ ಕಾರ್ಯದಲ್ಲಿ ತೊಡಗಿದೆ…!!!

source: public tv

  • ಅರ್ಜುನ್
Tags

Related Articles

Close