ಅಂಕಣಪ್ರಚಲಿತ

ಇನ್ನು ಮುಂದೆ ಕಾವೇರಿ ಗಲಾಟೆಯೂ ಇಲ್ಲ, ಮಹದಾಯಿ ಹೋರಾಟವೂ ಇಲ್ಲ!! ನೀರನ್ನು ಬೇಕಾಬಿಟ್ಟಿ ಬಳಸಲು ಮೋದಿಯ ಈ ಯೋಜನೆ ದೇಶದಲ್ಲೇ ಸಂಚಲನ ಸೃಷ್ಟಿಸಲಿದೆ!!

ಇನ್ನು ಕೆಲವೇ ಕೆಲವು ವರ್ಷಗಳಷ್ಟೆ…. ಈ ದೇಶದಲ್ಲಿ ನೀರಿಗಾಗಿ ನಡೆಯುವ ಹೋರಾಟವೊಂದು ಅಲ್ಲಿಗೇ ಹೇಳಹೆಸರಲಿಲ್ಲದಂತೆ ನಿಲ್ಲಲಿದೆ. ನೀರಿನ ವಿಷಯ ತೆಗೆದುಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ರಾಜಕೀಯ ಮಾಡುವ ಮಂದಿಯೆಲ್ಲಾ ಮನೆಗೆ ಹೋಗುವ ಕಾಲ ಬಂದಿದೆ. ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ನಡೆಯುವ ಗಲಭೆಯಂತೆ, ಮಹದಾಯಿ ವಿಚಾರಕ್ಕಾಗಿ ನಡೆಯುವ ಹೋರಾಟ ಇವೆಲ್ಲಾ ಮುಂದೊಂದು ದಿನ ಇತಿಹಾಸವಾಗಲಿದೆ.

ಇಡೀ ದೇಶದ ಜನತೆ ನೀರಿನಲ್ಲಿ ಮುಳುಗೇಳುವಷ್ಟು ಖುಷಿ ಪಡಲಿದ್ದಾರೆ. ಭಾರತದಲ್ಲಿ ಬರಗಾಲ ಎನ್ನುವುದು ಹೇಳಹೆಸರಲಿಲ್ಲದಂತೆ ನಾಶವಾಗಲಿದೆ. ರೈತ ವರ್ಷಪೂರ್ತಿ ಚಿನ್ನದ ಬೆಳೆ ಬೆಳೆಸಲಿದ್ದಾನೆ. ದೇಶದಲ್ಲಿ ತೋಟಗಾರಿಕೆ, ಕೃಷಿ ವೃದ್ಧಿಸಿಕೊಂಡು ಭಾರತದಿಂದ ಇಡೀ ವಿಶ್ವಕ್ಕೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುವಷ್ಟು ಇಡೀ ದೇಶಕ್ಕೆ ದೇಶವೇ ಬೆಳೆಯಲಿದೆ. ಈ ಯೋಜನೆ ಎಂದೋ ಬಂದಿದ್ದರೆ ಈ ದೇಶದಲ್ಲಿ ನೀರಿಗಾಗಿ ನಡೆಯುವ ಗಲಾಟೆಯೊಂದು ಎಂದೋ ಇತಿಹಾಸ ಸೇರುತ್ತಿತ್ತು. ಆದರೆ ಈ ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದ ಪರಿಣಾಮ ಇಂದು ನೀರನ್ನು ಹಣ ಕೊಟ್ಟು ಖರೀದಿಸುವಂಥಾ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ.

ಸಮುದ್ರದ ನೀರು ಉಪ್ಪಲ್ಲ…!

ಭಾರತವನ್ನು ಪರ್ಯಾಯ ದ್ವೀಪ ಎನ್ನುತ್ತಾರೆ. ಯಾಕೆಂದರೆ ಭಾರತದ ಮೂರು ದಿಕ್ಕುಗಳಲ್ಲಿ ಸಮುದ್ರ ಸುತ್ತುವರಿದಿದೆ. ಒಂದು ವೇಳೆ ಸಮುದ್ರ ಕೊಂಚ ಉಕ್ಕಿದರೂ ಇಡೀ ಭಾರತವೇ ನೀರಿನಲ್ಲಿ ಮುಳುಗಿಹೋಗಬಹುದು. ಸಮುದ್ರದ ಅಘಾದ ನೀರನ್ನು ಇಟ್ಟುಕೊಂಡು ಇಂದು ಭಾರತೀಯರಾದ ನಾವು ನೀರಿಲ್ಲದೆ ಬರಗಾಲ ಪಡುತ್ತಿದ್ದೇವೆ ಎಂದರೆ ಇದಕ್ಕಿಂತ ನಾಚಿಕೆಕೇಡು ವಿಷಯ ಬೇರೊಂದಿಲ್ಲ. ಸಮುದ್ರದ ನೀರನ್ನು ಶುದ್ಧೀಕರಿಸಿ ಅದನ್ನು ಕುಡಿಯುವುದರಿಂದ ಹಿಡಿದು, ಸ್ನಾನ, ಕೃಷಿ, ಕೈಗಾರಿಕೆಗೆ ಬೇಕಾಬಿಟ್ಟಿ ಬಳಸಬಹುದು. ದೇಶದಲ್ಲಿ ಬರಗಾಲ ಎನ್ನುವ ಶಬ್ದವೇ ಮರೆತುಹೋಗುತ್ತದೆ. ಹೌದು ಇಂಥದೊಂದು ಭರ್ಜರಿ ನೀರುಣಿಸುವ ಕೆಲಸಕ್ಕೆ ಮೋದಿ ಸರಕಾರ ಕೈ ಹಾಕಿದೆ….

ಸಮುದ್ರದ ನೀರನ್ನು ಶುದ್ಧೀಕರಿಸುವುದು ಹೇಗೆ?

ಮನುಷ್ಯರು ಲವಣಯುಕ್ತ ನೀರನ್ನು ಕುಡಿಯಲು ಸಾಧ್ಯವಿಲ್ಲ. ಆದರೆ, ಲವಣಯುಕ್ತ ನೀರಿನಿಂದ ಸಿಹಿನೀರನ್ನಾಗಿ ಪರಿವರ್ತಿಸಬಹುದು. ಈ ರೀತಿ ಮಾಡಲು ವಿದ್ಯುತ್‍ಗಾಗಿ ಖರ್ಚು ಮಾಡುವಂತೆಯೂ ಇಲ್ಲ. ಯಾಕೆಂದರೆ ಬೇಕಾದಷ್ಟು ಸೌರಶಕ್ತಿ ಇದೆ. ಗಾಳಿ ಹಾಗೂ ಸೌರಶಕ್ತಿಯನ್ನು ಬಳಸಿಕೊಂಡು ನೀರನ್ನು ಶುದ್ಧೀÀರಿಸುವುದಕ್ಕೆ ಡಸಲಿನೇಶನ್ ಎಂದು ಕರೆಯಲಾಗುತ್ತದೆ. ಈ ಮೂಲಕ ಅಗತ್ಯವಿರುವ ಕಡೆಗಳಿಗೆ ಸಿಹಿನೀರನ್ನು ಸುಭವಾಗಿ ರವಾನಿಸಬಹುದು. ಈ ಯೋಜನೆಯನ್ನು ಇಂದು ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಬಳಸುತ್ತವೆ.

ಕಡಲ ನೀರನ್ನು ತಾಜಾ ನೀರನ್ನಾ ಪರಿವರ್ತಿಸಲು ಅದರಿಂದ ಉಪ್ಪನ್ನು ತೆಗೆಯುವ ಸರಳ ವಿಧಾನದಿಂದ ಬರಪೀಡಿತ ರಾಜ್ಯಗಳಿಗೆ ನೀರುಣಿಸಬಹುದು. ಫ್ಯಾನಿನ ಮುಖಾಂತರ ಸಮುದ್ರದಲ್ಲೇ ನೀರನ್ನು ಕುದಿಸಿ ಅದನ್ನು ಬಳಸಿಕೊಳ್ಳುವುದು. ಆದರೆ ಈಗಿನ ತಾಂತ್ರಿಕ ಪ್ರಕ್ರಿಯೆಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಶುದ್ಧೀಕರಿಸುವುದು ಕಷ್ಟ ಎನ್ನುತ್ತಾರೆ. ಆದರೆ ಗಾಳಿ ಹಾಗೂ ಸೌರಶಕ್ತಿಯಿಂದ ಕಡಿಮೆ ಖರ್ಚಿನಲ್ಲಿ ನೀರನ್ನು ಶುದ್ಧೀಕರಿಸಲು ಮೋದಿ ಸರಕಾರ ಮುಂದಾಗಿದೆ. ಈ ವಿಧಾನದಿಂದ ಉಪ್ಪನ್ನು ಕೂಡಾ ತಯಾರಿಸಬಹುದು.

ಉಪ್ಪು ಕರಗಿದ ನೀರಿನ ಸಾಂದ್ರತೆ ಹೆಚ್ಚು. ಸಮುದ್ರದ ನೀರಲ್ಲಿ ಉಪ್ಪು ಕರಗಿರುವುದರಿಂದ ಅದರ ಸಾಂದ್ರತೆ ಹೆಚ್ಚು. ಇದನ್ನು ಅಳೆಯಲು ಪಿಪಿಎಂ(ಪಾಟ್ರ್ಸ್ ಆಫ್ ಮಿಲಿಯನ್) ಎನ್ನುವ ತೂಕಮಾನವನ್ನು ಬಳಸುತ್ತಾರೆ. ಸಾಮಾನ್ಯವಾಗಿ ಶುದ್ಧೀಕರಿಸಿದ ನೀರು 1000 ಪಿಪಿಎಂ ಹೊಂದಿದ್ದರೆ ನಾವು ಕುಡಿಯುವ ನೀರು 1000 ದಿಂದ 30000 ಪಿಪಿಎಂ ಹೊಂದಿದೆ. ಸಮುದ್ರದಿಂದ 3000ದಿಂದ 10000 ಪಿಪಿಎಂವರೆಗೆ ನೀರನ್ನು ಶುದ್ಧೀಕರಿಸಬಹುದು. ಅದರ ಪಿಪಿಎಂ ಆಧಾರದಲ್ಲಿ ಕುಡಿಯಲು, ಸ್ನಾನಕ್ಕೆ, ಕೃಷಿಗೆ, ಕೈಗಾರಿಕೆಗಳಿಗೆ ಸುಲಭವಾಗಿ ಬಳಸಬಹುದು. 10000 ಪಿಪಿಎಂ ನೀರನ್ನು ತೋಟ, ಕೃಷಿ, ಸ್ನಾನಕ್ಕೆ ಬಳಸಬಹುದಾಗಿರುವುದರಿಂದ ಇದಕ್ಕೆ ಖರ್ಚು ಕಡಿಮೆ ಬಿದ್ದರೆ ಕುಡಿಯುವ ನೀರಿಗೆ ಸ್ವಲ್ಪ ಜಾಸ್ತಿ ಖರ್ಚು ಬೀಳುತ್ತದಷ್ಟೆ.

ಸಮುದ್ರದ ನೀರನ್ನು ಬಳಸಲು ಹಲವಾರು ಶುಷ್ಕ ಹವೆ ಹೊಂದಿದ ರಾಷ್ಟ್ರಗಳು ಮುಂದಾಗಿವೆ. ನೀರಿನ ಸಂಪನ್ಮೂಲವನ್ನು ಹೊಂದಿರದ, ಅಂತರ್ಜಲ ಇಲ್ಲದ ಕಡೆಗಳಿಗೆ ಈ ಡಸಲೀಕರಣದ ನೀರನ್ನು ಬಳಸಬಹುದು. ಇದಕ್ಕೆ ಸೌರ ಶುದ್ಧೀಕರಣ ವಿಧಾನವನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆ ಸಮುದ್ರದಲ್ಲೇ ನಡೆಯುವುದರಿಂದ ಭೂಮಿ ಕಳೆದುಕೊಳ್ಳುತ್ತೇವೆ ಎಂಬ ಭಯವೂ ಇಲ್ಲ. ಸಮುದ್ರದ ನೀರು ಆವಿಯಾಗುವುದನ್ನು ತಡೆದು ಮಾಡುವ ಕೆಲಸ. ಆದ್ದರಿಂದ ಜಲಚರಗಳಿಗೂ ತೊಂದರೆಯಾಗುವುದಿಲ್ಲ.

ಸಮುದ್ರದ ನೀರು ಶುದ್ಧೀಕರಣ ಪ್ರಕ್ರಿಯೆಗಳು ನಿಜವಾಗಿಯೂ ದುಬಾರಿಯಲ್ಲ. ಆದರೆ ನಮ್ಮ ದೇಶದಲ್ಲಿ ಅಂಥದೊಂದು ಗುಮ್ಮವನ್ನು ಹಬ್ಬಿಸಿ ಬಿಡಲಾಗಿದೆ.. ಈ ವಿಧಾನವನ್ನು ಈಗಾಗಲೇ ಸೌದಿ ಅರೇಬಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಮತ್ತು ಬಹ್ರೇನ್ ರಾಷ್ಟ್ರಗಳಲ್ಲಿ ಶೇ.70ರಷ್ಟು ಸಮುದ್ರದ ನೀರನ್ನು ಬಳಸುತ್ತಾರೆ. ಉತ್ತರ ಆಫ್ರಿಕಾದ ಮುಖ್ಯವಾಗಿ ಲಿಬಿಯಾ ಮತ್ತು ಆಲ್ಜೀರಿಯಾದಂತಾ ತೀರಾ ಬಡ ದೇಶಗಳೂ ಇದನ್ನು ಬಳಸುತ್ತಾರೆ.

ಕೈಗಾರಿಕೀಕರಣಗೊಂಡ ದೇಶವಾದ ಅಮೆರಿಕಾ ಸಂಯುಕ್ತ ಸಂಸ್ಥಾನ ಡಸಲೀಕರಣಗೊಂಡ ನೀರಿನ ಪ್ರಮುಖ ಬಳಕೆದಾರರಲ್ಲಿ ಒಂದಾಗಿದೆ. ವಿಶೇಷವಾಗಿ ಕ್ಯಾಲಿಫೆÇೀರ್ನಿಯಾ ಮತ್ತು ಫೆÇ್ಲೀರಿಡಾದ ಭಾಗಗಳಲ್ಲಿ ಡಸಲಿನೀಕರಣದ ವೆಚ್ಚವನ್ನು ಕೈಗಾರಿಕೆಗಳಿಂದ ಪಡೆಯಲಾಗುತ್ತದೆ. ಒಂದು ವೇಳೆ ಭಾರತದಲ್ಲಿ ಡಸಲೀಕರಣ ವ್ಯವಸ್ಥೆಯನ್ನು ಮಾಡಿದರೆ ಅದರ ವೆಚ್ಚವನ್ನು ಕೈಗಾರಿಕೆಗಳಿಂದ ಪಡೆಯಬಹುದು. ಕೈಗಾರಿಕೆಗಳಿಗೂ ಬೇಕಾದಷ್ಟು ನೀರು, ನಮಗೂ ಇದರಿಂದ ಮಹದುಪಕಾರ…

ಭಾರತದ ಚೆನ್ನೈಯಲ್ಲಿರುವ ಕಟ್ಟುಪಲ್ಲಿ ಎಂಬಲ್ಲಿ ಸಮುದ್ರ ನೀರು ಶುದ್ಧೀಕರಣ ಘಟಕವಿದೆ. ಇದನ್ನು ಮಿಂಜುರ್ ಡಿಸಲಿನೇಷನ್ ಪ್ಲಾಂಟ್ ಎಂದು ಕರೆಯಲಾಗುತ್ತದೆ. 60 ಎಕ್ರೆ ಜಾಗದಲ್ಲಿ ಈ ಘಟಕವಿದೆ. ಇದನ್ನು ಭಾರತದ ಐವಿಆರ್‍ಸಿಎಲ್ ಹಾಗೂ ಸ್ಪಾನಿಷ್ ಅಬೆಂಗೋವಾ ಸೇರಿ ನಿರ್ಮಿಸಿದೆ. ಉಳಿದಂತೆ ಈ ಯೋಜನೆ ಜನಪ್ರಿಯವಾಗಿಲ್ಲ.

ಮೋದಿ ಸರಕಾರದಿಂದ ಸಮುದ್ರದ ಉಪ್ಪುನೀರನ್ನು ಸಿಹಿಯಾಗಿಸುವ ತಂತ್ರ…!!

ನಿಮಗೆ ನೆನಪಿರಬಹುದು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಇಸ್ರೇಲ್‍ಗೆ ಭೇಟಿ ನೀಡಿ ಬಂದಿದ್ದರು. ಮೋದಿ ಸುಮ್ಮನೆ ಶೋಕಿ ಮಾಡಲು ಹೋಗಿದ್ದಾನೆ ಎಂದು ಪ್ರಚಾರ ಹಬ್ಬಿಸುವವರಿಗೆ ಮೋದಿಯ ಯೋಜನೆ ಏನೆಂದು ಗೊತ್ತೇ ಇರಲಿಲ್ಲ. ಇಸ್ರೇಲ್‍ಗೆ ಭೇಟಿ ನೀಡಿದ ತಕ್ಷಣ ಮೋದಿ ಭೇಟಿ ಮಾಡಿದ್ದು ಸಮುದ್ರದ ನೀರಿನ ಶುದ್ಧೀಕರಣ ಘಟಕಕ್ಕೆ…!!! ಅಲ್ಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹುನ್ ಜೊತೆ ಈ ಘಟಕಕ್ಕೆ ನಡೆದುಕೊಂಡೇ ಭೇಟಿ ನೀಡಿದರು. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಗೋಪಾಲ ಬಾಗ್ಲೆ ಟ್ವೀಟ್ ಕೂಡಾ ಮಾಡಿದ್ದರು.

ಮೋದಿ ಹಾಗೂ ನೇತನ್ಯಾಹು ಇಸ್ರೇಲ್‍ನ ಹೈಫಾ ಹಾಗು ಟೆಲ್‍ಅವಿವ್‍ಗೆ ತೆರಳಿ ಅಲ್ಲಿನ ಬೀಚ್‍ನಲ್ಲಿ ನಿಂತು ಸಮುದ್ರ ನೀರು ಶುದ್ಧೀಕರಣ ಘಟಕವನ್ನು ನೋಡಿದರು. ಇದನ್ನು ಕಂಡು ಖುಷಿಪಟ್ಟ ಮೋದಿ ನೇತನ್ಯಾಹು ಅವರನ್ನು ಖುಷಿಯಿಂದ ತಬ್ಬಿಕೊಂಡಯ ಹಸ್ತಲಾಘವ ಕೂಡಾ ಮಾಡಿದ್ದರು.

ಇಸ್ರೇಲ್ ಸಮುದ್ರ ನೀರಿನ ಬಳಕೆ ಹಾಗೂ ಮರುಬಳಕೆಯಲ್ಲಿ ಎತ್ತಿದ ಕೈ. ಇದನ್ನೇ ಭಾರತದಲ್ಲೂ ಅಳವಡಿಸಬೇಕೆಂದು ಮೋದಿ ನಿರ್ಧರಿಸಿದರು.

ಅದಕ್ಕೆಂದೇ ಜೆರುಸಲೆಮ್‍ನಲ್ಲಿ ಮೋದಿ ಮತ್ತು ನೇತನ್ಯಾಹು ನೇತೃತ್ವದಲ್ಲಿ ನಡೆದ ದ್ವಿಪಕ್ಷೀಯ ಚರ್ಚೆಯ ನಂತರ, ಭಾರತದ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಇಸ್ರೇಲ್‍ನ ನ್ಯಾಚುಯೋ ಸಚಿವಾಲಯ(ಎಂಒಉ)ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಸ್ರೇಲ್ ಸಹಯೋಗದಲ್ಲಿ ಭಾರತದಲ್ಲಿ ಸಮುದ್ರದ ನೀರು ಶುದ್ಧೀಕರಣ ಘಟಕ ಆರಂಭಗೊಳ್ಳಲಿದೆ.

ಈಗಾಗಲೇ ಗುಜರಾತ್‍ನ ಅಹಮದಾಬಾದ್‍ನಲ್ಲಿ ಘಟಕ ಆರಂಭಿಸಲಾಗಿದೆ. ಉನ್ನತ ದರ್ಜೆಯ ಕಚ್ಚಾ ವಸ್ತುಗಳನ್ನು ಮತ್ತು ಘಟಕಗಳನ್ನು ಬಳಸಿಕೊಂಡು ಸ್ಥಾವರವನ್ನು ನಿರ್ಮಿಸಲಾಗುತ್ತಿದೆ. ಇದನ್ನು ಸಂಸ್ಥೆಯೊಂದು ಗುತ್ತಿಗೆ ಪಡೆದುಕೊಂಡಿದ್ದು, ಕಡಿಮೆ ಖರ್ಚಿನಲ್ಲಿ ಇದನ್ನು ಬೇರೆ ಕಡೆಗೂ ವಿಸ್ತರಿಸುವ ಬಗ್ಗೆ ಮನಸ್ಸು ಮಾಡಿದೆ.

ಜಗತ್ತಿನಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಸಮುದ್ರದ ನೀರನ್ನು ಶುದ್ಧೀಕರಣ ನಡೆಸುವುದು ಇಸ್ರೇಲ್. ಮೆಡಿಟರೇನಿಯನ್ ಟೆಲ್ ಅವಿವ್ ಎಂಬಲ್ಲಿ 10 ಮೈಲಿ ವಿಸ್ತಾರದಲ್ಲಿ ಸಮುದ್ರ ಶುದ್ಧೀಕರಣ ಸ್ಥಾವರವಿದೆ. ಇಡೀ ದೇಶದ ಶೇ. 20 ಭಾಗ ನೀರಿನ ಪೂರೈಕೆಯನ್ನು ಇದು ಮಾಡುತ್ತದೆ. ಐಡಿಇ ಟೆಕ್ನಾಲಜಿ( ಇಸ್ರೇಲ್ ಡಿಸೆಲಿನೇಷನ್ ಎಂಟರ್‍ಪ್ರೈಸೆಸ್) ಎಂಬ ಸಂಸ್ಥೆ ಇದನ್ನು ನಡೆಸಿಕೊಂಡು ಬರುತ್ತಿದೆ. ಇಸ್ರೇಲಿಗರು ಕಡಿಮೆ ಖರ್ಚಿನಲ್ಲಿ ಇಡೀ ಜಗತ್ತಲ್ಲೇ ಎಲ್ಲೂ ಇರದ ಶುದ್ಧ ನೀರನ್ನು ಕುಡಿಯುತ್ತಿದ್ದಾರೆ.

ಇದರಿಂದ ಪ್ರತೀದಿನ 6,27,000 ಕ್ಯೂಬಿಕ್ ನೀರನ್ನು ಕೃಷಿಗಾಗಿಯೇ ಬಳಸಲಾಗುತ್ತದೆ. ಕೃಷಿಗಾಗಿ ಶೇ.40 ಸಮುದ್ರದ ಶುದ್ಧೀಕರಣ ಘಟಕದಿಂದ ಬಳಸಲಾಗುತ್ತದೆ. ಇದೀಗ ಸರಿಸುಮಾರು ಶೇ.70ಕ್ಕೆ ತಲುಪಿದೆ. ಆಸ್ಟ್ರೇಲಿಯಾ, ಸಿಂಗಾಪುರ, ಗಲ್ಫ್ ರಾಷ್ಟ್ರಗಳೂ ಕೂಡಾ ಇಸ್ರೇಲ್‍ನಿಂದ ಈ ಯೋಜನೆಯನ್ನು ಎರವಲು ಪಡೆದುಕೊಂಡಿದೆ. ಇಂದು ಇಸ್ರೇಲ್ ಎಷ್ಟು ಮುಂದುವರಿದಿದೆ ಎಂದರೆ ಕಾರ್ಬನ್ ಆಟಂ ಸ್ಟಿಕ್ ಹಾಗೂ ಕೆಲವೊಂದು ಸಸ್ಯಗಳನ್ನು ಅಭಿವೃದ್ಧಿಪಡಿಸಿ ನೀರನ್ನು ಅತಿಕಡಿಮೆ ಖರ್ಚಿನಲ್ಲಿ ಶುದ್ಧೀಕರಣಗೊಳಿಸಲು ಮುಂದಾಗಿದೆ.

ಇಸ್ರೇಲ್‍ನ ತಂತ್ರಜ್ಞಾನವನ್ನು ಭಾರತದಲ್ಲಿಯೂ ಬಳಸಲು ಮೋದಿ ಉತ್ಸುಹಕಗೊಂಡಿದ್ದಾರೆಂದರೆ ಇದಕ್ಕಿಂತ ಖುಷಿಯ ವಿಚಾರ ಬೇರೊಂದಿಲ್ಲ.

ಇನ್ನು ಭಾರತೀಯರೆಂದರೆ ಸಾಮಾನ್ಯರೇ? ಸರಕಾರ ಎತ್ತಿನ ಹೊಳೆ ಯೋಜನೆಗೆ 13 ಸಾವಿರ ಕೋಟಿ ಹಣವನ್ನು ಖರ್ಚು ಮಾಡುತ್ತಿರುವಾಗ ವಿಜ್ಞಾನಿಗಳ ತಂಡವೊಂದು ನಾವು 5000 ಕೋಟಿ ಹಣದಲ್ಲಿ ಇಡೀ ಕರ್ನಾಟಕಕ್ಕೆ ನೀರುಣಿಸುತ್ತೇವೆ ಎಂದು ಹೇಳಿಕೊಂಡಿತ್ತು. ಇಸ್ರೇಲ್ ಜೊತೆ ಭಾರತೀಯ ವಿಜ್ಞಾನಿಗಳೂ ಸೇರಿಕೊಂಡರೆ ಕಡಿಮೆ ವೆಚ್ಚದಲ್ಲಿ ಸಮುದ್ರದ ನೀರನ್ನು ಶುದ್ಧೀಕರಣಗೊಳಿಸಬಹುದು.

ಭಾರತ ನಿಜವಾಗಿಯೂ ನೋಡಿದರೆ ಜಲಸಂಪನ್ಮೂಲ ರಾಷ್ಟ್ರ. ಆದರೂ ಬಹುತೇಕ ರಾಜ್ಯಗಳು ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಈ ನೀರಿನ ದಾಹದಿಂದ ರಾಜ್ಯರಾಜ್ಯಗಳ ಮಧ್ಯೆ ಹೋರಾಟ ನಡೆಯುತ್ತಲೇ ಇದ್ದು ಕಾನೂನು ಸಮರವೂ ನಡೆಯುತ್ತಿದೆ. ಈ ಎಲ್ಲಾ ಸಮಸ್ಯೆಯನ್ನೇ ಕಂಡು ಮೋದಿ ಸರಕಾರ ಅಗಾಧ ನೀರಿನ ರಾಶಿಯಾದ ಸಮುದ್ರಕ್ಕೆ ಕೈಹಾಕಿ ಅದೇ ನೀರನ್ನು ಶುದ್ಧೀಕರಿಸಲು ಮುಂದಾಗಿರುವುದು ಒಂದು ದಿಟ್ಟ ಹೆಜ್ಜೆ. ಈ ಯೋಜನೆ ಈ ಮುಂಚೆಯೇ ನಡೆಯಬೇಕಿತ್ತು. ಆದರೆ ಮೋದಿಯ ದೆಸೆಯಿಂದ ನಡೆಯಲಿದೆ.

-ಚೇಕಿತಾನ ***

Tags

Related Articles

Close