ಅಂಕಣಪ್ರಚಲಿತ

ಇಸ್ರೇಲ್ ಎಂಬ ಪುಟ್ಟ ಹಾಗು ವಿಶ್ವದ ಶಕ್ತಿಶಾಲಿ ರಾಷ್ಟ್ರ ಭಾರತವನ್ನ ಅಷ್ಟೊಂದು ಹಚ್ಚಿಕೊಂಡಿರುವುದು ಯಾಕೆ ಗೊತ್ತಾ?!

ಇಸ್ರೇಲ್ ದೇಶದ ಹೆಸರನ್ನು ಕೇಳಿದರೆ ಒಮ್ಮೆಲೆ ರೋಮಾಂಚನವಾಗುತ್ತದೆ. ಯಾಕೆ ಗೊತ್ತಾ? ಅದು ತುಂಬಾ ಚಿಕ್ಕ ರಾಷ್ಟ್ರ. ಅದರ ಸುತ್ತಲೂ ಬರೀ ವೈರಿಗಳೇ ತುಂಬಿದ್ದಾರೆ. ದೊಡ್ಡ ದೊಡ್ಡ ದೇಶಗಳು ಇಸ್ರೇಲ್ ಕಂಡರೆ ಉರಿಯುತ್ತಾರೆ. ಆದರೆ ಇಸ್ರೇಲ್ ಯಾವನಿಗೂ ಹೆದರಿಲ್ಲ, ಹೆದರುವುದೂ ಇಲ್ಲ.

ಅದರಲ್ಲಿ ಆ ತಾಕತ್ತಿದೆ. ಇಸ್ರೇಲಿನ ಒಬ್ಬನೇ ಒಬ್ಬ ಸೈನಿಕ ಬೇರೆ ದೇಶದ ಸೈನಿಕನಿಂದ ಹುತಾತ್ಮನಾದರೆ, ಇಸ್ರೇಲ್ ಏನು ಮಾಡುತ್ತೆ ಗೊತ್ತಾ? ಹತ್ಯೆ ಮಾಡಿದ ಸೈನಿಕನ ದೇಶದ ಪ್ರಧಾನ ಮಂತ್ರಿಯ ಪಕ್ಕದ ಮನೆಯವರನ್ನು ಉಡಾಯಿಸಿ, ಒಂದು ಮೆಸೇಜ್ ಕೊಡುತ್ತದೆ. ಅದೇನು ಮೆಸೇಜ್ ಗೊತ್ತಾ? ಪ್ರಧಾನ ಮಂತ್ರಿಗಳ ಪಕ್ಕದ ಮನೆಗೆ ಬಂದು ಉಡಾಯಿಸಿ ಹೋಗಿದ್ದೇವೆಂದರೆ, ಪ್ರಧಾನಿಯನ್ನು ನಾವು ಉಡಾಯಿಸಬಲ್ಲೆವು ಎಂಬ ಮೆಸೇಜ್ ಕೊಡ್ತಾರೆ. ಹೀಗಾಗಿಯೆ ಆ ಪುಟ್ಟ ದೇಶಕ್ಕೆ ಜಗತ್ತೇ ಹೆದರುತ್ತದೆ. ಶತ್ರುರಾಷ್ಟ್ರಗಳ ಮಧ್ಯೆ ಇದ್ದರೂ ಎದೆಗುಂದದೆ ಏಕಾಂಗಿಯಾಗಿ ಹೋರಾಡುತ್ತಲೇ ವಿರೋಧಿಗಳ ಚಕ್ರವ್ಯೂಹವನ್ನು ಹೇಗೆ ಭೇದಿಸಬೇಕೆಂಬುದನ್ನು ವಿಶ್ವಕ್ಕೆ ಪರಿಚಯಿಸಿದ ಇಸ್ರೇಲ್ ರಣತಂತ್ರ.

ಕಳೆದ ಬಾರಿ ನರೇಂದ್ರ ಮೋದಿಯವರು ಇಸ್ರೇಲ್ ಗೆ ಭೇಟಿ ನೀಡಿದ್ದು ಐತಿಹಾಸಿಕ ಘಟನೆಯಾಗಿತ್ತು. ಆ ಪುಟ್ಟ ದೇಶ ಸತ್ಕರಿಸಿದ ರೀತಿ ಪ್ರತೀ ದೇಶಭಕ್ತ ಭಾರತೀಯರ ಮನದಲ್ಲಿ ಹಾಗೆಯೇ ಇದೆ. ಇಡೀ ಮಂತ್ರಿಮಂಡಲವೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಯವರನ್ನ ಸ್ವಾಗತಿಸಿತ್ತು. ವಿಶ್ವದ ಅತ್ಯಂತ ಸುರಕ್ಷಿತ ತಾಣದಲ್ಲಿ ಭಾರತದ ಪ್ರಧಾನಿಗೆ ಭದ್ರತೆ ನೀಡಿ, ರಾಜಾತಿಥ್ಯ ನೀಡಿತ್ತು. ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಮೆಡಿಟರೇನಿಯನ್ ಸಮುದ್ರ ತೀರಕ್ಕೆ ಮೋದಿಯವರನ್ನ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೇ ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವೊಂದಕ್ಕೆ ಮೋದಿಯವರ ಹೆಸರನ್ನಿಟ್ಟು ಇಸ್ರೇಲ್ ಗೌರವ ಸೂಚಿಸಿತ್ತು.

ಈಗ ಮತ್ತೊಂದು ಐತಿಹಾಸಿಕ ಘಟನೆಗೆ ಭಾರತ ಸಾಕ್ಷಿಯಾಗಿದೆ. ಅದೇನು ಗೊತ್ತಾ? ಇಸ್ರೇಲಿನ ಪ್ರಧಾನಿ ಇಂದು ಭಾರತಕ್ಕೆ ಬಂದಿದ್ದಾರೆ. ಇವತ್ತಿನಿಂದ ಆರು ದಿನಗಳ ಭಾರತ ಪ್ರವಾಸವನ್ನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಕೈಗೊಳ್ಳಲಿದ್ದಾರೆ. ಈ ಭೇಟಿಯೊಂದಿಗೆ ಭಾರತ ಪ್ರವಾಸಗೈದ ಎರಡನೇ ಇಸ್ರೇಲ್ ಪ್ರಧಾನಿಯಾಗಲಿದ್ದಾರೆ.

ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೇತಾನ್ಯಾಹು ಭಾರತಕ್ಕೆ ಸುಮ್ಮನೇ ಬರುತ್ತಿಲ್ಲ. ಅನೇಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಲಿವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ನೇತಾನ್ಯಾಹು ವಿಶೇಷ ಉಡುಗೊರೆ ನೀಡಲಿದ್ದಾರೆ.

ಅಷ್ಟಕ್ಕೂ ಇಸ್ರೇಲಿಗೂ ಭಾರತಕ್ಕೂ ಅದೇನಿದೆ ಅವಿನಾಭಾವ ಸಂಭಂದ? ಅಷ್ಟಕ್ಕೂ ಇಸ್ರೇಲ್ ಎಂಬ ಪುಟ್ಟ ರಾಷ್ಟ್ರ ಭಾರತವನ್ನ ಯಾಕೆ ಅಷ್ಟೊಂದು ಪ್ರೀತಿಸುತ್ತೆ?

ಇಸ್ಲಾಮೀಕರಣಕ್ಕೆ ತೊಡೆ ತಟ್ಟಿ ಇಸ್ರೇಲ್ ನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುವ ಜಿಹಾದಿಗಳ ತೊಡೆಯನ್ನೇ ಇಸ್ರೇಲ್ ಮುರಿದುಹಾಕಿತ್ತು. ಹೀಗಾಗಿಯೇ ಇಸ್ಲಾಮೀಕರಣಕ್ಕೆ ಇಸ್ರೇಲೀಕರಣವೇ ಮದ್ದು ಎಂಬಂತಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಇಲ್ಲಿಯವರೆಗೆ ಇಸ್ರೇಲ್’ಗೆ ಭಾರತದ ಯಾವ ಪ್ರಧಾನಿಯೂ ಭೇಟಿ ನೀಡಿರಲಿಲ್ಲ.

ಯಾಕೆ ಗೊತ್ತಾ?

ಇಸ್ರೇಲಿಗೆ ಭೇಟಿ ಕೊಟ್ಟರೆ ತಮ್ಮ “ಸೆಕ್ಯೂಲರಿಸಂಗೆ” ಧಕ್ಕೆ ಬರುತ್ತದೆ ಎಂಬ ಟೊಳ್ಳು ಜಾತ್ಯಾತೀತಕ್ಕಾಗಿ. ಇಸ್ರೇಲಿಗೆ ಭೇಟಿ ಕೊಟ್ಟರೆ ಮುಸಲ್ಮಾನರಿಗೆ ನೋವಾಗಬಹುದು ಎಂಬ ಕಾರಣಕ್ಕೆ ಇಸ್ರೇಲಿಗೆ ಭಾರತದ ಯಾವ ಪ್ರಧಾನಿಯೂ ಭೇಟಿ ಕೊಟ್ಟಿರಲಿಲ್ಲ.

ನಿಮಗೆ ಗೊತ್ತಾ? ಸುಮಾರು 2000 ವರ್ಷಗಳಿಂದ ಇಸ್ರೇಲಿಗರು ಭಾರತದ ರಾಜನ ಆಗಮನಕ್ಕಾಗಿ ಕಾಯುತ್ತಿದ್ದರು. ಅಷ್ಟಕ್ಕೂ ಇಸ್ರೇಲಿಗರು ಭಾರತದ ರಾಜನ ಆಗಮನಕ್ಕಾಗಿ ಏಕೆ ಕಾಯುತ್ತಿದ್ದರು ಗೊತ್ತೆ?

ಕ್ರಿ.ಪೂ.135 ಗ್ರೀಕ್’ನ ಕ್ರೂರ ರಾಜ ಆ್ಯಂಟಿಯೋಕಸ್ ಎಪಿಫೇನ್ಸ್ ನ್ನು ವಶಪಡಿಸಿಕೊಂಡು ಅಲ್ಲಿನ ಯಹೂದಿಗಳ ಮಾರಣಹೋಮ ಮಾಡಿದ,

ಕ್ರಿ.ಶ. 70, ಟೈಟಸ್(Titus) ಜೇರುಸಲೆಂನ್ನು ವಶಪಡಿಸಿಕೊಂಡು ಅಲ್ಲಿನ ಯಹೂದಿಗಳನ್ನು ನಾಶಮಾಡಿದ,

ಕ್ರಿ.ಶ. 136ರಲ್ಲಿ ಬರೊಬ್ಬರಿ ಐದು ಲಕ್ಷ ಎಂಭತ್ತು ಸಾವಿರ ಯಹೂದಿಗಳ ಮಾರಣಹೋಮ,

ಕ್ರಿ.ಶ.306 ಸ್ಪೇನ್ ಯಹೂದಿಗಳನ್ನ ತನ್ನ ದೇಶದಿಂದ ಓಡಿಸಿತ್ತು,

ಕ್ರಿ.ಶ. 379 ಸೇಂಟ್ ಆ್ಯಂಬ್ರೋಸ್ ನಿಂದ ಸಹಸ್ರಾರು ಯಹೂದಿಗಳ ಮಾರಣಹೋಮ,

ಕ್ರಿ.ಶ.1012 ರಲ್ಲಿ ಜರ್ಮನಿಯ ಕಿಂಗ್ ಹೆನ್ರಿ II ಯಹೂದಿಗಳನ್ನ ಜರ್ಮನಿಯಲ್ಲಿ ಸಾಮೂಹಿಕ ಹತ್ಯೆ ಮಾಡಿಸುತ್ತಾನೆ,

ಕ್ರಿ.ಶ.1096 ಮೊದಲನೆ ಕ್ರುಸೇಡ್ ಸಂದರ್ಭದಲ್ಲಿ ರೈನಲ್ಯಾಂಡ ನಲ್ಲಿ ಲಕ್ಷಾಂತರ ಯಹೂದಿಗಳ ಮಾರಣಹೋಮ ಮಾಡಲಾಯಿತು,

ಕ್ರಿ.ಶ. 1190, 1290 ಇಂಗ್ಲೆಂಡ್ ನಲ್ಲಿ,

ಕ್ರಿ.ಶ.1240, 1306 ಫ್ರಾನ್ಸ್ ನಲ್ಲಿ ,

ಕ್ರಿ.ಶ.1298, 1510 ಜರ್ಮನಿ ಯಲ್ಲಿ,

ಕ್ರಿ.ಶ.1389, 1480, ಕ್ರಿ.ಶ 1492 ಸ್ಪೇನ್ ನಲ್ಲಿ,

ಕ್ರಿ.ಶ.1483 ಪೋರ್ಚುಗಲ್ ನಲ್ಲಿ,

ಹೀಗೆ ನೂರಾರು ವರ್ಷಗಳಿಂದ ಯಹೂದಿಗಳ ಹತ್ಯೆ ಮಾಡಲಾಯಿತು ಅವರನ್ನ ಬಲವಂತವಾಗಿ ಮತಾಂತರಿಸಿ ಯಹೂದಿ ಹೆಣ್ಣುಮಕ್ಕಳ ಅತ್ಯಾಚಾರ ಮಾಡಲಾಯಿತು.

ಈ ಎಲ್ಲಾ ಅನಾಚಾರ, ಅತ್ಯಾಚಾರಗಳಿಂದ ಯಹೂದಿಗಳು ನೊಂದು ಬೆಂದು ಪ್ರಾಣ ಭಿಕ್ಷೆಗಾಗಿ ಪರ ದೇಶಕ್ಕೆ ಹೋದರೆ, ಯಾವ ದೇಶವೂ ಅವರಿಗೆ ನೆರವಾಗಲಿಲ್ಲ. ಆಗ ಅವರಿಗೆ ನೆರವಾಗಿದ್ದು ನನ್ನ ಭಾರತ, ಭವ್ಯ ಭಾರತ. ಜೀವರಕ್ಷಣೆಗಾಗಿ ಭಾರತಕ್ಕೆ ಬಂದ ಯಹೂದಿಗಳಿಗೆ ಭಾರತ ಆಶ್ರಯ ನೀಡಿ ಅವರನ್ನ ಸ್ವಂತ ಮಕ್ಕಳಂತೆ ನೋಡಿಕೊಂಡಿತ್ತು.

ಯಾವ ರಾಷ್ಟ್ರಕ್ಕೆ ಹೋದರೂ ತಮ್ಮ ಆಚರಣೆಗಳನ್ನ, ಸಂಸ್ಕೃತಿಯನ್ನ ಹೇರುತ್ತಿದ್ದ ರಾಷ್ಟ್ರಗಳ ನಡುವೆ ಭಾರತ ಮಾತ್ರ ಯಹೂದಿಗಳಿಗೆ ತನ್ನ ಆಚರಣೆಯನ್ನ ಪಾಲಿಸಲು ಅವಕಾಶ ನೀಡಿತ್ತು. ಅನೇಕ ಯಹೂದಿಗಳು ಭಾರತದಲ್ಲೇ ಉಳಿದು ಇಲ್ಲಿನ ಆಚಾರ ವಿಚಾರ ಸಂಸ್ಕೃತಿಯನ್ನ ಪಾಲಿಸುತ್ತ “We are Proud Indian” ಅಂತ ಎದೆ ತಟ್ಟಿ ಹೇಳಿಕೊಳ್ಳುತ್ತಾರೆ.

ದೇಶ ದೇಶಗಳನ್ನು ಸುತ್ತಾಡಿ ಪ್ರತಿ ರಾಷ್ಟ್ರದಲ್ಲೂ ಮಾರಣಹೋಮ, ಕೊಲೆ, ಅತ್ಯಾಚಾರ ಮಾಡಿಸಿಕೊಂಡ ಯಹೂದಿಗಳಿಗಾಗಿಯೇ 1948 ರಲ್ಲಿ ಇಸ್ರೇಲ್ ಎಂಬ ರಾಷ್ಟ್ರ ಹುಟ್ಟಿಕೊಂಡಿತು. ನಂತರ ವಿಶ್ವದಾದ್ಯಂತ ಅಳಿದುಳಿದ ಯಹೂದಿಗಳೆಲ್ಲ ಇಸ್ರೇಲಿಗೆ ತೆರಳಿ ತಮ್ಮ ರಾಷ್ಟ್ರದ ಏಕತೆಗೆ ಕಾರಣರಾದರು, ಭಾರತದ ಅನೇಕ ಯಹೂದಿಗಳೂ ಇಸ್ರೇಲ್ ದೇಶದ ಸ್ಥಾಪನೆಯಾದ ನಂತರ ಒಲ್ಲದ ಮನಸ್ಸಿನಿಂದ ಭಾರತದಿಂದ ಹೊರಟು ತಮ್ಮ ತಾಯ್ನಾಡನ್ನ ಸೇರಿದರು.

“ಭಾರತ ನನ್ನ ಮಾತೃಭೂಮಿ, ಇಸ್ರೇಲ್ ನನ್ನ ಧರ್ಮಭೂಮಿ” ಅಂತ ಒಬ್ಬ ಭಾರತೀಯ ಯಹೂದಿ ಇಂಟರ್‌ವ್ಯೂ ಕೊಡುವಾಗ ಭಾರತದ ಬಗ್ಗೆ ಆತ ಹೇಳಿದ್ದನಂತೆ. ಅಂದರೆ ಅವರಿಗೆ ಭಾರತದೆಡೆಗೆ ಪ್ರೀತಿ ಎಷ್ಟಿದೆಯೆಂಬುದನ್ನ ನೀವು ಅಂದಾಜಿಸಬಹುದು.

ವಿಶ್ವದಾದ್ಯಂತ ಮಾರಣಹೋಮಕ್ಕೊಳಗಾದ ಯಹೂದಿಗಳು ತಮ್ಮ ಸ್ವಂತ ರಾಷ್ಟ್ರ ಇಸ್ರೇಲ್ ಕಟ್ಟಿಕೊಂಡ ನಂತರ ಯಹೂದಿಗಳು ಬೆಳೆದು ನಿಂತ ರೀತಿ ಮಾತ್ರ ಅದ್ಭುತವೇ ಸರಿ.

ಭಾರತಕ್ಕೆ ಸ್ವಾತಂತ್ರ ಸಿಕ್ಕಿದ್ದು 1947, ಇಸ್ರೇಲ್ ಗೆ ಸ್ವಾತಂತ್ರ್ಯ ಸಿಕ್ಕಿದ್ದು 1948 ರಲ್ಲಿ. ಭಾರತ ತನ್ನ ಸುತ್ತ ಪಾಕಿಸ್ತಾನ, ಚೀನಾ, ಬಾಂಗ್ಲಾದಂಥ ಶತ್ರುರಾಷ್ಟ್ರಗಳಿಂದ ಹೇಗೆ ಸುತ್ತುವರೆದಿದೆಯೋ ಹಾಗೆಯೇ ಇಸ್ರೇಲ್ ಕೂಡ ಸಿರಿಯಾ, ಇರಾಕ್, ಟರ್ಕಿ, ಈಜಿಪ್ಟ್, ಸೌದಿ ಅರೇಬಿಯಾ, ಇರಾನ್, ಪ್ಯಾಲೇಸ್ತೀನ್ ನಂಥ ಶತ್ರು ರಾಷ್ಟ್ರಗಳಿಂದ ಸುತ್ತುವರೆದಿದೆ.

ಭಾರತದ ಮೇಲೆ ಶತ್ರುರಾಷ್ಟ್ರ ಪಾಕಿಸ್ತಾನ 4 ಬಾರಿ ಯುದ್ಧಕ್ಕೆ ಬಂದು ನಾಲ್ಕು ಬಾರಿಯೂ ಸೋತು ಸುಣ್ಣವಾಗಿದೆ. ಆದರೆ ನಮ್ಮ ಬೆಂಗಳೂರಿಗಿಂತ ನಾಲ್ಕು ಪಟ್ಟು ದೊಡ್ಡದಿರೋ ಪುಟ್ಟ ರಾಷ್ಟ್ರ ಇಸ್ರೇಲ್ ಮಾತ್ರ ಇಲ್ಲೀವರೆಗೂ 17 ಯುದ್ಧ ಕಂಡಿದೆ, ಆ ಎಲ್ಲ ಯುದ್ಧಗಳಲ್ಲೂ ಇಸ್ರೇಲ್’ದ್ದೇ ಮೇಲುಗೈ ಅಂದರೆ ನೀವು ನಂಬಲಸಾಧ್ಯ. ಇಸ್ರೇಲಿನ ಜನಸಂಖ್ಯೆ ಎಷ್ಟು ಗೊತ್ತೇನು? ಕೇವಲ 85 ಲಕ್ಷ ಮಾತ್ರ, ಅಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ ಇಂದು ಜಗತ್ತಿನ ದೊಡ್ಡ ದೊಡ್ಡ ರಾಷ್ಟ್ರಗಳ ಸಾಲಿನಲ್ಲಿ ನಿಂತು ಜಗತ್ತಿಗೆ ತನ್ನ ಶಕ್ತಿಪ್ರದರ್ಶನ ಮಾಡುತ್ತೆ ಅಂದರೆ ಅದಕ್ಕೆ ಕಾರಣ ಇಸ್ರೇಲಿಗರಲ್ಲಿನ ದೇಶಭಕ್ತಿ ಮಾತ್ರ.

ಇಸ್ರೇಲ್’ನ ಪಕ್ಕದ ರಾಷ್ಟ್ರವೇ ಸಿರಿಯಾ, ನಿಮಗೆಲ್ಲ ಗೊತ್ತಿರೋ ಹಾಗೆ ಸಿರಿಯಾದಲ್ಲಿಯೇ ಐಸಿಸ್ ಎಂಬ ಭಯೋತ್ಪಾದಕ ಸಂಘಟನೆ ಹುಟ್ಟಿಕೊಂಡಿದ್ದು ಹಾಗು ಜಗತ್ತಿನ ಅನೇಕ ರಾಷ್ಟ್ರಗಳ ಪ್ರಜೆಗಳನ್ನ ಸಿರಿಯಾದಲ್ಲಿ ಕೊಲ್ಲುತ್ತಿರೋದು, ಆದರೆ ಐಸಿಸ್ ಉಗ್ರರು ಇಸ್ರೇಲಿನ ಒಬ್ಬ ಪ್ರಜೆಯನ್ನಾದರೂ ಕೊಂದಿದಾರಾ? ಉಹುಂ, ಇಲ್ಲ ಇಸ್ರೇಲಿನ ಮೇಲೆ ಕಣ್ಣು ಹಾಕೋ ಆ ತಾಕತ್ತು ಐಸಿಸ್ ನಲ್ಲಿಲ್ಲ, ಐಸಿಸ್’ಗೆ ಇಸ್ರೇಲ್ ನ ತಾಕತ್ತು ಗೊತ್ತಿರೋದ್ರಿಂದ ಇಲ್ಲಿವರೆಗೂ ಇಸ್ರೇಲ್’ನ ತಂಟೆಗೆ ಹೋಗಿಲ್ಲ ಮುಂದೆಯೂ ಹೋಗಲ್ಲ.

ಮುಸಲ್ಮಾನ ರಾಷ್ಟ್ರಗಳು ಇಸ್ರೇಲ್ ಹಾಗು ಯಹೂದಿಗಳ ಮೇಲೆ ಕೆಂಡ ಕಾರುವ ಕಾರಣ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸೆಕ್ಯೂಲರಿಸಮ್ಮಿಗೆ ಧಕ್ಕೆಯಾಗುತ್ತೆ, ಅರಬ್ ರಾಷ್ಟ್ರಗಳು ಮುನಿಸಿಕೊಳ್ಳುತ್ತವೆ, ಅರಬ್ ರಾಷ್ಟ್ರಗಳು ಮುನಿಸಿಕೊಂಡರೆ ಇಲ್ಲಿ ನಮ್ಮ ದೇಶದೊಳಗಿನ ಮುಸಲ್ಮಾನರು ಮುನಿಸಿಕೊಳ್ತಾರೆ, ಅವರು ಮುನಿಸಿಕೊಂಡರೆ ನಮ್ಮ ವೋಟುಗಳ ಗತಿಯೇನು ಅಂತ ಕಾಂಗ್ರೆಸ್ ಆದಿಯಾಗಿ ಯಾವ ಪಾರ್ಟಿಯ ಪ್ರಧಾನಮಂತ್ರಿಯೂ ಇಸ್ರೇಲ್’ಗೆ ಕಾಲಿಟ್ಟಿರಲಿಲ್ಲ.

2003 ರಲ್ಲಿ ಖುದ್ದು ಇಸ್ರೇಲ್ ಪ್ರಧಾನಿಯೇ ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು.
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಮೋದಿಯವರು ಇಸ್ರೇಲ್ ಗೆ ಹೋಗಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದ್ದರು.

ಈಗ ಇಸ್ರೇಲಿನ ಪ್ರಧಾನಿ ಭಾರತಕ್ಕೆ ಆಗಮನವಾಗಿರುವುದು ಮತ್ತೊಂದು ಇತಿಹಾಸ.

ಇಸ್ರೇಲ್ ಭಾರತಕ್ಕೆ ಎಷ್ಟು ನೆರವಾಗಿದೆ ಗೊತ್ತೆ?

ಭಾರತದ No Anti-Semitic ನೀತಿ ಹಾಗು ಇಲ್ಲಿನ ಸಂಸ್ಕೃತಿಯ ಕಾರಣವೇ ಇಸ್ರೇಲ್ 1971 ರ ಪಾಕಿಸ್ತಾನದ ವಿರುದ್ಧ ಯುದ್ದಲ್ಲಿ ಭಾರತದ ಜೊತೆಗೆ ನಿಂತು ಯುದ್ಧಕ್ಕೆ ಬೇಕಾದ ಅಮ್ಯುನಿಷನ್ ಒದಗಿಸಿ ಭಾರತ ಯುದ್ಧ ಗೆಲ್ಲುವಂತೆ ಮಾಡಿತ್ತು.

ಭಾರತದ ಸೈನಿಕರಿಗೆ ಹಾಗು ಬಾಂಗ್ಲಾದ ಮುಕ್ತಿವಾಹಿನಿ ಸಂಘಟನೆಗೆ ರೈಫಲ್’ಗಳನ್ನ ಕೊಟ್ಟು ಅದರ ತರಬೇತಿಯೂ ನೀಡಿ ಪರೋಕ್ಷವಾಗಿ ಅಥವ ಅಪರೋಕ್ಷವಾಗಿ ಬಾಂಗ್ಲಾದೇಶ ಅನ್ನೋ ರಾಷ್ಟ್ರ ಸೃಷ್ಟಿಯಾಗಲು ಭಾರತಕ್ಕೆ ಸಾಧ್ಯವಾದದ್ದೇ ಇಸ್ರೇಲಿನ ಸಹಾಯದಿಂದ.

ಮುಂದೆ 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲೂ ಕೂಡ “ನೀವು ಯುದ್ಧ ಮಾಡಿ ನಿಮಗೆ ಬೇಕಾದ ಶಸ್ತ್ರಗಳು ನಾವು ಪೂರೈಕೆ ಮಾಡ್ತೀವಿ, ಹಿಸಾಬ್ ಕಿತಾಬ್ ಆಮೇಲೆ ನೋಡೋಣ, ಮೊದಲು ನೀವು ಯುದ್ಧ ಗೆಲ್ಲಬೇಕು” ಅಂತ ಇಸ್ರೇಲ್ ಭಾರತಕ್ಕೆ ಬೆನ್ನೆಲುಬಾಗಿ ನಿಂತು ಪಾಕಿಸ್ತಾನದ ಹೆಡೆಮುರಿ ಕಟ್ಟೋದ್ರಲ್ಲಿ ಸಹಾಯ ಮಾಡಿತ್ತು.

ಪೋಕ್ರಾನ್ ಅಣು ಪರೀಕ್ಷೆ ಸಂದರ್ಭದಲ್ಲೂ ಭಾರತದ ಜೊತೆಗೆ ಯಾವ ಅಮೇರಿಕಾ ಕೂಡ ನಿಲ್ಲಲಿಲ್ಲ ಆಗ ಭಾರತದ ನೆರವಿಗೆ ಬಂದದ್ದು ಇದೇ ಇಸ್ರೇಲ್. ಭಾರತವೆಂದರೆ ಇಸ್ರೇಲಿಗೆ ಯಾಕೆ ಅಷ್ಟು ಪ್ರೀತಿ ಅನ್ನೋದು ಅರ್ಥವಾಯಿತು ಅನಿಸುತ್ತೆ.

ಮೋದಿ ಇಸ್ರೇಲ್ ಭೇಟಿ ನೀಡಿರೋದನ್ನ ನೋಡಿದ ನಮ್ಮ ದೇಶದ ಕೆಲವರಿಗೆ ಹೊಟ್ಟೆಯುರಿ ಉಂಟಾಗಿತ್ತು. ಈಗ ಇಸ್ರೇಲ್ ಪ್ರಧಾನಿ ಭಾರತಕ್ಕೆ ಬಂದಿರುವುದು ಕೆಲವರಿಗೆ ಹೊಟ್ಟೆ ಉರಿಯನ್ನುಂಟು ಮಾಡಿದೆ.

ಒಟ್ಟಾರೆ ಭಾರತದ ಪರಮಾಪ್ತ ರಾಷ್ಟ್ರವಾದ ಇಸ್ರೇಲ್ ಪ್ರಧಾನಿಯವರ ಭೇಟಿಯನ್ನ ಐತಿಹಾಸಿಕ ಗೊಳಿಸಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ. ಇಸ್ರೇಲ್ ಪ್ರಧಾನಿಯವರೂ ಅದೇ ಉತ್ಸಾಹದಲ್ಲಿ ಬಂದಿದ್ದಾರೆ.

– Vinod Hindu Nationalist

Tags

Related Articles

Close