ಪ್ರಚಲಿತ

ಇಸ್ರೇಲ್ ದೊರೆ ಬರ್ತಿದ್ದಾರೆ ಲವ್ ಗಿಫ್ಟ್ ತರ್ತಿದ್ದಾರೆ… ವಿಶ್ವ ದೊರೆಗೆ ಇಸ್ರೇಲ್ ದೊರೆ ಕೊಡುತ್ತಿರುವ ಉಡುಗೊರೆ ಏನು ಗೊತ್ತಾ?!

ಇಸ್ರೇಲ್ ಅದೊಂದು ಪುಟ್ಟ ರಾಷ್ಟ್ರ. ಆದರೆ ಜಗತ್ತನ್ನೇ ಚಕಿತಗೊಳಿಸುವಷ್ಟು ಬೆಳೆದು ನಿಂತಿರೋ ಶಕ್ತಿಶಾಲಿ ದೇಶ. ಭಾರತದಿಂದ 70 ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೂ ಭಾರತವನ್ನ ಅತೀ ಹೆಚ್ಚು ಪ್ರೀತಿಸುವ ರಾಷ್ಟ್ರ. ಕಾರ್ಗಿಲ್ ಯುದ್ಧದಂತಹ ಆಪತ್ಕಾಲದ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ನಿಂತ ಹೆಮ್ಮೆಯ ರಾಷ್ಟ್ರವದು..

ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರ ಇಷ್ಟು ವರ್ಷ ಬಹುಪಾಲು ರಕ್ಷಣಾ ಕ್ಷೇತ್ರಕ್ಕೆ ಸೀಮಿತವಾಗಿತ್ತು. ಹೀಗಾಗಿಯೇ, ನಮಗೆ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುವ ದೇಶಗಳ ಪೈಕಿ ಅಮೆರಿಕ, ರಷ್ಯಾ ನಂತರದ ಸ್ಥಾನದಲ್ಲಿ ಇಸ್ರೇಲ್ ಇತ್ತು. ಇದರಾಚೆಗೂ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇದ್ದ ಅವಕಾಶಗಳನ್ನು ಬಳಸಿಕೊಳ್ಳಲು ಎರಡೂ ಕಡೆಯವರು ಮನಸ್ಸು ಮಾಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಈಗ ದ್ವಿಪಕ್ಷೀಯ ಬಾಂಧವ್ಯದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ ಎಂದು ಹೇಳಬಹುದು.

ನೀರು, ಕೃಷಿ, ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕಾ ಸಂಶೋಧನೆ, ಅಣುಚಾಲಿತ ಗಡಿಯಾರ ತಂತ್ರಜ್ಞಾನದಂತಹ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಏಳು ಒಪ್ಪಂದಗಳಾಗಿವೆ. ಇವುಗಳ ಮೊತ್ತ ಸುಮಾರು 500 ಕೋಟಿ ಡಾಲರ್‍ಗಳು (ಸುಮಾರು 32,500 ಕೋಟಿ). ನೀರಿನ ರಕ್ಷಣೆ ಮತ್ತು ಮಿತವ್ಯಯ ಬಳಕೆ, ರಾಡಿ ನೀರು ಸಂಸ್ಕರಣೆ, ಸಂಸ್ಕರಿತ ನೀರನ್ನು ಕೃಷಿ ಕ್ಷೇತ್ರದಲ್ಲಿ ಬಳಸುವುದು ಮತ್ತು ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವುದರಲ್ಲಿ ತನಗಿರುವ ಪರಿಣತಿಯನ್ನು ಭಾರತದ ಜತೆಗೂ ಹಂಚಿಕೊಳ್ಳಲು ಇಸ್ರೇಲ್ ಮುಂದೆ ಬಂದಿದೆ. ಇದಲ್ಲದೆ, 260 ಕೋಟಿ ಮೊತ್ತದ ಆವಿಷ್ಕಾರ ನಿಧಿ ಸ್ಥಾಪಿಸಲಾಗಿದೆ. ನವೋದ್ಯಮಗಳಲ್ಲಿ ಎರಡೂ ದೇಶಗಳು ಹೆಸರುವಾಸಿ. ಹೀಗಾಗಿ ಎರಡೂ ಕಡೆಯ ವಿಜ್ಞಾನಿಗಳು ಮತ್ತು ಸಂಶೋಧಕರು ಜಂಟಿಯಾಗಿ ಆವಿಷ್ಕಾರ, ಸಂಶೋಧನೆ ಕೈಗೊಳ್ಳಲು ಈ ಉಪಕ್ರಮ ಉತ್ತೇಜನ ಕೊಡುತ್ತದೆ.

ಶತ್ರುರಾಷ್ಟ್ರಗಳ ಮಧ್ಯೆ ಇದ್ದರೂ ಎದೆಗುಂದದೆ ಏಕಾಂಗಿಯಾಗಿ ಹೋರಾಡುತ್ತಲೇ ವಿರೋಧಿಗಳ ಚಕ್ರವ್ಯೂಹವನ್ನು ಹೇಗೆ ಭೇದಿಸಬೇಕೆಂಬುದನ್ನು ವಿಶ್ವಕ್ಕೆ ಪರಿಚಯಿಸಿದ ಇಸ್ರೇಲ್ ರಣತಂತ್ರ ಅಂಥದ್ದೇ ಸನ್ನಿವೇಶದ ನಡುವೆ ಹೈರಾಣಾಗಿರುವ ಭಾರತಕ್ಕೊಂದು ಮಾದರಿ. ಒಂದೆಡೆ ಚೀನಾ, ಮತ್ತೊಂದೆಡೆ ಪಾಕಿಸ್ತಾನದ ಸೇನೆ ಹಾಗೂ ಉಗ್ರಪಡೆಯ ನಿರಂತರ ತಂಟೆ ಎದುರಿಸುತ್ತಿರುವ ಭಾರತಕ್ಕೀಗ ಇಂಥ ಬಲಾಢ್ಯ ರಾಷ್ಟ್ರದ ಬಲ ಸಿಗಲು ವೇದಿಕೆ ಸಜ್ಜಾಗಿದೆ.

ಕಳೆದ ಬಾರಿ ನರೇಂದ್ರ ಮೋದಿಯವರು ಇಸ್ರೇಲ್‍ಗೆ ಭೇಟ ನೀಡಿದ್ದಾಗ ಅವರನ್ನ ಆ ಪುಟ್ಟ ದೇಶ ಸತ್ಕರಿಸಿದ ರೀತಿ ಪ್ರತೀ ದೇಶಭಕ್ತ ಭಾರತೀಯರ ಮನದಲ್ಲಿ ಹಾಗೆಯೇ ಇದೆ. ಇಡೀ ಮಂತ್ರಿಮಂಡಲವೇ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಯವರನ್ನ ಸ್ವಾಗತಿಸಿತ್ತು. ವಿಶ್ವದ ಅತ್ಯಂತ ಸುರಕ್ಷಿತ ತಾಣದಲ್ಲಿ ಭಾರತದ ಪ್ರಧಾನಿಗೆ ಭದ್ರತೆ ನೀಡಿ, ರಾಜಾತಿಥ್ಯ ನೀಡಿತ್ತು. ಸ್ವತಃ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಮೆಡಿಟರೇನಿಯನ್ ಸಮುದ್ರ ತೀರಕ್ಕೆ ಮೋದಿಯವರನ್ನ ಕರೆದುಕೊಂಡು ಹೋಗಿದ್ದರು. ಅಷ್ಟೇ ಅಲ್ಲದೇ ಇಸ್ರೇಲಿಗರು ಬೆಳೆಯುವ ವಿಶೇಷವಾದ ಹೂವೊಂದಕ್ಕೆ ಮೋದಿಯವರ ಹೆಸರನ್ನಿಟ್ಟು ಇಸ್ರೇಲ್ ಗೌರವ ಸೂಚಿಸಿತ್ತು.

ಬೆಂಜಮಿನ್ ನೀಡಲಿದ್ದಾರೆ ಮೋದಿಯವರಿಗೆ ಗಿಫ್ಟ್

ಇಸ್ರೇಲ್ ನ ಪ್ರಧಾನಮಂತ್ರಿ ಬೆಂಜಮಿನ್ ನೇತಾನ್ಯಾಹು ಮುಂದಿನ ವಾರ ಭಾರತಕ್ಕೆ ಬರುತ್ತಿದ್ದಾರೆ. ಸುಮ್ಮನೇ ಬರುತ್ತಿಲ್ಲ. ಅನೇಕ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಲಿವೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ನೇತಾನ್ಯಾಹು ವಿಶೇಷ ಉಡುಗೊರೆ ನೀಡಲಿದ್ದಾರೆ. `ಬಗ್ಗಿ ಜೀಪ್’ ಎಂದು ಕರೆಯಲಾಗುವ ಸಮುದ್ರ ನೀರನ್ನು ಶುದ್ಧೀಕರಿಸುವ ಸಂಚಾರಿ ಘಟಕವನ್ನು ಹಸ್ತಾಂತರಿಸಲಿದ್ದಾರೆ. ಈ ಜೀಪ್ ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾದ ರೀತಿಯಲ್ಲಿ ಶುದ್ಧೀಕರಿಸುತ್ತದೆ. ನೈಸರ್ಗಿಕ ವಿಕೋಪ ಸಂಭವಿಸಿದಾಗ, ಸೇನೆ ಬಳಕೆಗೆ, ಗ್ರಾಮೀಣ ಭಾಗಗಳಲ್ಲಿ ಈ ವಾಹನ ಬಳಕೆ ಮಾಡಿಕೊಳ್ಳಬಹುದು. ಸ್ಥಳಕ್ಕೆ ತೆರಳಿ ನೀರು ಶುದ್ಧೀಕರಿಸುವ ಈ ಜೀಪ್‍ನಿಂದ ಜನರಿಗೆ ಅನುಕೂಲವಾಗಲಿದೆ.

ಜೀಪ್‍ನ ವಿಶೇಷತೆಗಳು:

* ಈ ಜೀಪ್‍ನ ಒಟ್ಟು ತೂಕ 1540 ಕೆಜಿ.
* ನದಿ, ಕೆರೆ, ಬಾವಿ ಇನ್ನಿತರ ಯಾವುದೇ ಜಲಮೂಲಗಳಿಂದ ನೀರು ಪಡೆದು ಶುದ್ಧೀಕರಿಸುವ ಸಾಮಥ್ರ್ಯ ಪಡೆದಿರುತ್ತದೆ ಈ       ಜೀಪ್
* ಅತ್ಯಾಧುನಿಕ ಸ್ವಯಂ ನಿಯಂತ್ರಣ ತಂತ್ರಜ್ಞಾನ ಅಳವಡಿಸಲಾಗಿದ್ದು, ಮಾನವನ ಹಸ್ತಕ್ಷೇಪ ಇಲ್ಲದೆ ಶುದ್ಧೀಕರಣ               ಪ್ರಕ್ರಿಯೆ ನಡೆಸಬಲ್ಲದು. ಹೀಗಾಗಿ ಇದರ ನಿರ್ವಹಣೆಗೆ ಇಬ್ಬರು ಸಾಕು. ಇದಕ್ಕೆ ಹೆಚ್ಚು ಜನರ ಅಗತ್ಯ ಕೂಡಾ ಬೇಕಾಗಿಲ್ಲ..
* ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಪಡಿಸಿದ ಗುಣಮಟ್ಟದಲ್ಲಿ ಶುದ್ಧೀಕರಣ.
* ಎಲ್ಲ ಹವಾಮಾನ, ಸನ್ನಿವೇಷದಲ್ಲಿ ಇದು ಕೆಲಸ ಮಾಡಬಲ್ಲದು.
* ಪ್ರತಿಗಂಟೆಗೆ 90ಕಿ.ಮೀ. ವೇಗದಲ್ಲಿ ಜೀಪ್ ಚಲಿಸಬಲ್ಲ ಸಾಮಥ್ರ್ಯವನ್ನು ಹೊಂದಿದೆ.
* ಇಂಧನ ಪೂರೈಕೆಗೆ ಸ್ವತಂತ್ರ ವ್ಯವಸ್ಥೆ.
* ಗರಿಷ್ಠ 2,650 ಗ್ಯಾಲನ್ ನೀರು ಹಿಡಿಯುವಷ್ಟು ದೊಡ್ಡ ಟ್ಯಾಂಕ್ ಜೀಪ್‍ನಲ್ಲಿ ಲಭ್ಯ. ನೀರು ಶುದ್ಧೀಕರಿಸಿ ಒಂದು           ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಸಾಗಿಸಬಹುದು.
* 12 ವಾಟ್ ವೊಲ್ಟೇಜ್ ವಿದ್ಯುತ್ ಪೂರೈಕೆಯಲ್ಲೂ ಶುದ್ಧೀಕರಣ ಘಟಕ ಕೆಲಸ ಮಾಡಬಲ್ಲದು.
* ಜೀಪ್ ಚಿಕ್ಕದಾಗಿದ್ದು ದೂರದ ಪ್ರದೇಶಗಳಿಗೂ ಸುಲಭವಾಗಿ ರವಾನೆ ಮಾಡುವ ಸಾಮಥ್ರ್ಯವನ್ನು ಹೊಂದಿದೆ.
* ಒಂದು ದಿನಕ್ಕೆ 20 ಸಾವಿರ ಲೀಟರ್ ಸಮುದ್ರದ ನೀರನ್ನು ಕುಡಿಯಲು ಯೋಗ್ಯವಾಗಿ ಪರಿವರ್ತನೆ.
* ದಿನಕ್ಕೆ 80 ಸಾವಿರ ಲೀಟರ್ ಕಲುಷಿತ, ಮಣ್ಣುಮಿಶ್ರಿತ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಶುದ್ಧೀಕರಣ.

ಸಮುದ್ರದ ನೀರನ್ನು ಶುದ್ಧೀಕರಿಸುವುದು ಹೇಗೆ?

ಮನುಷ್ಯರು ಲವಣಯುಕ್ತ ನೀರನ್ನು ಕುಡಿಯಲು ಸಾಧ್ಯವಿಲ್ಲ. ಆದರೆ, ಲವಣಯುಕ್ತ ನೀರಿನಿಂದ ಸಿಹಿನೀರನ್ನಾಗಿ ಪರಿವರ್ತಿಸಬಹುದು. ಈ ರೀತಿ ಮಾಡಲು ವಿದ್ಯುತ್‍ಗಾಗಿ ಖರ್ಚು ಮಾಡುವಂತೆಯೂ ಇಲ್ಲ. ಯಾಕೆಂದರೆ ಬೇಕಾದಷ್ಟು ಸೌರಶಕ್ತಿ ಇದೆ. ಗಾಳಿ ಹಾಗೂ ಸೌರಶಕ್ತಿಯನ್ನು ಬಳಸಿಕೊಂಡು ನೀರನ್ನು ಶುದ್ಧೀÀರಿಸುವುದಕ್ಕೆ ಡಸಲಿನೇಶನ್ ಎಂದು ಕರೆಯಲಾಗುತ್ತದೆ. ಈ ಮೂಲಕ ಅಗತ್ಯವಿರುವ ಕಡೆಗಳಿಗೆ ಸಿಹಿನೀರನ್ನು ಸುಭವಾಗಿ ರವಾನಿಸಬಹುದು. ಈ ಯೋಜನೆಯನ್ನು ಇಂದು ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಬಳಸುತ್ತವೆ.

ಕಡಲ ನೀರನ್ನು ತಾಜಾ ನೀರನ್ನಾ ಪರಿವರ್ತಿಸಲು ಅದರಿಂದ ಉಪ್ಪನ್ನು ತೆಗೆಯುವ ಸರಳ ವಿಧಾನದಿಂದ ಬರಪೀಡಿತ ರಾಜ್ಯಗಳಿಗೆ ನೀರುಣಿಸಬಹುದು. ಫ್ಯಾನಿನ ಮುಖಾಂತರ ಸಮುದ್ರದಲ್ಲೇ ನೀರನ್ನು ಕುದಿಸಿ ಅದನ್ನು ಬಳಸಿಕೊಳ್ಳುವುದು. ಆದರೆ ಈಗಿನ ತಾಂತ್ರಿಕ ಪ್ರಕ್ರಿಯೆಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಶುದ್ಧೀಕರಿಸುವುದು ಕಷ್ಟ ಎನ್ನುತ್ತಾರೆ. ಆದರೆ ಗಾಳಿ ಹಾಗೂ ಸೌರಶಕ್ತಿಯಿಂದ ಕಡಿಮೆ ಖರ್ಚಿನಲ್ಲಿ ನೀರನ್ನು ಶುದ್ಧೀಕರಿಸಲು ಮೋದಿ ಸರಕಾರ ಮುಂದಾಗಿದೆ. ಈ ವಿಧಾನದಿಂದ ಉಪ್ಪನ್ನು ಕೂಡಾ ತಯಾರಿಸಬಹುದು.

ಉಪ್ಪು ಕರಗಿದ ನೀರಿನ ಸಾಂದ್ರತೆ ಹೆಚ್ಚು. ಸಮುದ್ರದ ನೀರಲ್ಲಿ ಉಪ್ಪು ಕರಗಿರುವುದರಿಂದ ಅದರ ಸಾಂದ್ರತೆ ಹೆಚ್ಚು. ಇದನ್ನು ಅಳೆಯಲು ಪಿಪಿಎಂ(ಪಾಟ್ರ್ಸ್ ಆಫ್ ಮಿಲಿಯನ್) ಎನ್ನುವ ತೂಕಮಾನವನ್ನು ಬಳಸುತ್ತಾರೆ. ಸಾಮಾನ್ಯವಾಗಿ ಶುದ್ಧೀಕರಿಸಿದ ನೀರು 1000 ಪಿಪಿಎಂ ಹೊಂದಿದ್ದರೆ ನಾವು ಕುಡಿಯುವ ನೀರು 1000 ದಿಂದ 30000 ಪಿಪಿಎಂ ಹೊಂದಿದೆ. ಸಮುದ್ರದಿಂದ 3000ದಿಂದ 10000 ಪಿಪಿಎಂವರೆಗೆ ನೀರನ್ನು ಶುದ್ಧೀಕರಿಸಬಹುದು. ಅದರ ಪಿಪಿಎಂ ಆಧಾರದಲ್ಲಿ ಕುಡಿಯಲು, ಸ್ನಾನಕ್ಕೆ, ಕೃಷಿಗೆ, ಕೈಗಾರಿಕೆಗಳಿಗೆ ಸುಲಭವಾಗಿ ಬಳಸಬಹುದು. 10000 ಪಿಪಿಎಂ ನೀರನ್ನು ತೋಟ, ಕೃಷಿ, ಸ್ನಾನಕ್ಕೆ ಬಳಸಬಹುದಾಗಿರುವುದರಿಂದ ಇದಕ್ಕೆ ಖರ್ಚು ಕಡಿಮೆ ಬಿದ್ದರೆ ಕುಡಿಯುವ ನೀರಿಗೆ ಸ್ವಲ್ಪ ಜಾಸ್ತಿ ಖರ್ಚು ಬೀಳುತ್ತದಷ್ಟೆ.

ಸಮುದ್ರದ ನೀರನ್ನು ಬಳಸಲು ಹಲವಾರು ಶುಷ್ಕ ಹವೆ ಹೊಂದಿದ ರಾಷ್ಟ್ರಗಳು ಮುಂದಾಗಿವೆ. ನೀರಿನ ಸಂಪನ್ಮೂಲವನ್ನು ಹೊಂದಿರದ, ಅಂತರ್ಜಲ ಇಲ್ಲದ ಕಡೆಗಳಿಗೆ ಈ ಡಸಲೀಕರಣದ ನೀರನ್ನು ಬಳಸಬಹುದು. ಇದಕ್ಕೆ ಸೌರ ಶುದ್ಧೀಕರಣ ವಿಧಾನವನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆ ಸಮುದ್ರದಲ್ಲೇ ನಡೆಯುವುದರಿಂದ ಭೂಮಿ ಕಳೆದುಕೊಳ್ಳುತ್ತೇವೆ ಎಂಬ ಭಯವೂ ಇಲ್ಲ. ಸಮುದ್ರದ ನೀರು ಆವಿಯಾಗುವುದನ್ನು ತಡೆದು ಮಾಡುವ ಕೆಲಸ. ಆದ್ದರಿಂದ ಜಲಚರಗಳಿಗೂ ತೊಂದರೆಯಾಗುವುದಿಲ್ಲ.

ಸಮುದ್ರದ ನೀರು ಶುದ್ಧೀಕರಣ ಪ್ರಕ್ರಿಯೆಗಳು ನಿಜವಾಗಿಯೂ ದುಬಾರಿಯಲ್ಲ. ಆದರೆ ನಮ್ಮ ದೇಶದಲ್ಲಿ ಅಂಥದೊಂದು ಗುಮ್ಮವನ್ನು ಹಬ್ಬಿಸಿ ಬಿಡಲಾಗಿದೆ.. ಈ ವಿಧಾನವನ್ನು ಈಗಾಗಲೇ ಸೌದಿ ಅರೇಬಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಮತ್ತು ಬಹ್ರೇನ್ ರಾಷ್ಟ್ರಗಳಲ್ಲಿ ಶೇ.70ರಷ್ಟು ಸಮುದ್ರದ ನೀರನ್ನು ಬಳಸುತ್ತಾರೆ. ಉತ್ತರ ಆಫ್ರಿಕಾದ ಮುಖ್ಯವಾಗಿ ಲಿಬಿಯಾ ಮತ್ತು ಆಲ್ಜೀರಿಯಾದಂತಾ ತೀರಾ ಬಡ ದೇಶಗಳೂ ಇದನ್ನು ಬಳಸುತ್ತಾರೆ. ಕೈಗಾರಿಕೀಕರಣಗೊಂಡ ದೇಶವಾದ ಅಮೆರಿಕಾ ಸಂಯುಕ್ತ ಸಂಸ್ಥಾನ ಡಸಲೀಕರಣಗೊಂಡ ನೀರಿನ ಪ್ರಮುಖ ಬಳಕೆದಾರರಲ್ಲಿ ಒಂದಾಗಿದೆ. ವಿಶೇಷವಾಗಿ ಕ್ಯಾಲಿಫೆÇೀರ್ನಿಯಾ ಮತ್ತು ಫೆÇ್ಲೀರಿಡಾದ ಭಾಗಗಳಲ್ಲಿ ಡಸಲಿನೀಕರಣದ ವೆಚ್ಚವನ್ನು ಕೈಗಾರಿಕೆಗಳಿಂದ ಪಡೆಯಲಾಗುತ್ತದೆ. ಒಂದು ವೇಳೆ ಭಾರತದಲ್ಲಿ ಡಸಲೀಕರಣ ವ್ಯವಸ್ಥೆಯನ್ನು ಮಾಡಿದರೆ ಅದರ ವೆಚ್ಚವನ್ನು ಕೈಗಾರಿಕೆಗಳಿಂದ ಪಡೆಯಬಹುದು. ಕೈಗಾರಿಕೆಗಳಿಗೂ ಬೇಕಾದಷ್ಟು ನೀರು, ನಮಗೂ ಇದರಿಂದ ಮಹದುಪಕಾರ…

ಇನ್ನು ಭಾರತ ಸಂಪನ್ಮೂಲ ರಾಷ್ಟ್ರ.. ಬಹುತೇಕ ರಾಜ್ಯಗಳು ನೀರಿಲ್ಲದೆ ಜೀವನ ನಡೆಸಲು ಅದೆಷ್ಟೋ ಜನರು ಪರದಾಡುವ ಸ್ಥಿತಿಯಲ್ಲಿದ್ದರೆ ಇಂತಹ ಉಪಕರಣಗಳಿಂದ ಭಾರತಕ್ಕೆ ಸಮುದ್ರದ ಉಪ್ಪು ನೀರನ್ನು ಶುದ್ಧೀಕರಣ ಮಾಡುವ ಇಂತಹ ಗಿಫ್ಟ್ ಭಾರತಕ್ಕೆ ದೊರೆತಿದೆ ಎಂದರೆ ನಿಜವಾಗಿಯೂ ಇಸ್ರೇಲ್ ಥಾಂಕ್ಸ್ ಹೇಳಲೇ ಬೇಕಾಗಿದೆ…

ಒಟ್ಟಾರೆ ಭಾರತದ ನಂಬಲಾರ್ಹ ರಾಷ್ಟ್ರವಾದ ಇಸ್ರೇಲ್ ಪ್ರಧಾನಿಯವರ ಭೇಟಿಯನ್ನ ಅವಿಸ್ಮರಣೀಯಗೊಳಿಸಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ. ಇಸ್ರೇಲ್ ಪ್ರಧಾನಿಯವರೂ ಅದೇ ಉತ್ಸಾಹದಲ್ಲಿ ಬರುತ್ತಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಕೆಲವೊಂದು ವಿಚಾರದಲ್ಲಿ ವೈ ಮನಸ್ಸು ಇರಬಹುದು. ಆದರೆ ಮೋದಿಯವರು ಪ್ರಧಾನಿಯಾದ ನಂತರ ಇಸ್ರೇಲ್ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗುತ್ತಿರುವುದಂತೂ ಸತ್ಯ. ಭಾರತ-ಇಸ್ರೇಲ್ ಸ್ನೇಹ ಚಿರಾಯುವಾಗಲಿ ಎಂದು ಹಾರೈಸೋಣ..

ಪವಿತ್ರ

Tags

Related Articles

Close