ಪ್ರಚಲಿತ

ಇಸ್ಲಾಂ ಮೂಲಭೂತವಾದಿಗಳಿಗೆ ಮತ್ತು ಉಗ್ರರೀಗ ನಿಂತಲ್ಲೇ ಬೆವರುತ್ತಿದ್ದಾರೆ! ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ಹೇಳಿದ್ದೇನು ಗೊತ್ತಾ?!

ಇಸ್ರೇಲ್ ಎಂಬುದೊಂದು ಭೌಗೋಳಿಕವಾಗಷ್ಟೇ ಪುಟ್ಟ ರಾಷ್ಟ್ರ! ಆದರೆ, ತನ್ನ ಸುತ್ತಲೂ ನಿರ್ಮಿಸಿಕೊಂಡಿರುವ ಭದ್ರತೆಯ ಬೇಲಿಯೊಂದಿದೆಯಲ್ಲವಾ?! ಉಹೂಂ! ಅದೆಷ್ಟೋ ನೆರೆಯ ದೊಡ್ಡ ರಾಷ್ಟ್ರಗಳೂ ಬೆಚ್ಚಿ ಬೀಳುತ್ತವೆ! ಇನ್ನೆಂದಿಗೂ ಇಸ್ರೇಲ್ ನನ್ನು ಮುಟ್ಟಲು ಸಾಧ್ಯವೇ ಇಲ್ಲವೆಂಬಂತಹ ಸ್ಥಿತಿ ನಿರ್ಮಾಣವಾಗಿ ಹೋಗಿದೆ!

ಅಚ್ಚರಿಯ ವಿಷಯವೊಂದಿದೆ! ಯಹೂದಿಗಳ ಬದುಕನ್ನು ಇತಿಹಾಸದಲ್ಲಿ ಕಾಪಾಡಿದ್ದು ಭಾರತ ಎಂಬ ಕಾರಣಕ್ಕೆ ಇವತ್ತಿಗೂ ಕೂಡ ಭಾರತವನ್ನು ಅದಮ್ಯವಾಗಿ ಪ್ರೀತಿಸುವಂತಹ ಇಸ್ರೇಲಿನ ಪ್ರಧಾನಿ ಹದಿನೈದು ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ್ದಾರೆ! ಭಾರತಕ್ಕೆ ಭೇಟಿ ನೀಡಿರುವುದು ಸುಮ್ಮನೇ ಬಂದು ಹೋಗುವಂತಹ ಪ್ರವಾಸವಲ್ಲವೇ ಅಲ್ಲ! ಎರಡು ದೇಶದ ಪ್ರಧಾನಿಗಳು ಭೇಟಿ ಮಾಡಿರುವ ಉದ್ದೇಶ ಒಂದೇ! ” ಭಯೋತ್ಪಾದನೆಗೆ ಬೆಂಬಲಿಸುವಂತಹ ರಾಷ್ಟ್ರಗಳ ಹೆಡೆಮುರಿ ಕಟ್ಟಬೇಕಾದರೆ ಏನು ಮಾಡಬೇಕು ಎಂಬುದೊಂದಾದರೆ, ಉಗ್ರನಿಗ್ರಹ ದಳಕ್ಕೆ ಏನೆಲ್ಲ ಅಗತ್ಯವಿದೆ’ ಎಂಬುದನ್ನು ಅವಲೋಕನ ಮಾಡಲು!

ಹಾ! ಇಸ್ರೇಲಿನ ಪ್ರಧಾನಿ ನೇತಾನ್ಯಹುವಿನ ಭೇಟಿಗೆ ಕ್ಷಣಗಣನೆ ಮಾಡುತ್ತಿದ್ದ ಭಾರತಕ್ಕೀಗ ನೂರಾನೆಯ ಬಲ! ಈ ಹಿಂದೆ, 2003 ರಲ್ಲಿ, ಇಸ್ರೇಲಿನ ಪ್ರಧಾನಿ ಏರೀಲ್ ಶಾರೋನ್ ಒಮ್ಮೆ ಭೇಟಿ ನೀಡಿದ್ದರಷ್ಟೇ!

ಆದರೆ , ಇಸ್ರೇಲಿನ ಪ್ರಸ್ತುತ ಪ್ರಧಾನಿಯ ಮಾತುಗಳಿಗೆ ಉಗ್ರಗಾಮಿಗಳು ಬೆವತು ಹೋಗಿದ್ದಾರೆ!

“ನಮ್ಮ ಬದುಕಿನ ರೀತಿಗೆ ಸವಾಲುಗಳನ್ನೊಡ್ಡಲಾಗುತ್ತಿದೆ! ವಿಶೇಷವಾಗಿ, ಆಧುನಿಕತೆಯ ಅನ್ವೇಷಣೆ ಮತ್ತು ಹೊಸತುಗಳ ಅನ್ವೇಷಣಗಳೆಲ್ಲವೂ ಇಸ್ಲಾಂ ಮೂಲಭೂತವಾದಿಗಳಿಂದ ಮತ್ತು, ಉಗ್ರರಿಂದ ಸವಾಲಿಗೊಳಲ್ಪಟ್ಟಿದೆ!” ಎಂದ ಇಸ್ರೇಲಿನ ಪ್ರಸ್ತುತ ಪ್ರಧಾನಿ ಸೂಕ್ಷ್ಮವಾಗಿಯೇ ಎಚ್ಚರಿಕೆ ನೀಡಿದ್ದಾರೆ! “ಪ್ರಧಾನಿ ಮೋದಿಯ ಜೊತೆಗೂಡಿ ಭಯೋತ್ಲಾದನೆಯ ಬೆನ್ನುಮೂಳೆಯನ್ನೇ ಮುರಿಯುತ್ತೇವೆ” ಎಂದು! ವರ್ಷದ ಕೆಳಗೆ, ‘ನಾಗರಿಕ ಸಮಾಜ, ರಾಷ್ಟ್ರಗಳು ಒಂದಾಗಬೇಕಿದೆ! ತನ್ಮೂಲಕ, ಈ ಇಸ್ಲಾಂ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ” ಎಂದಿದ್ದರಷ್ಟೇ!

ಸಾಕಾಗಿ ಹೋಗಿದೆ! ಭಯೋತ್ಪಾದಕರ ಹಿತೈಷಿಗಳಿಗೂ! ಭಯೋತ್ಪಾದನೆಯೇ ಇಲ್ಲವೆಂದಾದರೆ, ಯಾರಿಗೋಸ್ಕರ ಹೋರಾಡಿ, ‘ಗಂಜಿ’ ಪಡೆಯುವುದೆಂಬ ಹೆದರಿಕೆಯೂ ಪ್ರಾರಂಭವಾಗಿದೆ!

“ದುರ್ಬಲನಾದವನು ಎಂದೂ ಉಳಿಯಲಾರ! : ಬೆಂಜಮಿನ್ ನೇತಾನ್ಯಹು!”

“ಶಕ್ತಿಯುತವಾಗಿದ್ದುಕೊಂಡೇ ನಾವು ಶಾಂತಿಯನ್ನು ಕಾಪಾಡಬೇಕು! ದುರ್ಬಲನಾದವನು ಯಾವತ್ತೂ ಹೋರಾಡಲಾರ! 3000 ವರ್ಷಗಳ ನಂತರ ಇಸ್ರೇಲಿಗೆ ಬಂದ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದಗಳನ್ನು ಹೇಳಲು ಇಚ್ಛಿಸುತ್ತೇನೆ! ನೀವು ಹೇಗೆ ಇಸ್ರೇಲಿನ ಬಗ್ಗೆ ನಂಬಿಕೆಯಿಟ್ಟಿದ್ದೀರೋ, ಅದೇ ರೀತಿ ನಾವು ಇಸ್ರೇಲಿಗರು ಕೂಡ ಭಾರತದ ಮೇಲೆ ನಂಬಿಕೆ ಇಟ್ಟಿದ‌್ದೇವೆ! ದೇವರು ಇಸ್ರೇಲ್ – ಭಾರತದ ಬಂಧವನ್ನು ಶಾಶ್ವತವಾಗಿ ಆಶೀರ್ವದಿಸಲಿ!”

ಮೂರು ಯುದ್ಧಗಳಲ್ಲಿ ಭಾರತದ ಪರವನ್ನು ವಹಿಸಿತ್ತು ಇಸ್ರೇಲ್!!

“ಪಾಕಿಸ್ಥಾನದ ಮೇಲಾದ ಯುದ್ಧಗಳಲ್ಲಿ ಇಸ್ರೇಲ್ ಯಾವತ್ತಿಗೂ ಭಾರತವನ್ನೇ ಬೆಂಬಲಿಸಿತ್ತು. ಪಾಕಿಸ್ಥಾನಕ್ಕೆ ಅಮೇರಿಕಾದಂತಹ ಶಕ್ತಿಶಾಲಿ
ರಾಷ್ಟ್ರದ ಸ್ನೇಹವಿದ್ದರೂ ಕೂಡ ಇಸ್ರೇಲ್ ಬೆಂಬಲಿಸಿದ್ದು ಭಾರತವನ್ನೇ! ಕೇವಲ ಕಾರ್ಗಿಲ್ ಯುದ್ಧದಲ್ಲಿ ಮಾತ್ರವಲ್ಲ, 1962, 1965 ಮತ್ತು 1971 ರ
ಯುದ್ಧಗಳಲ್ಲಿಯೂ ನಮ್ಮ ಬೆಂಬಲಕ್ಕೆ ನಿಂತಿದ್ದು ಇಸ್ರೇಲಿಗರು ಮಾತ್ರ! ಆ ಸಮಯದಲ್ಲಿ ನಮ್ಮ ಜೊತೆ ಯಾವುದೇ ತರಹದ ಬಹಿರಂಗವಾದ ಬಂಧಗಳಿರದಿದ್ದರೂ ಸಹ, ರಹಸ್ಯವಾಗಿ ಭಾರತಕ್ಕೆ ಸಹಾಯ ಮಾಡಿತ್ತು! ”

3000 ವರ್ಷಗಳ ನಂತರ, ಇಸ್ರೇಲಿಗೆ ಭೇಟಿ ಇತ್ತ ಭಾರತದ ಮೊದಲ ಪ್ರಧಾನಿ ಶ್ರೀ ನರೇಂದ್ರ ಮೋದಿ!

ಇಸ್ರೇಲ್ ಅದೆಷ್ಟೇ ಯುದ್ಧಗಳಲ್ಲಿ ಭಾರತಕ್ಕೆ ಸಹಾಯ ಮಾಡಿದ್ದರೂ ಸಹ, ಕಾಂಗ್ರೆಸ್ ಪಕ್ಷ ಭಾರತದ ಈ ಅದ್ಭುತ ಸ್ನೇಹಿ ರಾಷ್ಟ್ರವನ್ನು ಕಡೆಗಣಿಸಿತ್ತು! ಅದೂ ಕೇವಲ ಮತ್ತದೇ ತುಷ್ಟೀಕರಣಕ್ಕಾಗಿ! ಆದರೆ, ಪ್ರಧಾನಿ ಮೋದಿ ಇಸ್ರೇಲನ್ನು ಗದ್ದುಗೆಗೇರಿದಾಗಿನಿಂದ ನಿರಂತರವಾಗಿ ಸಂಪರ್ಕಿಸಿದರು! ಪರಿಣಾಮವಾಗಿ, 2017 ರಲ್ಲಿ ಇಸ್ರೇಲಿಗೆ ಪ್ರಯಾಣವನ್ನೂ ಬೆಳೆಸಿದರು! ವ್ಹಾ! ಅದೆಷ್ಟೋ ಸಹಸ್ರ ವರ್ಷಗಳಿಂದ ಕಾಯುತ್ತಿದ್ದ ಇಸ್ರೇಲಿಗರು ಭಾರತೀಯನ ಆಗಮನದಿಂದ ಕಣ್ಣೀರಿಟ್ಟಿದ್ದರು!

“ಮೋದಿಯವರೇ! 3000 ವರ್ಷಗಳ ನಂತರ ಇಸ್ರೇಲಿಗೆ ಭೇಟಿ ಕೊಟ್ಟ ಮೊದಲ ಭಾರತದ ನಾಯಕ ನೀವು! ನಿಮ್ಮ ಮುಂದಿನ ಭೇಟಿಗೆ ಇನ್ನು ಬಹಳ ಕಾಲ ಕಾಯಬೇಕಿಲ್ಲ! ನನಗೆ ಗೊತ್ತಿದೆ! ನಿಜವಾದ ಅರ್ಥದಲ್ಲಾಗಲಿದೆ ಕ್ರಾಂತಿ!

ಈ ಭೇಟಿಯಲ್ಲಿ, ಹೇಗೆ ಎರಡು ದೇಶಗಳ ನಡುವಿನ ಬಾಂಧವ್ಯವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು, ಜೊತೆಗೆ ಎರಡು ರಾಷ್ಟ್ರಗಳ ನಾಗರಿಕ ಪ್ರದೇಶಗಳಲ್ಲಿ, ಭದ್ರತಾ ಗಡಿಗಳನ್ನೆಲ್ಲ ಹೇಗೆ ಬಲಗೊಳಿಸಬಹುದೆಂಬುದರ ಬಗ್ಗೆ ಚರ್ಚಿಸಿದ್ದೇವೆ!

ನಮ್ಮ ಬಹುತೇಕ ತೊಂದರೆಗಳಲ್ಲಿ ಇರುವುದು ಒಂದೇ ಪಾಠ! ದುರ್ಬಲ ಹೋರಾಡಲಾರ! ಸಬಲ ಹೋರಾಡುತ್ತಾನೆ! ಉಳಿಯುತ್ತಾನೆ! ಸಬಲರ ಜೊತೆ ಶಾಂತಿಯುತವಾಗಿರಿ! ಸಬಲರ ಜೊತೆ ಸ್ನೇಹ ಬೆಳೆಸಿ! ಸಬಲವಾಗುವ ಮೂಲಕ ನಿಮಗೆ ಶಾಂತಿಯನ್ನು ಕಾಪಾಡಬಹುದು! ನಮ್ಮ ದೇಶದ ಮೊದಲ ಪ್ರಧಾನಿ ಡೇವಿಡ್ ಬೆನ್ ರಿಂದಲೂ ಸಹ ನಮ್ಮ
ದೇಶದ ಮೊದಲ ಪ್ರಾಮುಖ್ಯತೆ ‘ಸಬಲ’ವಾಗುವುದೇ ಆಗಿತ್ತು!

ನಾನು ಮೃದುತ್ವವನ್ನು ಇಷ್ಟ ಪಡುತ್ತೇನಾದರೂ, ಕಾಠಿಣ್ಯವನ್ನು ಅದಕ್ಕಿಂತ ಹೆಚ್ಚು ಇಷ್ಟಪಡುತ್ತೇನೆ! “

Image result for israel pm visits india

ಹೇಳಿದ್ದಿಷ್ಟೇ ! ಅದೇ ಸಾಕಾಗಿ ಹೋಗಿದೆ ಇಸ್ಲಾಂ ಮೂಲಭೂತವಾದಿಗಳಿಗೆ! ಅದರಲ್ಲಿಯೂ, ಎರಡೂ ದೇಶಗಳು ಭಯೋತ್ಪಾದನೆಯ ವಿರುದ್ಧವಾಗಿಯೇ ತೊಡೆ ತಟ್ಟಿದೆ! ಸಾಲದ್ದಕ್ಕೆ, ಜಗದ ದೊಡ್ಡಣ್ಣ ಅಮೇರಿಕಾದಲ್ಲಿ ಟ್ರಂಪ್ ಕೂತು ಭಯೋತ್ಪಾದನೆಯ ಹುಟ್ಟಡಗಿಸಲು ಇಲ್ಲಸಲ್ಲದ ಪ್ರಯತ್ನ ಮಾಡುತ್ತಿದ್ದಾರೆ! ಅತ್ತ ಜಪಾನ್ – ಜರ್ಮನಿಯ ಸಹಕಾರವಂತೂ ಇದೆ! ರಶ್ಯಾದ ಪುಟಿನ್ ಮೋದಿ ಎನ್ನುತ್ತಾರೆ! ಭಯೋತ್ಪಾದನೆಯ ಹುಳಗಳಿಗೆ ಇನ್ನೇನು ಸದ್ಯದಲ್ಲಿಯೇ ಹದ ಬೀಳಲಿದೆ!

– ನಿಹಾರಿಕಾ ಶರ್ಮ

Tags

Related Articles

Close