ಪ್ರಚಲಿತ

ಈ ಕಾರಣಕ್ಕಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಮಹಿಳೆಯರು ತುದಿಗಾಲಿನಲ್ಲಿ ನಿಂತಿದ್ದಾರೆ!! ಜಿ. ಪರಮೇಶ್ವರ್ ಬಿಚ್ಚಿಟ್ಟ ಆ ಭಯಾನಕ ಸತ್ಯವಾದರೂ ಏನು ಗೊತ್ತಾ?

ಕರ್ನಾಟಕದಲ್ಲಿ ಸಿದ್ದರಾಮಯ್ಯ ನವರು ಅಧಿಕಾರದ ಗದ್ದುಗೆಯನ್ನು ಏರಿದ ನಂತರ ಹಗರಣಗಳ ಮೇಲೆ ಹಗರಣಗಳು, ಭಷ್ಟಾಚಾರಗಳು, ಕೊಲೆ ಸುಲಿಗೆಗಳ ಸುರಿಮಳೆಯೇ ಹರಿದು ಹೋಗಿದ್ದಲ್ಲದೇ ರೈತರ ಸಾಲು ಸಾಲು ಆತ್ಮಹತ್ಯೆಗಳೂ ಕೂಡ ನಡೆದು ಹೋಗಿದ್ದು ಅಮಾಯಕರ ಸಾವಿಗೆ ನ್ಯಾಯವೇ ಸಿಗದಂತಾಗಿದೆ!! ಅಷ್ಟೇ ಅಲ್ಲದೇ, ತುಘಲಕ್ ದರ್ಬಾರ್ ಎಂದು ಕರೆಸಿಕೊಂಡಿರುವ ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರಿಗೂ ಸುರಕ್ಷತೆಯೇ ಇಲ್ಲದಂತಾಗಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿರುವಂತಹ ಅದೆಷ್ಟೋ ಕೊಲೆ- ಪಾತಕಗಳಿಗೆ, ಅಪಹರಣಗಳಿಗೆ, ಅತ್ಯಾಚಾರಗಳಿಗೆ ಅದೆಷ್ಟೋ ಅಮಾಯಕರು ಬಲಿಯಾಗಿದ್ದಾರೋ ಗೊತ್ತಿಲ್ಲ!! ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಪದವಿಗೆ ಏರಿದಂದಿನಿಂದ ಇಲ್ಲಿವರೆಗೆ ಮಹಿಳೆಯರು ಸುರಕ್ಷಿತರಾಗಿದ್ದಾರೆಯೇ ಎಂದು ಕೇಳಿದರೆ ಆಶ್ಚರ್ಯಕರ ಮಾಹಿತಿಯೊಂದನ್ನು ಜಿ. ಪರಮೇಶ್ವರ್ ಬಿಚ್ಚಿಟ್ಟಿದ್ದಾರೆ.

ಹೌದು… ಕರ್ನಾಟಕದಲ್ಲಿನ ಸಿದ್ದರಾಮಯ್ಯ ಸರ್ಕಾರ ರೈತರ ಬಗ್ಗೆ ಎಷ್ಟೊಂದು ಬೇಜಬ್ದಾರಿಯನ್ನು ವಹಿಸುತ್ತಿದೆ ಎಂದು ಕೇಳಿದರೆ ಅದಕ್ಕೆ ಅದೆಷ್ಟೋ ನಿದರ್ಶನಗಳು ಕಣ್ಣ ಮುಂದೆ ಇವೆ!! ಸಾಲ ಮನ್ನಾ ಎನ್ನುವ ಪೊಳ್ಳು ಭರವಸೆಯನ್ನು ನಂಬಿರುವ ರೈತರು ಬೇಸಾಯಕ್ಕೋಸ್ಕರ ಸರ್ಕಾರದ ಸಾಲ ಮನ್ನಾವನ್ನು ನಂಬಿ ಮೋಸ ಹೋಗಿದ್ದಲ್ಲದೇ ಕೊನೆಗೆ ಆತ್ಮಹತ್ಯೆಗೂ ಶರಣಾಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಮಹಿಳೆಯರು ಎಷ್ಟೊಂದು ಸುರಕ್ಷಿತರಾಗಿದ್ದಾರೆ ಎಂದು ಕೇಳಿದರೆ ಅದಕ್ಕೂ ಕೂಡ ಆಶ್ಚರ್ಯಕರವಾದ ವಿಚಾರಗಳು ತಿಳಿದು ಬರುತ್ತದೆ!!

ಸಿ ಎಂ ಸಿದ್ದರಾಮಯ್ಯ ಅಧಿಕಾರದ ಗದ್ದುಗೆಯನ್ನು ಏರಿದ ಬಳಿಕ ಅಂದರೆ 2014 ರ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸುಮಾರು 5,989 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿ ತಿಳಿಸಿದ್ದು, ಇದು 2016 ರ ವೇಳೆ ಈ ಸಂಖ್ಯೆಯೂ 6,316 ಕ್ಕೆ ಏರಿದೆ ಎಂದರೆ ಕರ್ನಾಟಕದಲ್ಲಿ ಮಹಿಳೆಯರು ಸುರಕ್ಷಿತರಾಗಿದ್ದಾರೆಯೇ ಎನ್ನುವ ಪ್ರಶ್ನೆ ಮೂಡುವುದಂತೂ ಸಹಜ!! ಆದರೆ 2014 ರಿಂದ ಮೇ 31, 2017 ರ ನಡುವೆ ಕರ್ನಾಟಕದಲ್ಲಿ ಒಟ್ಟು 21,053 ಮಹಿಳೆಯರು ಕಾಣೆಯಾಗಿದ್ದು, ಇದರಲ್ಲಿ 17,777 ಮಂದಿ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ಹಿರಿಯ ಪೆÇಲೀಸ್ ಅಧಿಕಾರಿಗಳು ಹೇಳುವ ಪ್ರಕಾರ, ಕಾಣೆಯಾದ ಮಹಿಳೆಯರ ಪೈಕಿ ಹೆಚ್ಚಿನವರು ಸ್ವ ಇಚ್ಛೆಯಿಂದಲೇ ಮನೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾರಲ್ಲದೆ, ಕೆಲ ಮಹಿಳೆಯರು ವೈಯಕ್ತಿಕ ಪೈಪೆÇೀಟಿ ಅಥವಾ ಕುಟುಂಬ-ಸಂಬಂಧಿತ ಸಮಸ್ಯೆಗಳ ಕಾರಣಗಳಿಂದಾಗಿ ಅವರನ್ನು ಅಪಹರಿಸಿರಬಹುದೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಇತರ ಪೆÇಲೀಸರು ಹೇಳುವ ಪ್ರಕಾರ, ಮಾನವ ಕಳ್ಳಸಾಗಣೆಯಿಂದಾಗಿ ಕೆಲ ಹೆಣ್ಣು ಮಕ್ಕಳು ಬಲಿಯಾಗಿದ್ದಾರೆ ಎಂದು ಹೇಳಿದ್ದು, ಈ ಬಗೆಗಿನ ವಿಸ್ತøತ ಸದರಿ ಅಂಕಿ ಅಂಶಗಳ ಪಟ್ಟಿಯನ್ನು ಇತ್ತೀಚೆಗೆ ಗೃಹ ಸಚಿವ ಜಿ.ಪರಮೇಶ್ವರ ಅವರು ವಿಧಾನಪರಿಷತ್ತಿನಲ್ಲಿ ಬಹಿರಂಗಪಡಿಸಿದ್ದಾರೆ.

Image result for g. parameshwar

“ಅದೆಷ್ಟೋ ಸಂಖ್ಯೆಯ ಮಹಿಳೆಯರು ದುಷ್ಕರ್ಮಿಗಳ ಕುಕೃತ್ಯಕ್ಕೆ ಬಲಿಯಾಗಿದ್ದಾರೋ ಗೊತ್ತಿಲ್ಲ. ಆದರೆ ಆರ್ಥಿಕತೆಯಲ್ಲಿ ಹಿನ್ನಡೆ ಇರುವ ಅದೆಷ್ಟೋ ಕುಟುಂಬದ ಮಹಿಳೆಯರು ದುಷ್ಕರ್ಮಿಗಳ ಕುಕೃತ್ಯಕ್ಕೆ ಸುಲಭ ಬೇಟೆಯಾಗಿರುವುದಂತೂ ನಿಜ. ಅಷ್ಟೇ ಅಲ್ಲದೇ, ಕೆಲಸ ನೀಡುತ್ತೇವೆ ಎಂಬ ಪೊಳ್ಳು ಭರವಸೆಯನ್ನು ನಂಬಿ ಹೋಗಿರುವ ಅದೆಷ್ಟೋ ಹೆಣ್ಣು ಮಕ್ಕಳು ಅಪಹರಣಕ್ಕೊಳಗಾಗಿದ್ದಾರೆ” ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.

ಇನ್ನು ಮಹಿಳೆಯರ ಕಾಣೆಯಾದ ಕುರಿತು ವಿಧಾನ ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಬಗ್ಗೆ ರಾಜ್ಯದಾದ್ಯಂತ ಒಂಬತ್ತು ಮಾನವ-ವಿರೋಧಿ ಕಳ್ಳಸಾಗಣೆ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಅಷ್ಟೇ ಅಲ್ಲದೇ, ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಬೆಳಗಾವಿ, ಮಂಗಳೂರು, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ದಾವಣಗೆರೆ ಮತ್ತು ವಿಜಯಪುರಾದಲ್ಲಿ ಈ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈ ಘಟಕಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಸ್ಥಳೀಯ ಪೆÇಲೀಸ್ ಠಾಣೆಯ ಸಹಯೋಗದಿಂದಾಗಿ ತರಬೇತಿ ನೀಡಲಾಗುತ್ತದೆ ಎಂದು ಪರಮೇಶ್ವರ ಹೇಳಿದ್ದಾರೆ.

ಆದರೆ… ಈ ಒಂಬತ್ತು ಘಟಕಗಳಲ್ಲಿ ಮತ್ತು ಸ್ಥಳೀಯ ಪೆÇಲೀಸ್ ಕೇಂದ್ರಗಳ ನಡುವೆ ಸಂವಹನದ ಕೊರತೆ ಎದ್ದು ಕಾಣುತ್ತಿದೆ ಎನ್ನುವುದೇ ತಜ್ಞರು ಅಭಿಪ್ರಾಯ!! ಹಾಗಾಗಿ “ಪೆÇಲೀಸ್ ಠಾಣೆಯಲ್ಲಿ ಮಹಿಳೆಯರು ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ ತಕ್ಷಣ, ಅವರ ಛಾಯಾಚಿತ್ರದೊಂದಿಗೆ ಅವರ ವಿವರಗಳನ್ನು ರಾಜ್ಯದಾದ್ಯಂತ ಮತ್ತು ಒಂಭತ್ತು ಘಟಕಗಳಿಗೆ ರವಾನಿಸಲಾಗುತ್ತದೆ. ಆದರೆ ಇಂಟರ್ ನೆಟ್ ಜ್ಞಾನ ಮತ್ತು ಇತರ ತಂತ್ರಜ್ಞಾನ-ಸಂಬಂಧಿತ ಸಮಸ್ಯೆಗಳ ಕೊರತೆಯಿಂದಾಗಿ, ವಿರೋಧಿ ಮಾನವ ಕಳ್ಳಸಾಗಣೆ ಘಟಕಗಳ ಅಧಿಕಾರಿಗಳು ಕಾಣೆಯಾದವರನ್ನು ಪತ್ತೆ ಮಾಡುವುದು ಕಷ್ಟಕರವೆಂದು ಹೇಳಿಕೊಂಡಿದ್ದಾರೆ. ಹೀಗಾಗಿ ಹಲವು ಪ್ರಕರಣಗಳು ಬಗೆಹರಿಯದೆ ಹಾಗೆಯೇ ಉಳಿದಿವೆ ” ಎಂದು ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂತೂ… ಗಂಡ-ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ ಕಾಣೆಯಾದವರ ಬಗ್ಗೆ ಸೂಕ್ತ ತನಿಖೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗುತ್ತಿದೆಯಲ್ಲದೇ, ಸರ್ಕಾರ ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳದೇ ಇರುವುದು ಸೋಜಿಗದ ಸಂಗತಿಯಾಗಿದೆ. ಹಾಗಾಗಿ ಸಿದ್ದರಾಮಯ್ಯ ನವರ ಸರ್ಕಾರದಲ್ಲಿ ಮಹಿಳೆಯರು ಸುರಕ್ಷಿರರಾಗಿರುವುದಕ್ಕಿಂತ ಹೆಚ್ಚಾಗಿ ಇನ್ನೂ ಅಸುರಕ್ಷಿತರಾಗಿಯೇ ಉಳಿದಿದ್ದಾರೆ ಎನ್ನುವುದೇ ಬಹು ದೊಡ್ಡ ವಿಪರ್ಯಾಸವಾಗಿದೆ!!

ಮೂಲ: https://timesofindia.indiatimes.com/city/bengaluru/21053-women-went-missing-in-state-from-2014-17/articleshow/59224630.cms

– ಅಲೋಖಾ

Tags

Related Articles

Close