ಪ್ರಚಲಿತ

ಎಂತಹ ಘಟಾನುಘಟಿ ರಾಜಕೀಯ ನಾಯಕನೂ ಇವರನ್ನು ಎದುರು ಹಾಕಿಕೊಳ್ಳಲು ಹಿಂಜರಿಯುವುದೇಕೆ ಗೊತ್ತೇ?! ಸುಬ್ರಹ್ಮಣಿಯನ್ ಸ್ವಾಮಿಯವರ ಬಗೆಗಿನ ಈ ಹತ್ತು ಅಪರೂಪದ ವಿಷಯ ತಿಳಿದರೆ ದಂಗಾಗುವಿರಿ!

ಭ್ರಷ್ಟರನ್ನು ಹಾಗು ಜನ ವಿರೋಧಿ ಸರ್ಕಾರದ ನಡೆಗಳ ಹಿಂದಿರುವ ರಹಸ್ಯಗಳನ್ನು ಬಯಲಿಗೆಳೆಯುವ ಸುಬ್ರಮಣಿಯನ್ ಸ್ವಾಮಿ!

ಭ್ರಷ್ಟರನ್ನು ಹಾಗು ಜನ ವಿರೋಧಿ ಸರ್ಕಾರದ ನಡೆಗಳ ಹಿಂದಿರುವ ರಹಸ್ಯಗಳನ್ನು ಬಯಲಿಗೆಳೆಯುವ ಮೂಲಕ ಭಾರತದ ಜನಪ್ರಿಯ ರಾಜಕಾರಣಿ ಎಂದೆನಿಸಿಕೊಂಡಿದ್ದಾರೆ ಸುಬ್ರಮಣಿಯನ್ ಸ್ವಾಮಿಯವರು!! ಭಾರತದ ಯೋಜನಾ ಆಯೋಗದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಹಿಂದೆ ಕೇಂದ್ರದಲ್ಲಿ ಚಂದ್ರಶೇಖರ್ ಸಿಂಗ್ ರವರ ಸಂಪುಟದಲ್ಲಿ ಒಬ್ಬ ಸಚಿವರಾಗಿದ್ದರು. ಅಷ್ಟೇ ಅಲ್ಲದೇ ಮೂಲತಃ ಅರ್ಥಶಾಸ್ತ್ರಜ್ಞರಾದ ಸ್ವಾಮಿ ವಿಶ್ವ ಸಂಸ್ಥೆಯ ‘ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿ ‘ ವಿಚಾರದಲ್ಲಿ ವರದಿ ಸಿದ್ಧಪಡಿಸುವ ಸಮಿತಿಯಲ್ಲಿಯೂ ಕೂಡ ಒಬ್ಬ ಸದಸ್ಯರಾಗಿದ್ದಂತಹ ಒಬ್ಬ ಜನಪ್ರಿಯ ವ್ಯಕ್ತಿ!!

ಸ್ವಾಮಿ 5 ಬಾರಿ ಸಂಸದರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ ಯು.ಪಿ.ಎ ಸರ್ಕಾರದ ನಿದ್ದೆಗೆಡಿಸಿರುವ ವ್ಯಕ್ತಿಯಾಗಿದ್ದಾರೆ!! ಈಗಾಗಲೇ ಗಾಂಧಿ ಪರಿವಾರರಿಂದ ಹಿಡಿದು ಮಾಜಿ ಗೃಹ ಸಚಿವರಾಗಿದ್ದ ಪಿ.ಚಿದಂಬರಂ ಅವರ ಭ್ರಷ್ಟಚಾರವನ್ನು ಹೊರಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿಕೊಂಡಿದ್ದಾರೆ!!

ಸುಬ್ರಮಣಿಯನ್ ಸ್ವಾಮಿಯವರು ಯು.ಪಿ.ಎ ಸರ್ಕಾರದ 2ಜಿ ಹಗರಣವನ್ನು ಬಯಲಿಗೆಳೆದಿದ್ದಲ್ಲದೇ ಮಾಜಿ ಸಂಪರ್ಕ ಸಚಿವರಾದ ಎ. ರಾಜಾ ಅವರ ಬಂಧನಕ್ಕೂ ಕೂಡ ಕಾರಣಕರ್ತರಾಗಿದ್ದಾರೆ. ಅಷ್ಟೇ ಅಲ್ಲದೇ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅಕ್ರಮ ಆಸ್ತಿ ಹಗರಣ, ರಾಮಸೇತು ವಿವಾದ, ಸೋನಿಯಾ ಗಾಂಧಿ ಪದವಿ ವಿಚಾರ, ಕಾಂಗ್ರೇಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ ಹಗರಣ ಮುಂತಾದ ಬಹುಕೋಟಿ ಹಗರಣಗಳನ್ನು ವಿಸ್ಮೃತ ಅಧ್ಯಯನ ಮಾಡಿ ಸೂಕ್ತ ದಾಖಲೆಗಳೊಂದಿಗೆ ಕೋರ್ಟ್‍ನಲ್ಲಿ ದಾವೆ ಹೂಡಿದ್ದಾರೆ. ಇಂತಹ ಅಸಾಧಾರಣ ವ್ಯಕ್ತಿಯ ಬಗ್ಗೆ ಅದೆಷ್ಟೋ ಮಂದಿ ತಿಳಿದಿರದ ಅಪರೂಪದ ಸತ್ಯ ವಿಚಾರಗಳನ್ನು ತಿಳಿದುಕೊಳ್ಳುವುದು ಅತೀ ಮುಖ್ಯ!!

1. ಹಿಂದೂಗಳ ಪವಿತ್ರ ಕ್ಷೇತ್ರವೆನಿಸಿರುವ ಮಾನಸ ಸರೋವರ ಯಾತ್ರೆಗೆ ಸುಬ್ರಮಣಿಯನ್ ಸ್ವಾಮಿಯವರ ಪ್ರಯತ್ನದಿಂದಲೇ 1981ರಿಂದ ಪ್ರವೇಶ ಮಾಡಲು ಸಾಧ್ಯವಾಯಿತು. ಅಷ್ಟೇ ಅಲ್ಲದೇ ಚೀನಾದ ಅಂದಿನ ಪ್ರಮುಖ ನಾಯಕರಾಗಿದ್ದ ಡೆಂಗ್ ಕ್ಸಿಯೋಪಿಂಗ್ ಜೊತೆ ಮಾತುಕತೆ ನಡೆಸಿ ಯಾತ್ರಾ ಕ್ಷೇತ್ರಕ್ಕೆ ಹೋಗುವ ಮಾರ್ಗವನ್ನು ಮರು ತೆರೆಯಲು ಕಾರಣಕರ್ತರಾದಂತಹ ವ್ಯಕ್ತಿಯಾಗಿದ್ದಾರೆ.

2. ಇನ್ನು 1990- 91ರ ಅವಧಿಯಲ್ಲಿ ಕೇಂದ್ರ ಕಾನೂನು ಹಾಗು ವಾಣಿಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಸ್ವಾಮಿ ಅದೇ ಸಮಯದಲ್ಲಿ ಯೋಜನಾ ಆಯೋಗದ ಸದಸ್ಯರೂ ಆಗಿದ್ದರು. ಚಂದ್ರಶೇಖರ್ ಪ್ರಧಾನ ಮಂತ್ರಿಗಳಾಗಿದ್ದ ಆ ಸಂದರ್ಭದಲ್ಲಿ ಸ್ವಾಮಿ ಭಾರತದ ಆರ್ಥಿಕ ನವೀಕರಣಕ್ಕಾಗಿ ವಿಸ್ಮೃತ ಅಧ್ಯಯನ ಮಾಡಿ ನೀಲಿ ನಕ್ಷೆಯನ್ನು ಪ್ರಧಾನಿಗೆ ಕೊಟ್ಟು ಅದರ ಅನುಷ್ಠಾನಕ್ಕೆ ಶಿಫಾರಸ್ಸು ಮಾಡಿದ್ದರು. ಆದರೇ ಆ ಶಿಫಾರಸ್ಸು 1991 ರಲ್ಲಿ ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅದನ್ನು ಜಾರಿಗೆ ತಂದರು.

3. ಸ್ವಾಮಿಯವರು ಸಿಎಜಿ ವರದಿ ಪ್ರಕಾರ, ಯುಪಿಎ ಸರಕಾರದಲ್ಲಿ ನಡೆದ 2ಜಿ ಹಗರಣದಿಂದಾಗಿ ರಾಷ್ಟ್ರೀಯ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿವರೆಗೆ ನಷ್ಟವಾಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. ತದನಂತರದಲ್ಲಿ ಸ್ವಾಮಿಯವರು, ಸಂಪರ್ಕ ಸಚಿವರಾಗಿದ್ದ ಎ. ರಾಜಾ ಅವರ ವಿಚಾರಣೆಗೆ ಅನುಮತಿ ಕೋರಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಆದರೆ ಈ ಬಗ್ಗೆ ಮನಮೋಹನ್ ಸಿಂಗ್ ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇದ್ದ ಕಾರಣ ಸ್ವಾಮಿ ಸುಪ್ರೀಂಕೋರ್ಟ್‍ಗೆ ವರದಿ ಸಲ್ಲಿಸಿದರು.

4. 2004ರಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹಸ್ತಕ್ಷೇಪ ಮಾಡುವವರೆಗೂ ಸೋನಿಯಾ ಗಾಂಧಿಯವರು ಭಾರತ ದೇಶದ ಮೊದಲ ಇಟಾಲಿಯನ್ ಪ್ರಧಾನಿಯಾಗಲು ಎಲ್ಲ ಸಿದ್ಧತೆಯೂ ನಡೆದಿತ್ತು. ಅಷ್ಟೇ ಅಲ್ಲದೇ ಆ ಸಂದರ್ಭದಲ್ಲಿ ಸ್ವಾಮಿಯವರು ಸೋನಿಯಾ ಪ್ರಧಾನಿಯಾಗಬಾರದೆಂದು ಆಗಿನ ಅಧ್ಯಕ್ಷರಾಗಿದ್ದ ಡಾ. ಎಪಿಜೆ ಅಬ್ದುಲ್ ಕಲಾಂಗೂ ಪತ್ರ ಬರೆದಿದ್ದರು!! ಆದರೆ ಕಲಾಂ ಅವರು ತದನಂತರದಲ್ಲಿ ಸ್ವಾಮಿಯವರ ಆರೋಪಗಳನ್ನು ನಿರಾಕರಿಸಿದರು.

5. ಬಹುಶಃ ನಿರಂತರವಾಗಿ ಗಾಂಧಿ ಕುಟುಂಬದ ದುಷ್ಕøತ್ಯಗಳನ್ನು ಹೊರಗೆಳೆಯಲು ಪ್ರಯತ್ನಪಟ್ಟವರಲ್ಲಿ ಸ್ವಾಮಿಯವರೇ ಮೊದಲಿಗರು ಎಂದೆನಿಸಿದ್ದಾರೆ. ಇವರೊಬ್ಬರೇ ಸೋನಿಯಾರ ಗುರುತಿನ ಬಗ್ಗೆ, ರಾಹುಲ್ ಅವರ ವಿದ್ಯಾರ್ಹತೆಯ ಬಗ್ಗೆ ಮತ್ತು ಪ್ರಿಯಾಂಕರ ಕುಡಿತದ ಬಗ್ಗೆ ಪ್ರಶ್ನಿಸಿದ ವ್ಯಕ್ತಿಯಾಗಿದ್ದಾರೆ!! ಅಷ್ಟೇ ಅಲ್ಲದೇ ನ್ಯಾಷನಲ್ ಹೆರಾಲ್ಡ್ ಹಗರಣದ ಮೂಲಕ ಕಾಂಗ್ರೆಸ್ ಅಧ್ಯಕ್ಷೀಯ ಮನೆತನದವರಾದ ಸೋನಿಯಾ ಗಾಂಧಿ ಹಾಗು ರಾಹುಲ್ ಗಾಂಧಿ ‘ಅಸೋಸಿಯೇಟೆಡ್ ಜರ್ನಲ್ಸ್ ಪ್ರೈವೇಟ್ ಲಿಮಿಟೆಡ್’ (ಎ ಜೆ ಪಿ ಎಲ್ ) ಎಂಬ ಹೆಸರಿನ ಸಾರ್ವಜನಿಕ ಕಂಪನಿಯೊಂದರ ಆಸ್ತಿಯನ್ನು ತಮ್ಮ ಖಾಸಗಿ ಕಂಪನಿ ‘ಯಂಗ್ ಇಂಡಿಯಾ’ ಹೆಸರಿನ ಮೂಲಕ ಸುಮಾರು 20 ಕೋಟಿ ರುಪಾಯಿ ವಂಚನೆ ಎಸಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ನವೆಂಬರ್ 1, 2013 ರಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ವ್ಯಕ್ತಿಯಾಗಿದ್ದಾರೆ.

6. ಇಂದಿರಾ ಗಾಂಧಿ ಸರ್ಕಾರದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ ಸ್ವಾಮಿ ಅಮೇರಿಕಾ ಗೆ ಹೋಗಿ ಮಿಚಿಗನ್ ನಲ್ಲಿ ಉಳಿದರು. 1976ರಲ್ಲಿ ಸ್ವಾಮಿ ಯವರಿಗೆ ಸರ್ಕಾರದಿಂದ ಅರೆಸ್ಟ್ ವಾರಂಟ್ ಹೊರಡಿಸಲಾಯಿತು. ಸ್ವಾಮಿ ಸಂಸತ್ ಕಾರ್ಯ ಕಲಾಪಗಳಲ್ಲಿ ಭಾಗಿಯಾಗಲು ಅಮೆರಿಕಾದಿಂದ ಹೊರಟು ಬಂದರು. ಆ ಸಂದರ್ಭದಲ್ಲಿ ಅರೆಸ್ಟ್ ವಾರೆಂಟ್ ಹೊರಡಿಸಿದ್ದ ಸಂದರ್ಭದಲ್ಲಿ ಪಕ್ಷವನ್ನು ತೊರೆದು ಮುಂದೆ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪ್ರಬಲ ನಾಯಕನನ್ನೇ ಕಳೆದುಕೊಂಡಿತ್ತು!!

7. ಸುಬ್ರಮಣಿಯನ್ ಸ್ವಾಮಿಯವರು ಪರಿಪೂರ್ಣವಾದ ಶೈಕ್ಷಣಿಕ ದಾಖಲೆಯನ್ನು ಹೊಂದಿದ್ದಾರೆ. ತನ್ನ 24ನೇ ವಯಸ್ಸಿನಲ್ಲಿ ರಾಕ್ಪೆಲ್ಲರ್ ಸ್ಕಾಲರ್ ಶಿಪ್ ಅನ್ನು ಪಡೆದು, ಜಗತ್ತಿನ ಅತಿ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ 1965ರಲ್ಲಿ ಅರ್ಥಶಾಸ್ತ್ರ ವಿಷಯವಾಗಿ ಪ್ರಬಂಧ ಮಂಡಿಸಿ ಪಿ ಹೆಚ್ ಡಿ ಪಡೆದಿದ್ದಾರೆ.

8. ತಮ್ಮ ಹಿಂದೂ ಸಂತತಿಯನ್ನು ಅಂಗೀಕರಿಸದ ಭಾರತೀಯ ಮುಸ್ಲಿಮರನ್ನು ಮತದಾನದಿಂದ ವಂಚಿಸುವಂತೆ ಪ್ರಸ್ತಾಪಿಸಿದ ನಂತರ ಹಾರ್ವರ್ಡ್ ವಿಶ್ವವಿದ್ಯಾನಿಲಯವು ತಾನು ಬೋಧಿಸುತ್ತಿದ್ದಂತಹ ಸಮ್ಮರ್ ಎಕಾನಾಮಿಕ್ಸ್ ಕೋರ್ಸ್‍ನ 2 ಪಠ್ಯಕ್ರಮವನ್ನೇ ಕೈಬಿಡಲಾಯಿತು.

9. ಸ್ವಾಮಿ ಅವರು ಅನೇಕ ಲೇಖನಗಳನ್ನು ಪ್ರಕಟಿಸಿದ್ದಲ್ಲದೇ, ಎಕನಾಮಿಕ್ ಸೈನ್ಸಸ್ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಗೆದ್ದ ಮೊದಲ ಅಮೆರಿಕದ ಪಾಲ್ ಸ್ಯಾಮುಯೆಲ್ಸನ್ ಅವರೊಂದಿಗೆ ಸಹ-ಲೇಖಕರಾಗಿದ್ದರು. ಅಷ್ಟೇ ಅಲ್ಲದೇ, ಸ್ವಾಮಿ 1974 ರಲ್ಲಿ ಸೂಚ್ಯಂಕ ಸಂಖ್ಯೆಗಳ ಸಿದ್ಧಾಂತದ ಪೇಪರ್ ಅನ್ನು ಪ್ರಕಟಿಸಿದ್ದಾರೆ.

10. ಸ್ವಾಮಿಯವರು ಭಾರತದೊಂದಿಗೆ ಚೀನಾ, ಪಾಕಿಸ್ತಾನ ಹಾಗು ಇಸ್ರೇಲ್ ದೇಶಗಳ ವಿದೇಶಾಂಗ ನೀತಿಗಳ ಬಗ್ಗೆ ವಿಸ್ಮೃತ ಅಧ್ಯಯನ ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಲ್ಲದೇ, ಒಂದು ವರ್ಷದ ಒಳಗೆ ಚೀನಿ ಭಾಷೆಯನ್ನು ಕಲಿಯಲು ಯಾರೋ ಒಬ್ಬರು ಅವರನ್ನು ಸವಾಲು ಮಾಡಿದ್ದರು. ಹಾಗಾಗಿ ಚೀನಾ ಆರ್ಥಿಕತೆ ಮತ್ತು ಭಾರತ ಮತ್ತು ಚೀನಾ ನಡುವಿನ ತುಲನಾತ್ಮಕ ವಿಶ್ಲೇಷಣೆಯ ಮೇಲೆ ಸ್ವಾಮಿ ಒಂದು ಅಧಿಕಾರ ಸ್ಥಾಪಿಸಿ, ಕೇವಲ 3 ತಿಂಗಳಲ್ಲಿ ಮ್ಯಾಂಡರಿನ್ (ಚೈನೀಸ್) ಅನ್ನು ಅರಗಿಸಿಕೊಳ್ಳುತ್ತಾರೆ.

ಮಹಾನ್ ಬೌದ್ಧಿಕ ವ್ಯಕ್ತಿಯಾಗಿರುವ ಸ್ವಾಮಿಯವರು ಯಾವಾಗಲೂ ತಪ್ಪನ್ನು ಎತ್ತಿ ತೋರಿಸಲು ಇಚ್ಛೆ ಪಡುವಂತಹ ವ್ಯಕ್ತಿ!! ವೈವಿಧ್ಯಮಯ ಕ್ಷೇತ್ರಗಳಲ್ಲಿ ಅವರ ಮಾಡಿರುವ ಸಾಧನೆಗಳಿಗೆ ಸಾಟಿಯೇ ಇಲ್ಲ. ಹಾಗಾಗಿ ಇವರು ದೇಶದ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು ಎನ್ನುವ ಕೀರ್ತಿಗೆ ಪಾತ್ರರಾಗಿರುವುದಂತೂ ನಿಜ!!

ಮೂಲ: http://postcard.news/10-rare-facts-subramanian-swamy-not-many-people-know/

ಅಲೋಖಾ

Tags

Related Articles

Close