ಪ್ರಚಲಿತ

ಎಕ್ಸ್ ಕ್ಲೂಸಿವ್ ಸುದ್ದಿ!!! ರಾಜ್ಯ ಬಿಜೆಪಿಯಲ್ಲಿ ಸಂಚಲನ! ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ…………

ರಾಜ್ಯ ಬಿಜೆಪಿಯಲ್ಲಿ ಚಾಣಕ್ಯನ ಚಾಣ ಸರಿಯಾಗಿಯೇ ಕೆಲಸ ಮಾಡುತ್ತಿದೆ ಬಿಡಿ! ಈ ಸಲದ ವಿಧಾನಸಭೆ ಚುನಾವಣೆಯಲ್ಲಿ, ಪಕ್ಷದ ಚಿಂತೆ ಒಂದು ಕಡೆಯಾದರೆ, ಅತ್ತ ಟಿಕೆಟ್ ಬೇಕೆಂದು ಹಠ ಹಿಡಿದಿರುವ ಒಂದಷ್ಟು ಶಾಸಕರು! ಇತ್ತ ಕಾಂಗ್ರೆಸ್ ಜೆಡಿಎಸ್ ರ ಕುತಂತ್ರ! ಕಾಂಗ್ರೆಸ್ ಮುಕ್ತ ಕರ್ನಾಟಕವನ್ನು ಮಾಡಲೇಬೇಕೆಂದು ಹೊರಟಿರುವ ಬಿಜೆಪಿ ಯ ಹೈ ಕಮಾಂಡ್ ಗಳು ಸರಿಯಾಗಿಯೇ ಬಿಜೆಪಿಯ ಶಾಸಕರಿಗೆ ಗುನ್ನಾ ಕೊಡುತ್ತಿದೆ.

ರಾಜ್ಯ ಬಿಜೆಪಿಯಲ್ಲಿ 22 ಶಾಸಕರ ಕ್ಷೇತ್ರ ಬದಲಾವಣೆಯಾಗಲಿದ್ದರೆ, ಉಳಿದ ಐದು ಮಾಜಿ ಹಾಗೂ ಹಾಲಿ ಶಾಸಕರಿಗೆ ಟಿಕೇಟ್ ಕೊಡಬೇಡಿ ಎಂದು ಅಮಿತ್ ಶಾ ಖಡಕ್ ಎಚ್ಚರಿಕೆ ನೀಡಿದ್ದಾರೆ! ಈ ಸಂಬಂಧ ಮಂಗಳವಾರ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾದ ಬಿ ಎಸ್ ಯಡಿಯೂರಪ್ಪರವರೊಂದಿಗೆ, ಕರ್ನಾಟಕದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಪೀಯುಷ್ ಗೋಯಲ್ ಹಾಗೂ, ಮುರಳೀಧರ್ ರಾವ್ ಚರ್ಚೆ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ!

Image result for core committee of karnataka bjp

ಮಂಗಳವಾರ, ಯಡಿಯೂರಪ್ಪ ನಿವಾಸದಲ್ಲಿ ಕೋರ್ ಕಮಿಟಿ ಸಭೆ ನಡೆದ ಬಳಿಕ, ಪ್ರಕಾಶ್ ಜಾವ್ಡೇಕರ್ ಯಡಿಯೂರಪ್ಪರೊಂದಿಗೆ ಪ್ರತ್ಯೇಕ ಮಾತುಕಥೆ ನಡೆಸಿದ್ದು, ಬಿಜೆಪಿ ಶಕ್ತಿ ಹೀನವಾಗಿರುವ ಪ್ರದೇಶದಲ್ಲಿ, ಆರ್ಥಿಕವಾಗಿ ಸಬಲವಾಗಿರುವ 22 ಶಾಸಕರನ್ನು ಕಣಕ್ಕಿಳಿಸುವುದು ಸೂಕ್ತ ಎಂದು ಜಾವ್ಡೇಕರ್ ಮತ್ತು ಗೋಯಲ್ ಅಭಿಪ್ರಾಯಪಟ್ಟಿದ್ದಾರೆ!

ರಾಜಾಜಿನಗರದ ಶಾಸಕ ಸುರೇಶ್ ಕುಮಾರ್, ಕೆಜಿಎಫ್ ಶಾಸಕಿ ರಾಮಕ್ಕ, ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಔರಾದ್ ಶಾಸಕ ಪ್ರಭು ಚವ್ಹಾಣ್, ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಸೇರಿದಂತೆ, ಇನ್ನೂ ಐವರು ಶಾಸಕರು ಗೆಲ್ಲುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ, ಅಮಿತ್ ಷಾರ ಆಪ್ತ ತಂಡ ಅಂತಹ ಶಾಸಕರಿಗೆ ಟಿಕೆಟ್ ಕೊಡದಿರುವುದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದೆ.

ಯಡಿಯೂರಪ್ಪ ಅಸಮಾಧಾನ!

ಶಾಸಕರ ಟಿಕೆಟ್ ರದ್ದತಿಗೆ ಬಿಎಸ್ ವೈ ಅಸಮಾಧಾನ ವ್ಯಕ್ತಪಡಿಸಿದ್ದು, ಶಾಸಕರ ಕ್ಷೇತ್ರ ಬದಲಾವಣೆ ಅಥವಾ, ಟಿಕೆಟ್ ರದ್ದತಿ ಮಾಡುವುದು ಬೇಡ ಎಂಬುದಾಗಿ ಹೇಳಿದ್ದಾರೆ. ಇನ್ನು ಯಾವೆಲ್ಲ ಶಾಸಕರು ಕ್ಷೇತ್ರವನ್ನು ಕಳೆದುಕೊಳ್ಳಲಿಕ್ಕಿದ್ದಾರೆ ಎಂಬುದು ಇನ್ನೂ ಗೊಂದಲದ ಗೂಡಾಗಿದೆ.

ರಾಜಾಜಿನಗರದ ಸುರೇಶ್ ಕುಮಾರ್ ಗೆ ಟಿಕೇಟ್ ಇಲ್ವಾ?!

ಪ್ರಸ್ತುತವಾಗಿ, ರಾಜಾಜಿನಗರದಲ್ಲಿ ಶಾಸಕರಾದ ಸುರೇಶ್ ಕುಮಾರ್ ಸಜ್ಜನ ರಾಜಕಾರಣಿ ಎಂದೇ ಹೆಸರುವಾಸಿಯಾದವರು. ಆದರೆ, ಇತ್ತೀಚೆಗೆ ಜನರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂಬ ಸುದ್ದಿಯೂ ಪಕ್ಷದ ವಲಯದಲ್ಲಿ ಕೇಳಿ ಬಂದಿದ್ದು ಟಿಕೇಟ್ ಕಳೆದುಕೊಳ್ಳಲಿದ್ದಾರಾ ಕಾದು ನೋಡಬೇಕಿದೆ!

ಅದಲ್ಲದೇ, ಬೊಮ್ಮನಹಳ್ಳಿಯ ಶಾಸಕರಾದ ಸತೀಶ್ ರೆಡ್ಡಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಕೆಜಿಎಫ್ ಶಾಸಕಿಯಾದ ರಾಮಕ್ಕನೂ ಸಹ, ಸರಿಯಾಗಿ ಕರ್ತವ್ಯವನ್ನು ನಿಭಾಯಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಪಕ್ಷದಲ್ಲಿ ಇತ್ತೀಚೆಗೆ ಪ್ರಭಾವ ಕಳೆದುಕೊಂಡಿರುವ ಆನಂದ್ ಸಿಂಗ್ ಮತ್ತು ಪ್ರಭು ಚೌವ್ಹಾಣ್ ಗೆ ಟಿಕೆಟ್ ಸಿಗದೇ ಇರುವ ಸಾಧ್ಯತೆ ಹೆಚ್ಚಾಗಿದೆ!

Image result for b s y with piyush goel and prakash javdekar

ಕ್ಷೇತ್ರ ಬದಲಾವಣೆ ಸಾಧ್ಯತೆ ಯಾರ್ಯಾರಿಗೆ?!

ನಿಪ್ಪಾಣಿಯ ಶಾಸಕಿ ಶಶಿಕಲಾ ಅಣ್ಣಾ ಸಾಹೇಬ, ಹುಕ್ಕೇರಿಯ ಉಮೇಶ್ ಕತ್ತಿ, ರಾಯಭಾಗದ ಐಹೊಳೆ  ಮಹಾಲಿಂಗಪ್ಪ, ಅರಬಾವಿಯ ಬಾಲಚಂದ್ರ
ಜಾರಕಿಹೊಳೆ, ಬೆಳಗಾವಿ ಗ್ರಾಮಾಂತರದ ಸಂಜಯ್ ಪಾಟೀಲ, ಸೌದತ್ತಿಯ ವಿಶ್ವನಾಥ ಮಾಮನಿ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಅರವಿಂದ ಬೆಲ್ಲರ್, ಸಿಂದಗಿಯ ಭೂಸನೂರ ರಮೇಶ್ ಬಾಳಪ್ಪ, ರಾಯಚೂರು ಗ್ರಾಮಾಂತರದ ತಿಪ್ಪರಾಜು, ಕುಷ್ಟಗಿಯ ದೊಡ್ಡನಗೌಡ ಪಾಟೀಲ, ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಗ್ಗಾವಿಯ ಬಸವರಾಜ ಬೊಮ್ಮಾಯಿ, ಹಿರೇಕೇರೂರಿನ ಯು.ಬಿ.ಬಣಗಾರ್, ತುಮಕೂರಿನ ಬಿ.ಸುರೇಶ್ ಗೌಡ, ಶಿಕಾರಿಪುರದ ಬಿ.ವೈ.ರಾಘವೇಂದ್ರ, ಬೆಂಗಳೂರು ದಕ್ಷಿಣದ ಎಂ.ಕೃಷ್ಣಪ್ಪ, ಮೈಸೂರು ಕೃಷ್ಣರಾಜದ ಮಾಜಿ ಶಾಸಕ ರಾಮದಾಸ್, ಪದ್ಮನಾಭನಗರದ ಆರ್.ಅಶೋಕ್ ರ ಕ್ಷೇತ್ರ ಬದಲಾವಣೆ ಸಾಧ್ಯತೆಗಳಿದೆ.

Image result for core committee of karnataka bjp

ಕ್ಷೇತ್ರ ಬದಲಾವಣೆಗಳಲ್ಲಿ ಟಿಕೇಟ್ ಸಿಗದೇ ಇರುತ್ತದೆಯೋ, ಅಥವಾ ಕೇವಲ ಕ್ಷೇತ್ರವಷ್ಟೇ ಬದಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ರಾಜ್ಯ ಬಿಜೆಪಿಯಲ್ಲಿ ಬಹೊದೊಡ್ಡ ಬದಲಾವಣೆಯಾಗಲಿದ್ದು, ಚಾಣಕ್ಯನ ತಂತ್ರ ಶಾಸಕರಲ್ಲಿ ಭಯ ಹುಟ್ಟಿಸಿದೆಯಷ್ಟೇ!

– ಪೃಥು ಅಗ್ನಿಹೋತ್ರಿ

Tags

Related Articles

Close