ಪ್ರಚಲಿತ

ಎತ್ತ ನೋಡಿದರೂ ಮೋದಿ ಹವಾ! ಯಕ್ಷಗಾನದಲ್ಲೂ ಮೋದಿ ಮೋಡಿ ನೋಡಿದ್ದೀರಾ..?!

ಎಲ್ಲೇ ಹೋದರೂ ಒಂದೇ ಘೋಷ ಮೋದಿ ಮೋದಿ ಮೋದಿ...

ಮೋದಿ ಮೋದಿ ಮೋದಿ… ಎತ್ತ ನೋಡಿದರೂ ಮೋದಿ ಹವಾ. ದೇವರನ್ನು ಪ್ರಾರ್ಥಿಸಿ “ನಮೋ” ಎಂದರೂ ಮೋದಿ ನೆನಪಾಗುತ್ತಾರೆ. ಹಳ್ಳಿಯಲ್ಲೂ ಮೋದಿ, ದಿಲ್ಲಿಯಲ್ಲೂ ಮೋದಿ. ಗೇಟ್ ಆಫ್ ಇಂಡಿಯಾ ದಾಟಿ ಹೊರ ಹೋದರೆ ಅಲ್ಲೂ ನಮೋ ನಮಃ… ಹೀಗೆ ಮೋದಿ ಮೋಡಿ ಕೇವಲ ಭಾರತಕ್ಕೆ ಸೀಮಿತವಾಗದೆ ಸಾಗರದಾಚೆಗೂ ದೂಳೆಬ್ಬಿಸಿ ಬಿಟ್ಟಿದೆ. ನರೇಂದ್ರ ದಾಮೋದರ ದಾಸ್ ಮೋದಿ ಎಲ್ಲೇ ಹೋದರೂ ಒಂದೇ ಘೋಷ ಮೋದಿ ಮೋದಿ ಮೋದಿ…

ಲಕ್ಷಕ್ಕೂ ಮಿಕ್ಕಿದ ಜನಸಾಗರವನ್ನು ಕಾಣಬೇಕಾದರೆ ಮೋದಿ ರ್ಯಾಲಿಗೆ ಒಮ್ಮೆ ಹೋಗಬೇಕು. ಅವರೆಲ್ಲಿಗೆ ಬಂದರೂ ಅಲ್ಲಿ ಲಕ್ಷಕ್ಕೂ ಮಿಕ್ಕಿದ ಜನಸಾಗರ. ಎಲ್ಲೇ ಹೋದರೂ ಅಲ್ಲಿ ಜನರ ದಂಡೇ ಸೇರುತ್ತದೆ. ಬೋರ್ಗರೆವ ಕಡಲ ಸೆಳೆಯಂತೆ ಬೋರ್ಗರೆಯುತ್ತಿರುತ್ತದೆ ಜನ ಸಾಗರ.

ಮೋದಿಗಾಗಿ “ನಮೋ” ಪದಕ್ಕೆ ಕಾಂಪ್ರೊಮೈಸ್..!!!

ಕೆಲವರಿಗೆ ನಮೋ ಎಂದರೆ ಅದೇನೋ ಹರ್ಷ. ಮೋದಿಯನ್ನು ಹೊಗಳುವುದು ಹಾಗೂ ಅವರ ಆಡಳಿತದ ವಿಶ್ಲೇಷಣೆ ಮಾಡುವುದು ಎಂದರೆ ಏನೋ ಆನಂದ. ಆದರೆ ಕೆಲವರು ನಮೋ ಅನ್ನುವ ಪದವನ್ನೇ ಬಿಟ್ಟು ಬಿಟ್ಟಿದ್ದಾರೆ. ಸಾಮಾನ್ಯವಾಗಿ ದೇವರನ್ನು ಪ್ರಾರ್ಥಿಸುವಾಗ “ನಮೋ ನಮಃ” ಅನ್ನುವುದು ಅಂದು ಬಿಡುತ್ತೇವೆ. ಆದರೆ ಮೋದಿ ವಿರೋಧಿಗಳು ಅದ್ರಲ್ಲೂ ಕಾಂಪ್ರಮೈಸ್ ಮಾಡಿಕೊಂಡಿದ್ದಾರೆ. ದೇವರನ್ನು ಪ್ರಾರ್ಥಿಸುವಾಗ “ನಮೋ” ಎನ್ನುವ ಪದ ಉಪಯೋಗಿಸುವಂತಿಲ್ಲ. ಉಪಯೋಗಿಸಿದಾಗ ಮೋದಿಯ ನೆನಪಾಗುತ್ತೆ. ಆವಾಗ ಮೈಯಲ್ಲಾ ಉರಿಯುತ್ತೆ. ಹೀಗಾಗಿಯೇ ನಮೋ ಅನ್ನುವ ಪದ ವಿರೋಧಿಗಳಿಗೆ ಹಿಡಿಸೋದೇ ಇಲ್ಲ.

ಸಾಂಸ್ಕøತಿಕ ಹಬ್ಬದಲ್ಲೂ ಮೋದಿ ಹವಾ..!

ನರೇಂದ್ರ ಮೋದಿ ಅದ್ಯಾವಾಗ ಪ್ರಧಾನ ಮಂತ್ರಿಯಾಗಿ ಅಧಿಕಾರ ಹಿಡಿದರೋ ಅಂದಿನಿಂದ ದೇಶ ವಿದೇಶಗಳಲ್ಲಿ ಮೋದಿ ಮೋಡಿ ಹಬ್ಬಿಯಾಗಿತ್ತು. ಕ್ರೀಡಾ ಕೂಟವೇ ಇರಲಿ, ಸಾಂಸ್ಕøತಿಕ ಕಾರ್ಯಕ್ರಮವೇ ಇರಲಿ, ನಾಟಕ ಸ್ಪರ್ಧೆಯೇ ಇರಲಿ ಎಲ್ಲೆಲ್ಲೂ ಈಗ ಮೋದಿಯದ್ದೇ ಹವಾ. ಮೋದಿಯ ಧಿರಿಸು ಹಾಕಿಕೊಂಡು ಬಂದರೆ ಸಾಕು ಶಿಳ್ಳೆಗಳ ಸುರಿಮಳೆಯೇ ಬೀಳುತ್ತದೆ. ಈಗಲಂತೂ ಮಕ್ಕಳ ಛದ್ಮವೇಶ ಸ್ಪರ್ಧೆಗೆ ಮೋದಿಯ ವೇಶವೇ ಹಾಟ್ ಫೇವರೇಟ್. ಮೋದಿಯ ಧಿರಿಸುಗಳನ್ನು ಧರಿಸಿಕೊಂಡು ಬಂದ ಮಕ್ಕಳ ವೈಯ್ಯಾರವೇ ಅಧ್ಭುತ.

ಯಕ್ಷಗಾನಕ್ಕೂ ಹಬ್ಬಿದೆ ನಮೋ ಮಂತ್ರ..!

ಕರ್ಣಾಟಕದ ಪ್ರಸಿದ್ಧ ಕಲೆ ಯಕ್ಷಗಾನದಲ್ಲೂ ಮೋದಿ ಹವಾ ದೂಳೆಬ್ಬಿಸಿದೆ. ಯಕ್ಷಗಾನ ಎಂಬುವುದು ಉಳಿದ ಕಲೆಗಳಂತೆ ಅಲ್ಲವೇ ಅಲ್ಲ. ಅದೊಂದು ಭಕ್ತಿ ಪ್ರಧಾನ ಹಾಗೂ ಅರ್ಥಪ್ರಧಾನ ಕಥನವುಳ್ಳ ವೈಭವ. ಆದರೂ ಈ ಯಕ್ಷಗಾನದಲ್ಲೂ ಮೋದಿ ಮೋಡಿ ಜೋರಾಗಿಯೇ ನಡೆಯುತ್ತೆ. ಈ ಮೊದಲು ಕೇವಲ ಹಾಸ್ಯಕ್ಕೆ ಚಪ್ಪಾಳೆ ಬೀಳುತ್ತಿತ್ತು. ಆದರೆ ಈವಾಗ ಯಾವ ಕಲಾವಿದನೂ ಬಂದು ಪರೋಕ್ಷವಾಗಿಯಾದರೂ ಮೋದಿಯನ್ನು ಹೊಗಳಿದರೆ ಸಾಕು ಸಭೆಯಲ್ಲಿ ಚಪ್ಪಾಳೆಯ ಸುರಿಮಳೆಯೇ ಬೀಳುತ್ತೆ. ಯಕ್ಷಗಾನವೇ ರಂಗೇರಿ ಹೋಗುತ್ತೆ.

 

ನೋಟ್ ಬ್ಯಾನ್, ಜಿಎಸ್‍ಟಿ ಬಗ್ಗೆಯೂ ಡೈಲಾಗ್…

ಈ ಯಕ್ಷಗಾನದಲ್ಲಿ ಮೋದಿಯನ್ನು ಹೊಗಳೋದು ಮಾತ್ರವಲ್ಲದೆ ಅವರ ಜನಪ್ರಿಯ ಯೋಜನೆಗಳನ್ನೂ ತಮ್ಮ ಅಂದ ಚೆಂದದ ವಾಕ್ಯಗಳ ಮೂಲಕ ವಿಶ್ಲೇಷಣೆ ಮಾಡುತ್ತಾರೆ. ನೋಟ್ ಬ್ಯಾನ್ ಬಗ್ಗೆ ಇಡೀ ದೇಶವೇ ತಲೆಬಾಗಿ ಹೋಗಿದೆ. ವಿರೋಧಿಗಳು ಮಾತ್ರ ಟೀಕೆ ಮಾಡುತ್ತಲೇ ಇದ್ದಾರೆ. ಆದರೆ ಯಕ್ಷಗಾನದಲ್ಲಿ ನೋಟ್ ಬ್ಯಾನ್ ಕ್ರಮವನ್ನು ಹಾಸ್ಯಮಯವಾಗಿಯೂ, ಕ್ರಮಬದ್ಧವಾಗಿಯೂ ಸಮರ್ಥಿಸಿಕೊಂಡಿದ್ದಾರೆ.

ಇದು ಮಾತ್ರವಲ್ಲದೆ ಮೋದೀಜಿಯ ವಿದೇಶಿ ನೀತಿಗಳು, ಶತ್ರು ದೇಶಗಳ ಬಗ್ಗೆ ಅವರ ರಾಜತಾಂತ್ರಿಕ ನಡೆಗಳು ಹೀಗೆ ಅನೇಕ ತುಣುಕುಗಳನ್ನು ಯಕ್ಷಗಾನದಲ್ಲಿ ಈಗ ಹಾಸುಹೊಕ್ಕಾಗಿ ಹೋಗಿದೆ. ಸದ್ಯ ಎಲ್ಲಾ ಕಡೆಗಳಲ್ಲೂ ಮೋದೀಜಿಯ ಆಡಳಿತವನ್ನು ತನ್ನದೇ ಶೈಲಿಯಲ್ಲಿ ಬಣ್ಣಿಸುವುದು ಸಾಮಾನ್ಯವಾಗಿದೆ. ಯಾವುದೇ ದೃಶ್ಯಗಳಿಗೂ ಸಿಗದ ಸ್ಪಂದನೆ ಮೋದಿ ಹೆಸರೆತ್ತಿದರೆ ಸಾಕು ಚಪ್ಪಾಳೆಗಳ ಸುರಿಮಳೆಗಳೇ ಬೀಳುತ್ತೆ.

ಭಾಗವತಿಗೆಯಲ್ಲೂ ಮೋದಿ ಮೋಡಿ…

ಕೇವಲ ಕಲಾವಿದರು ಮಾತ್ರವಲ್ಲದೆ ಯಕ್ಷಗಾನ ಭಾಗವತಿಕೆ (ಹಾಡು) ಮಾಡುವವರೂ ಮೋದಿಯನ್ನು ಹೊಗಳಿ ಹಾಡು ಹಾಡುತ್ತಾರೆ. ಪಟ್ಲಾ ಸತೀಶ್ ಶೆಟ್ಟಿಯವರ ಭಾಗವತಿಗೆಯಲ್ಲಿ “ಅಭಿವೃದ್ಧಿಯ ಪಥದಿ ದೇಶದ ಅಭಿಯೋಗದಿ ಜಗದಿ” ಎಂಬ ಹಾಡು ಮೋದಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಮೋದಿ ಹೇಗೆ ವಿಶ್ವನಾಯಕರಾಗಿದ್ದಾರೆ, ಹೇಗೆ ಸರ್ವ ಧರ್ಮ ಪ್ರೇಮಿಯಾಗಿದ್ದಾರೆ ಎಂಬುವುದನ್ನು ಭಾಗವತಿಕೆಯಲ್ಲಿ ಸುಂದರವಾಗಿಯೇ ಹಾಡಿ ತೋರಿಸಿದ್ದಾರೆ.

ಮೋದೀಜಿಯನ್ನು ದೇವೇಂದ್ರನಿಗೆ ಹೋಲಿಸಿದ ಯಕ್ಷ ಕಲಾವಿದರು…

ಹೌದು. ಮೋದಿ ಕೇವಲ ಭಾರತಕ್ಕೆ ಮಾತ್ರ ಒಡೆಯನಲ್ಲ. ಆತ ಇಂದ್ರರ ಇಂದ್ರ ದೇವೇಂದ್ರ ಇದ್ದ ಹಾಗೆ. ಆತ ಲೋಕನಾಯಕ ನರೇಂದ್ರ ಎಂದೆಲ್ಲಾ ಮೋದಿಯ ಗುಣಗಾನವನ್ನು ಮಾಡುತ್ತಾರೆ. ದೇವೇಂದ್ರ ಸ್ವರ್ಗ ಲೋಕವನ್ನು ಆಳುವ ನಾಯಕನಾದರೆ ನರೇಂದ್ರ ಭೂಲೋಕವನ್ನು ಆಳುವ ನಾಯಕ ಎಂದು ಬಣ್ಣಿಸುತ್ತಾರೆ.

ಮೋದಿ ಮೋಡಿಗೆ ಒಳಗಾಗದವರು ಯಾರು..?

ಎಲ್ಲೆಲ್ಲೂ ಮೋದಿ ಮೋಡಿಯೆ. ವಿರೋಧಿಗಳು ಕೂಡಾ ಮೋದಿಯ ಕೆಲವು ಆಡಳಿತದ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಗೊತ್ತಿಲ್ಲದೆನೇ ಅವರನ್ನು ಹೊಗಳುತ್ತಾರೆ. ಅವರ ಸಾಧನೆಯನ್ನು ಪರೋಕ್ಷವಾಗಿಯೇ ಕೊಂಡಾಡಿಕೊಳ್ಳುತ್ತಾರೆ. ಹೀಗೆ ಹಾಡುಗಾರರು, ಕಲಾವಿದರು, ಎಲ್ಲರೂ ಮೋದಿ ಮೋಡಿಗೆ ತಲೆಬಾಗಿದವರೇ…

ಮೋದಿ ಮೋಡಿ ಎನ್ನುವುದು ಈಗ ಕೇವಲ ಮೋದಿ ಅಭಿಮಾನಿಗಳಿಗೆ ಮಾತ್ರವಲ್ಲದೆ ಸಮಸ್ತ ದೇಶಪ್ರೇಮಿಗಳಿಗೇ ವ್ಯಾಪಿಸಿದೆ. ಮೋದೀಜಿಯ ಕಾರ್ಯವೈಖರಿ ಬಗ್ಗೆ ವಿರೋಧಿಗಳೂ ಪ್ರಸಂಶೆಯನ್ನು ವ್ಯಕ್ತಪಡಿಸುತ್ತಾರೆ. ಮೋದಿ ಅನ್ನುವ ಶಕ್ತಿಗೆ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಫಿದಾ ಆಗಿದೆ ಅಂದ್ರೆ ಸುಮ್ನೇನಾ…

-ಸುನಿಲ್ ಪಣಪಿಲ

Tags

Related Articles

Close