ಅಂಕಣದೇಶಪ್ರಚಲಿತ

ಎಲ್ಲರೂ ನೋಡಲೇಬೇಕು! ಚರ್ಚಿನಲ್ಲಿ ಓಂ ನಮಃ ಶಿವಾಯ ಮತ್ತು ಓಂ ಗಣಪತಯೇ ನಮಃ!!!!!

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಒಂದು ಸುದ್ದಿ ವೈರಲ್ ಆಗಬೇಕಾದರೂ ಕೂಡ ಅಲ್ಲಿ ಏನಾದರೂ ಒಂದು ಸ್ಪೆಷಲ್ಇರುತ್ತೆ. ಅಂತಹ ಒಂದು ಸ್ಪೆಷಲ್ಆಗಿರುವ ಒಂದು ವಿಡೀಯೋ ಸಾಮಾಜಿಕ ಜಾಲ ತಾಣದಲ್ಲಿ ಇದೀಗ ಬಹಳಷ್ಟು ಸುದ್ದಿ ಮಾಡುತ್ತಿದೆ.. ಅಂತಹ ಇನ್‍ಟ್ರೇಸ್ಟಿಂಗ್ ವಿಡಿಯೋ ವೈರಲ್ ಆಗಿರೋದಾದ್ರೋ ಯಾಕೆ ಗೊತ್ತಾ?. ಆ ವಿಡಿಯೋ ಯಾವುದೇ ಫಿಲ್ಮ್ ಸ್ಟಾರ್‍ಗಳು ಅಥವಾ ರಾಜಕೀಯ ವ್ಯಕ್ತಿಗಳು ಮಾತಾನಾಡೋ ಸಂಭಾಷಣೆಯೋ ಅಲ್ಲ, ಕುಣಿದುಕುಪ್ಪಳಿಸಿದ ಹಾಸ್ಯಸ್ಪದ ವಿಷಯನೋ ಅಲ್ಲ. ಹಾಗಾದ್ರೆ ಆ ವೈರಲ್ ಆದ ವಿಡಿಯೋ ಆದ್ರೂ ಯಾವುದು ಅನ್ನೋ ಕುತೂಹಲ ಇದೀಯಾ?..ಹಾಗಾದ್ರೆ ಆ ವಿಡಿಯೋದಲ್ಲಿ ಅಂತಹದೇನಿದೆ ಅಂತೀರಾ?…

ಹಿಂದೂ ಸಂಪ್ರದಾಯ ವಿದೇಶಿಗರನ್ನು ಈಗಾಗಲೇ ತಮ್ಮತ್ತ ಆಕರ್ಷಿಸಿರುವುದು ಎಲ್ಲರಿಗೂ ತಿಳಿದ ವಿಚಾರ. ಹಿಂದೂ ಸಂಸ್ಕøತಿಯ ಆಚಾರ-ವಿಚಾರ, ಮಹಾನ್‍ಗ್ರಂಥಗಳಿಂದ ಹಿಡಿದು ಪ್ರತಿಯೊಂದಕ್ಕೆ ಮಾರುಹೋಗಿರುವ ಅದೆಷ್ಟೋ ವಿದೇಶಿಗರು ಭಾರತದಲ್ಲಿ ನೆಲೆಸಿ ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಆದರೆ ಇಲ್ಲಿ ವೈರಲ್ ಆಗಿರುವ ವಿಡಿಯೋ ವಿಚಾರಕ್ಕೂ ಹಿಂದೂ ಧರ್ಮಕ್ಕೂ ಏನಾದರೂ ಸಂಬಂಧ ಇದೆ ಅಂತೀರಾ?…… ನೀವು ಅನ್ನಲೇಬೇಕು ಯಾಕಂದ್ರೆ ಹಿಂದೂ ಧರ್ಮದ ಪ್ರಾರ್ಥನೆ ವಿದೇಶದಲ್ಲಿ ಸದ್ದುಮಾಡಿದ್ದಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ. ಆ ಪ್ರಾರ್ಥನೆಯಾದ್ರೂ ಯಾವುದು, ಅದು ಎಲ್ಲಿ ನಡೆದಿದ್ದದ್ರೂ ಎಲ್ಲಿ?. ಹಿಂದೂ ಸಂಸ್ಕøತಿ ಅದೇಷ್ಟೋ ಮೈಲಿಗಲ್ಲು ದೂರದಲ್ಲಿರುವವರಿಗೆ ಆಕರ್ಷಿಸುತ್ತೆ ಅಂತಂಹದ್ದಲ್ಲಿ ರಷ್ಯನ್ ಜನತೆಯ್ನು ಆಕರ್ಷಿಸದೇ ಇರುತ್ತಾ ಹೇಳಿ.

ಹೌದು.. ಈ ವೈರಲ್ ಆದ ದೃಶ್ಯ ಸಂಬಂಧಿಸಿದ್ದು ರಷ್ಯಾ ದೇಶಕ್ಕೆ ಆದರೆ ಅಲ್ಲಿ ಬಿಂಬಿತವಾದದ್ದು ಹಿಂದೂ ಸಂಪ್ರದಾಯ. ಅದು ನಡೆದದ್ದು ಒಂದು ಸ್ಪರ್ಧೆಯಾದರೂ ಅದು ಯಾವುದೇ ಹಿಂದು ಧರ್ಮಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ಅಲ್ಲ, ಬದಲಾಗಿ ರಷ್ಯಾದ ಒಂದು ಚರ್ಚ್‍ನಲ್ಲಿ. ರಷ್ಯನ್ ರಾಕ್ ಬ್ಯಾಂಡ್ ಪ್ರಸ್ತುತ ಪಡಿಸಿದ ವಿಡಿಯೋ ಸ್ಪರ್ಧೆ ಇದೀಗಾ ಸಖತ್ ಸುದ್ದಿ ಮಾಡತ್ತಾ ಇದೆ. ರಷ್ಯನ್ ಚರ್ಚ್‍ನಲ್ಲಿ ರಷ್ಯಾದ ಮಹಿಳೆ ತನ್ನದೇ ಆದ ಶೈಲಿಯಲ್ಲಿ  ಹಾಡಿ ಅದ್ಭುತ ಪ್ರದರ್ಶನ ನೀಡಿದ ಹಾಡು ಭಾರೀ ವೈರಲ್ ಆಗಿದೆ. ಅದರಲ್ಲಿ ಅಂತಹ ವಿಶೇಷ ಏನಿತ್ತು ಅಂದರೆ ಆ ರಾಕ್ ಬ್ಯಾಂಡ್‍ನಲ್ಲಿ ಒಬ್ಬ ಯುವತಿ ಹಾಡಿದ ಆ ಹಾಡು ಯಾವುದೆಂದು ನೀವು ಕೇಳಿದ್ರೆ ನೀವು ಒಂದು ಸಲ ವಾವ್! ಅಂತೀರಾ…

ರಷ್ಯನ್ ಮಹಿಳೆ ಹಾಡಿರುವ ಹಿಂದೂ ಸಂಪ್ರದಾಯಕ್ಕೆ ಸಂಬಂಧಿಸಿದ ಓಂ ನಮಃ ಶಿವಾಯ ಮತ್ತು ಓಂ ಗನ್ ಗಣಪತಿಯಿ ನಮಃ. ಆದರೆ ಚರ್ಚ್‍ನಲ್ಲಿ ಹಾಡಿರೋದು ಕ್ರಿಶ್ಚಿಯನ್ ಮಹಿಳೆ ಆದ್ರೂ ಗೀತೆ ಮಾತ್ರ ಹಿಂದೂ ಸಂಪ್ರದಾಯಕ್ಕೆ ಸೇರಿದ ಪ್ರಾರ್ಥನಾ ಗೀತೆ. ಇದೀಗಾ ಈ ಹಾಡು ದೊಡ್ಡ ಮಟ್ಟದಲ್ಲಿ ಜನರನ್ನು ತನ್ನೆಡೆಗೆ ಸೆಳೆದಿದ್ದಲ್ಲದೇ ಈ ಹಾಡಿನ ಶೈಲಿ ಕೇಳುಗರಿಗೆ ಮುದ ನೀಡುವುದಂತೂ ಗ್ಯಾರೆಂಟಿ.

ರಷ್ಯನ್ ಚರ್ಚ್‍ನಲ್ಲಿ ಯಾವಾಗ ಈ ಮಹಿಳೆ ಓಂ ನಮಃ ಶಿವಾಯ ಮತ್ತು ಓಂ ಗನ್ ಗಣಪತಿಯಿ ನಮಃ ಎನ್ನುವ ಪ್ರಾರ್ಥನೆಯನ್ನು ಹಾಡಲು ಶುರು ಮಾಡಿದ್ರೋ ಈಡೀ ಚರ್ಚ್‍ನಲ್ಲಿದ್ದ ಜನರು ಆಕೆಯ ಧ್ವನಿಗೆ ಧ್ವನಿಯಾಗಿದ್ದಲ್ಲದೇ ಚಪ್ಪಾಳೆಯಿಂದ ಪ್ರೋತ್ಸಾಹಿಸಿದ್ದಾರೆ. ಪ್ರಾಯಶಃ ಹಿಂದೂ ಪ್ರಾರ್ಥನೆಯನ್ನು ಚರ್ಚ್‍ನಲ್ಲಿ ಹಾಡಿದ್ದು ಇದೇ ಮೊದಲು ಎಂದೆನಿಸುತ್ತೆ.

ಈ ಒಂದು ಹಿಂದೂ ಪ್ರಾರ್ಥನೆಯನ್ನು ವಿದೇಶಿಯರು ಹಾಡಿರುವುದು ಕೇಳಿದರೆ “ವಸುಸೈವ ಕುಟುಂಬಕಂ” ಅಂದರೆ ವಿಶ್ವವೇ ಒಂದು ಕುಂಟುಂಬ ಎಂದು ಭಾಸವಾಗುತ್ತೇ ಅಲ್ವೇ.

ಹಿಂದೂಸ್ತಾನದ ಅಗಾಧವಾದ ಮತ್ತು ಸಂಪದ್ಭರಿತವಾದ ಕಲೆ, ಸಂಸ್ಕøತಿಯು ಬೇರೆಲ್ಲೂ ಕಾಣಸಿಗುವುದಿಲ್ಲ. ಬೇರೆ ಯಾವ ಧರ್ಮದಲ್ಲಿ ಇರದ ಅದ್ಭುತ ಸಂಸ್ಕøತಿಯು ಹಿಂದೂ ಧರ್ಮದಲ್ಲಿ ಇದೆ ಅಂದರೆ ಹಿಂದೂ ಧರ್ಮ ಕೇವಲ ಒಂದು ಧರ್ಮವಲ್ಲ, ಬದಲಾಗಿ ಸರಿಯಾದ ಜೀವನ ಹಾದಿಯಲ್ಲಿ ಬದುಕಲು ಯೋಗ್ಯವಾದಂತಹ ಧರ್ಮ. ಈ ಪವಿತ್ರವಾದ ಧರ್ಮದ ಪ್ರತಿಯೊಂದು ಆಚರಣೆಗಳು ನಂಬಿಕೆಗಳು ಜನರಮನಸ್ಸಿಗೆ ಧನಾತ್ಮಕವಾದ ಪರಿಣಾಮ ಬೀರುತ್ತೆ, ಅಲ್ಲದೇ ಸಂತೋಷದೊಂದಿಗೆ ಮೋಕ್ಷದ ದಾರಿ ತೋರಿಸುತ್ತೆ ಅಂದರೆ ಹಿಂದೂ ಧರ್ಮದಲ್ಲಿ ಹುಟ್ಟಿದ ನಾವೇ ಭಾಗ್ಯವಂತರು.
ಇಂತಹ ಪ್ರಬುದ್ಧ ಧರ್ಮ ವಿದೇಶೀಗರನ್ನು ಆಕರ್ಷಿಸುತ್ತಿರುವಾಗ ನಮ್ಮವರೇ ನಮ್ಮ ತನವನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕøತಿಗೆ ವಾಲುತ್ತಿದ್ದಾರೆ ಅಂದರೆ, ನಾವು ನಮ್ಮ ಸಂಸ್ಕøತಿಯನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾದ ದುರಂತ ಎದುರಾಗಿದೆ ಎಂದರ್ಥ ಅಲ್ಲವೇ?. ಹಿಂದೂಸ್ತಾನದಲ್ಲಿ ಹುಟ್ಟಿರುವ ನಮ್ಮಲ್ಲಿರುವ ನಮ್ಮತನ ನಮ್ಮೊಂದಿಗಿದ್ದರೆ ಎಷ್ಟು ಚೆನ್ನಾ. ಇಂತಹ ಸಂಪದ್ಭರಿತ ಹಿಂದೂ ಸಂಸ್ಕøತಿಯನ್ನು ಪೋಷಿಸಿ ಬೆಳೆಸಬೇಕಾದದ್ದು ಪ್ರತಿಯೊಬ್ಬ ಹಿಂದೂಗಳ ಕರ್ತವ್ಯ.

WATCH!! OM NAMAH SHIVAY NAMAHA IN CHURCH!

– ಸರಿತಾ

Tags

Related Articles

Close