ಪ್ರಚಲಿತ

ಏಟಿಗೆ ತಿರುಗೇಟು! ವಿಶ್ವ ಸಂಸ್ಥೆಯಲ್ಲಿ ಹರಾಜಾಯ್ತು ಪಾಕಿಸ್ಥಾನದ ಮರ್ಯಾದೆ!⁠⁠⁠⁠!

ಅದೇನೋ ಗೊತ್ತಿಲ್ಲ… ಪಾಕಿಸ್ತಾನಕ್ಕೆ ನಮ್ಮ ಹಿಂದೂಸ್ತಾನವನ್ನು ಕಂಡರೇ ಸಾಕು ಮೈಎಲ್ಲಾ ಉರಿಯುತ್ತೆ ಅಂದೆನಿಸುತ್ತೆ. ಅಷ್ಟೇ ಅಲ್ಲದೇ, ಭಾರತದ ಮುಕುಟವನ್ನು ಕದಿಯಲು ಯತ್ನಿಸುತ್ತಿರುವ ಕಳ್ಳರು, ವಿಶ್ವಸಂಸ್ಥೆಯಲ್ಲಿ ವಿವಿಧ ದೇಶಗಳ ಗಣ್ಯರ ಮುಂದೆ ನಮ್ಮ ಭಾರತ ದೇಶಕ್ಕೆ ಮಸಿ ಬಳಿಯುವ ಪ್ರಯತ್ನವನ್ನು ಮಾಡಿದ್ದಲ್ಲದೇ, ತನ್ನ ನರಿ ಬುದ್ದಿ ತೋರಿಸಲು ಹೋಗಿ ತಾವೇ.. ತೀವ್ರ ಮುಖಭಂಗಕ್ಕೀಡಾಗಿರುವ ಘಟನೆ ಇತ್ತೀಚೆಗೆ ನಡೆದಿದೆ!!

ಪ್ರಸ್ತುತ ನಡೆಯುತ್ತಿರುವ ವಿಶ್ವ ಸಂಸ್ಥೆ ಮಹಾಧಿವೇಶನದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಆರೋಪಗಳು ಮುಂದುವರಿಯುತ್ತಲೇ ಇರುವುದು ಎಲ್ಲರಿಗೂ
ತಿಳಿದಿರುವ ವಿಚಾರ!! ಪಾಕಿಸ್ತಾನಕ್ಕೆ ಭಾರತದ ಮೇಲೆ ತನ್ನ ಕುತಂತ್ರ ಬುದ್ದಿಯನ್ನು ತೋರಿಸುವಲ್ಲಿ ಈ ಬಾರಿಯು ವಿಫಲತೆಯನ್ನು ಕಂಡಿದೆ. ಹಾಗಾಗಿ,
ಮಹಾಧಿವೇಶನದಲ್ಲಿ ವಿವಿಧ ದೇಶಗಳ ಗಣ್ಯರ ಮುಂದೆ ಭಾರತದ ಮುಖಕ್ಕೆ ಮಸಿ ಬಳಿಯುವ ಪ್ರಯತ್ನದಲ್ಲಿ ಪಾಕಿಸ್ತಾನ ಇಡುತ್ತಿರುವ ಪ್ರತಿ ಹೆಜ್ಜೆಗೂ ಭಾರತ ದಿಟ್ಟ
ಉತ್ತರ ನೀಡುತ್ತಿರುವುದು ಖುಷಿಯ ವಿಚಾರವಾಗಿದೆ.

ಹೌದು… ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಮಸಿಬಳಿಯಲು ಯತ್ನಿಸಿರುವ ಪಾಕಿಸ್ತಾನ ತನಗೆ ತಾನೇ ಮಸಿ ಬಳಿದುಕೊಂಡಿರುವುದು ಮಾತ್ರ ವಿಪರ್ಯಾಸ. ವಿಶ್ವಸಂಸ್ಥೆಯ 72 ನೇ ಮಹಾ ಅಧಿವೇಶನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿದ್ದಲ್ಲದೇ, ಪಾಕ್ ಭಯೋತ್ಪಾದನೆಯ ರಫ್ತು ದೇಶವಾಗಿದೆ ಎಂದು ಕಟು ಶಬ್ಧಗಳಲ್ಲಿ ಟೀಕಿಸಿದ್ದರು. ಸುಷ್ಮಾ ಸ್ವರಾಜ್ ನಡೆಸಿದ್ದ ಮಾತಿನ ದಾಳಿಯಿಂದ ತತ್ತರಿಸಿದ ಪಾಕಿಸ್ತಾನ, ಇದರ ಪ್ರತಿಕ್ರಿಯೆ ರೂಪದಲ್ಲಿ ಪಾಕಿಸ್ತಾನ ಪ್ರತಿನಿಧಿ ಮಾಲಿಹಾ ಲೋಧಿ, ಭಾರತ ದಕ್ಷಿಣ ಏಷ್ಯಾದ ಭಯೋತ್ಪಾದನೆಯ ತಾಯಿಯಾಗಿದೆ ಎಂದು ಆರೋಪಿಸಿದ್ದಾರೆ!! ಅಷ್ಟೇ ಅಲ್ಲದೇ ಪಾಕಿಸ್ತಾನ ತನ್ನ ಪ್ರತಿನಿದಿಯ ಮೂಲಕ ಭಾರತವನ್ನು ಟೀಕಿಸಲು ಮುಂದಾಗಿದ್ದು, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೇಳಿಕೊಳ್ಳುವ ಭಾರತ ಬೂಟಾಟಿಕೆ ಮಾಡುತ್ತಿದೆ ಎಂದು ಟೀಕಿಸಿದೆ.

ಅಲ್ಲದೇ, ಪಾಕಿಸ್ತಾನದ ಪ್ರತಿನಿಧಿ ಮಲೀನಾ ಲೋಧಿ, 2014ರಲ್ಲಿ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ್ದ ವೈಮಾನಿಕ ದಾಳಿಯ ವೇಳೆ ಗಾಯಗೊಂಡಿದ್ದ
ಯುವತಿಯೊಬ್ಬಳ ಫೋಟೋ ತೋರಿಸಿ ಇದು ಕಾಶ್ಮೀರದಲ್ಲಿ ಭಾರತವು ಕಾಶ್ಮೀರಿಗಳ ಮೇಲೆ ತೋರುತ್ತಿರುವ ದೌರ್ಜನ್ಯ ಎಂದು ಹೇಳಿದ್ದರು. ಮಲೀನಾ ಲೋಧಿ ಈ ಮಾತನ್ನು ಹೇಳಿದ ಕೆಲವೇ ಗಂಟೆಗಳಲ್ಲಿ ಆ ಫೋಟೋ ಪ್ಯಾಲೆಸ್ತೀನ್‍ನದ್ದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ, ಪಾಕಿಸ್ತಾನ ತೀವ್ರ ಮುಜುಗರಕ್ಕೀಡಾಗಿದ್ದು ತನ್ನ ಕುತಂತ್ರ ಬುದ್ದಿಯನ್ನು ವಿಶ್ವದೆಲ್ಲೆಡೆ ತೋರಿಸಿದ್ದಂತೂ ನಿಜ!!

ಸೋಮವಾರದ ಅಧಿವೇಶನದ ವೇಳೆ, ಭಾರತ, ಪಾಕಿಸ್ತಾನದ ಇಂಥ ಕುಕರ್ಮಗಳನ್ನು ಪಟ್ಟಿ ಮಾಡಿ ವಿಶ್ವ ಸಮುದಾಯದ ಮುಂದಿಟ್ಟಿತು. ಈ ಸಂದರ್ಭದಲ್ಲಿ,ಭಾರತದ ಪ್ರತಿನಿಧಿ ಪೌಲೊಮಿ ತ್ರಿಪಾಠಿ ಅವರು ಮಾತನಾಡಿ, ಹೇಗೆ ನಕಲಿ ಫೋಟೋ ತೋರಿಸಿ, ಕಾಶ್ಮೀರದಲ್ಲಿ ಭಾರತ ಅಲ್ಲಿನ ನಾಗರಿಕರನ್ನು ಹೇಗೆ ಹಿಂಸಿಸುತ್ತಿದೆ ಎಂಬುದನ್ನು ಪಾಕಿಸ್ತಾನ ಆರೋಪ ಮಾಡಿತೋ ಅದೇ ರೀತಿಯಲ್ಲಿ ಈವರೆಗೆ ಅದು ಭಾರತದ ವಿರುದ್ಧ ಅಂಥ ನಕಲಿ ಸಾಕ್ಷ್ಯಾಧಾರಗಳನ್ನು ನೀಡಿಯೇ ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಜ್ವಲಂತ ಸಾಕ್ಷಿ ಮಲೀನಾ ಅವರು ತೋರಿಸಿರುವ ನಕಲಿ ಫೋಟೋ ಎಂದಿದ್ದಾರೆ!!

ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರಿಂದ ಕೊಲ್ಲಲ್ಪಟ್ಟ ಪೋಲಿಸ್ ಅಧಿಕಾರಿಯೊಬ್ಬರ ಶವ ಸಂಸ್ಕಾರದ ವೇಳೆ ದುಃಖತಪ್ತರಾಗಿರುವ ಅವರ ಕುಟುಂಬದ ಸದಸ್ಯರ ಫೋಟೋ ತೋರಿಸಿದ ತ್ರಿಪಾಠಿ, ”ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಪೋಲಿಸ್ ಅಧಿಕಾರಿಗಳು, ಸೈನಿಕರನ್ನು ಕೊಲ್ಲುತ್ತಿದ್ದಾರೆ. ಇದು ವಾಸ್ತವ. ಆದರೆ, ವಿಶ್ವ ಸಮುದಾಯದ ಮುಂದೆ, ತಾನು ಮಾಡಿದ ಕುಕೃತ್ಯವನ್ನು ಭಾರತದ ಮೇಲೆ ಹೊರಿಸಿ ಪಾಕಿಸ್ತಾನ ತನ್ನ ಆರೋಪಗಳಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ” ಎಂದು ಆರೋಪಿಸಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಮರ್ಯಾದೆಯನ್ನು ಹರಾಜು ಹಾಕಲೆತ್ನಿಸಿದ ಪಾಕಿಸ್ತಾನ, ಭಾರತ ದೇಶ ದಕ್ಷಿಣ ಏಷ್ಯಾದ ಭಯೋತ್ಪಾದನೆಯ ತಾಯಿಯಾಗಿದೆ ಎಂದು ಹೇಳಿದೆ, ಹಾಗಾದರೆ ಪಾಕಿಸ್ತಾನ ಏನು? 2004 ರಲ್ಲಿ ನಡೆದ ಗಾಜಾಪಟ್ಟಿ ಘರ್ಷಣೆಯ ಸಂದರ್ಭದ ಮಹಿಳೆಯ ಫೋಟೋವನ್ನು ತೋರಿಸಿ ಭಾರತವನ್ನು ಟೀಕೆಗೆ ಗುರಿ ಮಾಡಿದ ಪಾಕಿಸ್ತಾನ ವಿಶ್ವಸಂಸ್ಥೆ ವೇದಿಕೆಯಲ್ಲಿಯೇ ಸುಳ್ಳು ಹೇಳುವ ಮೂಲಕ ತನ್ನ ಕಪಟ ನಾಟಕ ಮತ್ತೊಮ್ಮೆ ಸಾಬೀತು ಮಾಡಿದೆ!!

– ಅಲೋಖಾ

Tags

Related Articles

Close