ಪ್ರಚಲಿತ

ಏನಿದು ಆರ್ಟಿಕಲ್ 35A? ಸುಪ್ರೀಂ ಕೋರ್ಟಿನಲ್ಲಿ ಈ ಕಲಂ ನ್ನ ರದ್ದುಗೊಳಿಸೋಕೆ ರಿಟ್ ಅರ್ಜಿ ಹಾಕಿದ್ಯಾಕೆ? ಇದನ್ನ ರದ್ದುಗೊಳಿಸೋದನ್ನ ಖಂಡಿಸಿ ಪ್ರಧಾನಿ ಮೋದಿ ವಿರುದ್ಧ ಕಾಶ್ಮೀರದ ಪ್ರತ್ಯೇಕತಾವಾದಿ ಭಯೋತ್ಪಾದಕರು ಊಳಿಡುತ್ತಿರೋದ್ಯಾಕೆ?

ಸಂವಿಧಾನದ 35A ಆರ್ಟಿಕಲ್ ನ ಮೇಲೆ ಸುಪ್ರೀಂ ಕೋರ್ಟಿನ ಮಹತ್ವದ ತೀರ್ಪು ಹೊರಬೀಳಲಿದ್ದು, ಇದನ್ನ ವಿರೋಧಿಸಿದ ಕಾಶ್ಮೀರದ ಪ್ರತ್ಯೇಕತಾವಾದಿ ಭಯೋತ್ಪಾದಕರು ಒಂದು ವೇಳೆ ಜಮ್ಮು ಕಾಶ್ಮೀರದ 370 ನೆ ಕಲಂ ಹಾಗು ಆರ್ಟಿಕಲ್ 35A ನ ಬಗ್ಗೆ ಮೋದಿ ಸರ್ಕಾರವೇನಾದರೂ ಹಸ್ತಕ್ಷೇಪ ನಡೆಸಿದರೆ ಪರಿಣಾಮ ನೆಟ್ಟಗಿರಲ್ಲ ಅಂತ ಜೀವ ಬಾಯಿಗೆ ಬಂದಂತೆ ಆಡುತ್ತಿರುವ ಕಾಶ್ಮೀರದ ಭಯೋತ್ಪಾದಕರು.

ಒಂದು ವೇಳೆ ಸಂವಿಧಾನದ ಈ ಕಲಂಗಳ ಬಗ್ಗೆ ಮೋದಿ ಸರ್ಕಾರವೇನಾದರೂ ಕ್ರಮ ಕೈಗೊಳ್ಳಲು ಮುಂದಾದರೆ ಫಿಲಿಸ್ತಾನ್ ನಲ್ಲಿ ಆದ ಪರಿಸ್ಥಿತಿಯನ್ನೇ ಕಾಶ್ಮೀರದಲ್ಲಿ ಮಾಡಬೇಕಾಗಿತ್ತದೆ ಅಂತ ಬೊಬ್ಬೆ ಹಾಕುತ್ತಿರುವ ಈ ಪ್ರತ್ಯೇಕತಾವಾದಿ ಭಯೋತ್ಪಾದಕರಿಗೆ ಮೋದಿ ಎಷ್ಟು ಬಲಶಾಲಿ ಅನ್ನೋದು ಬಹುಶಃ ತಮ್ಮ ಕಮಾಂಡರ್ ಗಳನ್ನ ಹೊಡೆದುರುಳಿಸುತ್ತಿರೋದನ್ನ ನೋಡಿಯೂ ಇನ್ನೂ ಅರಿತುಕೊಂಡಿಲ್ಲ ಅನಿಸುತ್ತೆ.

ಇವರೇನಾದರೂ ಕಾಶ್ಮೀರವನ್ನ ಫಿಲಿಸ್ತಾನ್ ಮಾಡಲು ಹೊರಟರೆ ಮೋದಿ ಭಾರತವನ್ನೇ ಇಸ್ರೇಲ್ ಮಾಡಿಬಿಡುತ್ತಾರೆ ಅನ್ನೋದು ಪಾಪ ಇವರಿಗೆ ಗೊತ್ತಿಲ್ಲ ಅನಿಸುತ್ತೆ. ಆಗ ಈ ಪ್ರತ್ಯೇಕತಾವಾದಿಗಳು ನಾ ಘರ್ ಕಾ ನಾ ಘಾಟ್ ಕಾ ಕುತ್ತಾ ಆಗ್ತಾರೆ ಅನ್ನೋದು ಇವರ ತಳಮಳಕ್ಕೆ ಕಾರಣವಾಗಿದೆಯಷ್ಟೇ.

ಮೋದಿ ಸರ್ಕಾರ ಕಾಶ್ಮೀರದ ನಾಡಿಮಿಡಿತವನ್ನ ಚೆನ್ನಾಗಿ ಅರ್ಥೈಸಿಕೊಂಡು ಅಲ್ಲಿನ ಸಂವಿಧಾನದ 370 ನೆ ಕಲಂ ತೆಗೆದುಹಾಕೋಕೂ ಮುನ್ನ ಆರ್ಟಿಕಲ್ 35A ನ್ನ ತೆಗೆದುಹಾಕುವುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಈ ವಿಷಯದ ಕಾವು ಹಾಗು ಚರ್ಚೆ ಕಾಶ್ಮೀರದಾದ್ಯಂತ ಬೆಂಕಿಯ ಕೆನ್ನಾಲಿಗೆಯ ಹಾಗೆ ಹರಡಿ ಪ್ರತ್ಯೇಕತಾವಾದಿಗಳ ಹೊಟ್ಟೆಗೆ ಬೆಂಕಿ ಇಟ್ಟಂತಾಗಿ ಊಳಿಡುತ್ತಿದ್ದಾರೆ.

ಕಾಶ್ಮೀರದ ಸ್ಥಿತಿಗತಿಯ ಪ್ರಕಾರ ಶ್ರೀನಗರದ ಪ್ರಮುಖ ಬಜಾರ್ ಆಗಿರುವ ಲಾಲ್ ಚೌಕ್ ನಲ್ಲಿರುವ ವ್ಯಾಪಾರಿಗಳು ಅದಾಗಲೇ ಸುಪ್ರೀಂ ಕೋರ್ಟಿನ 35A ಆರ್ಟಿಕಲ್ ತೆಗೆದು ಹಾಕುವ ನಿರ್ಧಾರದಿಂದ ಬೆಚ್ಚಿ ಬಿದ್ದಿದ್ದಾರೆ.

ಅಷ್ಟಕ್ಕೂ ಏನಿದು ಆರ್ಟಿಕಲ್ 35A? ಇದಕ್ಕೂ ಜಮ್ಮು ಕಾಶ್ಮೀರಕ್ಕೂ ಸಂಬಂಧವೇನು?

ಈ ಆರ್ಟಿಕಲ್ 35A ತೆಗೆದು ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಅಂತ ಕಾಶ್ಮೀರದ ಭಯೋತ್ಪಾದಕರು ಊಳಿಡುತ್ತಿರೋದಾದರೂ ಯಾಕೆ?

ಬನ್ನಿ ಈ ಆರ್ಟಿಕಲ್ 35A ನ ಬಗ್ಗೆ ತಿಳಿದುಕೊಳ್ಳೋಣ!!

ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಕಾಶ್ಮೀರದಕ್ಕೆ ಸೀಮಿತವಾಗಿರುವ Article 35A ಅಲ್ಲಿನ ಶಾಶ್ವತ ನಿವಾಸಿಗಳಿಗಾಗಿ ಜಾರಿಗೆ ತಂದಿರುವ ಕಾನೂನಾಗಿದೆ.

ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕಾದರೆ ಈ ಆರ್ಟಿಕಲ್ 35A ನ್ನ ಯಾಕೆ ಅಲ್ಲಿನ ಜನರಿಗೆ ನೀಡುವ ವಿಶೇಷ ಸವತ್ತುಗಳನ್ನ ನೀಡುವ ಕಾಯಿದೆಯಾಗಿರುವ ಸಂವಿಧಾನದ 370 ನೆ ವಿಧಿಯ ಜೊತೆ ಜೋಡಿಸಲಾಯಿತು ಅನ್ನೋದನ್ನೂ ತಿಳಿದುಕೊಳ್ಳಬೇಕಾಗುತ್ತದೆ.

ಆರ್ಟಿಕಲ್ 35 ನ ಪ್ರಕಾರ ರಾಜ್ಯಕ್ಕೆ ಬೇಕಾದ ಕಾನೂನುಗಳ ರಚನೆ ಹಾಗು ಕೆಲವು ಮೂಲಭೂತ ಹಕ್ಕುಗಳನ್ನ ಕೊಡಿಸಲು ಇದನ್ನ ಪಾರ್ಲಿಮೆಂಟಿನ ಮೂಲಕವಷ್ಟೇ ದಾರಿಯಿದ್ದು ರಾಜ್ಯದ ವಿಧಾನಸಭೆಯಿಂದ ಸಾಧ್ಯವಿಲ್ಲ.

ಆರ್ಟಿಕಲ್ 35A ಸಂವಿಧಾನ ಜಮ್ಮು ಕಾಶ್ಮೀರದ ರೆಸಿಡೆನ್ಸಿ ಕಾನೂನುಗಳನ್ನು ವ್ಯಾಖ್ಯಾನಿಸುತ್ತೆ ಹಾಗು ಯಾವುದೇ ಸ್ಥಿರ ಆಸ್ತಿಯನ್ನು ಖರೀದಿಸದಂತೆ ಅಥವಾ ರಾಜ್ಯ ಸರ್ಕಾರದ ಉದ್ಯೋಗಗಳಿಗೆ ಅನ್ವಯಿಸುವುದರಿಂದ ಹೊರಗಿನವರನ್ನು ಅಂದರೆ ಜಮ್ಮು ಕಾಶ್ಮೀರ ಬಿಟ್ಟು ಹೊರರಾಜ್ಯದವರನ್ನ ಈ ಕಾಯ್ದೆ ನಿಷೇಧಿಸುತ್ತದೆ.

ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಈ ಕಾಯ್ದೆಯನ್ನ 1954 ರಲ್ಲಿ ರಾಷ್ಟ್ರಪತಿಗಳ ಆದೇಶದ ಮೆರೆಗೆ ಸಂವಿಧಾನದ 370 ನೆ ಕಲಂ ನ ಜೊತೆ ಸೇರಿಸಲಾಯಿತು. ಇದರ ಉದ್ದೇಶ ಕೇವಲ ಜಮ್ಮು ಕಾಶ್ಮೀರದ ಜನರಿಗೆ ಮಾತ್ರ ವಿಶೇಷ ಸೌಲಭ್ಯಗಳನ್ನೊದಗಿಸಿ ಅವರನ್ನ ಉದ್ಧಾರ ಮಾಡೋದಾಗಿತ್ತು.

ಇದು ಜಾರಿಯಾದದ್ದು 1954 ರಲ್ಲಿ, ಆದರೆ ಜಮ್ಮು ಕಾಶ್ಮೀರ ರಾಜ್ಯದ ಕಾನೂನು ಜಾರಿಯಾಗಿದ್ದು ಮಾತ್ರ ನವೆಂಬರ್ 17, 1956 ರಲ್ಲಿ.

ಇದರ ಪ್ರಕಾರ 1954 ರ ಲೆಕ್ಕಕ್ಕೆ 10 ವರ್ಷದಿಂದ ಜಮ್ಮು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸಿರುವ ನಿವಾಸಿಗಳಿಗೆ ಮಾತ್ರ ಈ ಕಾನೂನು ಅನ್ವಯಿಸುತ್ತೆ ಹಾಗು ಈ ನಿವಾಸಿಗಳು ಮಾತ್ರ ಜಮ್ಮು ಕಾಶ್ಮೀರದಲ್ಲಿ ಆಸ್ತಿ ಖರೀದಿಸಬಹುದು, ಸರ್ಕಾರದ ವಿಶೇಷ ಸೌಲಭ್ಯಗಳನ್ನ, ಅಲ್ಲಿನ ಮೀಸಲಾತಿಯನ್ನ ಹಾಗು ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಗಿಟ್ಟಿಸುವ ಅವಕಾಶವಿದೆ ಎಂಬುದಾಗಿತ್ತು.

ಜಮ್ಮು ಕಾಶ್ಮೀರದ ನಿವಾಸಿಯಾದ ಚಾರು ವಾಲಿಖನ್ನಾ ಎಂಬುವವರು ಈ ಆರ್ಟಿಕಲ್ 35A ಕುರಿತಾಗಿ ಅರ್ಜಿ ಸಲ್ಲಿಸಿದ್ದು, ಆರ್ಟಿಕಲ್ 35A ಸೆಕ್ಷನ್ 6 ನ್ನ ಅವರು ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ.

ಈ ಸಂವಿಧಾನದನ್ವಯ ಜಮ್ಮು ಕಾಶ್ಮೀರದ ಶಾಶ್ವತ ನಿವಾಸಿಯಾಗಿರುವ ಮಹಿಳೆ ಹೊರ ರಾಜ್ಯದ ಪುರುಷನನ್ನು ಮದುವೆಯಾದರೆ ಆಕೆಗೆ ಮತ್ತು ಆಕೆಯ ಮಕ್ಕಳಿಗೆ ಕಾಶ್ಮೀರದ ವಿಶೇಷ ಸ್ಥಾನಮಾನದ ಯಾವುದೇ ಹಕ್ಕುಗಳು ಸಿಗುವುದಿಲ್ಲ.

ಕಾಶ್ಮೀರದ ಶಾಶ್ವತ ನಿವಾಸಿಯಾದ ಹೊರತಾಗಿಯೂ ಆಕೆ ಮತ್ತು ಆಕೆಯ ಮಕ್ಕಳು ವಿಶೇಷ ಸ್ಥಾನಮಾನದ ಹಕ್ಕುಗಳಿಂದ ವಂಚಿತರಾಗುತ್ತಾರೆ.

ಕಾಶ್ಮೀರದಲ್ಲಿ ಆಕೆ ಮತ್ತು ಆಕೆಯ ಮಕ್ಕಳು ಆಸ್ತಿ ಮಾಡುವಂತಿಲ್ಲ. ಕಾಶ್ಮೀರದ ಜನತೆಗೆ ಸರ್ಕಾರಿ ನೌಕರಿಗಳಲ್ಲಿ ಸಿಗುವ ಮೀಸಲಾತಿ ಸಿಗುವುದಿಲ್ಲ. ಇದಲ್ಲದೆ ಕಾಶ್ಮೀರದಲ್ಲಿ ಆಕೆಗೆ ಸೇರುವ ಆಸ್ತಿಗಳನ್ನೂ ಕೂಡ ಆಕೆ ಕಳೆದುಕೊಳ್ಳಬೇಕಾಗುತ್ತದೆ ಎಂದು ವಾಲಿಖನ್ನಾ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ಮೂಲಕ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ ಆರ್ಟಿಕಲ್ 35A ಬಗ್ಗೆ ಮುಂದಿನ ದಿನಗಳಲ್ಲಿ ತ್ರಿಸದಸ್ಯ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಸುಪ್ರೀಂ ಕೋರ್ಟಿನಲ್ಲಿ ಇದರ ವಿಚಾರಣೆ ನಡೆದಿರುವುದೇ ಕಾಶ್ಮೀರದ ಪ್ರತ್ಯೇಕತಾವಾದಿ ಭಯೋತ್ಪಾದಕರಿಗೆ ನುಂಗಲಾರ ತುತ್ತಾಗಿ ಪರಿಣಮಿಸಿದೆ.

ಒಂದು ವೇಳೆ ಈ ಆರ್ಟಿಕಲ್ 35A ಯನ್ನ ಸುಪ್ರೀಂಕೋರ್ಟ್ ರದ್ದು ಮಾಡಿತೆಂದರೆ ತಮ್ಮ ಆಟ ಕಾಶ್ಮೀರದಲ್ಲಿ ನಡೆಯೋಲ್ಲ, ಬೇರೆ ರಾಜ್ಯದ ಜನರೂ ಇಲ್ಲಿ ಬಂದು ನೆಲೆಸೋಕೆ ಅವಕಾಶ ಕೊಟ್ಟಂತಾಗುತ್ತೆ, ಆಗ ಜಮ್ಮು ಕಾಶ್ಮೀರವನ್ನ ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸೋಕೆ ಹಾಗು ಕಾಶ್ಮೀರವನ್ನ ಪಾಕಿಸ್ತಾನದ ಜೊತೆ ಸೇರಿಸುವ ತಮ್ಮ ಜಿಹಾದಿ ಹೋರಾಟಕ್ಕೆ ಎಲ್ಲಿ ಪೆಟ್ಟು ಬೀಳುತ್ತದೆ ಅನ್ನೋ ಭಯದಲ್ಲಿ ಕಾಶ್ಮೀರಿ ಜಿಹಾದಿಗಳು ಕಂಗಾಲಾಗಿದ್ದಾರೆ.

ಒಂದು ವೇಳೆ ಹೊರರಾಜ್ಯದವರು ಅಲ್ಲಿ ಆಸ್ತಿ ಖರೀದಿ, ವ್ಯಾಪಾರ ವಹಿವಾಟು ನಡೆಸುವಂತಾದರೆ ನಮ್ಮ ವ್ಯಾಪರ ವಹಿವಾಟಿನ ಗತಿಯೇನು ಅನ್ನೋದು ಕಾಶ್ಮೀರದ ವ್ಯಾಪಾರಿಗಳಿಗೂ ಕಾಡುತ್ತಿದೆ.

ಅಷ್ಟಕ್ಕೂ ಈ ಆರ್ಟಿಕಲ್ ರಾಷ್ಟ್ರಪತಿಯ ವಿಶೇಷಾಧಿಕಾರದ ಮೂಲಕ 1954 ರಲ್ಲಿ ಕಾಶ್ಮೀರದ ಶಾಶ್ವತ ನಿವಾಸಿಗಳಿಗಳ ಶ್ರೇಯೋಭಿವೃದ್ಧಿಗಾಗಿ ತಂದಿರುವ ಕಾನೂನಾಗಿದ್ದರೂ 1989-90 ರಲ್ಲಿ ಇಸ್ಲಾಮಿ ಜಿಹಾದಿಗಳಿಂದ ರೇಪ್, ಕೊಲೆ, ಸುಲಿಗೆಯ ಮೂಲಕ ಹೊರದಬ್ಬಲ್ಪಟ್ಟ ಸುಮಾರು 4 ಲಕ್ಷ ಹಿಂದೂ ಪಂಡಿತರಿಗೆ ಮರೀಚಿಕೆಯೇಯಾಗಿಬಿಟ್ಟಿದೆ.

ಮೋದಿ ಸರ್ಕಾರ 2014 ರ ಚುನಾವಣೆಯ ಸಂದರ್ಭದಲ್ಲಿ ಕಾಶ್ಮೀರದ ವಿಶೇಷ ಸವಲತ್ತಾದ ಈ ಆರ್ಟಿಕಲ್ 370 ಹಾಗು ಇದಕ್ಕೆ ಸಂಬಂಧಪಟ್ಟ ಎಲ್ಲ ಕಾನೂನನ್ನೂ ನಾವು ಅಧಿಕಾರಕ್ಕೆ ಬಂದರೆ ತೆಗೆದು ಹಾಕುತ್ತೇವಂತ ತಮ್ಮ ಪಕ್ಷದ ಮ್ಯಾನಿಫೆಸ್ಟೋ ನಲ್ಲಿ ಹೇಳಿಕೊಂಡಿತ್ತು ಹಾಗು ಈ ವಿಷಯ ಬಿಜೆಪಿಯ ಮುಖ್ಯ ಅಜೆಂಡಾಗಳಲ್ಲಿ ಈಗಲೂ ಪ್ರಮುಖವಾದದ್ದಾಗಿದೆ.

ಜಮ್ಮು ಕಾಶ್ಮೀರದಲ್ಲಿರುವ ಈ ಆರ್ಟಿಕಲ್ 370 ಹಾಗು ಇದಕ್ಕೆ ಸಂಬಂಧಪಟ್ಟ ಆರ್ಟಿಕಲ್ 35 ರಾಷ್ಟ್ರಪತಿ ವಿಶೇಷಾಧಿಕಾರದ ಮೂಲಕ ಜಾರಿಯಾಗಿರುವ ಕಾರಣ ಇದಕ್ಕೆ ಮಾನ್ಯತೆಯಿಲ್ಲ ಅನ್ನೋದು ಸಂವಿಧಾನ ತಜ್ಞರ ಅಭಿಪ್ರಾಯವಾಗಿದೆ.

ಜಮ್ಮು ಕಾಶ್ಮೀರದ ಯಾವ ಬಿಲ್ ಪಾಸ್ ಆಗಬೇಕಾದರೂ ಅದಕ್ಕೆ ಕೇಂದ್ರ ಸರ್ಕಾರ ಲೋಕಸಭೆಯ ಮೂಲಕವೇ ಪಾಸ್ ಮಾಡಬೇಕಾಗುತ್ತೆ, ಹಾಗಿದ್ದಮೇಲೆ 1954 ರಲ್ಲಿ ರಾಷ್ಟ್ರಪತಿಗಳಿಂದ ಜಾರಿಯಾದ ಈ ಕಾನೂನು ಊರ್ಜಿತವಾಗುವುದಿಲ್ಲ.

ಮೋದಿ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿ ಇದನ್ನ ರದ್ದು ಮಾಡೋಕೆ ಸೂಕ್ತ ಸಮಯಕ್ಕೆ ಕಾಯುತ್ತಿರಬೇಕಾದಾಗಲೇ ಅಲ್ಲಿನ ನಿವಾಸಿ ಸುಪ್ರಿಂಕೋರ್ಟಿಗೆ ಸಲ್ಲಿಸಿರುವ ಈ ಅರ್ಜಿ ಮಹತ್ವ ಪಡೆದುಕೊಂಡಿದೆ.

ಇದರಿಂದ ಬೆದರಿದ ಕಾಶ್ಮೀರದ ಭಯೋತ್ಪಾದಕರು, ಕಲ್ಲುತೂರಾಟಗಾರರು, ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿಯ ಪಿಡಿಪಿ ಪಕ್ಷಗಳೆಲ್ಲ ‘ಕೈ’ ಜೋಡಿಸಿ ಮೋದಿ ಸರ್ಕಾರದ ವಿರುದ್ಧ ತೊಡೆ ತಟ್ಟಿ ನಿಂತಿವೆ.

ಆದಷ್ಟು ಬೇಗ ಕಾಶ್ಮೀರದ ಈ ಆರ್ಟಿಕಲ್ 370 ಹಾಗು ಅದಕ್ಕೆ ಸಂಬಂಧಪಟ್ಟ ಎಲ್ಲ ಆರ್ಟಿಕಲ್ ಗಳನ್ನ ಕಿತ್ತೊಗೆದರೆ ಜಮ್ಮು ಕಾಶ್ಮೀರ ಮತ್ತೆ ಸ್ವರ್ಗವಾಗಿ ಆತ್ಮೀಯವಾಗಿ ಭಾರತದ ಜೊತೆಗೆ ಸೇರಲು ಅಣಿಗೊಳಿಸಿದಂತಾಗುತ್ತೆ.

ಇದರಿಂದ ಸುಮಾರು 27 ವರ್ಷಗಳಿಂದ ತಮ್ಮ ಮನೆ ಮಠ ಆಸ್ತಪಾಸ್ತಿಗಳನ್ನ ಪ್ರತ್ಯೇಕತಾವಾದಿಗಳ ಭಯೋತ್ಪಾದನೆಯಿಂದ ತೊರೆದು ಈಗಲೂ ನಿರಾಶ್ರಿತರಾಗಿ ಬೇರೆ ಬೇರೆ ರಾಜ್ಯಗಳಲ್ಲಿ ನಿರ್ಗತಿಕರಾಗಿ ವಾಸ ಮಾಡುತ್ತಿರುವ ಕಾಶ್ಮೀರದ ಹಿಂದೂ ಪಂಡಿತರು ಮತ್ತೆ ತಮ್ಮ ಮನೆ ಸೇರಿಕೊಳ್ಳುವಂತಾಗುತ್ತದೆ.

ಇದರ ಮೂಲಕ ಕಾಶ್ಮೀರದ ಭಯೋತ್ಪಾದಕರ ಉಪಟಳವೂ ಕೊನೆಗಾಣಿಸಿದ ಹಾಗಾಗುತ್ತೆ.

ಇದರ ಬಗ್ಗೆ ಈಗಾಗಲೇ ಮೋದಿ ಸರ್ಕಾರ ಕೂಡ ಕಾರ್ಯಪ್ರವೃತ್ತರಾಗಿರುವುದು ಸಂತಸದ ಸುದ್ದಿಯೇ ಸರಿ!!!

– Vinod Hindu Nationalist

Tags

Related Articles

Close