ಪ್ರಚಲಿತ

ಐಸಿಸ್ ಉಗ್ರ ಸಂಘಟನೆಗೆ ಸೇರಿದ 21 ಮಂದಿ ಭಾರತೀಯರ ಭಾವಚಿತ್ರ ಬಿಡುಗಡೆ ಮಾಡಿದ ಎನ್‍ಐಎ!! ಇದರಲ್ಲಿ ಲವ್ ಜಿಹಾದ್‍ಗೊಳಗಾದವರೇ ಹೆಚ್ಚು!!!

ಕಳೆದ ಹಲವು ವರ್ಷಗಳಿಂದ ನಾಪತ್ತೆಯಾಗಿ, ಇದೀಗ ಐಸಿಸ್ ಉಗ್ರ ಸಂಘಟನೆಗೆ ಸೇರಿರುವ ಭಾರತ ಮೂಲದ 21 ಉಗ್ರರ ಮೊದಲ ಪಟ್ಟಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಿಡುಗಡೆಗೊಳಿಸಿದೆ. ಮುಖ್ಯವಾಗಿ ಕೇರಳದವರ ಸಂಖ್ಯೆಯೇ ಅಧಿಕವಾಗಿದ್ದು, ಈ ಪೈಕಿ ಲವ್‍ಜಿಹಾದ್‍ಗೆ ಒಳಪಟ್ಟು ಇಸ್ಲಾಂಗೆ ಮತಾಂತರ ಹೊಂದಿ ಐಸಿಸ್ ಸೇರಿದವರು ಎನ್ನುವುದನ್ನು ತನಿಖಾ ಸಂಸ್ಥೆ ಹೇಳಿಕೊಂಡಿದೆ.

ಇದು ಕಳೆದ ಜುಲೈವರೆಗಿನ ಐಸಿಸ್ ಸೇರ್ಪಡೆಗೊಂಡವರ ಭಾವಚಿತ್ರವಾಗಿದ್ದು, ಇನ್ನೊಂದು ಪಟ್ಟಿಯನ್ನು ಶೀಘ್ರವೇ ಬಿಡುಗಡೆಗೊಳಿಸಲಿದೆ. ಲವ್‍ಜಿಹಾದ್‍ಗೆ ಒಳಪಟ್ಟು ಇದೀಗಲೇ ಹಲವಾರು ಮಂದಿ ನಾಪತ್ತೆಯಾಗಿದ್ದು, ಎರಡನೇ ಪಟ್ಟಿಯಲ್ಲಿ ಇನ್ನಷ್ಟು ಮಂದಿ ಸೇರ್ಪಡೆಗೊಂಡಿರುವ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಮೊದಲ ಪಟ್ಟಿಯಲ್ಲಿರುವ ವ್ಯಕ್ತಿಗಳೆಲ್ಲಾ ಐಸಿಸ್‍ನಲ್ಲಿ ತಮ್ಮನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದರಲ್ಲಿ ಹಲವರು ಕೊಲ್ಲಲ್ಪಟ್ಟಿರಬಹುದು ಎಂದು ಎನ್‍ಐಎ ಹೇಳಿಕೊಂಡಿದೆ.

ಕಳೆದ ವರ್ಷ ಕೇರಳದಾದ್ಯಂತ ಹಲವಾರು ಮಂದಿ ಯುವಕ-ಯುವತಿಯರು ನಿಗೂಢವಾಗಿ ನಾಪತ್ತೆಯಾಗಿ ಇವರೆಲ್ಲಾ ಇಸ್ಲಾಂಗೆ ಮತಾಂತರ ಹೊಂದಿದ್ದಾರೆ ಎನ್ನಲಾಗಿದೆ. ಇದರಲ್ಲಿ ಕಾಸರಗೋಡು, ಪಾಲಕ್ಕಾಡ್ ಮಂದಿಯೇ ಹೆಚ್ಚಿನಲ್ಲಿದ್ದರು. ಇವರೆಲ್ಲಾ ಭಾರತವನ್ನು ತೊರೆದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಕೊಂಡಿದ್ದಾರೆ.

 

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಈ ರೀತಿ ನಾಪತ್ತೆಯಾದವರ ಬಗ್ಗೆ ಕೂಲಂಕುಷ ತನಿಖೆಯನ್ನು ನಡೆಸಿತ್ತು. ಇದರಲ್ಲಿ 21 ಮಂದಿ ಐಸಿಸ್‍ಗೆ ಸೇರಲು ತೆರಳಿರುವುದನ್ನು ಪತ್ತೆಹಚ್ಚಿದ್ದು ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಇವರೆಲ್ಲರ ನಕ್ಷೆ ಹಾಗೂ ಭಾವಚಿತ್ರವನ್ನೂ ಎನ್‍ಐಎ ಬಿಡುಗಡೆಗೊಳಿಸಿದೆ.

ಈ ರೀತಿ ನಾಪತ್ತೆಯಾದವರ ಬಗ್ಗೆ ಪತ್ತೆ ಹಚ್ಚಲು ವಿಫಲವಾದ ತನಿಖಾ ಸಂಸ್ಥೆ ಪತ್ತೆಹಚ್ಚುವ ಸಲುವಾಗಿ ರೆಡ್‍ಕಾರ್ನರ್ ನೊಟೀಸ್ ಜಾರಿಗೊಳಿಸಿದೆ. ಈ ಪೈಕಿ ಐದು ಮಂದಿ ಐಸಿಸ್‍ನಲ್ಲಿ ತೊಡಗಿ ಸೈನಿಕ ದಾಳಿಯಿಂದ ಹತರಾಗಿದ್ದಾರೆ. ಅವರೆಂದರೆ ಹಫೀಸುದ್ದೀನ್ ಥೇಕೆ ಕೊಲೆಥ್, ರಫೀಲಾ, ಅಜ್‍ಮಾಲಾ, ಶಜೀರ್ ಮಂಗಲಸ್ಸೆರಿ ಹಾಗು ಸಿದ್ದಿಕ್ ಉಲ್ ಅಸ್ಲಾಂ ಎಂಬವರೆಂದು ಎನ್‍ಐಎ ತಿಳಿಸಿದೆ.
ಇದರಲ್ಲಿ ಸಿದ್ದಿಕ್ ಎಂಬಾತ ಎರಡು ವರ್ಷದ ಮುಂಚೆ ಸೌದಿ ಅರೆಬಿಯಾ ತೊರೆದು ನಾಪತ್ತೆಯಾಗಿದ್ದಾನೆ. ಉಳಿದವರು ಕೊಲ್ಲಲ್ಪಟ್ಟಿದ್ದಾರೆ.

2016ರಲ್ಲಿ ಮಾಧ್ಯಮಗಳು ಹೇಳಿಕೊಳ್ಳುವಂತೆ, ಆರು ಜೋಡಿಗಳು ಮತ್ತು ಮಕ್ಕಳನ್ನು ಒಳಗೊಂಡಂತೆ ಕೇರಳದಲ್ಲಿ 21 ಮಂದಿ ಕಾಣೆಯಾಗಿದ್ದಾರೆ. ಈ ಪೈಕಿ ನಿಖರ ತನಿಖೆ ನಡೆಸಿದಾಗ ಈ 21 ಮಂದಿ ತೀವ್ರಗಾಮಿ ಸಂಘಟನೆಯ ಜೊತೆ ನಂಟು ಇಟ್ಟುಕೊಂಡಿರುವುದನ್ನು ಪತ್ತೆಹಚ್ಚಲಾಗಿದೆ.

ಈ ಚಾರ್ಟಿನಲ್ಲಿರುವವರು ಹೆಚ್ಚಿನವರು ಕುಟುಂಬ ಸಮೇತ ನಾಪತ್ತೆಯಾಗಿರುವವರು ಎಂದು ತಿಳಿದುಬಂದಿದೆ. ಇದು ಭಾರೀ ಆತಂಕಕ್ಕೆ ಕಾರಣವಾದ ವಿಷಯವಾಗಿದೆ.

Related image

ಕಣ್ಮರೆಯಾದವರೆಲ್ಲಾ ಇಸ್ಲಾಮಿಕ್ ಬೋಧಕ ಝಕೀರ್ ನಾಯಕ್ ಭಾಷಣವನ್ನು ಮನೆಯಲ್ಲಿ ಟಿವಿಯಲ್ಲಿ ಸ್ಪಷ್ಟವಾಗಿ ಕೇಳುತ್ತಿದ್ದರು ಎಂದು ಎನ್‍ಐಎ ಹೇಳಿಕೊಂಡಿದೆ. ಸಲಫಿ ಚಿಂತನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವುದಲ್ಲದೆ ಇದೀಗ ನಿಗೂಢವಾಗಿ ನಾಪತ್ತೆಯಾದವರೆಲ್ಲಾ ನಾಪತ್ತೆಯಾಗುವ ಮುಂಚೆ ಮಲ್ಲಪ್ಪುರಂ ಜಿಲ್ಲೆಯ ಅತ್ತಿಕಾಡ್ ಬೆಟ್ಟದಲ್ಲಿ ಭೇಟಿ ನೀಡಿ ಸಮಾಲೋಚನೆ ನಡೆಸುತ್ತಿದ್ದರು ಎನ್ನುವುದನ್ನು ಐಎನ್‍ಎ ಬಹಿರಂಗಪಡಿಸಿದೆ.

ಸುನ್ನಿ ಹಾಗೂ ಸಲಫಿಗಳ ಮಧ್ಯೆ ಆಗಿಬರುವುದಿಲ್ಲ. ಟಿಎನ್‍ಎಂನ ಪತ್ರಕರ್ತರೊಬ್ಬರು ಇತ್ತೀಚೆಗೆ ಮಲಪ್ಪುರಂ ಜಿಲ್ಲೆಗೆ ಭೇಟಿ ನೀಡಿ ಕೆಲವೊಂದು ಅಂಶಗಳನ್ನು ಕಂಡುಕೊಂಡಿದ್ದಾರೆ. ಅಂದರೆ ಸಲಫಿಗಳ ಪ್ರಕಾರ ಮುಸ್ಲಿಮರು ಸಲಫಿಗಳ ಮುಂದಾಳತ್ವವನ್ನು ವಹಿಸಬೇಕು. ಕಳೆದ 400 ವರ್ಷಗಳಲ್ಲಿ ಮುಸ್ಲಿಮರು ಸಲಫಿಗಳ ಮುಂದಾಳತ್ವ ವಹಿಸಿಕೊಂಡಿದ್ದರು. ಅವರ ನೇತೃತ್ವವಿರುವಾಗ ಸರಿಯಾದ ಜೀವನ ವಿಧಾನವು ಮುಂಚಿನ ಮುಸ್ಲಿಮರಲ್ಲಿತ್ತು. ಆ ಕಾಲದ ಜನರ ಜೀವನವು ಮೌಲ್ಯಯುತವಾಗಿದ್ದು ಇದನ್ನೇ ಅನುಕರಿಸಬೇಕೆನ್ನುವ ಅನಿಸಿಕೆ ಹೊಂದಿದ್ದರು. ಇವರು ಧಾರ್ಮಿಕ ಗ್ರಂಥಗಳನ್ನು ಕೇಂದ್ರೀಕರಿಸುತ್ತಿದ್ದರು ಎಂದು ಕಂಡುಕೊಂಡಿದ್ದರು.

ಕಾಣೆಯಾದ ಯುವಕರು ಸಲಾಫಿ ಜೀವನ ವಿಧಾನದ ಬಗ್ಗೆ ತಿಳಿದುಕೊಳ್ಳಲು ಆಗಾಗ ಭೇಟಿಯಾಗುತ್ತಿದ್ದೇವೆ ಎನ್ನುವುದನ್ನು ಮುಸ್ತಫಾ ಎನ್ನುವಾತ ಟಿಎನ್‍ಎಮ್ಗೆ ಹೇಳಿದ್ದರು. ಮುಸ್ತಫಾ ಅವರ ಪ್ರಕಾರ “ಕಣ್ಮರೆಯಾದವರು ಐಸಿಸ್‍ಗೆ ಸೇರ್ಪಡೆಯಾಗಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕೇರಳದಲ್ಲಿ ಅವರು ಜೀವಂತವಾಗಿ ಉಳಿದಿದ್ದಾರೋ ಎಂದೂ ನನಗೆ ಗೊತ್ತಿಲ್ಲ. ನಮ್ಮ ಹೋರಾಟ ಇತರ ಧರ್ಮಗಳ ವಿರುದ್ಧವಲ್ಲ. ನಿಜವಾದ ಇಸ್ಲಾಂ ಧರ್ಮವನ್ನು ಅಭ್ಯಸಿಸದ ಮುಸ್ಲಿಮರನ್ನು ನಾವು ಸಹಿಸಿಕೊಳ್ಳಲಾರೆವು ಎಂದು ಅವರು ತಿಳಿಸಿದ್ದರು.

ಆತಂಕ ಪಡುವ ವಿಷಯವೆಂದರೆ ಇದೀಗ ಐಸಿಸ್‍ಗೆ ಸೇರ್ಪಡೆಗೊಂಡವರೆಲ್ಲಾ ಮುಂಚೆ ಹಿಂದೂ ಅಥವಾ ಕ್ರೈಸ್ತರಾಗಿದ್ದರು. ಅವರು ಲವ್‍ಜಿಹಾದ್‍ಗೊಳಪಟ್ಟು ಇಸ್ಲಾಂನ ಬಗ್ಗೆ ಮತೀಯವಾದ ಬೆಳೆಸಿದ ಕಾರಣ ಐಸಿಸ್‍ಗೆ ಸೇರ್ಪಡೆಗೊಂಡಿದ್ದಾರೆ. ಇಸ್ಲಾಂಗಾಗಿ ಹೋರಾಟ ನಡೆಸಲು ಮೂಲಭೂತವಾದಿ ಮುಸ್ಲಿಮರು ಹಿಂದೂ ಯುವತಿಯರನ್ನು ಬ್ರೈನ್‍ವಾಶ್ ಮಾಡಿ ಆತ್ಮಹತ್ಯಾದಳವನ್ನಾಗಿ ಪರಿವರ್ತಿಸಿದ್ದಾರೆ. ಹಿಂದೂಗಳನ್ನೇ ಬಳಸಿಕೊಂಡು ಅವರನ್ನೇ ಇಸ್ಲಾಂಗೆ ಪರಿವರ್ತಿಸಿ ಅವರನ್ನೇ ಮುಗಿಸಲು ಮೂಲಭೂತವಾದಿ ಇಸ್ಲಾಂ ಮುಖಂಡರು ಮುಂದಾಗಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯೂ ಈ ಸಂದರ್ಭದಲ್ಲಿ ಬಹಿರಂಗಗೊಂಡಿದೆ.

source:
https://www.thenewsminute.com/article/men-and-women-recruited-islamic-state-kerala-nia-releases-pictures-73661?amp&__twitter_impression=true

ಚೇಕಿತಾನ

 

Tags

Related Articles

Close