ಪ್ರಚಲಿತ

ಕಾಂಗ್ರೆಸ್ ನಾಯಕರಿಗೆ ಪ್ರಧಾನಿ ಮೋದಿ ಹೀಗಂದ್ರಾ?

ಸದಾ ಕಾಲ ಏನಾದರೊಂದು ಹೇಳಿಕೆಗಳನ್ನು ನೀಡಿ ದೇಶದ ಜನರ ನಡುವೆ ವಿಷಬೀಜ ಬಿತ್ತುವ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ.

ಕಾಂಗ್ರೆಸ್ ಪಕ್ಷದ ಮಾತನ್ನು ಕೇಳಿ, ಅದನ್ನು ಗಂಭೀರವಾಗಿ ತೆಗೆದುಕೊಂಡು ಸಮಯವನ್ನು ವ್ಯರ್ಥ ಮಾಡದಿರಿ. ಕಾಂಗ್ರೆಸ್ ಪರ್ವತ ನಾಯಕರು ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ ಅವರು ಇಂತಹ ಅವಮಾನಕಾರಿ ಹೇಳಿಕೆಗಳನ್ನು ನೀಡುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕರೇ, ಕಾರ್ಯಕರ್ತರೇ, ಬೆಂಬಲಿಗರೇ, ಮತದಾರರೇ ನೀವು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಬಳಕೆ ಮಾಡಿರುವ ಅವಹೇಳನಕಾರಿ ಪದ, ಬಳಕೆ ಮಾಡಿದ ಭಾಷೆಯ ಬಗ್ಗೆ ತಲೆ ಕೆಡಿಸಿಕೊಳ್ಳದಿರಿ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷದ ಕಾಮ್ದಾರಿಗಳಿಗೆ, ಕಾಂಗ್ರೆಸ್ ಪಕ್ಷದ ನಾಮ್‌ದಾರಿಗಳು ಹಲವು ಬಾರಿ ಅವಹೇಳನ ಮಾಡಿದ್ದಾರೆ. ಬಡತನದಲ್ಲಿ ಬೆಳೆದ ನಾನು ಇಂತಹ ಅವಮಾನಗಳನ್ನು ಸಾಕಷ್ಟು ಬಾರಿ ಅನುಭವಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಈ ಬಾರಿ ಕಾಂಗ್ರೆಸ್ ಪಕ್ಷದ ಯಾವುದೇ ನಿರ್ಧಿಷ್ಟ ಹೇಳಿಕೆಯನ್ನು ಮುಂದಿಟ್ಟುಕೊಂಡು ಪಿ ಎಂ ಕಾಂಗ್ರೆಸ್‌ ವಿರುದ್ಧ ಕಿಡಿ ಕಾರಿರುವುದಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ ಹಲವಾರು ಹದ್ದು ಮೀರಿದ ವರ್ತನೆಗಳಿಗೆ ಒಂದೇ ಬಾರಿ ಮಂಗಳಾರತಿ ಎತ್ತಿರುವುದಾಗಿದೆ. ಹಾಗೆಯೇ ಕಾಂಗ್ರೆಸ್ ಪರ್ವ ಬೊಲಕೆ ಮಾಡುವ ಕೆಳ ಮಟ್ಟದ ಭಾಷೆಗಳಿಗೆ ಜನರು ಬೇಸರಿಸದ ಹಾಗೆ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ನ ಇಂತಹ ಬೇಕಾಬಿಟ್ಟಿ ವರ್ತನೆಗೆ ಯಾರೂ ಬೇಸರಿಸಬೇಡಿ. ಹಾಗೆಯೇ ಯಾರೂ ಸಹ ನಿರಾಶೆ ಮಾಡಿಕೊಳ್ಳಬೇಡಿ. ಆಕ್ರೋಶವನ್ನು ಸಹ ಹೊರ ಹಾಕದಿರಿ ಎಂದು ಅವರು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.ಭಾರತೀಯ ಜನತಾ ಪಕ್ಷ ಕಾರ್ಮಿಕರ, ಶ್ರಮಿಕರ ಪಕ್ಷ. ಈಗ ನಮ್ಮ ವಿರುದ್ಧ ಮಾತನಾಡುವ ಕಾಂಗ್ರೆಸ್ ರಾಜವಂಶದ ಪಕ್ಷ. ಶ್ರಮಿಕರ ಮೇಲೆ ಹಿಂದಿನಿಂದಲೂ ಇವರ ದರ್ಪ, ದಬ್ಬಾಳಿಕೆ ನಡೆದುಕೊಂಡೇ ಬಂದಿದೆ ಎಂದು ಅವರು ಹೇಳಿದ್ದಾರೆ.

Tags

Related Articles

Close