ಪ್ರಚಲಿತ

ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಎಷ್ಟು ಗೊತ್ತೇ?! ರಾಜ್ಯದ ಕೃಷಿ ವರದಿಯನ್ನು ನೋಡಿದರೆ ದಂಗಾಗುವಿರಿ!

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳನ್ನು ನೀಡಿದ್ದಾರೆಯಾದರೂ… ರೈತರಿಗೇನೂ ಮಾಡಿದ್ದಾರೆ ಎಂದರೆ ಸಾಲ ಮನ್ನಾ ಎನ್ನುವ ಪೊಳ್ಳು ಭರವಸೆಯನ್ನಷ್ಟೇ ಎನ್ನಬಹುದು!! ಯಾಕೆಂದರೆ ರೈತರು ತಾವು ಬೆಳೆಯುವ ಬೆಳೆಗೋಸ್ಕರ, ಅದರಿಂದ ಒಂದಷ್ಟು ಲಾಭವನ್ನು ಪಡೆಯುವುದಕ್ಕೋಸ್ಕರ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಷ್ಟಪಟ್ಟು ಬೇಸಾಯವನ್ನು ಮಾಡುತ್ತಾರೆ. ಅಷ್ಟೇ ಅಲ್ಲದೇ, ಬೆಳೆ ಕೈ ಕೊಟ್ಟಾಗ ರೈತರು ಸರ್ಕಾರದ ಸಾಲಮನ್ನಾ ಗೋಸ್ಕರ ಕಾದು ಕಾದು, ಇದರಿಂದ ಬೇಸತ್ತು ರೈತರು ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಿರುವುದು ತಿಳಿದೇ ಇದೆ.

ಆದರೆ ಕರ್ನಾಟಕದಲ್ಲಿ 2013ರ ಎಪ್ರಿಲ್‍ನಿಂದ 2017ರ ನವೆಂಬರ್ ವರೆಗಿನ ಅವಧಿಯಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವರದಿಯನ್ನು ರಾಜ್ಯದ ಕೃಷಿ ಇಲಾಖೆ ಒದಗಿಸಿರುವ ಅಂಕಿ ಅಂಶಗಳು ಇದೀಗ ಬಹಿರಂಗ ಗೊಳಿಸಿದೆ!!

ಹೌದು… ಈಗಾಗಲೇ ಕರ್ನಾಟಕದಲ್ಲಿ 2013ರ ಎಪ್ರಿಲ್‍ನಿಂದ 2017ರ ನವೆಂಬರ್ ವರೆಗಿನ ಅವಧಿಯಲ್ಲಿ ಒಟ್ಟು 3,515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 2,525 ಆತ್ಮಹತ್ಯೆಗಳು ಬರ ಮತ್ತು ಬೆಳೆ ವೈಫಲ್ಯದ ಕಾರಣಕ್ಕಾಗಿ ನಡೆದಿವೆ ಎಂದು ರಾಜ್ಯದ ಕೃಷಿ ಇಲಾಖೆ ಒದಗಿಸಿರುವ ಅಂಕಿ ಅಂಶಗಳು ಹೇಳುತ್ತವೆ. ಅಷ್ಟೇ ಅಲ್ಲದೇ ಏಪ್ರಿಲ್ 2008 ರಿಂದ ಏಪ್ರಿಲ್ 2012 ರವರೆಗೆ 1,125 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ತಿಳಿಸಿದೆ.

ಇನ್ನು, ವರದಿಯಾಗಿರುವ 3,515 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 2,525 ಕೇಸುಗಳು ಬರ ಮತ್ತು ಬೆಳೆ ವೈಫಲ್ಯದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಒಪ್ಪಿಕೊಂಡಿರುವುದು ಮಾತ್ರ ನಿಜ. ಆದರೆ, 2015ರ ಎಪ್ರಿಲ್‍ನಿಂದ 2017ರ ಎಪ್ರಿಲ್ ವರೆಗೆ 2,514 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿದ್ದು ಇವುಗಳ ಪೈಕಿ 1,929 ಕೇಸುಗಳನ್ನು ಕೃಷಿ ಇಲಾಖೆ ಸ್ವೀಕರಿಸಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.

2017ರ ಎಪ್ರಿಲ್ ನಿಂದ 2017ರ ನವೆಂಬರ್ ವರೆಗಿನ ಅವಧಿಯಲ್ಲಿ ರಾಜ್ಯಕ್ಕೆ ಪರ್ಯಾಪ್ತ ಮಳೆಯಾಗಿದೆ ಎನ್ನುವುದನ್ನು ವರದಿ ಸೂಚಿಸಿದೆ. ಈ ಅವಧಿಯಲ್ಲಿ 624 ರೈತರು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ ಎನ್ನುವುದು ವರದಿಯಾಗಿವೆ. ಆದರೆ ರಾಜ್ಯದ ಕೃಷಿ ಇಲಾಖೆ ಒದಗಿಸಿರುವ ಅಂಕಿ ಅಂಶಗಳು ಈ ಪೈಕಿ 416 ಕೇಸುಗಳನ್ನು ಸ್ವೀಕರಿಸಿದೆ.

2013 ರಿಂದ ಹಿಡಿದು ಅದರಿಂದೀಚೆಗೆ ರಾಜ್ಯ ಸರಕಾರದ ಅನುಮೋದನೆ ಇಲ್ಲದ ಕಾರಣಕ್ಕಾಗಿ ಸುಮಾರು 112 ರೈತರ ಆತ್ಮಹತ್ಯೆ ಪ್ರಕರಣಗಳು ಪರಿಗಣನೆಗೆ ಬಾಕಿ ಇವೆ ಎಂದು ಕೃಷಿ ಇಲಾಖೆ ನಿರ್ದೇಶಕ ಬಿ ವೈ ಶ್ರೀನಿವಾಸ್ ಮಾಧ್ಯಮಕ್ಕೆ ತಿಳಿಸಿದರು. ಆದರೆ 112 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೂಡ ಈ ರೈತರ ಆತ್ಮಹತ್ಯೆ ಪ್ರಕರಣಗಳು ಮಾತ್ರ ಬಾಕಿ ಉಳಿದಿದೆ ಎಂದರೆ ಯಾಕೆ ಎನ್ನುವ ಪ್ರಶ್ನೆ ಮೂಡುವುದು ಸಹಜ!!

ಆದರೆ ಕೃಷಿ ಇಲಾಖೆ ನಿರ್ದೇಶಕ ಬಿ ವೈ ಶ್ರೀನಿವಾಸ್ ಹೇಳುವ ಪ್ರಕಾರ, “ಈ ವರ್ಷ ನವೆಂಬರ್ ವರೆಗೆ 105 ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಹಿಂದಿನ ವರ್ಷ ಏಳು ಪ್ರಕರಣಗಳು ಉಳಿದಿವೆ” ಎಂದು ಹೇಳಿದ್ದು, 2015-16ರ ಅವಧಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ (1,483) ಪ್ರಕರಣಗಳು ನಡೆದಿವೆ. ಆದರೆ 2013-14ರ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ (106) ಕಡಿಮೆ ಇತ್ತು ಎನ್ನುವುದರ ಬಗ್ಗೆ ಶ್ರೀನಿವಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ, “ರೈತರ ಆತ್ಮಹತ್ಯೆ ಪಟ್ಟಿಯಲ್ಲಿ, ಆತ್ಯಹತ್ಯೆ ಮಾಡಿಕೊಂಡಿರುವ ಕಬ್ಬು ಬೆಳೆಗಾರರ ಸಂಖ್ಯೆಯೂ ಮೊದಲ ಸ್ಥಾನದಲ್ಲಿದ್ದರೆ, ತದನಂತರ ಹತ್ತಿ ಮತ್ತು ಭತ್ತದ ಬೆಳೆಗಾರರ ಆತ್ಮಹತ್ಯೆ ಪ್ರಕರಣಗಳು ತದನಂತರದ ಸ್ಥಾನಗಳನ್ನು ಅನುಸರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಆದರೆ ಬಡ್ಡಿ ದರಗಳನ್ನು ಮರುಪಾವತಿಸಲು ಬ್ಯಾಂಕುಗಳು ಒತ್ತಾಯಿಸುತ್ತಿದ್ದು, ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹಾಗಾಗಿ ಬ್ಯಾಂಕುಗಳು ಒತ್ತಾಯಿಸಬಾರದು. ಅಷ್ಟೇ ಅಲ್ಲದೇ, ತಮ್ಮ ಸಣ್ಣ ಮತ್ತು ಮಧ್ಯಮ ಅವಧಿಯ ಬೆಳೆ ಸಾಲವನ್ನು, ದೀರ್ಘಾವಧಿಯ ಸಾಲಕ್ಕೆ ಬಡ್ಡಿ ನೀಡುವ ಮೂಲಕ ಅದನ್ನು ಬದಲಿಸಿಕೊಳ್ಳಬಾರದೆಂದು ಹೀಗೆ ಕೆಲವು ರೀತಿಯ ಪರಿಹಾರ ಕ್ರಮಗಳನ್ನು ಸರ್ಕಾರವು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಖಾಸಗಿ ಹಣವನ್ನು ಅತಿ ಹೆಚ್ಚಿನ ಬಡ್ಡಿದರಲ್ಲಿ ಅಥವಾ 30 ರಿಂದ 40 ಶೇಕಡಾ ಬಡ್ಡಿದರದಲ್ಲಿ ಸಾಲ ನೀಡುವವರ ವಿರುದ್ಧ ಸರ್ಕಾರ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತದೆ ಎಂದು ಮತ್ತೋರ್ವ ಕೃಷಿ ಅಧಿಕಾರಿಯಾದ ಕುಮಾರಸ್ವಾಮಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, “ಕಳೆದ ಮೂರು ವರ್ಷಗಳಲ್ಲಿ ಬಡ್ಡಿ ದರಗಳಲ್ಲಿ ಸಾಲ ನೀಡಿದವರ 1,332 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 585 ಜನರನ್ನು ಈಗಾಗಲೇ ಬಂಧಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಇನ್ನು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ನೀಡುವ ಪರಿಹಾರ ಮೊತ್ತವನ್ನು ಸರಕಾರ 1 ಲಕ್ಷದಿಂದ ಐದು ಲಕ್ಷ ರೂ.ಗೆ ಏರಿಸಿದ್ದು, ಈ ಬಗ್ಗೆ
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2015ರಲ್ಲಿ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದ್ದ ರ್ಯಾಲಿಯಲ್ಲಿ ಈ ಪರಿಹಾರ ಏರಿಕೆಯನ್ನು ಘೋಷಿಸಿದ್ದರು. ಆದರೆ ಈ ಪರಿಹಾರ ಮೊತ್ತವು ಎಷ್ಟರ ಮಟ್ಟಿಗೆ ರೈತರ ಕುಟುಂಬಗಳನ್ನು ತಲುಪಿದೆ ಎನ್ನುವುದು ಮಾತ್ರ ಗೊತ್ತಾಗುತ್ತಿಲ್ಲ!!

ಮೂಲ:http://www.dnaindia.com/india/report-karnataka-over-3500-farmers-committed-suicide-in-five-years-says-state-report-2570898

– ಅಲೋಖಾ

Tags

Related Articles

Close