ಪ್ರಚಲಿತ

ಕಾಂಗ್ರೆಸ್‍ನ ಪ್ರಧಾನಿ ಅಭ್ಯರ್ಥಿ ಮಾಡಿದ ಒಂದು ಟ್ವೀಟ್ ಅವರ ವಿದ್ಯಾರ್ಹತೆಯ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ..! ಹಿಂದಿ ಬಿಡಿ, ಇಂಗ್ಲಿಷ್ ಕೂಡಾ ಬರೋದಿಲ್ವಾ..?!

ರಾಹುಲ್ ಗಾಂಧಿ. ಎಐಸಿಸಿ ಅಧ್ಯಕ್ಷ. ತನ್ನ ಪರಿವಾರದ ಶಕ್ತಿಯಿಂದ ರಾಜಕೀಯದಲ್ಲಿ ಮುಂಚೂಣಿಗೆ ಬಂದು ಕುಟುಂಬದ ಮೂಲಕ ತನ್ನ ಪ್ರಭಾವವನ್ನು ರಾಷ್ಟ್ರ ಮಟ್ಟದವರೆಗೂ ವೃದ್ಧಿಸಿದ ಓರ್ವ ಅಪ್ರಬುದ್ಧ ರಾಜಕಾರಣಿ. ಕಾಂಗ್ರೆಸ್‍ನಲ್ಲಿ ಅದೆಷ್ಟೋ ಉತ್ತಮ ಹಾಗೂ ಪ್ರಬುದ್ಧ ರಾಜಕಾರಣಿಗಳು ಇದ್ದರೂ ತನ್ನ ಕುಟುಂಬದ ಶಕ್ತಿಯಿಂದ ರಾಜಕೀಯಕ್ಕೆ ಧುಮುಕಿ ಇಂದು ಎಐಸಿಸಿ ಅಧ್ಯಕ್ಷನಾಗಿಯೂ ಅಧಿಕಾರದ ಗದ್ದುಗೆಗೇರಿರುವ ನೆಹರೂ ಪರಿವಾರದ ಕುಡಿ.

ರಾಜಕೀಯದಲ್ಲಿ ನಯಾ ಪೈಸೆಯ ಅರ್ಹತೆಯೂ ಇಲ್ಲದಿದ್ದರೂ ತನ್ನ ಕುಟುಂಬದ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಈಗ ಅದೇ ಕುಟುಂಬದ ಹೆಸರಿನಲ್ಲಿಯೇ ಮುಂದಿನ ಚುನಾವಣೆಯ ಪ್ರಧಾನ ಮಂತ್ರಿ ಅಭ್ಯರ್ಥಿಯೂ ಆಗಿದ್ದಾರೆ ಈ ರಾಹುಲ್ ಗಾಂಧಿ. ಅಜ್ಜ ನೆಟ್ಟ ಆಲದ ಮರದ ಅಡಿಯಲ್ಲೇ ಕುಳಿತು ದೇಶ ನೋಡುತ್ತಿರುವ ಈ ರಾಹುಲ್ ಗಾಂಧಿ ತನ್ನ ರಾಜಕೀಯ ಕ್ಷೇತ್ರದಲ್ಲಿ ಮಾಡಿರುವ ಗೊಂದಲಗಳು ಒಂದೆರಡಲ್ಲ.

ದೇಶ ಮಾತ್ರವಲ್ಲದೆ ವಿದೇಶದಲ್ಲೂ ತನ್ನ ಅಪ್ರಬುದ್ಧತೆಯನ್ನು ಸಾಭೀತುಪಡಿಸಿದ್ದಾರೆ ರಾಹುಲ್ ಗಾಂಧಿ. ಕೆಲ ಸಮಯಗಳ ಹಿಂದೆ ಅಮೇರಿಕಾದ ವಿಶ್ವವಿದ್ಯಾಲಯವೊಂದು ನಡೆಸಿದ ಸಂವಾದದಲ್ಲಿ ರಾಹುಲ್ ಗಾಂಧಿ ತಪ್ಪು ಮಾಹಿತಿಯನ್ನು ನೀಡಿ ದೇಶವಾಸಿಗಳ ಕಣ್ಣಿಗೆ ಮತ್ತೆ ಜೋಕರ್ ಆಗಿ ಕಾಣಿಸಿದ್ದಾರೆ. ಸದಾ ಒಂದಲ್ಲ ಒಂದು ಕಾಮಿಡಿಗಳನ್ನು ಮಾಡುತ್ತಾ ಜನರ ಕೈಗೆ ಸಿಕ್ಕಿ ಬೀಳುವ ಈ ರಾಹುಲ್ ಗಾಂಧಿ ಈಗ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದಾರೆ.

ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿದ ರಾಹುಲ್ ಗಾಂಧಿ..!

ಮೋದಿಯ ವಿದ್ಯಾರ್ಹತೆಯ ಬಗ್ಗೆ ಪ್ರಶ್ನಿಸುತ್ತಿದ್ದ ಕಾಂಗ್ರೆಸ್ ಮೊದಲು ತಮ್ಮ ಪಕ್ಷದ ಮಹರಾಜ ರಾಹುಲ್ ಗಾಂಧಿಯ ವಿದ್ಯಾರ್ಹತೆಯ ಬಗ್ಗೆ ಪ್ರಶ್ನಿಸಬೇಕಾಗಿದೆ. ಇಂಗ್ಲೆಂಡ್‍ನ ಕೇಂಬ್ರಿಡ್ಜ್‍ನಲ್ಲಿ ಶಿಕ್ಷಣ ಪಡೆದ ಈ ಕಾಂಗ್ರೆಸ್‍ನ ಅಧ್ಯಕ್ಷ ರಾಹುಲ್ ಗಾಂಧಿಗೆ ಅಕ್ಷರ ಜ್ನಾನವೂ ಇಲ್ಲ ಎಂದರೆ ಇದಕ್ಕೆ ನಗಬೇಕೋ ಅಥವಾ ಇದು ನಮ್ಮ ದೇಶದ ಕಾಂಗ್ರೆಸ್ ಪಕ್ಷದ ಅವಸ್ಥೆ ಎಂದು ತಲೆಗೆ ಕೈ ಇಟ್ಟು ಕೂರಬೇಕೋ ಗೊತ್ತಾಗುತ್ತಿಲ್ಲ. 132 ವರ್ಷಗಳ ಇತಿಹಾಸವುಳ್ಳ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಿಗೆ ಸರಿಯಾಗಿ ಬರೆಯೋಕೆ ಬರಲ್ಲ ಎಂದರೆ ಮತ್ತಿನ್ನೇನನ್ನಬೇಕೋ ಗೊತ್ತಿಲ್ಲ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ತಪ್ಪಾಗಿ ಬರೆದು ತೀವ್ರ ಮುಜುಗರಕ್ಕೀಡಾಗಿದ್ದಾರೆ. ತನ್ನ ಜೀವನದ ಇತಿಹಾಸದುದ್ದಕ್ಕೂ ಮುಜುಗರಗಳನ್ನೇ ಅನುಭವಿಸುತ್ತಾ ಬಂದಿರುವ ರಾಹುಲ್ ಗಾಂಧಿ ಈಗ ಕೇಂದ್ರ ಪ್ರಥಮ ದರ್ಜೆಯ ಸಚಿವನ ಬಗ್ಗೆ ಮಾತನಾಡಿ ಪೇಚಿಗೆ ಸಿಲುಕಿದ್ದಾರೆ. ಅರುಣ್ ಜೇಟ್ಲಿ ಎನ್ನುವ ಬದಲು ಮಿಸ್ಟರ್ “ಜೈಟ್ಲೀ” ಎಂದು ಬರೆದು ತಮ್ಮ ವಿದ್ಯಾರ್ಹತೆಯ ಪ್ರದರ್ಶನವನ್ನು ಮಾಡಿದ್ದಾರೆ. “ಮಿಸ್ಟರ್ ಜೈಟ್ಲೀ, ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವುದು ಒಂದು ಆದರೆ ಮಾಡುವುದು ಮತ್ತೊಂದು. ಈ ಕುರಿತು ನೆನಪಿಸಿದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಜೇಟ್ಲಿಯವರ ಹೆಸರನ್ನು ತಪ್ಪಾಗಿ ಬರೆದು ದೇಶವಾಸಿಗಳ ಬಾಯಿಗೆ ಆಹಾರವಾಗಿದ್ದಾರೆ.

ನೋಟೀಸ್ ಜಾರಿ ಮಾಡಿದ ಬಿಜೆಪಿ…

ಈ ಮಧ್ಯೆ ಭಾರತೀಯ ಜನತಾ ಪಕ್ಷ ರಾಜ್ಯಸಭೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ನೋಟೀಸ್ ಜಾರಿ ಮಾಡಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉದ್ಧೇಶ ಪೂರ್ವಕವಾಗಿಯೇ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರ ಹೆಸರನ್ನು ತಿರುಚಿ ಟ್ವೀಟ್ ಮಾಡಿದ್ದಾರೆ” ಎಂದು ಭಾರತೀಯ ಜನತಾ ಪಕ್ಷದ ಸಂಸದರು ದೂರು ನೀಡಿದ್ದಾರೆ. ಭಾರತೀಯ ಜನತಾ ಪಕ್ಷದ ಸಂಸದ ಭುಪೇಂದ್ರ ಯಾದವ್ ಮಾಡಿರುವ ಆರೋಪವನ್ನು ರಾಜ್ಯಸಭಾ ಸ್ಪೀಕರ್ ಹಾಗೂ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಪರಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ಸಂಸದ ಭುಪೇಂದ್ರ ಯಾದವ್ ಅವರು ರಾಹುಲ್ ಗಾಂಧಿ ಅವರು ಉದ್ಧೇಶ ಪೂರ್ವಕವಾಗಿಯೇ ಅರುಣ್ ಜೇಟ್ಲಿ ಅವರ ಹೆಸರನ್ನು ತಪ್ಪಾಗಿ ತಿರುಚಿದ್ದಾರೆ ಎಂದು ಆರೋಪಿಸಿ ನೋಟೀಸ್ ಜಾರಿ ಮಾಡಿದ್ದರು. ಈ ಕುರಿತು ಸದನಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ “ಭುಪೇಂದ್ರ ಯಾದವ್ ಅವರು ನೀಡಿರುವ ಸೂಚನೆಯನ್ನು ಪರಿಶೀಲಿಸಿ ನಂತರ ಆ ಕುರಿತು ನೋಟೀಸ್ ಪಡೆಯಲಾಗುವುದು” ಎಂದು ಗುರುವಾರ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಪಾಕಿಸ್ಥಾನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು ಎಂದು ಆರೋಪಿಸಿದ್ದರು. ಈ ನಿಮಿತ್ತ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದು, ಅದರಲ್ಲಿ ಇದೂ ಒಂದಾಗಿದೆ. ಕಾಂಗ್ರೆಸ್ ಮಾಡುತ್ತಿರುವ ದೇಶದ್ರೋಹದ ಚಟುವಟಿಕೆಗಳು ದೇಶವಾಸಿಗಳ ಕಣ್ಣಿಗೆ ಕಾಣದಂತೆ ನೋಡಿಕೊಳ್ಳುತ್ತಾರೆ. ಆದರೆ ಅದು ಒಂದಲ್ಲಾ ಒಂದು ದಿನ ಬಯಲಿಗೆ ಬಂದೇ ಬರುತ್ತದೆ ಎಂಬ ಸತ್ಯವನ್ನು ರಾಹುಲ್ ಗಾಂಧಿನೂ ಅರಿತಿಲ್ಲ ಅಂತ ಕಾಣಿಸುತ್ತೆ.

ಇದೇ ಮೊದಲಲ್ಲ…

ರಾಹುಲ್ ಗಾಂಧಿ ಮಾಡುತ್ತಿರುವ ಅವಾಂತರ ಇದೇ ಮೊದಲಲ್ಲ. ಹಲವಾರು ಬಾರಿ ಇಂತಹ ನಡವಳಿಕೆ ಹಾಗೂ ಹೇಳಿಕೆಗಳನ್ನು ನೀಡುವ ಮೂಲಕ ಪೇಚಿಗೆ ಸಿಲುಕಿದ್ದಾರೆ ರಾಹುಲ್ ಗಾಂಧಿ. ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳೆಯರ ಬಗ್ಗೆ ಮಾತನಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ತನ್ನ ದುರ್ಬಲ ರಾಜಕೀಯ ನೀತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವ ರಾಹುಲ್ ಗಾಂಧಿ ಮುಜುಗರಕ್ಕೀಡಾಗಿದ್ದು ಒಂದೆರಡು ಬಾರಿಯಲ್ಲ.

Image result for rahul gandhi

“ದೇಶದಲ್ಲಿ ಮಹಿಳೆಯರ ಮೇಲೆ ಭ್ರಷ್ಟಾಚಾರ ಆಗುತ್ತಿದೆ” ಎಂದು ಹೇಳುವ ಮೂಲಕ ನಗೆಪಾಟೀಲಿಗೀಡಾಗಿದ್ದರು. ಈ ಪುಣ್ಯಾತ್ಮನಿಗೆ ಅತ್ಯಾಚಾರ ಯಾವುದು ಭ್ರಷ್ಟಾಚಾರ ಯಾವುದು ಎಂದು ತಿಳಿದಿಲ್ಲ. ಇನ್ನು ದೇಶವನ್ನೇನು ಆಳುತ್ತಾನೋ ಎಂದು ಹೇಳಿದವರೇ ಹೆಚ್ಚು. ಮಾತ್ರವಲ್ಲದೆ ಅಮೇರಿಕಾದ ವಿಶ್ವವಿದ್ಯಾಲಯದ ಸಂವಾದದಲ್ಲಿ “ಭಾರತದ ಸಂಸತ್‍ನಲ್ಲಿ 544 ಸಂಸತ್ ಸದಸ್ಯರು ಇದ್ದಾರೆ” ಎಂಬ ತಪ್ಪು ಅಂಕಿ ಅಂಶ ನೀಡಿ ಮುಜುಗರಕ್ಕೀಡಾಗಿದ್ದರು. ತನ್ನ ದೇಶದ ಸಂಸತ್‍ನಲ್ಲಿ ಎಷ್ಟು ಮಂದಿ ಸಂಸತ್ ಸದಸ್ಯರು ಇದ್ದಾರೆ ಎಂಬ ಅಂಕಿ ಅಂಶವೇ ಗೊತ್ತಿಲ್ಲದ ಈ ವ್ಯಕ್ತಿ ಇನ್ನು ದೇಶದ ಪ್ರಧಾನಿಯಾಗಿ ಅದೇನು ಸಾಧಿಸುತ್ತಾನೋ ಎಂದು ಕಾಲೆಳೆದಿದ್ದರು.

ಕೇವಲ ಇಷ್ಟು ಮಾತ್ರವಲ್ಲದೆ ಹಲವಾರು ವಿಚಾರಗಳಲ್ಲಿ ರಾಹುಲ್ ಗಾಂಧಿ ಮುಜುಗರಕ್ಕೀಡಾಗಿದ್ದರು. ಈಗ ಮತ್ತೊಂದು ಯಡವಟ್ಟು ಮಾಡಿಕೊಂಡು ತಮ್ಮ ವಿದ್ಯಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿಕೊಂಡಿದ್ದಾರೆ. ಸದ್ಯ ಈ ವಿಷಯ ದೇಶದ ಗಮನ ಸೆಳೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಮಹಾರಾಜ ರಾಹುಲ್ ಗಾಂಧಿಯ ಬಗ್ಗೆ ಟ್ರೋಲ್‍ಗಳ ಸುರಿಮಳೆಯೇ ಗೈದಿದ್ದಾರೆ. ಇಂತಹ ನಾಯಕನನ್ನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಬುತ್ವ ದೇಶ ಎನಿಸಿಕೊಂಡಿರುವ ಭಾರತದ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಹೇಳುವುದಾದರೂ ಹೇಗೆ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ. ಇವುಗಳನ್ನೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಅದೇಗೆ ಅರಗಿಸಿಕೊಳ್ಳುತ್ತಾರೋ ಸೋನಿಯಾ ಗಾಂಧಿಯೇ ಬಲ್ಲರು.

source:
http://publictv.in/rahul-gandhi-intentionally-twisted-arun-jaitleys-name-says-bjp-lawmakers-notice-in-parliament/

-ಸುನಿಲ್ ಪಣಪಿಲ

 

Tags

Related Articles

Close