ಪ್ರಚಲಿತ

ಕಾಶ್ಮೀರದಲ್ಲಿ ಒಮ್ಮೆಲೇ ಸೈನಿಕರ ಮೇಲೆ ಕಲ್ಲೆಸೆತ ನಿಲ್ಲಲು ಕಾರಣವೇನು?!

“ನಿರೋದ್ಯೋಗಿಗಳಿಗೆ ಹಾಗೂ ಅನಕ್ಷರಸ್ಥ ಯುವಕರಿಗೆ ಕಾಶ್ಮೀರದಲ್ಲಿ ಬಹಳ ಬೇಡಿಕೆ! ಮೈಮುರಿಯದೆಯೇ ಹಣ ಸಂಪಾದಿಸುವ ಕಾಶ್ಮೀರಿ ಯುವಕರು ಬೇರೇನು
ಮಾಡಬೇಕಿಲ್ಲ! ತಮ್ಮನ್ನು ತಾವು ಸ್ವತಂತ್ರ್ಯ ಹೋರಾಟಗಾರರೆಂದು ಬಿಂಬಿಸಿಕೊಂಡರೆ ಸಾಕಷ್ಟೇ! ಒಂದಷ್ಟು ಸಾಹಸ ಚಟುವಟಿಕೆಯಲ್ಲಿ ಪಾಲ್ಗೊಂಡರೆ ಮುಗಿಯಿತು! ಅವರಿಗೆ ಸಂಬಳ ನೀಡಲಾಗುತ್ತದೆ! ಆಟದ ಜೊತೆ ಪಾಠ ಎನ್ನುವ ಹಾಗೆ ಬೀದಿಯಲ್ಲಿ ಆಡುವ ಕಲ್ಲಾಟ! ಒಮ್ಮೊಮ್ಮೆ ಆಡುವಾಗ ಗಾಯವೂ ಆಗುತ್ತದೆಯಾದರೂ ಯಾರು ಕಾಳಜಿ ಮಾಡುತ್ತಾರೆ ಮೈಯಲ್ಲಿ ಬಿಸಿರಕ್ತ ಹಾಗೂ ಕೈಯ್ಯಲ್ಲಿ ಹಣ ಕುಣಿಯುವಾಗ?! ”

Related image

ಒಂದು ವರ್ಷದ ಹಿಂದಿನ ಜಮ್ಮು- ಕಾಶ್ಮೀರದ ಪರಿಸ್ಥಿತಿಯಿದು!! ನೋಟು ರದ್ದತಿಯಾಗುವ ಮುನ್ನ ಇದ್ದಂತಹ ಪರಿಸ್ಥಿತಿಯಿದು!

ಅಚ್ಚರಿಯೆನಿಸಬಹುದು! ಅವರವರ ಸಾಹಸ ಚಟುವಟಿಕೆಗಳಿಗೆ ತಕ್ಕನಾಗಿ ದರವನ್ನು ನಿಗದಿಪಡಿಸಲಾಗಿತ್ತು! ಭಾರತೀಯ ಸೇನೆಯ ಮೇಲೆ ಕಲ್ಲೆಸೆದರೆ ದಿನಕ್ಕೆ 100 ರೂಪಾಯಿಗಳು! ಯಾರಾದರೂ ಸೈನಿಕ ಗಾಯಗೊಂಡರೆ ದಿನಕ್ಕೆ 500 ರೂ! ಯಾವುದಾದರೂ ಶಸ್ತ್ರ ಕದ್ದರೆ ಪ್ರತೀ ಶಸ್ತ್ರಕ್ಕೆ 500 ರೂಪಾಯಿ! ಗ್ರೆನೇಡ್ ನನ್ನು ಕದ್ದರೆ ಪ್ರತಿಯಾಗಿ 1000 ರೂಪಾಯಿಗಳು! ಸೇನಾ ಶಿಬಿರಗಳ ಮೇಲೆ ವಿಧ್ವಂಸಕ ಕೃತ್ಯವೆನ್ನೆಸಗಿದರೆ 1000 ರೂಗಳು!

ಆದರೆ, ಇದ್್ದಕ್ಕಿದ್ದ ಹಾಗೆ ಇಂತಹ ಯುವಕರೆಲ್ಲ ನಿರುದ್ಯೋಗಿಗಳಾಗಿ ಹೋದರು! ಕೆಲಸವಿದ್ದರೂ ಸಂಬಳ ಕೊಟ್ಟರೂ ಉಪಯೋಗವಿಲ್ಲವೆನ್ನುವ ಗತಿ!
ಇದಃಮಿತ್ಥಂ ಎನ್ನಬೇಕೆಂದರೆ, ಪ್ರಧಾನಿ ಮೋದಿಯವರ ನೋಟು ರದ್ದತಿಯೆಂಬ ಐತಿಹಾಸಿಕ ನಿರ್ಣಯವೊಂದು ಇಂತಹ ಯುವಕರನ್ನು ಕೆಲಸವಿಲ್ಲದೇ ಖಾಲಿ
ಕೂರುವಂತೆ ಮಾಡಿತು!

ಇಂತಹ ಹೊಸತೆರನಾದ ಉದ್ಯೋಗವನ್ನು ಸೃಷ್ಟಿಸಿದ್ದು ಪ್ರತ್ಯೇಕತಾವಾದಿಗಳು ಅಲಿಯಾಸ್ ಆತಂಕವಾದಿಗಳಾದ ಸೈಯ್ಯದ್ ಗಿಲಾನಿ, ಯಾಸಿನ್ ಮಲಿಕ್ ಶೇಖ್ ಯಾಕೂಬ್ ಹಾಗೂ ಇತರರು! ಸಂಬಳವನ್ನು ಆಯಾ ದಿನವೇ ಕೊಡುವಷ್ಟಿದ್ದ ಉದಾರ ಮನಸ್ಸುಳ್ಳ ಈ ಆತಂಕವಾದಿಗಳಿಗೆ ಕೊನೆಗೆ ಬಡ ಕಲ್ಲು ತೂರಾಟಗಾರರಿಗೆ ಸಂಬಳವನ್ನೂ ಕೊಡಲಾಗದಂತಹ ಪರಿಸ್ಥಿತಿ ಎದುರಾಗಿ ಬಿಟ್ಟಿತು! ಯಾವಾಗ, ಅಲ್ಲಿನ ಯುವಕರೂ ಮಾಡಿದ ಕೆಲಸಕ್ಕೆ ಸಂಬಳವಿಲ್ಲ ಎಂದು
ಗೊತ್ತಾಯಿತೋ,. ಅಲ್ಲಿಗೆ ಕಾಶ್ಮೀರದಲ್ಲಿನ್ನು ಯಾವುದೇ ‘ಸ್ವಾತಂತ್ರ್ಯ ಹೋರಾಟಗಾರ’ರೂ ಕಾಣಸಿಗಲಾರದೆಂಬ ಅರ್ಧ ಸತ್ಯ ಮನವರಿಕೆಯಾಗಿ ಹೋಗಿತು!

ಹವಾಲಾ ವ್ಯವಹಾರ!!

ತನಿಖಾ ದಳ ಕಲ್ಲು ತೂರಾಟಗಾರರ ಹಿಂದೆ ಬಿತ್ತು! ಕಣಿವೆಗಳಲೆಲ್ಲ ತನಿಖೆ ಕೈಗೊಂಡಿತು! ದಿನೇ ದಿನೇ ಹೆಚ್ಚಾಗುತ್ತಿರುವ ಕಾಶ್ಮೀರದ ಸ್ವಾತಂತ್ರ್ಯ
ಹೋರಾಟಗಾರರ ಕೈಯ್ಯಲ್ಲಿ ದುಡ್ಡು ಕುಣಿಯುವುದು ಎಂಬುದಕ್ಕೆ ಸರಿಯಾಗಿ ‘ಪಾಕಿಸ್ಥಾನದ ಹವಾಲಾ ಸಂಪರ್ಕ’ ವೊಂದರ ಮಾಹಿತಿ ದೊರೆಯಿತು! ಹವಾಲಾ
ಎನ್ನುವುದು ಸ್ಮಗ್ಲಿಂಗ್ ನ ಇನ್ನೊಂದು ಮುಖವಷ್ಟೇ!

ಗೃಹ ಸಚಿವ ಇಲಾಖೆ ಹಾಗೂ ವಿದೇಶಾಂಗ ಸಚಿವಾಲಯದ ವರದಿಗಳ ಪ್ರಕಾರ, ಜಮ್ಮು ಕಾಶ್ಮೀರಕ್ಕದೆಷ್ಟೋ ಕೋಟಿ ರೂಪಾಯಿಗಳು ಹರಿದು ಬಂದಿತ್ತು! ಅದೂ ನೋಟಿನ ರೂಪದಲ್ಲಿ! ಗ್ಯಾಸ್ ಸಿಲಿಂಡರ್ ನೊಳಗೆ ಗ್ಯಾಸಿನ ಬದಲು ಹಣ!! ಕಾಶ್ಮೀರದ ಕಣಿವೆಯೊಳು ಅವ್ಯಾಹತವಾಗಿ ನಡೆಯುತ್ತಿತ್ತು ಹವಾಲಾ ವ್ಯವಹಾರ! ತಕ್ಷಣ, ಪ್ರಧಾನಿ ಮೋದಿ ನೋಟು ರದ್ದತಿಯನ್ನು ಘೋಷಿಸಿದರು! ಹವಾಲಾ ವ್ಯವಹಾರ ದಿಂದ ಬಂದಿಳಿದಿದ್ದ ಕೋಟಿಗಟ್ಟಲೇ ಹಣ ಬೆಲೆ ಕಳೆದುಕೊಂಡು ಕೂತಿತು! ಕಾಶ್ಮೀರದ ಕಣಿವೆಯಲ್ಲಿ ತಕ್ಷಣವೇ ಬಡತನ!

ಪ್ರತ್ಯೇಕತಾವಾದಿಗಳು ಮಂಕಾದರು! ದಾನಿಗಳು ಮೂಕರಾದರು! ಕಾಶ್ಮೀರದ ಹುಡಿಗರು ನಿರುದ್ಯೋಗಿಗಳಾದರು! ಮೋದಿ ಒಂದೇ ಏಟಿಗೆ ಮೂರು ಪಕ್ಷಿಗಳನ್ನು ಬಡಿದಿದ್ದರು! ಎಸೆದಿದ್ದ ಸಾವಿರ ಕಲ್ಲುಗಳಲ್ಲಿ ಒಂದೇ ಕಲ್ಲು ತಿರುಗಿ ಬಡಿದಿದ್ದೇ ಕಾಶ್ಮೀರ ಸದ್ದಿಲ್ಲದಂತಾಗಿತ್ತು!

ಜಮ್ಮು ಕಾಶ್ಮೀರದ ಪೋಲಿಸರು ದೆಹಲಿಗೆ ವರದಿ ನೀಡಿದರು! “ನೋಟು ರದ್ದತಿಯಿಂದ ಪ್ರತ್ಯೇಕತಾವಾದಿಗಳ ಸುಳಿವಿಲ್ಲ! ಕಾಶ್ಮೀರ ಶಾಂತವಾಗುತ್ತಿದೆ!” ಯಾಕೆಂದರೆ, ಪ್ರತ್ಯೇಕತಾವಾದಿಗಳಿಗೆ ಸಂದಾಯವಾಗುತ್ತಿದ್ದ ಪ್ರತೀ 500 ಹಾಗೂ 1000 ರೂಪಾಯಿಯ ನೋಟು ಕಪ್ಪು ಹಣವೇ! ನವೆಂಬರ್ 8 ರಂದು ಯಾವಾಗ ಮೋದಿ ನೋಟು ರದ್ದುಗೊಳಿಸಿದರೋ, ಭಾರತೀಯರು ಚಪ್ಪಾಳೆಗಳ ಮೂಲಕ ಅಭಿನಂದಿಸಿದರು! ಆದರೆ, ಕೆಲವು ರಾಷ್ಟ್ರ ವಿರೋಧಿ ಗಳಿಗೆ
ಬೆನ್ನುಹುರಿಯಲ್ಲಿ ನಡುಕವನ್ನು ಹುಟ್ಟಿಸಿಬಿಟ್ಟಿತು! ಪ್ರತ್ಯೇಕತಾವಾದಿಗಳಿಗೆ ಧ್ವನಿ ಹೊರಡಿಸಲೂ ಆಗದಿದ್ದಷ್ಟು ಜ್ವರ ಬಂದಿತ್ತು! ಅದಕ್ಕೆ ಸರಿಯಾಗಿ, ಒಂದಷ್ಟು ಕಾಂಗ್ರೆಸ್ ರಾಜಕಾರಣಿಗಳು, ಆಮ್ ಆದ್ಮಿ ಪಾರ್ಟಿಯ ನಾಯಕರು, ಪೇಯ್ಡ್ ಮೀಡಿಯಾಗಳು. . “ದೇಶ ಆರ್ಥಿಕತೆಯನ್ನೇ ಕಳೆದುಕೊಂಡಿತು” ಎಂಬಂತಾಗಿ ರೋದಿಸತೊಡಗಿತು ಬೆನ್ನ ಹಿಂದೆ ಬೆಲೆಯಿಲ್ಲದ ಕಪ್ಪು ಹಣವನ್ನಿಟ್ಟುಕೊಂಡು!

ಎಲ್ಲದಕ್ಕಿಂತ ಅವರೊಬ್ಬರಿದ್ದರು ಮೋದಿಯ ಜೊತೆ!

ಸತ್ಯ! ಪ್ರಧಾನಿ ಮೋದಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಜನರಲ್ ಬಿಪಿನ್ ರಾವತ್ ಕೂಡಾ ಒಬ್ಬರು! ಕಾಶ್ಮೀರದಲ್ಲಿ ‘ಆಪರೇಶನ್ ಆಲ್ ಔಟ್’ ನನ್ನು ಯಶಸ್ವೀಯಾಗಿ ಪೂರೈಸಿ ಕನಿಷ್ಟ 258 ಉಗ್ರರ ಪತ್ತೆ ಹಚ್ಚಿ ವರದಿ ತಂದರು ಬಿಪಿನ್ ರಾವತ್!!! ರಾಡಾರ್ ನಲ್ಲಿ ಉಗ್ರ ಶಿಬಿರ, ತರಬೇತಿ, ದಾರಿ, ಹವಾಲಾ ವ್ಯವಹಾರಗಳ ಸಂಪೂರ್ಣ ವರದಿ ಪ್ರಧಾನಿ ಮೋದಿಯ ಟೇಬಲ್ಲಿನ ಮೇಲೆ ಕುಳಿತಾಗಲೇ ನಿರ್ಧಾರವಾಗಿತ್ತು! ಒಂದೇ ಏಟು! ಅದೆಷ್ಟೋ ದೇಶದ್ರೋಹಿ ಹಕ್ಕಿಗಳು ಬಲೆಗೆ ಬೀಳುತ್ತವೆಂದು!

Image result for operation allout by indian army

ಬಿಪಿನ್ ರಾವತ್ ಸೂಚನೆ ಕೊಟ್ಟರು! “ಬರುವ ದುಡ್ಡಿಗೆ ಕಡಿವಾಣ ಹಾಕಿ! ಬೀಳುವ ಕಲ್ಲು ಕಡಿಮೆಯಾಗುತ್ತದೆ!” ಎಂದು! ಬಿಪಿನ್ ರಾವತ್ ಗಡಿ ಭಾಗಗಳ ರಕ್ಷಣಾ
ಕಾರ್ಯಸೂಚಿಯನ್ನೂ ನೀಡಿದರು! ಇವತ್ತು, ಕಾಶ್ಮೀರದ ಮೂಲೆ ಮೂಲೆಯಲ್ಲಿಯೂ ರಾಡಾರ್ ಕೆಲಸ ಮಾಡುತ್ತಲಿದೆ.

ಪರಿಣಾಮ?!

ಕಾಶ್ಮೀರದಲ್ಲಿದ್ದ ಪ್ರತ್ಯೇಕತಾವಾದಿಗಳನ್ನು ಸೆರೆ ಹಿಡಿಯಲಾಯಿತು! ಕಾಶ್ಮೀರ ನಿಶ್ಯಬ್ದವಾಯಿತು! ಈ ಹೊಡೆತದಿಂದ ಚೇತರಿಸಿಕೊಳ್ಳುವುದು ಖಚಿತವಾದರೂ ಸಹ ಅಷ್ಟು ಸುಲಭವಾಗಿರಲಿಲ್ಲವೆನ್ನುವುದಾದರೂ ಸಹ ದೇಶದ 80% ಗಳಷ್ಟು ಅವ್ಯವಹಾರಕ್ಕೆ ಕಡಿವಾಣ ಬಿತ್ತೆಂಬುದಂತೂ ಸತ್ಯವೇ!

– ಅಜೇಯ ಶರ್ಮಾ

Tags

Related Articles

Close