ಪ್ರಚಲಿತ

ಕುಮಾರ ಸಿಂಹನೆಂಬ ಅಸಲಿ ಸಿಂಹ ಒಮ್ಮೆ ಘರ್ಜಿಸಿದ್ದೇ ಬ್ರಿಟಿಷರು ಮೈ ಚಳಿ ಬಿಟ್ಟು ದಿಕ್ಕಾಪಾಲಾಗಿ ಓಡಿದ್ಯಾಕೆ?!

ಬ್ರಿಟಿಷರನ್ನು ಮಟ್ಟ ಹಾಕುವಲ್ಲಿ ಸಿಂಹಸ್ವಪ್ನನಾಗಿದ್ದ ಭಾರತೀಯ ವೀರನ ಪರಾಕ್ರಮವನ್ನು ಕೇಳಿದರೆ ಒಂದುಕ್ಷಣ ಮೈ ಜುಮ್ ಎನ್ನುತ್ತೆ!! ಅಷ್ಟೇ ಅಲ್ಲದೇ, ಈ ಪರಾಕ್ರಮಿಯ ಬಗ್ಗೆ ಹೆಚ್ಚಿನವರು ತಿಳಿದುಕೊಂಡಿರಲು ಸಾಧ್ಯವೇ ಇಲ್ಲ!! ಈತನ ಹೆಸರು ಕೇಳಿದರೆ ಗಡಗಡ ಎಂದು ನಡುಗುವ ಬ್ರಿಟಿಷರು, ತಮ್ಮ ನರಿ ಬುದ್ದಿಯನ್ನು ಉಪಯೋಗಿಸಿದರು ಈತನನ್ನು ಮಟ್ಟ ಹಾಕಲು ಸಾಧ್ಯವಾಗಿರಲಿಲ್ಲ. ಹಾಗಾದರೆ ಈತ ಯಾರು ಗೊತ್ತೆ? ಬ್ರಿಟಿಷರ ವಿರುದ್ದ ಹೋರಾಡಿ, ಅವರಿಗೆ ನಡುಕ ಹುಟ್ಟಿಸಿದವ ಬೇರಾರು ಅಲ್ಲ ರಜಪೂತರ ದೊರೆ ಕುಮಾರ ಸಿಂಹ!!

ಹೌದು.. ಯಾರು ಕೇಳರಿಯದ ವೀರಾದಿ ವೀರ. ಈತನ ಪರಾಕ್ರಮವನ್ನು ಕಂಡು ಬ್ರಿಟಿಷರೇ ಬೆಚ್ಚಿಬಿದ್ದು ಪಲಾಯನ ಗೈದರೇ ಹೊರತು ಕುಮಾರ ಸಿಂಹ ಯಾವತ್ತು ಬ್ರಿಟಿಷರಿಗೆ ಹೆದರಿದವನೇ ಅಲ್ಲ!! ತಲಾತಲಾಂತರದಿಂದ ಕಾಪಾಡಿಕೊಂಡು ಬಂದಂತಹ ಜಗದೀಶಪುರ ಬ್ರಿಟೀಷರ ಪಾಲಾಗಿತ್ತು. ಅಷ್ಟೇ ಅಲ್ಲದೇ, ಕುಮಾರ ಸಿಂಹನ ಮನೆ ಇದೀಗ ಆತನ ಹದ್ದುಬಸ್ತಿನಲ್ಲಿರಲಿಲ್ಲ ಹಾಗೂ ಅಲ್ಲಿದ್ದ ಪೂಜಾ ಮಂದಿರಗಳು ಭಗ್ನವಾಗಿದ್ದವು!! ಇಷ್ಟೆಲ್ಲಾ ನಡೆದರೂ ಕೂಡ ಈತ ಶಾಂತಚಿತ್ತತೆಯಿಂದ ಇದ್ದು, ತನ್ನ ಬೆರಳೆಣಿಕೆಯಷ್ಟಿದ್ದ ಸೈನಿಕರನ್ನು ಪದಾತಿಗಳನ್ನು ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ನಿಲ್ಲಿಸಿದರೆ ಸೋಲು ಖಚಿತವೆಂಬುದು ಕೂಡ ಆತನಿಗೆ ತಿಳಿದಿತ್ತು!!! ಹಾಗಾಗಿ ಬ್ರಿಟಿಷರನ್ನು ಮಟ್ಟಹಾಕಲು ಕಾರ್ಯತಂತ್ರವನ್ನು ರೂಪಿಸಲು ಯೋಜಿಸಿದ್ದ.

ತನ್ನ ಬೆರಳೆಣಿಕೆಯ ಸೈನಿಕರನ್ನು, ಪದಾತಿಗಳಿಂದ ಬ್ರಿಟಿಷರನ್ನು ಮಟ್ಟಹಾಕಲು ಸಾಧ್ಯವಿಲ್ಲ ಎಂದು ತಿಳಿದ ಕುಮಾರ ಸಿಂಹ ಗೆರಿಲ್ಲಾ ಯುದ್ದ ತಂತ್ರ ಮಾಡುವ ಯೋಚನೆ ಮಾಡಿದ್ದ! ಆದರೆ ಈತನ ಬಳಿ ಒಂದುಸಾವಿರದ ಇನ್ನೂರು ಸಿಪಾಯಿಗಳು, ಐನೂರು ಸ್ವಯಂಸೇವಕರನ್ನು ಬಿಟ್ಟರೆ ಬೇರೆ ಯಾವ ಸಹಕಾರ ಈತನಿಗಿರಲಿಲ್ಲ!! ಕುಮಾರ ಸಿಂಹ ತನ್ನ ಸೈನ್ಯವನ್ನು ಹುರಿದುಂಬಿಸಿ ವೆಸ್ಟ್ ಬೆಂಗಾಲದ ಕಾಡು ಪ್ರದೇಶದ ಶೋನ್ ತೀರಕ್ಕೆ ಕರೆತಂದು ಬ್ರಿಟಿಷರ ಗಮನಿಸುತ್ತಿದ್ದ. ಅಷ್ಟೇ ಅಲ್ಲದೇ, ಅದೇ ಹೊತ್ತಿಗೆ ಅಜೀಮ್ ಗಡ ಹಾಗೂ ನೇಪಾಳದ ಬ್ರಿಟಿಷ್ ಸಿಪಾಯಿಗಳು ಲಕ್ನೋದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದಾರೆಂಬ ವಿಷಯವು ಈತನ ಕಿವಿಗೆ ಬಿದ್ದಿತ್ತು!! ಇದೇ ವೇಳೆಗೆ ಬ್ರಿಟಿಷ್ ಪಡೆ ಎಲ್ಲಿ ಬಲಹೀನವಾಗಿದೆ ಎನ್ನುವ ವಿಚಾರವನ್ನು ಗಮನಿಸಲು ಆರಂಭಿಸಿದ. ಅದೇ ಸಮಯಕ್ಕೆ ಆತನಿಗೆ ಕಂಡದ್ದು ಅಯೋದ್ಯೆ!! ಆ ಸಂದರ್ಭದಲ್ಲಿ ಪೂರ್ವ ಅಯೋದ್ಯೆಯ ಬ್ರಿಟಿಷ್ ಪಡೆ ಹೇಳುವಷ್ಟು ತಾಕತ್ತಿನಿಂದ ಕೂಡಿರಲಿಲ್ಲವಾದುದರಿಂತ ತನ್ನ ಕಾರ್ಯಾಚರಣೆ ಅಲ್ಲಿಂದಲೇ ಆರಂಭಿಸುವ ಯೋಜನೆಯನ್ನು ಹಾಕಿದ್ದ ಕುಮಾರ ಸಿಂಹ!!!!

ಆ ಸಂದರ್ಭದಲ್ಲಿ ಜಗದೀಶ್ ಪುರದಿಂದ ತನ್ನನ್ನ ಅಟ್ಟಿದ್ದ ಬ್ರಿಟಿಷರ ವಿರುದ್ಧ ಹಗೆ ಸಾಧಿಸುವ ಯೋಜನೆ ಹಾಕಿಕೊಂಡಿದ್ದ. ಹಾಗಾಗಿ ಪೂರ್ವ ಅಯೋದ್ಯೆಯ ಭಾಗದಲ್ಲಿ ಅಸಂಘಟಿತರಾಗಿದ್ದ ಕ್ರಾಂತಿಕಾರಿಗಳನ್ನು ಒಗ್ಗೂಡಿಸಿದ ಕುಮಾರ ಸಿಂಹ, ಅಜಿಮ್ ಗಢದ ಮೇಲೆ ದಾಳಿ ಮಾಡಲು ಸಿದ್ದತೆಯನ್ನು ನಡೆಸಿದ್ದ. 1858ರ ಮಾರ್ಚ್ 18 ಬೀವಾದ ಕ್ರಾಂತಿಕಾರಿಗಳು ಕುಮಾರ ಸಿಂಹನೊಂದಿಗೆ ಕೈ ಜೋಡಿಸಿದ್ದರು, ಇದು ಕುಮಾರ ಸಿಂಹನಿಗೆ ನೂರಾನೆಯ ಬಲ ಬಂದಂತಾಗಿತ್ತು! ಬ್ರಿಟಿಷರನ್ನು ಬಗ್ಗು ಬಡಿಯಲು ಅಟ್ರೋಲಿಯ ಕೋಟೆ ಬಳಿ ತನ್ನ ಸೇನೆಯನ್ನ ಒಗ್ಗೂಡಿಸಿ ಕ್ಯಾಂಪ್ ಹಾಕಿಬಿಟ್ಟ!! ಅಜೀಮ್ ಗಡದಿಂದ ಅಟ್ರೋಲಿಗೆ ಕೇವಲ ಇಪ್ಪತ್ತೈದೆ ಮೈಲು ದೂರವಿತ್ತು ಆದರೆ ಈ ವಿಚಾರ ಬ್ರಿಟಿಷರಿಗೆ ತಿಳಿದು ಬಿಟ್ಟಿತ್ತು.

ಇದೇ ಸಂದರ್ಭದಲ್ಲಿ ಕ್ರಾಂತಿಕಾರಿಗಳನ್ನು ಮಟ್ಟ ಹಾಕಲು ಮಿಲ್‍ಮನ್ ಹಾಗೂ ಆತನೊಂದಿಗೆ 300 ಚೇಲಾಗಳನ್ನು ಜೊತೆ ಮಾಡಿ ಕುಮಾರ ಸಿಂಹನ ಹುಟ್ಟಡಗಿಸುವ ಆದೇಶವನ್ನು ಕಳುಹಿಸಿ ಕೊಟ್ಟಿದ್ದರು. ಆದರೆ ಅಟ್ರೋಲಿ ಕೋಟೆ ಬಳಿ ಈತನ ಸೈನ್ಯವನ್ನು ಕಂಡ ಮಿಲ್ ಮನ್ ದಾಳಿ ಮಾಡುವ ಆದೇಶ ಕೊಟ್ಟು ಬಿಟ್ಟ! ಈ ಸಂದರ್ಭದಲ್ಲಿ ಕುಮಾರ ಸಿಂಹನ ಸೈನ್ಯದ ಮೇಲೆ ಬ್ರಿಟಿಷ್ ಸೇನೆಯೂ ದಾಳಿ ಮಾಡಲು ಸಜ್ಜಾದಾಗ ಅಟ್ರೋಲಿಯ ಅಡಗುದಾಣದಿಂದ ಹೊರ ಬಂದಿದ್ದ ಸಿಂಹ!! ಬ್ರಿಟಿಷ್ ಸೈನ್ಯಕ್ಕಿಂತ ಸಿಂಹನ ಕ್ರಾಂತಿಕಾರಿ ಸೈನ್ಯವೇ ದೊಡ್ಡದಾಗಿತ್ತು. ಈ ಸಂದರ್ಭದಲ್ಲಿ ಸಿಂಹನ ಸೈನ್ಯವನ್ನು ಕಂಡು ಬ್ರಿಟಿಷರು ಹಿಂದಕ್ಕೆ ಸರಿಯ ನೋಡಿದಾಗ, ಸಿಂಹನ ಸೇನೆಯು ಬ್ರಿಟಿಷರ ರಕ್ತ ಕುಡಿಯಲು ಎರಗಿಬಿಟ್ಟಿತ್ತು! ಬ್ರಿಟಿಷರ ಸೇನೆಯನ್ನು ಉಪಾಯದಿಂದ ಚದುರಿಸಿದ ಸಿಂಹ ಅವರ ಮೇಲೆ ಗುಂಡುಹಾರಿಸುವ ತಂತ್ರ ಅನುಸರಿಸಿದ್ದಲ್ಲದೇ, ಕುಮಾರ ಸಿಂಹನ ಸೈನ್ಯ ಬ್ರಿಟಿಷ್ ಪಡೆಯನ್ನ ನೋಡ ನೋಡುತ್ತಿದ್ದಂತೆ ಇಪ್ಪತ್ತೈದು ಮೈಲಿ ದೂರದಲ್ಲಿದ್ದ ಅಜೀಮ್ ಗಡದವರೆಗೂ ಅಟ್ಟಿಸಿಕೊಂಡು ಹೋಯ್ತು! ಅಜೀಮ್ ಗಡಕ್ಕೆ ಓಡಿ ಬಂದಿದ್ದ ಮಿಲ್‍ಮನ್‍ಗೆ ಬ್ರಿಟಿಷರು ಸಹಾಯ ಹಸ್ತ ನೀಡುವರೆಂಬ ಆಶಾಭಾವನೆ ಮೊಳಕೆ ಒಡೆದಿತ್ತು, ವಾರಣಾಸಿ ಹಾಗೂ ಗಾಜಿಪುರ್ನಿಂದ ಸುಮಾರು ಮೂನ್ನುರೈವತ್ತು ಸೈನಿಕರ ಪಡೆ ಜೊತೆಯಾಯ್ತು! ಈ ಪಡೆಗೆ ಕರ್ನಲ್ ಡೇಮ್ಸ್ ಕಮಾಂಡರ್ ಆದ!

ಆದರೆ ಈತನ ಪರಿಸ್ಥಿತಿ ಮಿಲ್‍ಮನ್‍ಗೆ ಆದ ಗತಿಯೇ ಈತನಿಗಾಗಿತ್ತು!! ಅಷ್ಟೇ ಅಲ್ಲದೇ ಬ್ರಿಟಿಷ್ ಸೈನ್ಯ ಓಡಿ ಹೋದರಲ್ಲದೇ ಕೆಲವರು ಪ್ರಾಣ ಬಿಟ್ಟರು. ಬ್ರಿಟಿಷ್ ಸೇನೆಯ ಹೀನಾಯ ಸೋಲಿನ ಸುದ್ದಿ ಕೇಳಿದ ಗವರ್ನರ್ ಲಾರ್ಡ್ ಕ್ಯಾನಿಂಗ್ ಅಕ್ಷರಶಃ ಬೇವತು ಹೋಗಿದ್ದ. ಆ ಸಂದರ್ಭದಲ್ಲಿ ಸಿಂಹನನ್ನ ಎದುರಿಸಲು ಕ್ರಿಮಿಯನ್ ಯುದ್ಧವನ್ನ ಬಲ್ಲ ಯೋಧ ಮಾರ್ಕ್ ಕೆರ್ರ್ ನನ್ನ ನೇಮಿಸಿದ. ಐನೂರು ಪದಾತಿಗಳನ್ನು ಹಾಗೂ ಎಂಟು ಪಿರಂಗಿ ಹೊತ್ತುಕೊಂಡು ಅಜೀಮ್ ಗಡಕ್ಕೆ ಎಂಟು ಮೈಲಿ ದೂರದ ಸಣ್ಣ ಪ್ರದೇಶಕ್ಕೆ ಬಂದು ಠಿಕಾಣಿ ಹೂಡಿದ ಮಾರ್ಕ್ ಕೆರ್ರ್! 6 ಎಪ್ರಿಲ್ 1858ರ ಬೆಳಿಗ್ಗೆ ಕುಮಾರ ಸಿಂಹ ನಮ್ಮನ್ನು ಗಮನಿಸುತ್ತಿದ್ದಾನೆಂದು ತಿಳಿದ ಮಾರ್ಕ್ ಮರುಕ್ಷಣವೇ ಕುಮಾರ ಸಿಂಹನ ಮೇಲೆ ದಾಳಿ ಮಾಡಲು ಆರಂಭಿಸಿದ. ವೀರಾವೇಷದಿಂದ ಹೋರಾಡಿದ ಸೈನಿಕರು ಬ್ರಿಟಿಷರ ಮೇಲೆ ಗುಂಡಿನ ಸುರಿಮಳೆಗೈದರು, ಅದೇ ವೇಳೆ ಮುಪ್ಪಿನಲ್ಲಿದ್ದ ವಯೋವೃದ್ಧ ಕುಮಾರ ಸಿಂಹ ತನ್ನ ಬಿಳಿಯ ಕುದುರೆ ಹತ್ತಿ ಹೋರಾಟ ನಡೆಸುತ್ತಿದ್ದರೆ ,ಕುರುಕ್ಷೇತ್ರದಲ್ಲಿ ಅರ್ಜುನ ತನ್ನ ಶೌರ್ಯ ಪ್ರದರ್ಶನ ಮಾಡುತ್ತಿದ್ದಂತಿತ್ತು!! ಬ್ರಿಟಿಷರ ಬಳಿ ಇದ್ದಷ್ಟು ಫಿರಂಗಿಗಳು ಸಿಂಹನ ಬಳಿ ಇರಲಿಲ್ಲವಾದರೂ ಆತ ಎದೆಗುಂದಲಿಲ್ಲ ಬ್ರಿಟೀಷರನ್ನು ಬಗ್ಗು ಬಡಿವಲ್ಲಿ ಯಶಸ್ವಿಯಾದ ಆದರೆ ಬ್ರಿಟಿಷರು ಜೀವ ಉಳಿಸಿಕೊಳ್ಳಲು ಅಜೀಮ್ ಗಡಕ್ಕೆ ಪಲಾಯನಗೈದರು!!

ಅಜೀಮ್ ಗಡ ಕೋಟೆ ಸುತ್ತಲೂ ಸಿಂಹನ ದಿಟ್ಟ ಯೋಧರು ಸುತ್ತುವರೆದಿದ್ದರು. ಆ ವೇಳೆ ಬ್ರಿಟಿಷ್ ಸೇನೆಗೆ ಹೊರ ಬರಲು ಪ್ರಾಣ ಭಯವು ಎದುರಾಯಿತು!! ಅಷ್ಟರಲ್ಲೆ ಸಿಂಹ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದ, ಸೇನೆಯಲ್ಲಿದ್ದ ಜೀವ ಬಿಡಲು ಸಿದ್ದರಿರುವ ಸೇನಾನಿಗಳನ್ನು ಆಯ್ದು ಅವರನ್ನು ಥಾನೂ ನದಿಯ ಸೇತುವೆ ಮೇಲಿರಿಸಿ ಶತ್ರುಗಳ ಗಮನ ಅತ್ತ ಕಡೆ ಸೆಳೆಯುವಂತೆ ಮಾಡಿದ! ಥಾನೂ ನದಿಯ ಸೇತುವೆ ದಾಟಿ ಲುಗಾರ್ಡ್ ಎಂಬ ಬ್ರಿಟಿಷ್ ತುಕಡಿ ಅಜೀಮ್ ಗಡ ಸೇರಿ ಅವರಿಗೆ ನೆರವು ನೀಡಬೇಕೆಂಬುದು ಬ್ರಿಟಿಷರ ಪ್ಲಾನ್ ಆಗಿತ್ತು! ಲುಗಾರ್ಡ್ ತುಕಡಿಗೆ ಅಜೀಮ್ ಗಡ ತಮ್ಮದಾಗಿಸಬೇಕೆಂಬ ಹಠವಿತ್ತು. ಆದರೆ ಸಿಂಹನ ಮಾಸ್ಟರ್ ಪ್ಲಾನ್ ಬೇರೇಯದೆ ಇತ್ತು, ಅಜೀಮ್ ಗಡದ ಮೇಲೆ ಬ್ರಿಟಿಷರ ಗಮನ ಸೆಳೆದು ಅತ್ತಕಡೆಯಿಂದ ತನ್ನ ಪಡೆಯನ್ನು ಜಗದೀಶ್ ಪುರಕ್ಕೆ ನುಗ್ಗಿಸುವುದಾಗಿತ್ತು. ಹಾಗಾಗಿ ಸಿಂಹ ಥಾನೂ ನದಿಯ ಮೇಲೆ ನಿಯೋಜಿಸಿದ್ದ ಸೇನಾನಿಗಳ ಕರೆದು “ನೋಡಿ ನಾವು ಜಗದೀಶ್ ಪುರದತ್ತ ನುಗ್ಗುವವರೆಗೆ ಬ್ರಿಟಿಷರ ವಿರುದ್ಧ ಹೋರಾಡಲೇ ಬೇಕು ಅಜೀಮ್ ಗಡಕ್ಕೆ ನುಗ್ಗಲು ಸುಲಭಕ್ಕೆ ಬಿಡಬೇಡಿ” ಎಂದಿದ್ದ!!!!!

ಈ ಸಂದರ್ಭದಲ್ಲಿ ಲುಗಾರ್ಡ್ ಸೇನೆಯು, ಸೇತುವೆಯಲ್ಲಿದ್ದ ಕ್ರಾಂತಿಕಾರಿಗಳ ಮೇಲೆ ದಾಳಿ ಮಾಡಿದರು ಕೂಡ ಕುಮಾರ ಸಿಂಹನ ಕ್ರಾಂತಿಕಾರಿಗಳು ಹಿಂಜರಿಯಲಿಲ್ಲ! ಇತ್ತ ಸಿಂಹ ಅಜೀಮ್ ಗಡದಿಂದ ಪಾರಾಗಿ ಗಾಜಿಪುರದೆಡೆಗೆ ಸಾಗಿದ್ದ, ಈ ಸುದ್ದಿ ಕ್ರಾಂತಿಕಾರಿಗಳಿಗೆ ತಲುಪುವವರೆಗೂ ಯುದ್ಧ ನಿಲ್ಲಲಿಲ್ಲ. ತಮ್ಮ ಉದ್ದೇಶ ಈಡೇರಿದ ತಕ್ಷಣ ವೀರರೆಲ್ಲ ಸಿಂಹನ ನಾಯಕತ್ವದತ್ತ ಮುಖ ಮಾಡಿದರು! ಕ್ರಾಂತಿಕಾರಿಗಳು ಇದ್ದಕ್ಕಿದ್ದಂತೆ ಓಡಿದ್ದನ್ನು ಕಂಡ ಲುಗಾರ್ಡ್ ದಿಗ್ಭ್ರಾಂತನಾಗಿದ್ದ! ಐರೋಪ್ಯ ಬಿಳಿಯರ ತುಕಡಿ ಕುಮಾರ ಸಿಂಹನನ್ನು ಹಿಡಿಯಲು ಕಳುಹಿಸಿಕೊಟ್ಟ, ಆದರೆ ಬ್ರಿಟಿಷರು ಹನ್ನೆರಡು ಮೈಲಿ ತಲುಪಿದರು ಕೂಡ ಸಿಂಹನ ಬಗ್ಗೆ ಯಾವುದೇ ರೀತಿಯ ಸುಳಿಹು ಸಿಗಲಿಲ್ಲ! ತದನಂತರದದಲ್ಲಿ ಕ್ರಾಂತಿಕಾರಿಗಳು ಕಾಣಿಸಿದರು ಕೂಡ ಯುದ್ಧ ಮಾಡುವ ತಾಕತ್ತಿಲ್ಕದೇ ಬಿಳಿಯರ ಸೈನ್ಯ ಬೆವತು ಹೋಗಿತ್ತು! ಅಷ್ಟರಲ್ಲೆ ಸಿಂಹ ತಯಾರಿಸಿದ ಸೇನೆ ಕತ್ತಿಗಳನ್ನು, ಬಂದೂಕುಗಳನ್ನು, ತುಪಾಕಿಗಳನ್ನು ಹಿಡಿದು ಬ್ರಿಟಿಷರನ್ನು ಆಹ್ವಾನಿಸುತ್ತಿತ್ತು!!

ಆದರೆ, ಬ್ರಿಟಿಷ್ ಸೈನಿಕರಿಗೆ ಆತ್ಮ ರಕ್ಷಣೆಗಿಂತ ತಮ್ಮ ಅಧಿಕಾರಿಗಳ ಮಾತೇ ಅಂತಿಮವಾಗಿತ್ತು!! ಕ್ರಾಂತಿಕಾರಿಗಳ ಹೊಡೆತಕ್ಕೆ ಬಿಳಿಯರ ಅದೆಷ್ಟೋ ತಲೆ
ಉರುಳಿಹೋಯ್ತು ಗೊತ್ತಿಲ್ಲ!! ಆದರೆ ಆ ಪ್ರದೇಶ ರುದ್ರಭೂಮಿಯಾಗಿ ಮಾರ್ಪಟ್ಟಿತ್ತು!! ಈ ಹೋರಾಟ ಮುಗಿಯುತ್ತಿದ್ದಂತೆ ಕುಮಾರ ಸಿಂಹ, ಗಂಗ ತಟದತ್ತ ಮುಖ ಮಾಡಿದ್ದ! ಬ್ರಿಟಿಷರು ಸೋತಿದ್ದ ಸುದ್ದಿ ಅಜೀಮ್ ಗಢಕ್ಕೆ ತಲುಪಿತ್ತು, ಈ ಸುದ್ದಿಯನ್ನು ಕೇಳಿದ ಜನರಲ್ ಡೌಗ್ಲಾಸ್ ಕುದ್ದುಹೋಗಿದ್ದ! ಕುಮಾರ ಸಿಂಹನನ್ನು ಮಟ್ಟ ಹಾಕಬೇಕೆಂಬ ಹುಚ್ಚು ಛಲ ಆತನಲ್ಲಿತ್ತು ನಘಾಯ್ ಎಂಬ ಹಳ್ಳಿಗೆ ಕುಮಾರನನ್ನು ಹಿಡಿಯಲೇಬೇಕೆಂದು ಆಗಮಿಸಿದ್ದು, ಇದಕ್ಕಾಗಿ ಸೂಕ್ತ ಉಪಾಯವನ್ನು ಮಾಡಿದ್ದ. ಅದಕ್ಕಾಗಿ ಕುಮಾರ ಸಿಂಹ ಆಯ್ದ ಯೋಧರನ್ನು ನಿಯೋಜಿಸಿ ಮಿಕ್ಕ ಸೇನಾನಿಗಳ ಜೊತೆಗೂಡಿ ಗಂಗಾತೀರ ಸಾಗಿದ್ದ! ಆಯ್ದ ಯೋಧರ ಹೊಡೆತಕ್ಕೆ ಬ್ರಿಟಿಷ್ ಸೇನೆ ನಲುಗಿ ಹೋಯ್ತು!

ಎಪ್ರಿಲ್ 17-1858ರ ರಾತ್ರಿ ಅಥೂಸಿ ಎಂಬ ಹಳ್ಳಿಯಲ್ಲಿ ಆ ಕ್ರಾಂತಿ ಹೊತ್ತಿರಿದಿತ್ತು, 18ರ ಬೆಳಿಗ್ಗೆ ಕುಮಾರ ಸಿಂಹನ ಹಿಂದೆ ಡೌಗ್ಲಾಸ್ ತುಕಡಿ ಬಿದ್ದಿತ್ತು! ಕುಮಾರ ಸಿಂಹ ಗಂಗಾ ತಡದ ಕಡೆ ಹೋಗುತ್ತಿದ್ದರೆ ಆತನ ಹಿಡಿಯಲು ಡೌಗ್ಲಾಸ್ ಹಿಂದೆ ಬಿದ್ದಿದ್ದ. ದಿನಗಳು ಉರುಳಿದವು, ಕುಮಾರ ಸಿಂಹನಿಗೆ ಬೇಹುಗಾರರಿಂದ ಆಂಗ್ಲರು ಹೆಚ್ಚಿನ ತೊಂದರೆ ಸಿಲುಕಿದರ ಅರಿವಾಗಿತ್ತು! ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ರಾತ್ರಿಯಲ್ಲೆ ಗಾಜೀಪುರ ಹೊಕ್ಕಿದ್ದ! ಆದರೆ ಆಯಾಸವಾಗಿದ್ದ ತನ್ನ ಸೇನೆಗೆ ತಂಗುವುದು ಅನಿವಾರ್ಯ ಆಗಿತ್ತು! ಆದರೆ ಕುಮಾರ ಸಿಂಹನನ್ನು ಹಿಂಬಾಲಿಸಿದ್ದ ಡೌಗ್ಲಾಸ್ ಮನೋಹರಕ್ಕೆ ಬಂದು ನಿಂತ ಆದರೆ ಯಾರು ಸಿಗಲಿಲ್ಲ! ಅದರ ಹಿಂದೆ ಸಿಂಹನ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು ಒಂದೊಂದು ಗುಂಪನ್ನಾಗಿಸಿ ತನ್ನ ಸೇನೆಯನ್ನು ವಿಂಗಡಿಸಿ ಕೊನೆಗೆ ಗಂಗಾತೀರಕ್ಕೆ ಬನ್ನಿರೆಂದು ಸೂಚನೆ ಕೊಟ್ಟಿದ್ದ! ಆದರೆ, ಗಂಗಾತಟ ಸಮೀಪಿಸುವಾಗ ಸೇನೆ ಬಲಹೀನವಾಗಿತ್ತು.

ಬ್ರಿಟಿಷರ ದಾರಿ ತಪ್ಪಿಸಲು ಹೊಸ ಉಪಾಯ ಮಾಡಿದ್ದ ಕುಮಾರ ಸಿಂಹ, ಬಲಿಲಾ ಎಂಬಲ್ಲಿ ಆನೆಯನ್ನು ಹತ್ತಿ ಗಂಗೆ ದಾಟುವುದಾಗಿ ವದಂತಿ ಹಬ್ಬಿಸಿದ, ಡೌಗ್ಲಾಸ್
ಸೇನೆಯು ಬಲಿಲಾಕ್ಕೆ ತುಕಡಿ ಹೊತ್ತು ತೆರಳಿತ್ತು ಮಾತ್ರವಲ್ಲದೇ ಕುಮಾರ ಸಿಂಹ ಆನೆಯಲ್ಲಿ ಬರೋದನ್ನೆ ಕಾಯುತಿತ್ತು! ಆದರೆ ಬಲಿಲಾದಿಂದ ಏಳು ಮೈಲಿದೂರದ ಶಿವಪುರಿಘಾಟ್ ನಿಂದ ದೋಣಿ ಹತ್ತಿ ಹೊರಡಲು ಸಿಂಹ ಯೋಜನೆ ರೂಪಿಸಿದ್ದ! ಮೋಸಹೋದುದ್ದು ಡೌಗ್ಲಾಸ್ ಅರಿತ, ತನ್ನ ತುಕಡಿ ಹೊತ್ತು ಶಿವಪುರಿ ಘಾಟ್ ಅತ್ತ ಹೊರಟ. ಕುಮಾರ ಸಿಂಹ ಇನ್ನೇನು ಹೊರಡಲು ತಯಾರಾಗಿದ್ದಾಗ ಸಿಂಹನ ಸೇನೆಯ ಮೇಲೆ ಆಕ್ರಮಣ ನಡೆದುಹೋಯ್ತು, ಶತ್ರುಗಳಿಂದ ಧಾವಿಸಿ ಬಂದ ಗುಂಡು ವೃದ್ಧ ಕುಮಾರ ಸಿಂಹನ ಕೈಯ ಮಣಿಕಟ್ಟನ್ನು ಛಿದ್ರಗೊಳಿಸಿತ್ತು!!!

ಆದರೆ ಇದಕ್ಕೆ ಅಂಜದೆ, ಕುಮಾರ ಸಿಂಹ ತನ್ನ ಖಡ್ಗ ತೆಗೆದು ತನ್ನ ಮೊಣಕೈ ಕತ್ತರಿಸಿ ಗಂಗೆಗೆ ತರ್ಪಣ ಬಿಡುತ್ತಾ “ತಾಯಿ ಇದೋ ನಿನ್ನ ಮಗನ ಕೊನೆಯ ಆಹುತಿ
ಸ್ವೀಕರಿಸಮ್ಮಾ” ಎನ್ನುತ್ತಾ ಎಸೆದು ಬಿಟ್ಟು, ತದನಂತರದಲ್ಲಿ ಗಂಗೆಯನ್ನು ದಾಟಿಯೂ ಬಿಟ್ಟ ಈ ವೀರ!! ನಂತರದ ದಿನಗಳಲ್ಲಿ ಅಡೆತಡೆಗಳೂ ಬಂದರೂ ಕೂಡ
ಸಾಯೋವಾಗ ಸಿಂಹಾಸನ ಏರಿಯೇ ಪ್ರಾಣ ಬಿಟ್ಟ ಈ ಛಲಗಾರ!! ಆತನ ಕೈ ನೋವು ಆತನನ್ನ ಕೊಂದಿತ್ತೇ ಹೊರತು ಬ್ರಿಟಿಷರು ಆತನ ಮೈ ಮುಟ್ಟಲಾಗಲಿಲ್ಲ. ಈತ ಕೈನೋವಿನಿಂದ ಮರಣ ಹೊಂದಿದ ನಂತರ ಈತನ ತಮ್ಮ ಅಮರ್ ಸಿಂಹ ಈತನ ಜಾಗವನ್ನು ಅಲಂಕರಿಸಿದ.

ತನ್ನ ಅಚಲವಾದ ನಿರ್ಧಾರದಿಂದ ಬ್ರಿಟಿಷರ ಸೇನೆಯನ್ನು ಬಗ್ಗು ಬಡಿದ ವೀರ ಈ ಕುಮಾರ ಸಿಂಹ. ಆದರೆ ಈತನ ಬಗ್ಗೆ ಎಲ್ಲೂ ಕೂಡ ಉತ್ತಮ ಮಾಹಿತಿ ದೊರಕದ್ದು ನಮ್ಮ ದೌರ್ಭಾಗ್ಯ. ಆದರೆ ಇಂತಹ ವೀರಾಧಿ ವೀರರ ಬಗ್ಗೆ, ಭಾರತೀಯರಾದ ನಾವು ತಿಳಿದುಕೊಳ್ಳಬೇಕಾದುದು ನಮ್ಮ ಕರ್ತವ್ಯ!!

 

– ಅಲೋಖಾ**

Tags

Related Articles

Close