ಪ್ರಚಲಿತ

ಕೆಲವು ಅಂಶಗಳು ಕಾಂಗ್ರೆಸ್ಸಿನ ಪರವಾಗಿದ್ದರೂ ಗುಜರಾತ್‍ನಲ್ಲಿ ಕಾಂಗ್ರೆಸ್ ಬಹುಮತ ಪಡೆಯಲು ವಿಫಲವಾಗಿದೆಯೇ?

ಮುಂಬರುವ ಲೋಕಸಭೆ ಹಾಗೂ ಕರ್ನಾಟಕ ಸೇರಿದಂತೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಸೆಮಿಫೈನಲ್ ಸಮರ ಎಂದೇ ವ್ಯಾಖ್ಯಾನಿಸಲಾಗಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ವೇದಿಕೆ ಸಜ್ಜಾಗಿದ್ದು, 182 ಕ್ಷೇತ್ರಗಳ ಪೈಕಿ 89 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಒಟ್ಟಾರೆ 977 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಈ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ಕಾಂಗ್ರೆಸ್‍ನ ನಿಯೋಜಿತ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತವರು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವ ಮೂಲಕ ಲೋಕಸಭೆ ಚುನಾವಣೆಗೆ ಈಗಾಗಲೇ ವೇದಿಕೆ ಸಜ್ಜು ಮಾಡಿಕೊಳ್ಳುವುದು ಮೋದಿ ಮತ್ತು ಷಾ ಆಶಯವಾದರೆ, ತಮ್ಮ ಅಧ್ಯಕ್ಷಪಟ್ಟಕ್ಕೆ ಗುಜರಾತ್ ಗೆಲುವಿನ ಉಡುಗೊರೆ ಆಗಬೇಕೆಂಬುದು ರಾಹುಲ್ ಆಶಯ. ಒಟ್ಟಾರೆ ಈ ಸಮರವೀಗ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಪಕ್ಷವು ಮೋದಿ ಸರಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ನೋಟು ಅಮಾನ್ಯೀಕರಣವನ್ನು ಮುಂದಿಟ್ಟುಕೊಂಡು ಅದನ್ನು ಜನರಿಗೆ ತಪ್ಪು ಮಾರ್ಗದರ್ಶನ ನೀಡಿ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಮಾಡಿತ್ತು… ಆದರೆ ಯಾವಾಗಲೂ ಜನರ ಕಣ್ಣಿಗೆ ಮಣ್ಣೆರಚಿ ಮತವನ್ನು ಗಳಿಸಿಕೊಳ್ಳಬಹುದು ಎನ್ನುವುದು ಮುಟ್ಟಾಳತನ.. ತಮ್ಮ ಪಕ್ಷದವರೇ ಅವರ ಮಾನವನ್ನು ಹರಾಜು ಮಾಡಿದ್ದಾರೆ… ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಆದರೆ ಇತ್ತೀಚೆಗೆ ಕಾಂಗ್ರೆಸ್ ತನ್ನ ಬೆನ್ನ ಮೇಲೆ ತಾನೇ ಗೆರೆ ಎಳೆದಂತೆ ಒಂದರ ಮೇಲೆ ಇನ್ನೊಂದು ಎನ್ನುವ ಹಾಗೆ ಬಿಜೆಪಿ ವಿರುದ್ಧ ಒಂದೊಂದೇ ಎಡವಟ್ಟನ್ನು ಮಾಡಿಕೊಂಡು ಬರುತ್ತಿದೆ.

ಪ್ರಧಾನಿ ಮೋದಿಗೆ ಅವಾಚ್ಯ ಶಬ್ಧದಿಂದ ನಿಂದನೆ ಮಾಡಿದ ಅಯ್ಯರ್

ಮಣಿಶಂಕರ್ ಅಯ್ಯರ್. ದೇಶ ಕಂಡ ಅತ್ಯಂತ ಕೀಳು ಮಟ್ಟದ ಮನುಷ್ಯ. ತನ್ನ ಮನಸ್ಸನ್ನೇ ಕೊಳಚೆಯಲ್ಲಿ ಬಿದ್ದ ಪ್ರಾಣಿಗಳ ರೀತಿಯಲ್ಲಿ ವರ್ತಿಸುವ ಈತ ದೇಶಸೇವೆ ಮಾಡುವ ವ್ಯಕ್ತಿಗಳನ್ನು ಕಂಡರೆ ಕೆಂಡ ಕಾರುತ್ತಿರುತ್ತಾರೆ. ಈತನಿಗೆ ಹಾಗೂ ಈತನ ಪಕ್ಷಗಳಿಗೆ ಕಂಟಕವಾಗುತ್ತಿರುವ ವ್ಯಕ್ತಿಗಳನ್ನು ಬಾಯಿಗೆ ಬಂದ ಹಾಗೆ ಅಸಂಬದ್ಧ ಪದಗಳನ್ನು ಪ್ರಯೋಗ ಮಾಡುವ ಮೂಲಕ ಪ್ರಚಾರದಲ್ಲಿ ಇದ್ದೇ ಇರುತ್ತಾರೆ. ತಾನು ಪ್ರಚಾರದಲ್ಲಿ ಇರಬೇಕಾದರೆ ಅದ್ಯಾವ ಮಟ್ಟಕ್ಕೂ ಇಳಿಯಲು ಸಿದ್ದನಿರುತ್ತಾರೆ ಈ ಮಣಿ ಶಂಕರ್ ಅಯ್ಯರ್.

ಎಂದಿನಂತೆ ನಮ್ಮ ನೆಚ್ಚಿನ ಪ್ರಧಾನಿ ಮೋದೀಜಿಯನ್ನು ಕೆಳ ಮಟ್ಟದ ಪದಗಳನ್ನು ಪ್ರಯೋಗಿಸುವ ಮೂಲಕ ಟೀಕೆಗೆ ಗುರಿಯಾಗುತ್ತಿದ್ದ ಈ ಅಯ್ಯರ್ ಎಂಬ ಕಾಂಗ್ರೆಸ್ ನಾಯಕ ಇಂದು ಮತ್ತೆ ತಮ್ಮ ನಾಲಗೆಯನ್ನು ಉದ್ದ ಬಿಟ್ಟಿದ್ದು “ಮೋದಿ ಮೌಲ್ಯಗಳಿಲ್ಲದ ನೀಚ ವ್ಯಕ್ತಿ. ಆತ ಒಬ್ಬ ಕೀಳುವ್ಯಕ್ತಿ” ಎಂದು ಮತ್ತೆ ತನ್ನನ್ನು ತಾನು ಸುದ್ಧಿ ಮಾಡಿಕೊಂಡಿದ್ದಾನೆ.
ಮೋದಿ ಅಂದರೆ ಈಗ ಕೇವಲ ಗುಜರಾತ್ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ವಿಶ್ವನಾಯಕರಾಗಿದ್ದಾರೆ. ಅವರನ್ನು ಹೊಗಳಿದರೂ ತೆಗಳಿದರೂ ವಿಶ್ವ ಮಟ್ಟಿನಲ್ಲಿ ಸುದ್ಧಿಯಾಗುತ್ತದೆ. ಈ ಕಾರಣಕ್ಕಾಗಿಯೇ ಕೆಲವು ಪ್ರಚಾರ ಪ್ರಿಯರು ಮೋದಿಯ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಮಣಿಶಂಕರ್ ಅಯ್ಯರ್ ಕೂಡಾ ಇದೇ ಜಾತಿಗೆ ಸೇರಿದವನಾಗಿರಾಗಿದ್ದಾರೆ.

ಗುಜರಾತ್ ಚುನಾವಣೆ ಹೊಸ್ತಿಲಲ್ಲಿ ಇಂತಹ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ ಕಾರ್ಯಕರ್ತರ ಪಾಲಿನ ಹೀರೋ ಆಗಲು ಹೊರಟಿದ್ದಾರೆ ಈ ಅಯ್ಯರ್. ಆದರೆ ಅದೆಷ್ಟೋ ಕೋಟಿ ಕೋಟಿ ಜನರ ಪಾಲಿಗೆ ತಾನೊಬ್ಬ ಖಳನಾಯಕನಾಗಿ ಗುರುತಿಸುತ್ತೇನೆ ಎಂಬ ವಿಚಾರ ತಿಳಿದಿದಿಯೋ ಇಲ್ಲವೋ ಏನೋ… ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಸುದ್ಧಿಯಾಗಲು ಈ ಖತರ್ನಾಕ್ ಪ್ಲಾನ್‍ಗಳನ್ನು ಹೂಡುತ್ತಾ ಹೋಗುತ್ತಾರೆ ಈ ಖಳನಯಕ.

ಇದು ಗುಜರಾತ್‍ಗೆ ಮಾತ್ರ ಅವಮಾನವಲ್ಲದೇ ಇಡೀ ಭಾರತೀಯ ಪರಂಪರೆಗೆ ಮಾಡಿದ ಅವಮಾನವಾಗಿದೆ. ತಮ್ಮನ್ನು ‘ನೀಚ ಆದ್ಮಿ’ ಎಂದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಮೊಘಲ್ ಸಂಸ್ಕೃತಿಯ ಪ್ರತಿಬಿಂಬ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿರುಗೇಟು ನೀಡಿದ್ದಾರೆ.
ಇಂದು ಸೂರತ್ ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರು ಬಳಸು ಕೀಳುಮಟ್ಟದ ಭಾಷೆಯನ್ನು ಪ್ರಜಾಪ್ರಭುತ್ವದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ, ಅವರು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ್ದಾರೆ. ರಾಯಭಾರಿಯಾಗಿ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಅಂತಹ ವ್ಯಕ್ತಿ ನನ್ನನ್ನು ನೀಚ ಎಂದು ಕರೆದಿದ್ದಾರೆ. ಇಂಥ ನೀಚ ಕೆಲಸವನ್ನು ಅವರು ಮಾತ್ರ ಮಾಡಲು ಸಾಧ್ಯ. ಇದು ಮೊಘಲರ ಸಂಸ್ಕೃತಿಯಲ್ಲದೆ ಬೇರೇನು ಅಲ್ಲ ಎಂದು ಮಣಿಶಂಕರ್ ಅಯ್ಯರ್ ಅವರ ಹೆಸರು ಪ್ರಸ್ತಾಪಿಸಿದೆ ಕಾಂಗ್ರೆಸ್ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂತಹ ಮಾತುಗಳಿಂದ ನಷ್ಟವಾಗುವುದು ಪ್ರಧಾನಿ ನರೇಂದ್ರ ಮೋದಿಯವರಿಗಲ್ಲ ಇಡೀ ಕಾಂಗ್ರೆಸ್ ಪಕ್ಷಕ್ಕೆ!

ಬಾಬ್ರಿ ಮಸೀದಿ ಸಾಲಿನಲ್ಲಿ ಕಪಿಲ್ ಸಿಬಲ್

ಒಂದೆಡೆ ಗುಜರಾತ್ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಕೊಂಡು ಹಿಂದು ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಡಿ ಗೋಪುರ ಸುತ್ತುತ್ತಿದ್ದರೆ ಮತ್ತೊಂದೆಡೆ ಸುಪ್ರೀಂಕೋರ್ಟ್‍ನಲ್ಲಿ ಸುನ್ನಿ ವಕ್ಪ್ ಬೋರ್ಡ್ ಪ್ರತಿನಿಧಿಸಿರುವ ಅದೇ ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ವಕೀಲರಾಗಿ ಪ್ರಕರಣದ ವಿಚಾರಣೆಯನ್ನು ಮುಂದೂಡಬೇಕೆಂದು ಮನವಿ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಚುನಾವಣೆಗೂ ರಾಮಮಂದಿರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಮತ್ತೊಂದೆಡೆ, ವಿಚಾರಣೆ ವಿಳಂಬಕ್ಕೆ ತನ್ನ ಸಹಮತವಿಲ್ಲ ಎಂದಿರುವ ಸುನ್ನಿ ವಕ್ಪ್ ಬೋರ್ಡ್, ಸಿಬಲ್ ತಾವು ವಕೀಲನೆಂಬುದನ್ನು ಮರೆತು ಪಕ್ಷದ ಪ್ರತಿನಿಧಿ ಎಂಬುದನ್ನು ತೋರಿಸಿದ್ದಾರೆಂದು ಕಿಡಿಕಾರಿದೆ. ಸಿಬಲ್ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಇದೆಲ್ಲಾ ಕಾಂಗ್ರೆಸ್‍ಗೆ ಗುಜರಾತ್ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮಾಡಿದ ಅವಾಂತರಗಳು ಖಂಡಿತಾ ಈ ಚುನಾವಣೆಯಲ್ಲಿ ಪರಿಣಾಮ ಬೀಳಲಿದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಪಕ್ಷದವರಿಂದ ಸುಖಾಸುಮ್ಮನೆ ತಮ್ಮ ಮೇಲೆಯೇ ಬರೆ ಎಳೆದುಕೊಂಡಂತಾಗಿದೆ…ಒಂದಲ್ಲ ಒಂದು ವಿಷದಲ್ಲಿ ಎಡವಟ್ಟು ಮಾಡುತ್ತಾನೇ ಬರುತ್ತಿದ್ದಾರೆ.. ಇದು ನಿಜವಾಗಿ ಬಿಜೆಪಿಗೆ ಪ್ಲಸ್‍ಪಾಯಿಂಟ್ ಆಗಲಿದೆ.
ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದ ಪೂನಾವಾಲಾ!

ಕಾಂಗ್ರೆಸ್‍ನಲ್ಲಿ ಗುಲಾಮ ಸಂಸ್ಕøತಿ ಎಷ್ಟು ಚೆನ್ನಾಗಿ ಬೇರುಬಿಟ್ಟಿದೆ ಗಾಂಧೀ ಕುಟುಂಬಿಕರು ಏನೆಲ್ಲಾ ಹೇಳುತ್ತಾರೋ ಅದನ್ನೆಲ್ಲಾ ಪಾಲಿಸಬೇಕೆಂಬ ಅಲಿಖಿತ ನಿಯಮವೊಂದಿದೆ….ಯಾರಾದರೂ ಈ ಕುಟುಂಬದ ಏಲೆ ತಿರುಗಿ ಬಿದ್ದರೆ ಅವನ ಕಥೆ ಅಷ್ಟೇ…ಆದರೂ ಶೆಹಜದ್ ಪೂನಾವಾಲಾ ಗಾಂಧೀ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಗಾಂಧೀ ಕುಟುಂಬದ ಕಟ್ಟಾಳು ತರ ಕೆಲಸ ಮಾತಾಡುತ್ತಿದ್ದ ಶೆಹಜದ್ ಪೂನಾವಾಲ ಕಾಂಗ್ರೆಸ್ ಪಕ್ಷವನ್ನು ಬೆಳೆಸಲು ಸಖತ್ ಪ್ಲ್ಯಾನ್‍ಗಳನ್ನೇ ಮಾಡಿದ್ದರು. ಆದರೆ ಯಾವಾಗ ರಾಹುಲ್‍ಗೆ ಅಧ್ಯಕ್ಷ ಸ್ಥಾನ ದೊರಕಿತೋ ಅಂದಿನಿಂದ ಅದೇ ಪಕ್ಷದ ವಿರುದ್ಧ ತಿರುಗಿ ಬಿದ್ದು ಅವರ ಮಾನ ಹರಾಜು ಮಾಡುತ್ತಾರೆ.. ಇದೆಲ್ಲಾ ಗಮನಿಸಿದಾಗ ಗುಜರಾತ್ ಚುನಾವಣೆಯಲ್ಲಿ ಖಂಡಿತಾ ಸೋಲನ್ನೊಪ್ಪಿಕೊಳ್ಳುತ್ತಾರೆ ಎಂಬುವುದು ಅರ್ಥವಾಗುತ್ತಿದೆ.

ಕಾಂಗ್ರೆಸ್ ವಿರುದ್ಧ ಆಯೂಬ್ ಅಲಿ ಪ್ರತಾಪ!

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸದಂತೆ ಅಯೂಬ್ ಅಲಿಯನ್ನು ಕಾಂಗ್ರೆಸ್ ನಾಯಕತ್ವ ತಡೆದಿದ್ದು ಕಾಂಗ್ರೆಸ್‍ನವರೇ ಕಾಂಗ್ರೆಸ್ ಮುಖಂಡನನ್ನು ದೂರತಳ್ಳಿದ್ದು ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಈ ರೀತಿಯವಾಗಿ ವರ್ತಿಸಿರುವಂತಹದ್ದು ತಮ್ಮನ್ನು ತಾವೇ ಚುನಾವಣೆಯ ಗೆಲುವಿನ ಅಂತರದಿಂದ ದೂರ ತಳ್ಳಿದಂತಾಗಿದೆ…ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಆಯೂಬ್ ಅಲಿಹಾಕಿದ ನಾಮಪತ್ರವನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ. ಈ ಬಗ್ಗೆ ಆಯೂಬ್ ಆಲಿ ಕಿಡಿ ಕಾರಿದ್ದು ನನ್ನ ನಾಮಪತ್ರವನ್ನು ತಿರಸ್ಕರಿಸಲು ಇದ್ದ ಕಾರಣವನ್ನೂ ಅವರು ನನಗೆ ತಿಳಿಸಲಿಲ್ಲ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿಗೆ ಅನುಕೂಲವಾಗಿ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಗ್ಗಿಂಗ್ ನಡೆಸುತ್ತಿದ್ದಾರೆ ಎಂದು ಈ ಹಿಂದೆ ಮಹಾರಾಷ್ಟ್ರದ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಶೆಹಜಾದ್ ಪೂನಾವಾಲಾ ಆರೋಪಿಸಿದ್ದರು. ಅದೇ ರೀತಿ ಮತ್ತೆ ಆಯೂಬ್ ಆಲಿಯನ್ನು ನಾಮ ಪತ್ರ ಸಲ್ಲಿಸದಂತೆ ಕೋರಿರುವುದು ಕಾಂಗ್ರೆಸ್ ಪಕ್ಷ ಮತ್ತೊಂದು ಎಡವಟ್ಟನ್ನು ಮಾಡಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನೆಲ್ಲಾ ಗಮನಿಸಿದಾಗ ಕಾಂಗ್ರೆಸ್ ಪಕ್ಷದವರೇ ಕಾಂಗ್ರೆಸ್‍ನ್ನು ದೂರುತ್ತಿರಬೇಕಾದರೇ ಅವರಲ್ಲೇ ಒಗ್ಗಟ್ಟಿಲ್ಲ ಎಂಬುವುದು ಈಗಾಗಲೇ ಜನರಿಗೆ ಸ್ಪಷ್ಟವಾಗಿ ಅರ್ಥವಾಗಿದೆ…ಪಕ್ಷ ಪಕ್ಷಗಳ ನಡುವೆಯೇ ಇಂತಹ ಗೊಂದಲವಿರಬೇಕಾ ದರೆ ಮುಂದೆ ದೇಶ ಉದ್ಧಾರ ಮಾಡುತ್ತಾರೆ ಎಂಬುವುದು ಎಷ್ಟು ಗ್ಯಾರಂಟಿ?
ಪವಿತ್ರ

Tags

Related Articles

Close