ಪ್ರಚಲಿತ

ಗುಜರಾತಿನಿಂದ ಬಂತು ಹೆಸರು ಬದಲಾದ ಬಸ್ಸು!! ರಾಜ್ಯ ಚುನಾವಣೆಗೆ ಪ್ರಣಾಳಿಕೆ ಸಿದ್ಧ ಪಡಿಸುತ್ತಿರುವ ರಾಹುಲ್ !! ಶುರುವಾಯಿತು ಕಾಂಗ್ರೆಸ್ ನಾಟಕ!!

ಗುಜರಾತ್ ವಿಧಾನ ಸಭಾ ಚುನಾವಣೆಯ ವೇಳೆ ಟೆಂಪಲ್ ರನ್ ಮೂಲಕ ಬಾರಿ ಸುದ್ದಿ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೀಗ ಕರ್ನಾಟಕಕ್ಕೂ ಇದೆ ಮಾದರಿಯಲ್ಲಿ ಹಿಂದೂಗಳ ಮತ ಓಲೈಕೆಗೆ ಅಡಿಪಾಯ ಹಾಕಿರುವ ವಿಚಾರ ತಿಳಿದೇ ಇದೆ. ಆದರೆ ಇದೀಗ ಪಕ್ಷದ ನಾಯಕರಿಗೆ ರಾಹುಲ್ ಗಾಂಧಿಯವರು ಜನರನ್ನು ತಮ್ಮತ್ತ ಸೆಳೆದುಕೊಳ್ಳಲು ವಿಶೇಷ ಸೂಚನೆಯನ್ನೂ ನೀಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.

ಹೌದು…. ಕಾಂಗ್ರೆಸ್ ಪಕ್ಷವು ಗುಜರಾತ್‍ನಲ್ಲಿ ಯಶಸ್ವಿ ತಂತ್ರವಾಗಿ ಪ್ರಯೋಗಿಸಿದ ಮೃದು ಹಿಂದುತ್ವವನ್ನು ಕರ್ನಾಟಕದಲ್ಲೂ ಪ್ರಯೋಗಿಸಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೈಗೊಳ್ಳುವ ರಾಜ್ಯ ಪ್ರವಾಸದ ವೇಳೆ ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಆದರೆ ಇದೀಗ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಜನಪರ ಪ್ರಣಾಳಿಕೆ ಸಿದ್ಧಪಡಿಸುವಂತೆ ಪಕ್ಷದ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸೂಚನೆ ನೀಡಿದ್ದಾರೆಂದು ಶನಿವಾರ ತಿಳಿದುಬಂದಿದೆ.

ಹಾಗಾಗಿ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ತೆಗೆದುಕೊಂಡ ನಿಲುವುಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ ಕರ್ನಾಟಕದ ಚುನಾವಣೆಯಲ್ಲೂ ಅಂತಹದ್ದೇ ಕಾರ್ಯಗಳನ್ನು ಆರಂಭಿಸಲು ನಿರ್ಧರಿಸಿರುವ ರಾಹುಲ್ ಗಾಂಧಿಯವರು ಜನಪರ ಪ್ರಣಾಳಿಕೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತ್ ಚುನಾವಣೆಯಲ್ಲಿ ಆ ರಾಜ್ಯದ ಮೂಲೆಮೂಲೆ ತಿರುಗಿ ಚುನಾವಣಾ ಪ್ರಚಾರ ನಡೆಸಲು ಬಳಸಿದ ವಿಶೇಷ ಬಸ್ ಬೆಂಗಳೂರಿಗೆ ಬಂದಿದ್ದು, ಈ ಬಸ್ಸನ್ನೇ ರಾಹುಲ್ ಗಾಂಧಿ ಅವರು ರಾಜ್ಯ ಪ್ರವಾಸಕ್ಕೂ ಬಳಸಲಿದ್ದಾರೆ.

ಗುಜರಾತ್ ಸೋಲು ಕಲಿಸಿದ ಅನುಭವದ ಆಧಾರದ ಮೇಲೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲು ಯಾವ ರೀತಿ ರಣತಂತ್ರ ಹೆಣೆಯಬೇಕು ಎಂಬುದರ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ನಾಯಕರಿಗೆ ಈಗಾಗಲೇ ಸುದೀರ್ಘ ಪಾಠ ಮಾಡಿದ್ದರು. ಅಷ್ಟೇ ಅಲ್ಲದೇ, ಗುಜರಾತ್ ವೈಫಲ್ಯ ಮರುಕಳಿಸಿದಂತೆ ಮಾಡಲು ಕರ್ನಾಟಕದಲ್ಲಿ ಬೂತ್ ಮಟ್ಟದ ಸಮಿತಿ ಗಳನ್ನು ಸದೃಢಗೊಳಿಸಲು ಕಟ್ಟು ನಿಟ್ಟಿನ ಕ್ರಮ ಸೂಚಿಸಿದ್ದರು. ಹಾಗಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲು “ಸಪ್ತ ಸೂತ್ರದ ಮಂತ್ರ” ವನ್ನೂ ಬೋಧಿಸಿದ್ದರು.

ಆದರೆ ಇದೀಗ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ತೆಗೆದುಕೊಂಡ ನಿಲುವುಗಳು ಯಶಸ್ವಿಯಾಗಿರುವ ಹಿನ್ನಲೆಯಲ್ಲಿ, ಕರ್ನಾಟಕದ ಚುನಾವಣೆಯಲ್ಲೂ ಅಂತಹದ್ದೇ ಕಾರ್ಯಗಳನ್ನು ಆರಂಭಿಸಲು ನಿರ್ಧರಿಸಿರುವ ರಾಹುಲ್ ಗಾಂಧಿಯವರು ಜನಪರ ಪ್ರಣಾಳಿಕೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ. ಪ್ರಣಾಳಿಕೆ ಸಿದ್ಧತೆ ಕುರಿತಂತೆ ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ನೇತೃತ್ವದಲ್ಲಿ ಈಗಾಗಲೇ ಕಾರ್ಯಗಳು ಆರಂಭಗೊಂಡಿದ್ದು, ಚುನಾವಣೆಗೂ ಮುನ್ನ ಎಲ್ಲಾ ವಲಯಗಳನ್ನೊಳಗೊಂಡ ಹಾಗೂ ಜನಪರ ಪ್ರಣಾಳಿಕೆ ಮೂಲಕ ಜನರ ಮುಂದೆ ಬರಲು ಪಕ್ಷ ನಿರ್ಧರಿಸಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಜ್ಯ ಎಐಸಿಸಿ ವಕ್ತಾರ ಮಧು ಗೌಡ್ ಯಕ್ಷಿಯವರು, ಕರ್ನಾಟಕ ರಾಜ್ಯ ಜನತೆಯ ನಿರೀಕ್ಷೆಯನ್ನು ಮುಟ್ಟುವಂತಹ ಪ್ರಣಾಳಿಕೆಗಳನ್ನು ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಪ್ರಣಾಳಿಕೆ ಸಿದ್ಧಪಡಿಸುವುದಕ್ಕೂ ಮುನ್ನ ಕಾಂಗ್ರೆಸ್ ಎಲ್ಲಾ ವಲಯದ ಅಧಿಕಾರಿಗಳೊಂದಿಗೆ ಪ್ರತಿಕ್ರಿಯೆಗಳನ್ನು ಪಡೆಯಲಿದೆ ಎಂದು ಹೇಳಿದ್ದಾರೆ!!

“ಗುಜರಾತ್ ರಾಜ್ಯ ಚುನಾವಣೆ ಸಂದರ್ಭದಲ್ಲೂ ತಾಂತ್ರಿಕ ಸಲಹೆಗಾರ ಸ್ಯಾಮ್ ಪಿಟ್ರೊಡಾ, ಅವರು ಗುಜರಾತ್ ರಾಜ್ಯದ ಐದು ನಗರಗಳಳಾದ ವಡೋದರಾ, ಅಹಮದಾಬಾದ್, ರಾಜ್ಕೋಟ್, ಜಮ್ನಗರ ಮತ್ತು ಸೂರತ್ ನಗರ ಜನತೆಯೊಂದಿಗೆ ಮಾತುಕತೆ ನಡೆಸಿದ್ದರು. ಬಳಿಕ ಶಿಕ್ಷಣ, ಆರೋಗ್ಯ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು, ಯುವಕರಿಗೆ ಉದ್ಯೋಗ ಮತ್ತು ಪರಿಸರ ರಕ್ಷಣೆಯಂತಹ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿತ್ತು. ಅಷ್ಟೇ ಅಲ್ಲದೇ, ಜನರು ಏನನ್ನು ನಿರೀಕ್ಷಿಸುತ್ತಿದ್ದಾರೆಂಬುದು ಇದರಿಂದ ತಿಳಿಯಿತಲ್ಲದೇ, ಇದು ನಮಗೆ ಸಹಾಯಕ್ಕೆ ಬಂದಿತ್ತು. ಕಚೇರಿಯಲ್ಲಿ ಕುಳಿತು ಪ್ರಣಾಳಿಕೆಯನ್ನು ಸಿದ್ಧಪಡಿಸುವುದಕ್ಕಿಂತಲೂ ಇದು ಉತ್ತಮವಾದ ದಾರಿಯಾಗಿದೆ. ಹೀಗಾಗಿ ಪಕ್ಷ ಇದೀಗ ಸಾಮಾಜಿಕ-ಅರ್ಥಿಕ ಅಂಶಗಳಂತಹ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳತ್ತ ಗಮನಹರಿಸುತ್ತದೆ” ಎಂದು ತಿಳಿಸಿದ್ದಾರೆ.

ಗುಜರಾತ್ ನಿಂದ ಬಂತು ರಾಹುಲ್ ಪ್ರಚಾರದ ಬಸ್!! ಬಸ್ ನಲ್ಲೇನಿದೆ ಗೊತ್ತೇ??

ರಾಹುಲ್ ಅವರ ಅಭಿರುಚಿಗೆ ತಕ್ಕಂತೆ ರೂಪಿಸಲಾಗಿರುವ ಈ ಸಕಲ ಸೌಲಭ್ಯಸಜ್ಜಿತವಾದ ವೋಲ್ವೋ ಸಂಸ್ಥೆಯ ಬಸ್, ಇದೀಗ ನಗರದ ಗ್ಯಾರೇಜ್‍ವೊಂದರಲ್ಲಿ ಗುಜರಾತಿ ಭಾಷೆಯಲ್ಲಿದ್ದ ನಾಮ ಫಲಕ, ಘೋಷಣೆಗಳನ್ನು ಕಳಚಿಕೊಂಡು ಕನ್ನಡದಲ್ಲಿ ಪಕ್ಷದ ಹೆಸರು, ಯಾತ್ರೆಗೆ ಸಂಬಂಧಿಸಿದ ಘೋಷಣೆಗಳು ಹಾಗೂ ನಾಯಕರ ಹೆಸರನ್ನು ಬರೆಸಿಕೊಂಡು ನವರೂಪ ತಳೆದಿದ್ದು, ಪ್ರಸ್ತುತ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರ ಸುಪರ್ದಿಯಲ್ಲಿದೆ.

ರಾಹುಲ್ ಗಾಂಧಿ ಅವರು ಈಗಾಗಲೇ ಗುಜರಾತ್ ರಾಜ್ಯದ ಮೂಲೆ ಮೂಲೆಯನ್ನು ಸಂಚರಿಸಿ, “ಟೆಂಪಲ್ ರನ್” ನಡೆಸಿ ಬಿಜೆಪಿಗೆ ತೀವ್ರ ಪೈಪೆÇೀಟಿ ನೀಡಿದ್ದು, ಈ ಬಸ್ ಮೂಲಕ ನಡೆಸಿದ ಯಾತ್ರೆಯಿಂದಲೇ!! ಇದೇ ಬಸ್ ಅನ್ನು ರಾಜ್ಯದಲ್ಲೂ ಬಳಸಲು ರಾಹುಲ್ ನಿರ್ಧರಿಸಿದ್ದು, ಇದರ ಪರಿಣಾಮ ಅವರ ಯಾತ್ರೆಗಾಗಿ ಚೆನ್ನೈನಲ್ಲಿ ವಿಶೇಷ ಬಸ್ ಸಜ್ಜುಗೊಳಿಸುವ ರಾಜ್ಯ ನಾಯಕರ ಪ್ರಯತ್ನ ನಿಲ್ಲಿಸಬೇಕಾಗಿ ಬಂದಿದೆ.

ರಾಹುಲ್ ಬಸ್‍ನಲ್ಲಿ ಒಂದು ಯಾತ್ರೆಗೆ ಬಳಸಲು ಬೇಕಾದ ಎಲ್ಲಾ ಸವಲತ್ತುಗಳು ಇದ್ದು, ಯಾತ್ರೆಯ ಅಂಗವಾಗಿ ಯಾವ ಜಿಲ್ಲೆಗೆ ರಾಹುಲ್ ಹೋಗುವರೋ ಆ ಜಿಲ್ಲೆಯ ನಾಲ್ಕೈದು ಮಂದಿ ಪ್ರಮುಖರನ್ನು ಬಸ್‍ಗೆ ಹತ್ತಿಸಿಕೊಂಡು ಅವರೊಂದಿಗೆ ಸಭೆ ನಡೆಸಲು ಅಗತ್ಯವಾದ ಸುಸಜ್ಜಿತ ಮೀಟಿಂಗ್ ಹಾಲ್ ಇದೆ. ಬಸ್ಸಿನ ಒಳಗಿನಿಂದಲೇ ಜನರೊಂದಿಗೆ ಮಾತನಾಡಲು ಅಗತ್ಯವಾದ ವ್ಯವಸ್ಥೆಯಿದೆ. ಬಸ್‍ನಲ್ಲೇ ಅಡುಗೆ ಮಾಡಿಕೊಳ್ಳಬಹುದಾದ ಸೌಲಭ್ಯ, ಶೌಚಾಲಯ ಹಾಗೂ ಆರಾಮದಾಯಕ ಆಸನಗಳು ಇದ್ದು, ಈ ಬಸ್ ಸಂಪೂರ್ಣ ಹವಾನಿಯಂತ್ರಿತವಾಗಿದೆ!!

ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಮಾಡಿದ ಭ್ರಷ್ಟಚಾರಗಳು, ಹಗರಣಗಳಿಗೆ ಲೆಕ್ಕವೇ ಇಲ್ಲದಂತಾಗಿದ್ದು, ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸೂಚನೆಯಂತೆ ಜನಪರ ಪ್ರಣಾಳಿಕೆ ಸಿದ್ಧಪಡಿಸಿ, ಈ ಪ್ರಣಾಳಿಕೆಯಿಂದಾಗಿ ಕಾಂಗ್ರೆಸ್ ಅದ್ಯಾವ ರೀತಿ ಜನಗಳನ್ನು ತನ್ನತ್ತ ಮರುಳ ಮಾಡಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ!!

– ಅಲೋಖಾ

Tags

Related Articles

Close